ಕಟ್ಟಡ ಕಾರ್ಮಿಕರ ಮೇಲೆ ಅರಣ್ಯಾಧಿಕಾರಿಗಳ ದಬ್ಬಾಳಿಕೆ; ಮಜ್ದೂರ್ ಸಂಘದಿಂದ ಎಸಿಎಫ್ ಕಚೇರಿಗೆ ಮುತ್ತಿಗೆ

Source: sonews | By Staff Correspondent | Published on 27th November 2018, 11:16 PM | Coastal News |

•    'ಅರಣ್ಯಾಧಿಕಾರಿ ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳ ಮಧ್ಯೆ ಮಾತಿನ ಚಕಮಕಿ'

ಭಟ್ಕಳ: ಅರಣ್ಯಾಧಿಕಾರಿಗಳು ಕಟ್ಟಡ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು ಅವರಿಗೆ ವಿನಾಕಾರಣ ಕಿರುಕುಳು ನೀಡುತ್ತಿದ್ದಾರೆಂದು ಆರೋಪಿಸಿ ಇಲ್ಲಿನ ಮಜ್ದೂರು ಸಂಘದ ಸದಸ್ಯರು  ಸಹಾಯಕ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ. 

ಇಲ್ಲಿನ ಹನುಮಾನನಗರ ಕೋಗ್ತಿ ಬಳಿ ಸೋಮವಾರದಂದು ಅರಣ್ಯ ಜಾಗಾದಲ್ಲಿ ಖಾಸಗಿ ವ್ಯಕ್ತಿಯೋರ್ವನ ನಿರ್ಮಾಣ ಹಂತದಲ್ಲಿರುವ ಹಳೆ ಕಟ್ಟಡದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ. 

ಮಾದೇವ ಮಾಸ್ತಪ್ಪ ನಾಯ್ಕ ಎಂಬಾತನು ಅರಣ್ಯ ಜಾಗಾದಲ್ಲಿನ ಹಳೆಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಾಗಿದ್ದಾನೆ. ಈತನನ್ನು ಕರೆದುಕೊಂಡು ಹೋಗಲು ಇನ್ನೋರ್ವ ಕಾರ್ಮಿಕ ಕಮಾಲ್ ಬಾಷಾ ಬಂದಿದ್ದು ಈ ವೇಳೆ ಇಲಾಖೆ ಜಾಗದ ಹಳೆ ಕಟ್ಟಡದ ಮೇಸ್ತ್ರಿ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಇಬ್ಬರನ್ನು ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದು ಕಛೇರಿಗೆ ಕರೆತಂದಿದ್ದಾರೆ. 
ಈ ಬಗ್ಗೆ ವಿಷಯ ತಿಳಿದು ಕಛೇರಿಗೆ ಬಂದ ಕಾರ್ಮಿಕ ಸಂಘದ ಪದಾಧಿಕಾರಿಗಳು ಕಾರ್ಮಿಕರನ್ನು ವಶಕ್ಕೆ ಪಡೆದ ಬಗ್ಗೆ ವಿಚಾರಿಸಲು ಬಂದ ಸಂಧರ್ಭದಲ್ಲಿ ಅವರಿಗೆ ಮಾತನಾಡಲು ಯಾವುದೇ ಅವಕಾಶ ಕಲ್ಪಿಸದೇ ವಲಯ ಅರಣ್ಯಾಧಿಕಾರಿ ಹೊರಗೆ ಹೋಗುವಂತೆ ಹೇಳಿದ್ದ ಹಿನ್ನೆಲೆ ಅಧಿಕಾರಿಯನ್ನು ಪದಾಧಿಕಾರಿಗಳು, ಸದಸ್ಯರು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ಉಂಟಾಗಿ ಕೊನೆಗೆ ವಶಕ್ಕೆ ಪಡೆದ ಕಾರ್ಮಿಕರಿಬ್ಬರನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದರು. 

ಮಾಧ್ಯಮದವರೊಂದಿಗೆ ಮಾತನಾಡಿದ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, 'ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಅಧಿಕಾರಿಗಳು ಈ ರೀತಿ ವಶಕ್ಕೆ ಪಡೆದಿರುವದು ಸರಿಯಲ್ಲ ಎಂದು ಆಗ್ರಹಿಸಿದರು. ಸಂಘದ ಉಪಾಧ್ಯಕ್ಷ ಜಟ್ಟಪ್ಪ ನಾಯ್ಕ ಮಾಧ್ಯಮದವರೊಂದಿಗೆ ಮಾತನಾಡಿದ್ದು '6 ತಿಂಗಳ ಹಿಂದೆ ಅರಣ್ಯ ಅಧಿಕಾರಿಗಳು ಕಟ್ಟಡ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಒಂದು ದಿನ ವಶಕ್ಕೆ ಪಡೆದು ಬಳಿಕ ಈ ಬಗ್ಗೆ ಪ್ರಶ್ನಿಸಿದಾಗ ಬಿಡುಗಡೆಗೊಳಿಸಿದ್ದರು. ಯಾವ ಜಾಗ ಅರಣ್ಯ ಇಲಾಖೆ ಸಂಬಂಧಪಟ್ಟ ಜಾಗವೆಂದು ತಿಳಿಯಲು ಸಾಧ್ಯ. ಒಂದು ವರ್ಷದಿಂದ ಮರಳಿಲ್ಲದೇ ಯಾವುದೇ ಕಟ್ಟಡ ಕೆಲಸವಿಲ್ಲದೇ ಯಾರೇ ಕರೆದರು ಕೆಲಸಕ್ಕೆ ಹೋಗುವ ಸ್ಥಿತಿಯಲ್ಲಿದ್ದು, ರೈತರಿಗಾದರೇ ಸಾಲಮನ್ನಾವಿದೇ ಆದರೆ ಕೂಲಿ ಕಾರ್ಮಿಕರಿಗೆ ಸರಕಾರದಿಂದ ಯಾವುದೇ ಭಾಗ್ಯವಿಲ್ಲವಾಗಿದೆ. ಇದೇ ರೀತಿ ಮುಂದುವರೆದಲ್ಲಿ ಧರಣಿಗೆ ಕುಳಿತು ಕೊಳ್ಳಬೇಕಾಗುತ್ತದೆಂದು ಎಚ್ಚರಿಸಿದರು. 

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಶಂಕರ ಗೌಡ 'ಕಾರ್ಮಿಕರನ್ನು ವಶಕ್ಕೆ ಪಡೆದಿರುವುದು ಸತ್ಯ. ಆದರೆ ಯಾವುದೇ ಪ್ರಕರಣ ದಾಖಲಿಲ್ಲವಾಗಿದೆ. ಅರಣ್ಯ ಇಲಾಖೆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲೀಕರ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ಕಾರ್ಮಿಕರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದೇವೆ.

ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಮುಖಂಡರಾದ ಕೃಷ್ಣ ನಾಯ್ಕ ಹೊನ್ನೆಗದ್ದೆ, ರಮೇಶ ನಾಯ್ಕ ಹೆಬಳೆ, ಕೃಷ್ಣ ನಾಯ್ಕ ಹುರುಳಿಸಾಲ, ಮುಂತಾದವರು ಉಪಸ್ಥಿತರಿದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...