ಕುಡಿಯುವ ನೀರು ಕುರಿತಂತೆ ಜಾಲಿ ಪ.ಪಂ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ

Source: sonews | By Staff Correspondent | Published on 30th December 2018, 11:39 PM | Coastal News | Don't Miss |


ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷ ಸೈಯದ್ ಅದಮ್ ಪಣಂಬೂರು ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಸಾಮಾನ್ಯ ಸಭೆಯೂ ಪಂಚಾಯತ ಸಭಾಭವನದಲ್ಲಿ ಶನಿವಾರದಂದು ಮಧ್ಯಾಹ್ನ ನಡೆಯಿತು.

ಸಭೆಯಲ್ಲಿ ಇಲ್ಲಿನ ಕಡವಿನಕಟ್ಟೆ ಡ್ಯಾಂನಿಂದ ಕುಡಿಯುವ ನೀರಿನ ಶೇಖರಣೆಯು ಸರಿಯಾಗಿ ಆಗುತ್ತಿಲ್ಲ ಹಾಗೂ ನೀರಿನ ಶುದ್ಧಿಕರಣ ಘಟಕದಲ್ಲಿನ ಫಿಲ್ಟರನ್ನು ಬದಲಾಯಿಸಿದ ಹಿನ್ನೆಲೆ ಶುದ್ಧಿಕರಣ ಸಮರ್ಪಕವಾಗಿ ಆಗುತ್ತಿಲ್ಲ. ಅದೇ ರೀತಿ ಇಲ್ಲಿನ ವೆಂಕಟಾಪುರ ವ್ಯಾಪ್ತಿಯಲ್ಲಿ ವಾಟರ ಮೇನ್ ಸರಿಯಾದ ಸಮಯಕ್ಕೆ ನೀರಿನ

ಸರಬರಾಜು ಮಾಡುತ್ತಿಲ್ಲ ಎಂಬುದಾಗಿ ಸದಸ್ಯ ಸಣ್ಣು ಗೊಂಡ ಆರೋಪಿಸಿದರು. 
ಇದೇ ವೇಳೆ ಈಗಾಗಲೇ ಕಡವಿನಕಟ್ಟೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಪಂಚಾಯತ ವ್ಯಾಪ್ತಿಯಲ್ಲಿ ಸರಿಯಾಗಿ ತೆರಿಗೆ ಕಟ್ಟದವರ ಮೇಲೆ ದಂಡ ಸಮೇತ ತೆರಿಗೆ ಕಟ್ಟಿಸಿಕೊಳ್ಳಬೇಕು ಹಾಗೂ ಪಂಚಾಯತ ಗಮನಕ್ಕೆ ಬಾರದೇ ಇರುವ ಅನಧೀಕೃತವಾಗಿ ಕುಡಿಯವ ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು ಜೊತೆಗೆ ಕೆಲವು ಕಡೆ ಕುಡಿಯುವ ನೀರು ಕಲುಷಿತವಾಗಿ ಮನೆಗ ಪೂರೈಕೆಯಾಗುತ್ತಿರುವ ಬಗ್ಗೆ ಮುನ್ನೆಚ್ಚರಿಕೆ ವಹಿಸಿಬೇಕು ಮತ್ತು ಪಂಚಾಯತ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾಗುವ ಮುನ್ಸೂಚನೆ ಕಂಡು ಬಂದ ಹಿನ್ನೆಲೆ ಈ ಬಗ್ಗೆ ಮುಂದಿನ ತಿಂಗಳೊಳಗಾಗಿ ಒಡೆದು ಹೋದ ಕುಡಿಯುವ ನೀರಿನ ಪೈಪಗಳನ್ನು ಸರಿಪಡಿಸಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಸದಸ್ಯ ಅಬ್ದುಲ್ ರಹೀಂ ಅಧ್ಯಕ್ಷರ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರು. 

ಇನ್ನು ಸದಸ್ಯ ಅಪ್ತಾಬ್ ದಾಮೂದಿ ಅವರು ಪಂಚಾಯತ ವ್ಯಾಪ್ತಿಯ ಕೆಲವು ಕಡೆ ಕುಡಿಯುವ ನೀರಿನ ಪೈಪಗಳ ಗುಣಮಟ್ಟ ಸರಿಯಿಲ್ಲ ಎಂದು ಆರೋಪಿಸಿದ ಅವರು ಕೆಲವು ಕಡೆ ಕುಡಿಯಲು ಸಿಗಬೇಕಾದ ನೀರು ಪೋಲಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  

ಪಂಚಾಯತ ವ್ಯಾಪ್ತಿಯ ಕೆಲವು ಕಡೆ ನಡೆಯುತ್ತಿರುವ ಕಾಮಗಾರಿಯೂ ಏಕಾಏಕಿ ಸ್ಥಗಿತಗೊಳ್ಳುತ್ತಿದ್ದು, ಪಂಚಾಯತನಿಂದಲೇ ಕಾಮಗಾರಿ ಆದೇಶ ಪ್ರತಿಯನ್ನು ಪರಿಶೀಲಿಸಿ ಈಗ ಕಾಮಗಾರಿಯನ್ನು ನಿಲ್ಲಿಸುತ್ತಿರುವುದು ಯಾವ ಲೆಕ್ಕ ಎಂದು ಸದಸ್ಯ ನಾಗರಾಜ ನಾಯ್ಕ ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಮುಖ್ಯಾಧಿಕಾರಿ ಸಾರ್ವಜನಿಕರು ದೂರವಾಣಿ ಕರೆ ಮೂಲಕ ನೀಡಿದ ದೂರಿನ ಹಿನ್ನೆಲೆ ಕಾಮಗಾರಿ ನಿಲ್ಲಿಸಿದ್ದರ ಬಗ್ಗೆ ತಿಳಿಸಿದರು. ಮುಂದಿನ ದಿನದಲ್ಲಿ ಪಂಚಾಯತಗೆ ಕಾಮಗಾರಿ ಅಸಮರ್ಪಕವಾಗಿರುವ ಬಗ್ಗೆ ಸಾರ್ವಜನಿಕರು ಪತ್ರ ಬರೆದಿದ್ದಲ್ಲಿ ಮಾತ್ರ ಪಂಚಾಯತ ಗಮನಕ್ಕೆ ತಂದು ಕಾಮಗಾರಿ ಪರಿಶೀಲನೆ ಬಳಿಕ ನಿಲ್ಲಿಸಲು ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ ಲಂಕಾ ಸೂಚಿಸಿದರು. ಮುಖ್ಯವಾಗಿ ಪಂಚಾಯತಗೆ 3 ಸಾರ್ವಜನಿಕ ಶೌಚಾಲಯ ಬಂದಿದ್ದು ಈ ಬಗ್ಗೆ ಉಪಾಧ್ಯಕ್ಷೆ ಲಕ್ಷ್ಮೀ ನಾಯ್ಕ ಅವರು ತಮ್ಮ ವಾರ್ಡನ ವ್ಯಾಪ್ತಿಯ ನಾಮಧಾರಿ ಸಭಾಭವನಕ್ಕೆ ಒಂದು ಶೌಚಾಲಯವನ್ನು ನೀಡುವಂತೆ ಸೂಚಿಸಿದ್ದು, ಈ ಹಿಂದೆ ತನ್ನ ಅವಧಿಯಲ್ಲಿ ಇದೇ ನಾಮಧಾರಿ ಸಭಾಭವನಕ್ಕೆ ಶೌಚಾಲಯ ನೀಡುವುದಕ್ಕೆ ತಿಳಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಅವಹೇಳಕಾರಿ ಬರೆದು ದೂರು ನೀಡಿದ್ದನ್ನು ಸಭೆಯಲ್ಲಿ ಸದಸ್ಯ ನಾಗರಾಜ ನಾಯ್ಕ ಪ್ರಸ್ತಾಪಿಸಿ ಈಗ ಶೌಚಾಲಯ ನೀಡುವುದಕ್ಕೆ ತನ್ನ ವಿರೋಧವಿದೆ ಎಂದು ತಿಳಿಸಿದರು. 

ಈ ಹಿಂದಿನ ಸಭೆಯಲ್ಲಿ ಚರ್ಚೆಯಾದ ಪಟ್ಟಣ ಪಂಚಾಯತನ್ನು ಪುರಸಭೆ ಜೊತೆಗೆ ವಿಲೀನಗೊಳಿಸುವ ವಿಚಾರವಾಗಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದ್ದು ಎಲ್ಲಾ ಸದಸ್ಯರ ಒಮ್ಮತದ ಚರ್ಚೆಯ ಬಳಿಕ ಪಂಚಾಯತನ್ನು ಪುರಸಭೆ ಜೊತೆಗೆ ವಿಲೀನಗೊಳಿಸುವ ಬದಲು ಮೇಲ್ದರ್ಜೇಗೇರಿಸಿ ನಗರಸಭೆಯನ್ನಾಗಿಸುವ ಬಗ್ಗೆ ಸದಸ್ಯರೆಲ್ಲರು ಒಪ್ಪಿಗೆ ಸೂಚಿಸಿದರು. 

ನಂತರ ಕಾಮಗಾರಿ ವಿಭಾಗದಿಂದ ಕರೆದ ಟೆಂಡರ್ ಮಂಜೂರಿಸುವ ವಿಚಾರ ಸಭೆಯಲ್ಲಿ ಚರ್ಚೆಗಳಾದವು. 

ಈ ಸಂಧರ್ಭದಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರನ್ ಲಂಕಾ, ಸರ್ವ ಸದಸ್ಯರು, ಮುಖ್ಯಾಧಿಕಾರಿ ವೇಣೂಗೋಪಾಲ ಶಾಸ್ತ್ರೀ, ಪಂಚಾಯತ ಕ್ಲಾರ್ಕ ನಾರಾಯಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 

Read These Next

ಜೂನ್ 29ರಿಂದ ಜುಲೈ 9 ರವರೆಗೆ  ಅಳ್ವೆಕೋಡಿ  ದುರ್ಗಾಪರಮೇಶ್ವರಿ ದೇವರ ಪುನರ್ ಪ್ರತಿಷ್ಟಾ ಸುವರ್ಣ ಮಹೋತ್ಸವ

ಭಟ್ಕಳ: ಜಿಲ್ಲೆಯ ಪ್ರಸಿದ್ಧ ಅಲ್ವೇಕೋಡಿ  ದುರ್ಗಾಪರಮೇಶ್ವರಿ ದೇವರ ಪುನರ್ ಪ್ರತಿಷ್ಟಾ ಸುವರ್ಣ ಮಹೋತ್ಸವ ಕಾರ್ಯಕ್ರಮ ಜೂನ್ 29ರಿಂದ ...

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...