11 ತಿಂಗಳಿನಲ್ಲಿ ಕನಿಷ್ಠ ಬೆಲೆ; ಚಿನ್ನದ ದರ ಮತ್ತೆ ಇಳಿಕೆ

Source: S O News | By MV Bhatkal | Published on 26th December 2016, 8:49 PM | National News |

ಮುಂಬೈ: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 250 ರೂ. ಕಡಿಮೆಯಾಗಿದೆ. ಜ್ಯುವೆಲ್ಲರಿ ವ್ಯಾಪಾರಿಗಳು ಮತ್ತು ಹೂಡಿಕೆದಾರರು ಚಿನ್ನ ಖರೀದಿಯಿಂದ ಹಿಂದಕ್ಕೆ ಸರಿದ ಕಾರಣ ಚಿನ್ನದ ಬೆಲೆ 11 ತಿಂಗಳ ಕನಿಷ್ಠಕ್ಕೆ ತಲುಪಿದೆ.

250 ರೂ. ಇಳಿಕೆಯಾದ ಕಾರಣ 10 ಗ್ರಾಂ ಚಿನ್ನದ ದರ 27,550 ಆಗಿದೆ. ಬೆಳ್ಳಿಯೂ 210 ರೂ. ಇಳಿಕೆಯಾಗಿದ್ದು ಒಂದು ಕೆಜಿ ಬೆಳ್ಳಿ ದರ 38,660 ರೂ. ಆಗಿದೆ.

ನೋಟ್ ನಿಷೇಧಗೊಂಡ ಬಳಿಕ ಬೇಡಿಕೆ ಕಡಿಮೆ, ಸಾಲು ಸಾಲು ರಜೆಯಿಂದಾಗಿ ಚಿನ್ನ, ಬೆಳ್ಳಿ ಧಾರಣೆಯಲ್ಲಿ ಇಳಿಕೆಯಾಗಿದೆ. ಫೆಬ್ರವರಿ 9ರಂದು 10 ಗ್ರಾಂ ಚಿನ್ನ 28,585 ರೂ. ಬೆಲೆಯಲ್ಲಿ ಮಾರಾಟವಾಗಿತ್ತು.

ಚಿನಿವಾರ ಪೇಟೆಯಲ್ಲಿ ಡಿಸೆಂಬರ್ 9ರಂದು ಚಿನ್ನದ ಬೆಲೆಯಲ್ಲಿ 145 ರೂ. ಕುಸಿತಗೊಂಡರೆ ಬೆಳ್ಳಿ ಬೆಲೆಯಲ್ಲಿ 185 ರೂ. ಇಳಿಕೆಯಾಗಿತ್ತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...