ಕೋಲಾರ ನಗರಸಭೆಯಲ್ಲಿ ಡೀಸಲ್‍ನಲ್ಲಿ ಬಾರಿ ಅವ್ಯವಹಾರ

Source: sonews | By Staff Correspondent | Published on 28th September 2018, 3:50 PM | Coastal News |

ಕೋಲಾರ : ಕೋಲಾರ ನಗರಸಭೆಯಲ್ಲಿ ಡೀಸಲ್ ಖರೀದಿಯಲ್ಲಿ ನಡೆಯುತ್ತಿರುವ ಬಾರಿ ಅವ್ಯವಹಾರದ ಬಗ್ಗೆ ತನಿಖೆಗೆ ಒತ್ತಾಯಿಸಿ ನಗರಸಭಾ ಸದಸ್ಯರು ಮುರಳಿಗೌಡರಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಭ್ರಷ್ಠಾಚಾರ ನಿಗ್ರಹದಳಕ್ಕೆ ದೂರು ನೀಡಿದರು.

ಕೋಲಾರ ನಗರಸಭೆಯಲ್ಲಿ ಆರೋಗ್ಯ ನಿರೀಕ್ಷಕರು,  ವಾಹನ ಚಾಲಕರು ಮತ್ತು ಮೆಹಬೂಬ್ ಪೆಟ್ರೋಲ್ ಬಂಕ್ ನಿರ್ವಾಹಕರು ಹಾಗೂ ಮಾಲೀಕರು ಸಾಕಷ್ಟು ಅವ್ಯವಹಾರ ಮಾಡಿ 15 ದಿನಕ್ಕೆ 3.50 ಲಕ್ಷ ಬಿಲ್ಲು ಮಾಡುತ್ತಿದ್ದಾರೆ. ದಿನನಿತ್ಯ ನಗರಸಭೆಯಲ್ಲಿರುವ ಆರೋಗ್ಯ ನಿರೀಕ್ಷಕರು ಬಂಕ್‍ಗೆ ಜಟಿಂಗ್, ಸಕ್ಕಿಂಗ್ ಯಂತ್ರ (ಯೂಜಿಡಿ) 2 ವಾಹನಕ್ಕೆ 120 ಲೀಟರ್ ಡೀಸಲ್ ಇಂಡೆಂಟು ನೀಡುತ್ತಿರುವುದು ಸದರಿ 2 ವಾಹನಗಳಿಗೆ ಕೇವಲ 50 ಲೀಟರ್ ಮಾತ್ರ ಡೀಸಲ್ ತುಂಬುತ್ತಾ ಅವ್ಯವಹಾರ ನಡೆಸುತ್ತಾರೆ. ಪ್ರತಿದಿನ ವಾಹನಗಳಿಗೆ ಇಂಡೆಂಟ್ ನೀಡುವುದು ವಾಡಿಕೆಯಾಗಿದೆ.

ಉಳಿದ 70 ಲೀಟರ್ ದಿನನಿತ್ಯ ಅವ್ಯವಹಾರ ನಡೆಯುತ್ತಿದೆ. ದಿನನಿತ್ಯ ನಗರದಲ್ಲಿ ಒಳ ಚರಂಡಿ ಸಮಸ್ಯೆಗಳು ಹೆಚ್ಚಾಗಿ ಬರುತ್ತಿದ್ದು, 2 ವಾಹನದ ಚಾಲಕರು ಮತ್ತು ನಿರ್ವಾಹಕರು, ಸಾರ್ವನಿಕರ ಬಳಿ ಹಣಕ್ಕಾಗಿ ಪೀಡಿಸಿ ಹಣ ಕೊಟ್ಟವರ ಕೆಲಸವನ್ನ ಬೇಗ ಮಾಡಿ ಭ್ರಷ್ಠಾಚಾರದಲ್ಲಿ ತೊಡಗಿದ್ದಾರೆ.

ಅಲ್ಲದೆ ಕೋಲಾರ ನಗರಸಭೆಯಲ್ಲಿ ಕಸ ಸಾಗಿಸುವ ಟ್ರ್ಯಾಕ್ಟರ್, ಟಿಪ್ಪರ್ ಹಾಗೂ ಆಟೋ ಟಿಪ್ಪರ್ ವಾಹನಗಳಿಗೆ ಇಂಡೆಂಟ್ ನೀಡುವ ಪ್ರಮಾಣದಲ್ಲಿ ಡೀಸೆಲ್ ಹಾಕಿಸದೆ ಅದರಲ್ಲೂ ಸಾಕಷ್ಟು ದುರ್ಬಳಕೆ ಮಾಡಿ ವಾಹನಗಳು ನಗರದಿಂದ 15 ಕಿ.ಮೀ. ದೂರದಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಕಸವನ್ನು ಒಂದು ಲೋಡ್ ಮಾತ್ರ ಸಾಗಿಸಿ ಡೀಸೆಲ್ ಅವ್ಯವಹಾರ ಮಾಡುವ ಸಲುವಾಗಿ ಕೆರೆ ಕುಂಟೆಗಳಿಗೆ ತುಂಬಿಸಿ ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ. ಜೆಸಿಬಿ ವಾಹನದ ಡಿಸೀಲ್‍ನಲ್ಲಿಯೂ ಕೂಡ ಬಾರಿ ಅವ್ಯಹಾಹ ನಡೆಯುತ್ತಿದೆ.

ನಗರದಲ್ಲಿ ಸೊಳ್ಳೆಗಳಿಗೆ ಫಾಗಿಂಗ್ ಯಂತ್ರವನ್ನು ಬಳಸದೆ ಸದರಿ ಯಂತ್ರಕ್ಕೆ ಡೀಸೆಲ್ ಇಂಡೆಂಟ್ ನೀಡಿ ಅದರಲ್ಲೂ ಸಹ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ.

ಜಿಲ್ಲಾಧಿಕಾರಿಗಳು ಹಾಗೂ ಭ್ರಷ್ಠಾಚಾರ ನಿಗ್ರಹ ದಳವು ಕೋಲಾರ ನಗರಸಭೆಯ ಸಂಬಂಧಪಟ್ಟ ಆರೋಗ್ಯ ನಿರೀಕ್ಷಕರು, ಚಾಲಕರು, ನಿರ್ವಾಹಕರು,  ಮೆಹಬೂಬ್ ಪೆಟ್ರೋಲ್ ಬಂಕ್‍ನ, (ಶನಿಮಹಾತ್ಮ ದೇವಾಲಯದ ಬಳಿ) ಮಾಲೀಕರು ಮತ್ತು ನಿರ್ವಾಹಕರ ಮೇಲೆ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದು ನಗರಸಭಾ ಸದಸ್ಯರು ಮುರಳಿಗೌರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...