ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಯಲ್ಲಿ ಚೀನಾ ಜೊತೆ ಸ್ಪರ್ಧೆ: ರಾಹುಲ್ ಗಾಂಧಿ

Source: ANI/KP | By I.G. Bhatkali | Published on 28th September 2017, 1:00 AM | National News |
ರಾಜ್ ಕೋಟ್:  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಸಣ್ಣ ವ್ಯಾಪಾರಿಗಳಿಗೆ ಉದ್ದಿಮೆ ನಡೆಸಲು ಸಹಾಯ ಮಾಡಿಕೊಟ್ಟು ಚೀನಾಕ್ಕೆ ಸ್ಪರ್ಧೆಯೊಡ್ಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ತಮ್ಮ ಗುಜರಾತ್ ರಾಜ್ಯ ಪ್ರವಾಸದ ಅಂತಿಮ ದಿನವಾದ ಇಂದು ರಾಜಕೋಟ್ ನಲ್ಲಿ ಮಾತನಾಡಿದರು. ಮೋದಿ ಸರ್ಕಾರ ಮತ್ತು ಗುಜರಾತ್ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಇಂದು ಪ್ರತಿದಿನ 30,000 ಮಂದಿ ಉದ್ಯೋಗ ಹುಡುಕುತ್ತಿದ್ದಾರೆ. ಸರ್ಕಾರ ಕೇವಲ 400 ಮಂದಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತಿದೆ. ಅದೇ ಚೀನಾ ದೇಶದಲ್ಲಿ 40,000 ಮಂದಿ ಯುವಕರಿಗೆ ಉದ್ಯೋಗ ದೊರಕುತ್ತಿದೆ ಎಂದರು.

ಸಣ್ಣ ಉದ್ದಿಮೆದಾರರಿಗೆ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡುವ ಮೂಲಕ ಕಾಂಗ್ರೆಸ್ ಚೀನಾ ದೇಶದೊಂದಿಗೆ ಆರೋಗ್ಯಕರ ಸ್ಪರ್ಧೆಯೊಡ್ಡಲಿದೆ ಎಂದರು.

ಪ್ರಧಾನಿಯವರು ಗುಜರಾತ್ ನಲ್ಲಿ ಆಡಳಿತ ನಡೆಸಿದ ಮಾದರಿಯಲ್ಲಿಯೇ ಇಡೀ ದೇಶದ ಆಳ್ವಿಕೆ ನಡೆಸುತ್ತಿದ್ದಾರೆ.  ಇದರಿಂದ ದೇಶದ 15 ಮಂದಿ ಶ್ರೀಮಂತ ಕೈಗಾರಿಕೋದ್ಯಮಿಗಳ 13,000 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಬಡವರಿಗೆ ಉಪಕಾರವೇನೂ ಆಗಿಲ್ಲ. ಅದೇ ಸಹಾಯವನ್ನು ಬಡ ಜನತೆಗೆ ಮಾಡುತ್ತಿದ್ದರೆ ಇಂದು ದೇಶದಲ್ಲಿ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುತ್ತಿತ್ತು ಎಂದು ಹೇಳಿದರು.

ಇಂದು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ನೀಡುವ ಧನ ಸಹಾಯವನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ರೈತರಿಗೆ ನೀಡಲಿದೆ. ಕೇವಲ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

Read These Next

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು