ಭಟ್ಕಳ ತಾಲೂಕಾ ಕಸಾಪ ದಿಂದ ಝಮೀರುಲ್ಲಾ ಷರೀಫ್ ಅವರಿಗೆ ಅಭಿನಂದನೆ

Source: sonews | By Staff Correspondent | Published on 20th December 2018, 6:00 PM | Coastal News | Don't Miss |

ಭಟ್ಕಳ: ಉತ್ತರ ಕನ್ನಡ ಜಿಲ್ಲಾ 21ನೇ ಸಾಹಿತ್ಯ ಸಮ್ಮೇಳನಧ್ಯಕ್ಷರಾಗಿ ಆಯ್ಕೆಯಾದ ಡಾ.ಸಯ್ಯದ ಝಮೀರುಲ್ಲಾ ಷರೀಫ ಅವರನ್ನು ಭಟ್ಕಳ ತಾಲೂಕಾ ಕಸಾಪ ವತಿಯಿಂದ ಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಷರೀಫ್ ಅವರು ಮೂಲತಹ ತುಮಕೂರು ಜಿಲ್ಲೆಯ ಕೊರಟಗೆರೆಯವರಾದರೂ ವೃತ್ತಿಜೀವನಕ್ಕಾಗಿ ಭಟ್ಕಳಕ್ಕೆ ಬಂದು ನೆಲೆಸಿ ಇಲ್ಲಿಯವರೇ ಆಗಿಬಿಟ್ಟಿದ್ದಾರೆ. ಈ ನೆಲದಲ್ಲಿ ಸಾಹಿತ್ಯ ಕೃಷಿಯನ್ನು ಆರಂಭಿಸಿದ್ದು ಮಾತ್ರವಲ್ಲ ಸಾಹಿತ್ಯದೆಡೆಗೆ ಎಲ್ಲರನ್ನು ಸೆಳೆವ ಕೆಲಸವನ್ನೂ ಮಾಡಿದವರು. ಭಟ್ಕಳದಲ್ಲಿ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರು. ಸಾಹಿತ್ಯ ಕೃಷಿಯ ಮೂಲಕ ಮೌಲಿಕ ಕೃತಿಗಳನ್ನು ನೀಡಿದವರು ಮಾತ್ರವಲ್ಲ ಭಟ್ಕಳದ ನೆಲಕ್ಕೆ ಮೊಟ್ಟಮೊದಲ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವನ್ನು ತಂದು ಕೊಟ್ಟವರು. ಇದು ಸಾಹಿತ್ಯ ಪರಿಷತ್ತಿಗೆ ಮಾತ್ರವಲ್ಲ ಭಟ್ಕಳಕ್ಕೂ ಹೆಮ್ಮೆಯ ಸಂಗತಿ ಎಂದು ನುಡಿದರು. 

ಗೌರವ ಸ್ವೀಕರಿಸಿ ಮಾತನಾಡಿದ ಷರೀಫ್ ಮಾತನಾಡಿ ತಮ್ಮೆಲ್ಲರ ಪ್ರೀತಿ ಅಭಿಮಾನದಿಂದ ಇಂದು ನನಗೆ ಜಿಲ್ಲ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಿಕ್ಕಿದೆ. ನಾನು ಮೂಲತ: ಇಲ್ಲಿಯವನಲ್ಲದಿದ್ದರೂ ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂದು ನನ್ನನ್ನು ಅಪ್ಪಿಕೊಂಡ ಭಟ್ಕಳ ಹಾಗೂ ಈ ಜಿಲ್ಲೆಯ ಪ್ರೀತಿಗೆ ನಾನು ಸದಾ ಕೃತಜ್ಞ. ನಿಮ್ಮೆಲ್ಲರ ಮನಸಿನಲ್ಲಿ ಪ್ರೀತಿಯ ಸ್ಥಾನವು ಎಲ್ಲಕ್ಕಿಂತ ದೊಡ್ಡದು ಎಂದು ನುಡಿದರು.ಈ ಸಂದರ್ಬದಲ್ಲಿ ಕಸಾಪ ಕೋಶಾಧ್ಯಕ್ಷ ಶ್ರೀಧರ ಶೇಟ್ , ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಶಿಕ್ಷಕ ಸುರೇಶ ಮುರ್ಡೇಶ್ವರ, ನಾರಾಯಣ ನಾಯ್ಕ, ಅಶೋಕ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ, ಕೃಷ್ಣ ಮೊಗೇರ ಅಳ್ವೇಕೋಡಿ ಮುಂತಾದವರು ಉಪಸ್ತಿತರಿದ್ದರು. 

Read These Next

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...