ರೂಪಾಲಿ ನಾಯ್ಕ ವಿರುದ್ಧ ಕಾಂಗ್ರೇಸ್ ಪದಾಧಿಕಾರಿಗಳ ಆರೋಪ ಸತ್ಯಕ್ಕೆ ದೂರವಾದುದು-ಬಿಜೆಪಿ

Source: sonews | By Staff Correspondent | Published on 4th October 2018, 10:35 PM | Coastal News |

ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ಕಾರವಾರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದ್ದು ಕಾರವಾರದ ದೇವರಾಜ ಅರಸು ಹಿಂದುಳಿದ ವರ್ಗಗಲ ಮೆಟ್ರಿಕ್ ನಂತರದ ವೃತ್ತಿಪರ ಹಾಗೂ ವಿಭಜನ ಬಾಲಕರ ನಿಲಯದ ಕಟ್ಟಡದ ನಿರ್ಮಾಣದಲ್ಲಿ ಜರುಗಿದ ಅವ್ಯವಹಾರಗಳನ್ನು ಅಪರೋಕ್ಷವಾಗಿ ಸಮರ್ಥಿಸಿಕೊಳ್ಳುವ ಯತ್ನವಾಗಿದೆ. 

ಸತೀಶ ಸೈಲ ಅವರು ಶಾಸಕರಾಗಿದ್ದಾಗ ತಾನು ಸಾವಿರಕೋಟಿಯ ಕಾಮಗಾರಿಯನು ಕ್ಷೇತ್ರಕ್ಕೆ ತಂದಿದ್ದಾಗಿ ಹೇಳಿಕೊಂಡಿದ್ದು ಅವುಗಳ ಅನುಷ್ಠಾನದ ವೇಳೆ ಸಾಕಷ್ಟು ಕಮಿಷನ್ ವ್ಯವಹಾರ ನಡೆದ ಬಗ್ಗೆ ಅರೋಪಗಳಿದ್ದವು. ತಮ್ಮ ಹಿಂಬಾಲಕರಿಗೆ ಗುತ್ತಿಗೆ ಕೊಡಿಸುವ ಮೂಲಕ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಆಗಿನ ಜನಪ್ರತಿನಿಧಿಗಳು ಕಮಿಷನ್ ವ್ಯವಹಾರಗಳನ್ನು ನಡೆಸಿದ್ದ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಕಮಿಷನ್ ಹಣಕಾಗಿಯೇ ಕಾಂಗ್ರೆಸ್ಸಿನ ಕೆಲ ಹಿರಿಯ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಚುನಾವಣೆ ಸಮೀಸುತ್ತಿದ್ದಂತೆ ತರಾತುರಿಯಲ್ಲಿ ಕೆಲಸ ಮುಗಿಸಿ ಅದರಲ್ಲಿ ಕಮಿಷನ್ ಹೊಡೆದ ಬಗ್ಗೆ ಆರೋಪಗಳಿದ್ದವು. ಈಗ ದೇವರಾಜ ಅರಸು ಹಾಸ್ಟೇಲ್ ಕಳಪೆ ಕಾಮಗಾರಿಯ ಬಗ್ಗೆ ಶಾಸಕಿ ರೂಪಾಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಶಾಸಕಿಯ ಮೇಲೆ ವಾಗ್ದಾಳಿ ನಡೆಸುತ್ತಿರುವುದನ್ನು ಕಂಡರೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡ ಹಾಗಿದೆ. ಈಗಾಗಲೇ ರೂಪಾಲಿ ನಾಯ್ಕ ಅವರು ಈ ಹಾಸ್ಟೇಲ್ ಕಾಮಗಾರಿಯ ಬಗ್ಗೆ ಥರ್ಡಪಾರ್ಟಿ ಇನ್‍ಸ್ಪೆಕ್ಷನ್ ನಡೆಸುವಂತೆ ವಿಧಾನಸಭೆಯ ಸಭಾಪತಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರಬರೆದಿದ್ದು ಈ ಕಟ್ಟಡದ ಭ್ರಷ್ಟಾಚಾರದ ತನಿಖೆಯಲ್ಲಿ ಕಾಂಗ್ರೆಸ್ ಮುಖಂಡರೂ ಸಹಕರಿಸಬೇಕಾಗಿ ಬಿಜೆಪಿ ಪರವಾಗಿ ವಿನಂತಿಸಿಕೊಳ್ಳುತ್ತೇವೆ. 

ಮಾಜಿ ಶಾಸಕ ಸತೀಶ ಸೈಲ ಅವರು ಸರಕಾರಿ ಕಾರ್ಯಕೃಮಗಳಲ್ಲಿ ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಂಡ ಸರಕಾರಿ ಸಭೆಗಳಲ್ಲಿ ಸೈಲ್ ಅವರು ವೇದಿಕೆಯನ್ನೇರಿ ಕುಳಿತುಕೊಳ್ಳುವುದು ನಾಚಿಗೆಗೇಡಿನ ಸಂಗತಿಯಾಗಿದೆ. ಸರಕಾರಿಸಭೆಗಳು ಕಾಂಗ್ರೆಸ್ ಪಕ್ಷದ ಸಭೆಗಳಲ್ಲ ಎಂಬುದನ್ನು ಮಾಜಿ ಶಾಸಕರು ಅರಿತುಕೊಳ್ಳಬೇಕು. ಇದು ಇದೇ ರೀತಿ ಮುಂದುವರಿದರೆ ಅಂತಹ ಸಭೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇವೆ. 

ಅಂಕೋಲಾದಲ್ಲಿ ಉಪನೊಂದಣಿ ಅಧಿಕಾರಿಯ ಕಚೇರಿಯ ಉಧ್ಘಾಟನಾ ದಿನವನ್ನು ನಿಗದಿ ಪಡಿಸುವಲ್ಲಿ ಶಾಸಕಿ ರೂಪಾಲಿ ಅವರ ಕೈವಾಡವಿಲ್ಲ. ಈ ಕಚೇರಿಯ ಉದ್ಘಾಟನೆ ಕಳೆದ ತಿಂಗಳ 12ನೇ ತಾರಿಖಿಗೇ ನಿಗದಿಯಾಗಿತ್ತಾದರೂ ಸಚಿವ ದೇಶಪಾಂಡೆ ಅವರು ಬೇರೆಕಾರ್ಯಕೃಮ ಇದ್ದ ಹಿನ್ನಲೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಅದನ್ನು ಕಳೆದ ರವಿವಾರಕ್ಕೆ ಮುಂದೂಡಲಾಗಿತ್ತು. ಈ ದಿನಾಂಕವನ್ನು ಸಂಬಂಧಿತ ಅಧಿಕಾರಿಗಳೇ ನಿಗದಿ ಪಡಿಸಿದ್ದು ಅದರಲ್ಲಿರೂಪಾಲಿ ನಾಯ್ಕ ಅವರ ಕೈವಾಡ ಇರಲಿಲ್ಲ. ಕ್ಷೇತ್ರದ ಶಾಸಕಿಯಾಗಿ ಅವರು ಕಾರ್ಯಕೃಮದಲ್ಲಿ ಭಾಗವಹಿಸಿದ್ದಾರೆ. ಆದರೆ ಹೊಟ್ಟೇಕಿಚ್ಚಿನಿಂದ ನರಳುತ್ತಿರುವ ಕೆಲ ಕಾಂಗ್ರೆಸ್ ಕಾರ್ಯಕರ್ತರು  ಕಾರ್ಯಕೃಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. 

ಈಗ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ಪಿಠೋಪಕರಣಗಳು ಇಲ್ಲದಿದ್ದರೂ ಅದನ್ನು ಉಧ್ಘಾಟಿಸಲಾಗಿದೆ ಎಂದು ಆರೋಪ ಮಾಡಿದ್ದು. ಕಳೆದ 12 ನೇ ತಾರಿಖಿನಂದು ಪೀಠೋಪಕರಣಗಳೇ ಇಲ್ಲದೇ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉಧ್ಘಾಟನೆಯ ಸಿದ್ದತೆ ನಡೆದಾಗ ಕಾಂಗ್ರೆಸ್ ಪದಾಧಿಕಾರಿಗಳು ಯಾಕೆ ಸುಮ್ಮನಿದ್ದರು. ನಂತರ 18 ದಿನಗಳ ಸಮಯಾವಕಾಶವಿದ್ದಾಗಲೂ ಇವರದೇ ರಾಜ್ಯ ಸರಕಾರ ಯಾಕೆ ಪೀಠೋಪಕರಣಗಳ ವ್ಯವಸ್ಥೆ ಮಾಡಿಲ್ಲ? ಈಗ ಹೊಸ ಪಿಠೋಪಕರಣಗಳನ್ನು ತರಲು ಅಧಿಕಾರಿಗಳಿಗೆ ಬಿಡದೇ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಿಗೆ ತೊಂದರೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಅದನ್ನು ಬಿಜೆಪಿ ಬಲವಾಗಿ ಖಂಡಿಸುತ್ತಿದ್ದು ರಾಜ್ಯಸರಕಾರ ಯಾವುದೇ ರಾಜಕಾರಣಕ್ಕೆ ಮಣಿಯದೇ ಅಂಕೋಲಾದ ನೂತನ ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಪೀಠೋಪಕರಣದ ವ್ಯವಸ್ಥೆ ಮಾಡ ಬೇಕಾಗಿ ವಿನಂತಿಸುತ್ತೇವೆ. 

ಅಲ್ಲದೇ ಸೈಲ್ ಅವರ ಕೆಲ ಹಿಂಬಾಲಕರ ಬೆದರಿಕೆ ತಂತ್ರಗಳಿಗೆ ಮಣಿಯದೇ ಹಿಂದೆ ನಡೆದ ಎಲ್ಲ ಕಾಮಗಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಬಿಜೆಪಿ ಕಟಿಬದ್ಧವಾಗಿದೆ ಎಂದು ಈ ಮೂಲಕ ತಿಳಿಯ ಪಡಿಸುತ್ತೇವೆ.  

ರಾಜೇಶ ನಾಯಕ
ಜಿಲ್ಲಾ ವಕ್ತಾರರು, ಬಿಜೆಪಿ, ಉ.ಕ


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...