ಅ.29 ಮತ್ತು 30 ರಂದು ಸಂಕಲನಾತ್ಮಕ ಮೌಲ್ಯಮಾಪನ ಸಮೀಕ್ಷೆ

Source: sonews | By Staff Correspondent | Published on 27th October 2018, 4:01 PM | Coastal News |

ಕಾರವಾರ:  ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಒಟ್ಟು 1073 ಶಾಲೆಗಳ 4 ರಿಂದ 9ನೇ ತರಗತಿಯ  ವಿದ್ಯಾರ್ಥಿಗಳಿಗೆ ಅಕ್ಟೋಬರ್ 29 ಮತ್ತು 30 ರಂದು ಸಂಕಲನಾತ್ಮಕ ಮೌಲ್ಯಮಾಪನ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕನ್ನಡ, ಇಂಗ್ಲೀಷ,ಉರ್ದು,ಮರಾಠಿ ಮಾದ್ಯಮದಲ್ಲಿ ಒಟ್ಟು 46878 ವಿದ್ಯಾರ್ಥಿಗಳಿಗೆ ಮೊದಲ ದಿನ ಭಾóಷಾ ಮತ್ತು ಎರಡನೆಯ ದಿನ ಕೋರ ವಿಷಯಗಳ ಸಿ.ಎಸ್.ಎ.ಎಸ್ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
    
ಅ.31 ರಂದು ರಾಷ್ಟ್ರೀಯ ಏಕತಾ ದಿವಸ್ ಆಚರಣೆ
ಕಾರವಾರ: ದೇಶದ ಏಕೀಕರಣಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮದಿನೋತ್ಸವದ ಪ್ರಯುಕ್ತ ಅ.31 ರಂದು ರಾಷ್ಟ್ರೀಯ ಏಕತಾ ದಿವಸ್ ಆಗಿ ಭಾರತದಾದ್ಯಂತ ಪ್ರತೀ ವರ್ಷ ಆಚರಿಸಲಾಗುತ್ತಿದೆ. ಈ ಆಚರಣೆಯು ನಮ್ಮ ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಗೆ ನಿಜವಾದ ಮತ್ತು ಸಂಭಾವ್ಯ ಬೆದರಿಕೆಗಳನ್ನು ತಡೆದುಕೊಳ್ಳುವ ಸ್ವಾಭಾವಿಕ ಶಕ್ತಿಯನ್ನು ಮತ್ತು ನಮ್ಮ ರಾಷ್ಟ್ರದ ಸ್ಥಿತಿಸ್ಥಾಪಕತ್ವವನ್ನು ಪುನಃ ದೃಢೀಕರಿಸಲು ಅವಕಾಶ ನೀಡುತ್ತದೆ.
     
ರಾಷ್ಟ್ರೀಯ ಏಕತಾ ದಿವಸ್ (National Unity Day) ಅಂಗವಾಗಿ ಏಕತೆಗಾಗಿ ಓಟ (Run for Unity) ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಹಾಗೂ ಅ.31ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿರಬೇಕೆಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ವಿವಿಧೆಡೆ ವಿದ್ಯುತ್ ವ್ಯತ್ಯಯ
ಕಾರವಾರ: ವಿದ್ಯುತ್ ವಾಹಕ ಬದಲಾಯಿಸುವ ಕಾಮಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ  27 ರಿಂದ ನವ್ಹಂಬರ 4 ರವರೆಗೆ  ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಮಾಜಾಳಿ, ಮಿಡಿಸಿಟ್ಟಾ, ವೈಲ್‍ವಾಡಾ, ವಾಜಂತ್ರಿವಾಡ, ವಾಂಗಡ, ಲಿಂಗಾಸಾವಂತವಾಡಾ, ದಾಂಡೇಬಾಗ ಸದಾಶಿವಗಡ, ಬಿಡತ್ತೋಲಬಾಗ, ಹೊಸಾಳಿ,ಹಳೆಬಾಗ, ಥೋರಲೆಬಾಗ, ಬಾವಳ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದ್ದು ಸಾರ್ವಜನಿಕರು/ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕಾರವಾರ:  ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಅಕ್ಟೋಬರ  31 ರಿಂದ ನವ್ಹಂಬರ 1 ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು
 
ಅ. 31  ರಂದು ಹಳಿಯಾಳದಲ್ಲಿ ಬೆಳಗ್ಗೆ 10 ಕ್ಕೆ  ಸಾರ್ವಜನಿಕರನ್ನು ಭೇಟಿ ಮಾಡಿದ ಬಳಿಕ ಹಳಿಯಾಳದ ಪುರಭವನ, ಪುರಸಭೆ ಕಚೇರಿ ಕಟ್ಟಡ, ವಾಣಿಜ್ಯ ಸಂಕೀರ್ಣ, ಸಿಬ್ಬಂದಿ ವಸತಿ ಗೃಹಗಳ ಗುದ್ದಲಿ ಪೂಜೆ ಹಾಗೂ 11 ಗಂಟೆಗೆ ನೂತನವಾಗಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣ ಮತ್ತು 12.30ಕ್ಕೆ  ಇಂದಿರಾ ನಗರದಲ್ಲಿ ಮೇಲ್ಮಟ್ಟ ಜಲಾಗಾರದ ಉದ್ಘಾಟನಾ  ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ದಾಂಡೇಲಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ, ನೂತನವಾಗಿ ನಿರ್ಮಿಸಲಾದ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30ಕ್ಕೆ ಸ್ಲಮ್ ಬೋರ್ಡ ವತಿಯಿಂದ ನಿರ್ಮಾಣವಾಗುವ ಮನೆಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5.30ಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುವರು.
 
ನವ್ಹಂಬರ 1 ರಂದು ಬೆಳಗ್ಗೆ 8.30ಕ್ಕೆ ಕಾರವಾರದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವರು. 9 ಗಂಟೆಗೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11 ಕ್ಕೆ ಅಲ್ಪಸಂಖ್ಯಾತರ  ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಶಂಕುಸ್ಥಾಪನಾ ಸಮಾರಂಭ ಮತ್ತು 12 ಗಂಟೆಗೆ ಕರಾವಳಿ ಹಾಗೂ ಕದಂಬೋತ್ಸವ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸುವರು.                                                            
                                                               
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...