ಕಾರವಾರ: ಠಾಗೋರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಪ್ರದರ್ಶನ

Source: varthabhavan | By Arshad Koppa | Published on 24th March 2017, 8:07 PM | Coastal News |

ಕಾರವಾರ, ಮಾ ೨೩: ಇಂದು ಠಾಗೋರ ಚಿತ್ರಕಲಾ ಮಹಾವಿದ್ಯಾಲಯ ಕಾರವಾರ ಇದರ 2017 ನೇ ಸಾಲಿನ ವಿದ್ಯಾರ್ಥಿ ಕಲಾವಿಧರ ಒಟ್ಟೂ 55 ಕಲಾಕೃತಿಗಳು ಪ್ರದರ್ಶನಗೊಂಡವು. ಪ್ರದರ್ಶನವನ್ನು ಪದ್ಮಶ್ರೀ ಸುಕ್ರು ಬೊಮ್ಮು ಗೌಡಾ, ಜಾನಪದ ಕಲಾವಿದೆ ಉದ್ಘಾಟಿಸಿ, ವಿದ್ಯಾರ್ಥಿ ಕಲಾಕಾರರನ್ನು ಉದ್ದೇಶಿಸಿ ಕಲೆಯ ಜೀವನದ ಪಡಿನೆರಳು ಆದ್ದರಿಂದ ಜನರ ವಾಸ್ತವಿಕ ಜೀವನದ ಸಂಗಡ ಆದರ್ಶಮಯ ಜೀವನವನ್ನು ಅಳವಡಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಹಾಗೂ ಕೆಲವು ಜಾನಪದ ಗೀತೆಗಳನ್ನು ಹಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿ. ಎಮ್. ಹೆಗಡೆ, ಪ್ರಾಚಾರ್ಯರು, ಸರಕಾರಿ ಪಾಲಿಟೆಕ್ನಿಕ್ ಕಾರವಾರ ಅವರು ವಿದ್ಯಾರ್ಥಿಗಳ ಕಲಾಕೃತಿಗಳನ್ನು ವೀಕ್ಷಿಸಿ, ಕಲಾಕೃತಿಗಳ ಉದ್ದೇಶವು ಜನಸಾಮಾನ್ಯರಲ್ಲಿ ಸುಲಭವಾಗಿ ತಿಳುವಳಿಕೆಯಾಗುವಂತೆ ಚಿತ್ರಿಸಲು ಸಲಹೆ ನೀಡಿದರು. ಜಾಫರ ಉಪನ್ಯಾಸಕರು, ಸರಕಾರಿ ವಿಜ್ಞಾನ ಕಾಲೇಜು, ಕಾರವಾರ ಅವರು ಮಾತನಾಡಿ ಸರಕಾರವು ಕಲಾವಿಧರನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು. ಜಿಲ್ಲೆಯ ಏಕೈಕ ಕಲಾ ಶಾಲೆಗೆ ಶಾಸ್ವತ ಕಟ್ಟಡ ಒದಗಿಸುವಂತೆ ಸರಕಾರ ಪ್ರೋತ್ಸಾಹಿಸಬೇಕು. ಚಂದ್ರಕಾಂತ ಬಲೆಗಾರ, ನಿರುದ್ಯೋಗಿ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರು, ತರಬೇತಿ ಪಡೆದ ನಿರುದ್ಯೋಗ ಶಿಕ್ಷಕರು, ಒಕ್ಕಟ್ಟಿನಿಂದ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಪ್ರಬಲಗೊಳಿಸಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು. ಜಿ. ಕೆ. ಮಹಾಲೆ, ಗೌರವ ಪ್ರಾಚಾರ್ಯ, ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕಲಾಕಾರ, ರೋಹಿತ ಆಗೇರ ಸ್ವಾಗತಿಸಿದರು. ಅಭಿಷೇಕ ನೇತ್ರೇಕರ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಸರಿತಾ ಗೌಡಾ ವಂದನಾರ್ಪಣೆ ಸಲ್ಲಿಸಿದರು. 
    
ವಿದ್ಯಾಲಯದ ಉಪನ್ಯಾಸಕರಾದ ಜಾನಬೆಲ್, ಎಮ್. ಎಚ್. ನರಗುಂದ, ಚಂದ್ರಹಾಸ ನಾಯ್ಕ, ಎಸ್. ಎಮ್. ಚಂದಾವರಕರ ಕಚೇರಿ ಸಹಾಯಕಿ ವಿದ್ಯಾಕುಮಾರಿ ಹಾಗೂ ಸಂಸ್ಥೆಯ ಸದಸ್ಯರಾದ ವಿಜಯ ಮಹಾಲೆ, ರಮಾಕಾಂತ ಮಹಾಲೆ, ಬಿ. ಕೆ. ಮಹಾಲೆ, ಎಮ್. ಎಚ್. ಗೌಡಾ, ಸತೀಶ ಶಿರೋಡಕರ ಮತ್ತು ಇನ್ನಿತರ ಗಣ್ಯರು ಹಾಗೂ ವಿದ್ಯಾರ್ಥಿ ಕಲಾಕಾರರು ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...