ಕಾರವಾರ: ಅಂಚೆ ಇಲಾಖೆ ಹುದ್ದೆಗೆ ಅರ್ಜಿ ಆಹ್ವಾನ 

Source: varthabhavan | By Arshad Koppa | Published on 25th April 2017, 7:54 AM | Coastal News |

ಕಾರವಾರ ಏ.24 : ಕರ್ನಾಟ ಅಂಚೆ ವೃತ್ತದಿಂದ 1048 ಗ್ರಾಮೀಣ ಅಂಚೆ ಸೇವಕರ ವಿವಿಧ ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.


 ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಆಗಿದ್ದು 18 ರಿಂದ 40 ವರ್ಷ ವಯೋಮಿತಿಯೊಳಗಿನವರಾಗಿರಬೇಕು. ಪರಿಶಿಷ್ಟ ಜಾತಿ/ಪಂಗಡ/ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳು ತಮ್ಮ ಹೆಸರನ್ನು https://indiapost.gov.in ಅಥವಾ  http://appost.inqdsonline  ರಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹಿಂದುಳಿದ ವರ್ಗದ/ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕದ ರೂಪದಲ್ಲಿ ಇಲಾಖೆಯ ಯಾವುದೇ ಪ್ರಧಾನ ಅಂಚೆ ಕಛೇರಿ/ಉಪ ಅಂಚೆ ಕಚೇರಿಯಲ್ಲಿ ಪಾವತಿಸಬೇಕು. ಎಲ್ಲಾ ಮಹಿಳಾ ಮತ್ತು ಪರಿಶಿಷ್ಠ ಜಾತಿ/ಪಂಗಡ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇರುತ್ತದೆ.

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕಾರವಾರ ಏಪ್ರೀಲ್ 24 : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಏಪ್ರೀಲ್ 26, 27 ಮತ್ತು 28 ರಂದು ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಏಪ್ರೀಲ್ 26 ರಂದು ರಾತ್ರಿ 9.30ಗಂ ಹಳಿಯಾಳ ಆಗಮಿಸಿ ವಾಸ್ತವ್ಯ ಹೂಡುವರು ಏ.27 ರಂದು ಬೆಳಗ್ಗೆ 8.30 ಸಾರ್ವಜನಿಕ ಭೇಟಿ ಮಾಡುವರು. ಬೆ.10 ಗಂ.ಹಳಿಯಾಳದಿಂದ ನಿರ್ಗಮಿಸಿ ಬೆಗಾವಿ ತೆರಳುವರು. ಮ.2.30ಕ್ಕೆ ರಾಮನಗರ ಆಗಮಿಸಿ ಸಾರ್ವಜನಿಕ ಮಾಡುವರು. ಮ.3 ಗಂಟೆಯಿಂದ ಸಂ.5 ಗಂಟೆಯವರೆಗೆ ಟೊಯೊಟಾ ಕಂಪನಿಯ ಸಿ.ಎಸ್.ಆರ್.ಯೋಜನೆಯಡಿಯಲ್ಲಿ ಸಾರ್ವಜನಿಕ ಶಚಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.ನಂತರ ಮೈಸೂರು ಪೇಂಟ್ಸ್ ಆಂಡ್ಯ್ ವಾರ್ನಿಶ ಕಂಪನಿಯ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನೂತನವಾಗಿ ನಿರ್ಮಾಣ ಮಾಡುವ ಯಾತ್ರಿ ನಿವಾಸದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಕಿರು ಕುಡಿಯುವ ನೀರು ಸರಬರಾಜು ಕಾಮಗಾರಿಗಳಿಗೆ ಚಾಲನೆ ನೀಡುವರು. ಮುಜರಾಯಿ ಇಲಾಖೆಯಿಂದ ವಿವಿಧ ದೇವಸ್ಥಾನಗಳಿಗೆ ಮಂಜೂರಾಗಿರುವ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅರಣ್ಯ ಇಲಾಖೆಯಿಂದ ಉಚಿತವಾಗಿ ನೀಡುವ ಸಿಲೆಂಡರ್ ಗ್ಯಾಸ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವದು. ಸಂಜೆ 5 ರಾನಗರದಿಂದ ನಿರ್ಗಮಿಸುವರು 
ಏ. 28 ರಂದು ಮ.3 ಗಂಟೆಗೆ ಹಳಿಯಾಳ ಆಗಮಿಸುವರು. ಮ.3.30 ನೀರಲಗಾದಲ್ಲಿ ನೂತನವಾಗಿ ನಿರ್ಮಿಸಿದ ವಿಟ್ಟಲ ರುಕ್ಮಾಯಿ ದೇವಸ್ಥಾನ ಉದ್ಘಾಟನಾ ಮತ್ತು ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.4.30 ಬಾಣಸಗೇರಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವದು. ಸಂ.6ಗಂ ಸಾರ್ವಜನಿಕ ಭೇಟಿ ಮಾಡುವರು. ರಾ.7 ಗಂಟೆಗೆ ಹಳಿಯಾಳದಿಂದ ನಿರ್ಗಮಿಸಿ ಹುಬ್ಬಳ್ಳಿಗೆ ಹೊರಡುವರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...