ಕಾರವಾರ: ವಿದ್ಯಾಸಿರಿ  ಯೋಜನೆಗಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಳಿಂದ ಅರ್ಜಿ ಆಹ್ವಾನ

Source: varthabhavan | By Arshad Koppa | Published on 24th October 2017, 8:58 AM | Coastal News |

ಕಾರವಾರ ಅಕ್ಟೋಬರ  23:  ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸ್ತಕ  ಸಾಲೀನ  ವಿದ್ಯಾಸಿರಿ ಯೋಜನೆಯಡಿ ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ವಿದ್ಯಾರ್ಥಿಳಿಂದ  ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜ ಸಲ್ಲಿಸಬಯಸುವ ವಿದ್ಯಾರ್ಥಿಗಳು ಗ್ರಾಮೀಣ  ಪ್ರದೇಶದವರಾಗಿರಬೇಕು ವ್ಯಾಸಾಂಗ ಮಾಡುತ್ತಿರುವ ಕಾಲೇಜಿನಿಂದ ಕನಿಷ್ಟ 5ಕಿ.ಮೀ ಅಂತರವಿರಬೇಕು.  ವಿದ್ಯಾರ್ಥಿತಿಯು ಸ್ವಂತ ಸ್ಥಳ, ನಗರ/ಪಟ್ಟಣದವರಾಗಿದ್ದು , ಬೇರೆ ಬೇರೆ ನಗರ/ ಪಟ್ಟಣಗಳಲ್ಲಿನ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಲ್ಲಿ ಈ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. (ಒಂದೇ ನಗರದ ವ್ಯಾಪ್ತಿಯಲ್ಲಿ ಇರುವವರು ಅರ್ಹರಿರುವುದಿಲ್ಲ) ಕಳೆದ ಎರಡು ಸೆಮಿಸ್ಟರ್‍ಗಳಲ್ಲಿ ಪಾಸಾಗಿರಬೇಕು. ಮುಕ್ತ ವಿಶ್ವವಿದ್ಯಾಲಯ/ದೂರ  ಶೀಕ್ಷಣ ಕೋರ್ಸ್‍ಗಳಲ್ಲಿ ವ್ಯಾಸಾಂಗ  ಮಾಡುತ್ತಿರುವ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುವದಿಲ್ಲ. 
ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರಕದೆ ಇರುವ ಹಾಗೂ ಮೆರಿಟ್ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿ   ತಿಂಗಳು ರೂ. 1500 ರಂತೆ ಶೈಕ್ಷಣಿಕ ಅವಧಿ  10 ತಿಂಗಳುಗಳ ವಿಧ್ಯಾರ್ಥಿ ವೇತನವನ್ನು   ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವದು. ಅರ್ಜಿಯನ್ನು ಅಕ್ಟೋಬರ 30 ರ ಒಳಗಾಗಿ ಅಲ್ಪ ಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ ಅಥವಾ ಕಾಲೇಜಿನ ಮೂಖಾಂತರ ಸಲ್ಲಿಸಬಹುದಾಗಿದೆ. ಅರ್ಜಿಗಾಗಿ https://dom.karnataka.gov.in/uttarakannada   ರಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಉತ್ತರ ಕನ್ನಡ ಕಾರವಾರ ವನ್ನು ಸಂಪರ್ಕಿಸಬೇಕಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...