ಕಾರವಾರ: ಮೇ 12 ರಿಂದ ಸೇನಾ ಭರ್ತಿ ರ್‍ಯಾಲಿ

Source: varthabhavan | By Arshad Koppa | Published on 31st March 2017, 1:35 PM | National News |

ಕಾರವಾರ ಮಾರ್ಚ 30 : ವಿಜಯಪುರದ ಸೈನಿಕ ಶಾಲೆಯಲ್ಲಿ ಮೇ 12 ರಿಂದ 18 ರವರೆಗೆ  ಭೂ ಸೇನಾ ಭರ್ತಿ  ರ್‍ಯಾಲಿಯನ್ನು ಆಯೋಜಿಸಲಾಗಿದೆ.

 
ಸಿಪಾಯಿ ಜನರಲ್ ಡ್ಯೂಟಿಗೆ 2017 ಅಕ್ಟೋಬರಗೆ ಅನ್ವಯಿಸುವಂತೆ  17 ರಿಂದ 21 ವರ್ಷ ವಯೋಮಿತಿಯೊಳಗಿದ್ದು 10ನೇ ತರಗತಿಯಲ್ಲಿ ಶೇ.45 ಅಂಕ ಪಡೆದಿರಬೇಕು. ಸಿಪಾಯಿ ಟೆಕ್ನೀಸಿಯನ್, ಸಿಪಾಯಿ ನರ್ಸಿಂಗ್ ಸಹಾಯಕ, ಸಿಪಾಯಿ ಕ್ಲರ್ಕ ಹುದ್ದೆಗಳಿಗೆ ಶೆ.45 ಅಂಕಗಳೊಂದಿಗೆ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು, ಮತ್ತು 2017 ಅಕ್ಟೋಬರಗೆ ಅನ್ವಯಿಸುವಂತೆ 17 ರಿಂದ 23 ವರ್ಷ ವಯೋಮಿತಿಯೊಳಗಿರಬೇಕು,   ಸಿಪಾಯಿ ಟ್ರಡೆಮನ್ ಹುದ್ದೆಗೆ 10ನೇ ತರಗತಿಯಲ್ಲಿ ಉತ್ತಿರ್ಣತೆ, ಹೌಸ್ ಕೀಪರ ಮತ್ತು ಮೆಸ್ ಕೀಪರ್ ಹುದ್ದೆಗಳಿಗೆ 8ನೇ ತರಗತಿಯಲ್ಲಿ ಉತ್ತೀರ್ಣತೆ ಹೊಂದಿ 17 ರಿಂದ 23 ವರ್ಷ ವಯೋಮಿತಿಯೊಳಗಿರಬೇಕು. 
ಭಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಪುರುಷ, ಅಭ್ಯರ್ಥಿಗಳು ಏಪ್ರಿಲ್ 25 ರವರೆಗೆ www.joinindianarmy.nic ಅಂತರ್ಜಾಲದ ಮೂಲಕ ನೊಂದಣ  ಮಾಡಿ ವಿಜಯಪುರದಲ್ಲಿ   ಮೇ 12 ರಿಂದ 18 ರವರೆಗೆ  ನಡೆಯಲಿರುವ ರ್ಯಾಲಿಯಲ್ಲಿ  ಭಾಗವಹಿಸಬಹುದು. 


84 ಉದ್ಯೋಗಾಕಾಂಕ್ಷಿಗಳ ನೋಂದಣಿ
ಕಾರವಾರ ಮಾರ್ಚ 30 : ಫೆಬ್ರವರಿ ತಿಂಗಳಲ್ಲಿ 33 ಮಹಿಳೆಯರು ಸೇರಿದಂತೆ ಒಟ್ಟು  84 ಉದ್ಯೋಗ ನಿರೀಕ್ಸೆಯಲ್ಲಿರುವ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೋಂದಣ  ಮಾಡಿರುವರು. ಜನವರಿ ತಿಂಗಳಿನಲ್ಲಿ 149 ಅಭ್ಯರ್ಥಿಗಳು ನೋಂದಣ  ಮಾಡಿದ್ದರು ಎಂದು ಉತ್ತರ ಕನ್ನಡ ಜಿಲ್ಲೆ ಯೋಜನಾ ಉದ್ಯೋಗ ವಿನಿಮಯ ಕಛೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ. 

Read These Next

ಸನ್ನಿ ಅಣೆಕಟ್ಟು ನಿರ್ಮಾಣ ಗುತ್ತಿಗೆಯ ಬೆನ್ನಲ್ಲೇ; 45 ಕೋಟಿ ರೂ.ಗಳ ಚು.ಬಾಂಡ್ ಖರೀದಿಸಿದ್ದ ಬಿಜೆಪಿ ಸಂಸದನ ಕಂಪೆನಿ

ಆಂಧ್ರಪ್ರದೇಶದ ಬಿಜೆಪಿ ರಾಜ್ಯಸಭಾ ಸದಸ್ಯ ಸಿ.ಎಂ.ರಮೇಶ್ ಸ್ಥಾಪಿಸಿದ್ದ ರಿತ್ವಿಕ್ ಪ್ರೊಜೆಕ್ಟ್ ಪ್ರೈ.ಲಿ.(ಆರ್;ಪಿಪಿಎಲ್) ಹಿಮಾಚಲ ...

ಹಾಸ್ಟೆಲ್‌ಗೆ ನುಗ್ಗಿ ನಮಾಝ್ ನಿರತರ ಮೇಲೆ ಗೂಂಡಾಗಳಿಂದ ಹಲೆ; ವಿದೇಶಿ ವಿದ್ಯಾರ್ಥಿಗಳಿಗೆ ಗಾಯ

ಇಲ್ಲಿನ ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ರಮಝಾನ್ ಪ್ರಯುಕ್ತ ರಾತ್ರಿ ಹೊತ್ತು ನಮಾಝ್ ಮಾಡುತ್ತಿದ್ದ ವಿದೇಶಿ ...

ಲೋಕಸಭಾ ಚುನಾವಣೆ ಘೋಷಣೆ; ಎಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ; ಜೂ.4ರಂದು ಫಲಿತಾಂಶ ಪ್ರಕಟ

ದೇಶದ ಜನತೆ ಕಾತರದಿಂದ ಕಾಯುತ್ತಿದ್ದ 18ನೇ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ...