ಅರಣ್ಯ ರಕ್ಷಣೆ ಮಾಡುವ ಕಾವಲುಗಾರರು ಬ್ಯಾಡ್ಮೀಂಟನ್ ಮೈದಾನ ನಿರ್ಮಾಣ ಕಾರ್ಯದಲ್ಲಿ

Source: sonews | By Staff Correspondent | Published on 1st November 2018, 12:24 AM | Coastal News |

ಮುಂಡಗೋಡ : ಅರಣ್ಯ ರಕ್ಷಣೆ ಮಾಡುವ ಕಾವಲುಗಾರ ರನ್ನು  ಇತರೆ ಕೆಲಸಗಳಿಗೆ ನಿಯೋಜಿಸಿದರೆ ಕಾಡು ರಕ್ಷಣೆ ಮಾಡಲು ಸಾಧ್ಯವೆ ಎಂಬ ಪ್ರಶ್ನೆ ಮುಂಡಗೋಡ ಸಾರ್ವಜನಿಕರಲ್ಲಿ ಮೂಡಿದೆ.

ಕಳೆದ ಕೆಲವು ದಿನಗಳಿಂದ ಅರಣ್ಯ ಇಲಾಖೆಯ ಕ್ಷೇಮಾಭಿವೃದ್ದಿಯ ಕೆಲ ನೌಕರರು ಹಾಗೂ ಪಿಸಿಪಿ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರು ಒಟ್ಟು ಸುಮಾರು 15 ಜನರು ಅರಣ್ಯ ಇಲಾಖೆಯ ಆವರಣದಲ್ಲಿ ನಿರ್ಮಿತವಾಗುತ್ತಿರುವ ಬ್ಯಾಡ್ಮಿಂಟನ್ ಕೋರ್ಟ್(ಮೈದಾನ)ದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ  ಕಾಡಿನ ರಕ್ಷಣೆ ಇಲ್ಲದಂತಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಕಾಡುಗಳ್ಳರಿಗೆ ವರದಾನವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಾಡು ರಕ್ಷಣೆಗೆ ಬಂದವರು ಇತರೆ ಕೆಲಸಗಳಿಗೆ ನಿಯೋಜಿತರಾದರೆ ಕಾಡನ್ನು ರಕ್ಷಣೆ ಮಾಡುವವರು ಯಾರು. ಆಯಾ ಪ್ರದೇಶಗಳ ಕಾಡನ್ನು ಜತನ್ ಮಾಡುವ ನೌಕರರು ಆಯಾ ಪ್ರದೇಶಗಳಲ್ಲಿ ಕಾಡಿನಲ್ಲಿಯ ಮರಗಳು ಕಳ್ಳತನವಾದರೆ ಯಾರು ಜವಾಬ್ದಾರರು ಎನ್ನುವ ಕೊರಗು ನೌಕರರಲ್ಲಿ ಮೂಡಿ ತಮ್ಮ ಮೇಲೆ ಬರುತ್ತಿದಿಯೇ ಎಂಬ ಆತಂಕ ವ್ಯಕ್ತಪಡಿಸುವುದು ಕೇಳಿ ಬರುತ್ತಿದೆ. ಕಾಡನ್ನು ಜತನ್ ಮಾಡುವ ನೌಕರರನ್ನು ಇತರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳದೆ ಅವರನ್ನು ಕಾಡಿನ ರಕ್ಷಣೆಗೆ ನಿಯೋಜಿಸುವುದು ಉತ್ತಮ. ಕಾಡಿನ ರಕ್ಷಣೆಗಿಂತ ಬ್ಯಾಡ್ಮಿಂಟನ್ ಕೋಟ್(ಮೈದಾನ) ನಿರ್ಮಿಸುವುದು ಇಲ್ಲಿಯ ಅಧಿಕಾರಿಗಳಿ ಗೆ ಮುಖ್ಯವಾಯಿತಾ. ಕಾಡುಗಳ್ಳರಿಂದ ನಲುಗುತ್ತಿರುವ ಕಾಡುಗಳು ಇನ್ನು ಕಾವಲುಗಾರರು ಕಾಡುಗಳಲ್ಲಿ ಇಲ್ಲ ಎಂದು ಗೊತ್ತಾದರೆ ಕಾಡನ್ನು ಉಳಿಸುವುದು ಕಷ್ಟಸಾಧ್ಯ ಇಂತಹ ಇತರೆ ಕೆಲಸಗಳಿಗೆ ಕಾವಲುಗಾರರನ್ನು ಉಪಯೋಗಿಸಿಕೊಳ್ಳದೆ ಇತರೆ ಜನರನ್ನು ಇತರೆ ಕೆಲಸಗಳಿಗೆ ದುಡಿಯಲಿಕ್ಕೆ ಇಟ್ಟುಕೊಳ್ಳಲಿ. ಇತರೆ ಜನರನ್ನು ಕೆಲಸಕ್ಕೆ ಇಟ್ಟುಕೊಂಡರೆ ಕೂಲಿ ಕೊಡಬೇಕಾಗುತ್ತದೆ. 

ಕೂಲಿಯ ಹಣವನ್ನು ಉಳಿಸಲಿಕ್ಕೆ ಹೋಗಿ ಲಕ್ಷಾಂತರ ರೂ ಮರಗಳು ಬಲಿಯಾದರೆ ಯಾರು ಹೊಣೆ? ಈ ಕುರಿತು  ಅಧಿಕಾರಿಗಳು ಯೋಚಿಸುವುದು ಅವಶ್ಯವಾಗಿದೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...