ಕಾರವಾರ:  ಫೆ.22 ರಂದು ಶಿವಾಜಿಮಹಾರಾಜ ಮತ್ತು ಸರ್ವಜ್ಞ ಜಯಂತಯೋತ್ಸವ 

Source: varthabhavan | By Arshad Koppa | Published on 21st February 2017, 8:22 AM | Coastal News |

ಕಾರವಾರ ಫೆಬ್ರವರಿ 20 : ಫೆ.22 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಂಯುಕ್ತ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸರ್ವಜ್ಞಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. 


 ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಕಾರ್ಯಕ್ರಮ ಉದ್ಘಾಟಿಸುವರು. ಅಂಕೋಲಾ-ಕಾರವಾರ ವಿಧಾನ ಸಭಾ ಸದಸ್ಯ ಸತೀಶ ಸೈಲ್ ಕಾರ್ಯಕ್ರಮದ ಅಧ್ಯಕ್ಷತೆಯನು ವಹಿಸುವರು. 


 ಮುಖ್ಯ ಅತಿಥಿಗಳಾಗಿ ಜಯಶ್ರೀ ಮೊಗೇರ ಅಧ್ಯಕ್ಷರು,ಜಿಲ್ಲಾ ಪಂಚಾಯತ್ ಕಾರವಾರ, ಶಾರದಾ ಮೋಹನ ಶೆಟ್ಟಿ, ಶಾಸಕರು ಕುಮಟಾ ವಿಧಾನಸಭಾ ಕ್ಷೇತ್ರ,  ಅನಂತಕುಮಾರ ಹೆಗಡೆ ಸಂಸದ ಸದಸ್ಯರು ಉ.ಕ.ಕ್ಷೇತ್ರ, ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರು ಶಿರಸಿ ವಿಧಾನಸಭಾ ಕ್ಷೇತ್ರ, ಶಿವರಾಮ ಹೆಬ್ಬಾರ ಶಾಸಕರು ಯಲ್ಲಾಪುರ ವಿಧಾನಸಭಾ ಕ್ಷೇತ್ರ, ಮಂಕಾಳು ವೈದ್ಯ ಶಾಸಕರು ಭಟ್ಕಳ ವಿಧಾನಸಭಾ ಕ್ಷೇತ್ರ, ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸದಸ್ಯರು, ಶ್ರೀಕಾಂತ ಎಲ್.ಫೋಟ್ನೇಕರ ವಿಧಾನ ಪರಿಷತ್ ಸದಸ್ಯರು, ಎಸ್.ವಿ.ಸಂಕನೂರ ವಿಧಾನ ಪರಿಷತ್ ಸದಸ್ಯರು, ರಾಜೇಂದ್ರ ನಾಯ್ಕ ಅಧ್ಯಕ್ಷರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಸಂತೋಷ ರೇಣಕೆ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್, ಗಣಪತಿ ವಿ.ನಾಯ್ಕ ಅಧ್ಯಕ್ಷರು ನಗರಸಭೆ ಕಾರವಾರ, ಪ್ರಮೀಳಾ ನಾಯ್ಕ 
ಅದ್ಯಕ್ಷರು, ತಾಲೂಕ ಪಂಚಾಯತ್ ಕಾರವಾರ ಇವರು ಭಾಗವಹಿಸುವರು. 
 ಮೆರವಣ ಗೆ : ಬೆಳಿಗ್ಗೆ 9-30ಕ್ಕೆ ಜಿಲ್ಲಾಧೀಕಾರಿಗಳ ಕಛೇರಿ ಆವರಣದಿಂದ ಜಿಲ್ಲಾ ರಂಗ ಮಂದಿರವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸರ್ವಜ್ಞರ ಭಾವ ಚಿತ್ರಗಳ ಮೇರವಣ ಗೆ ನಡೆಯಲಿದೆ.


 ನಗು-ಮಗು ಅಂಬ್ಯೂಲೆನ್ಸ ವಾಹನ ತುರ್ತು ಸೇವೆಗೆ ಲಭ್ಯ 

ಕಾರವಾರ ಫೆಬ್ರವರಿ 20 : ಕಾರವಾರ ಜಿಲ್ಲೆಯ ಜೊಯಡಾ ತಾಲೂಕನ್ನು ಹೊರತುಪಡಿಸಿ ಉಳಿದ 10 ತಾಲೂಕಾ ಆಸ್ಪತ್ರೆಗಳಲ್ಲಿರುವ ನಗು ಮಗು ಅಂಬ್ಯೂಲೆನ್ಸ ವಾಹನಗಳು ಇನ್ನು ಮುಂದೆ 108 ಅಂಬ್ಯೂಲೆನ್ಸ ವಾಹನದಂತೆ ತುರ್ತು ಸೇವೆಗೆ ಹಗಲು ವೇಳೆಯಲ್ಲಿ ಲಬ್ಯವಿರುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...