ಮುಂಡಗೋಡದಲ್ಲಿ ಸಿ.ಸಿ.ಕ್ಯಾಮೆರಾ ಕಣ್ಗಾವಲು 

Source: sonews | By Staff Correspondent | Published on 3rd November 2018, 8:12 PM | Coastal News | Don't Miss |

ಮುಂಡಗೋಡ : ಮುಂಡಗೋಡ ಪಟ್ಟಣ ಪಂಚಾಯತ್ ಪ್ರಮುಖ ಬೀದಿಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸುತ್ತಿದೆ. ಇದರಿಂದ ಅಪರಾದü ಮಾಡುವ ಕೆಲಸಗಳಿಗೆ ಬ್ರೇಕ್ ಬಿಳಲಿದೆ. ಇದರಿಂದ ಪೊಲೀಸರಿಗೆ ಅನುಕೂಲವಾಗಲಿದೆ ಪಟ್ಟಣ ಪಂಚಾಯತ್ ಈ ಕಾರ್ಯಕ್ಕೆ ಸಾರ್ವಜನಿಕರು ಹರ್ಷವ್ಯಕ್ತಪಡಿಸಿದ್ದಾರೆ.

ಪ.ಪಂ. 14ನೇ ಹಣಕಾಸಿನ ಯೋಜನೆಯಡಿಯಲ್ಲಿ ಈಗಾಗಲೇ 5ಲಕ್ಷ ರೂ. ವೆಚ್ಚದಲ್ಲಿ 3ಕ್ಯಾಮೆರಾಗಳನ್ನು ಅಳವಡಿಸಿದ್ದು ಈಗ 14ಲಕ್ಷ ರೂ. ವೆಚ್ಚದ 13 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿತ್ತಿದ್ದಾರೆ. ಪಟ್ಟಣದ ಪ್ರಮುಖ ಸ್ಥಳಗಳಾದ  ಬಸ್ ನಿಲ್ದಾಣದ ಒಳಗೆ, ಬಸ್ ನಿಲ್ದಾಣದ ಹತ್ತಿರ, ಜೂನಿಯರ್ ಕಾಲೇಜ ಹತ್ತಿರ, ರಾಜಣ್ಣಾ ಕ್ರಾಸ್, ಅಯ್ಯಪ್ಪ ದೇವಸ್ಥಾನ, ನ್ಯಾಸರ್ಗಿ ರಸ್ತೆ, ಕಂಬಾರಗಟ್ಟಿ ಸರ್ಕಲ್, ಮಾರಿಕಾಂಬಾ ದೇವಸ್ತಾನದ ಹತ್ತಿರ ತಮ್ಯಾನಕೊಪ್ಪ ರಸ್ತೆಯ ಕಡೆಗೆ ನೆಹರು ನಗರ ಕ್ರೀಡಾಂಗಣದ ಹತ್ತಿರ, ಶಿವಾಜಿ ಸರ್ಕಲ್, ಇಂದಿರಾ ನಗರ ಮಸೀದಿ ಕ್ರಾಶ್, ಡಿಗ್ರಿ ಕಾಲೇಜು, ಹೊಂಡಾ ಶೋರೂಂ ಹತ್ತಿರ, ಹೀಗೆ 13 ಸಿ.ಸಿ. ಕ್ಯಾಮೆರಾಗಳನ್ನು ಪಟ್ಟದಲ್ಲಿ ಅಳವಡಿಸುತ್ತಿದ್ದಾರೆ. ಇವೆಲ್ಲ ಸಿ.ಸಿ.ಕ್ಯಾಮೆರಾಗಳ ಕಂಟ್ರೋಲ್ ರೂಂ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಇರುತ್ತದೆ. ಒಟ್ಟಿನಲ್ಲಿ ಸಿ.ಸಿ.ಕ್ಯಾಮೆರಾಗಳ ಅಳವಡಿಕೆಯಿಂದ ಪೊಲೀಸ್ ಇಲಾಖೆಗೆ ಅಪರಾಧ ಪತ್ತೆ ಹಚ್ಚುವಲ್ಲಿ ಸಹಾಯಕಾರಿಯಾಗಿದೆ ಎನ್ನಬಹುದು.

ಪಟ್ಟಣದಲ್ಲಿ ನಡೆಯುತ್ತಿರುವ ಕಳ್ಳತನ ಮತ್ತಿತರ ಅಪರಾಧಗಳನ್ನು ತಡೆಹಿಡಿಯಲು, ಜನರ ಹಿತ ದೃಷ್ಟಿಯಿಂದ ಮತ್ತು ಪೊಲೀಸರಿಗೆ ಅನುಕೂವಾಗುವಂತೆ ನಮ್ಮ ಪ.ಪಂ.ನ 19ಲಕ್ಷ ರೂ. ಅನುದಾನದ ವೆಚ್ಚದಲ್ಲಿ ಈಗಾಗಲೇ 3ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಿ ಈಗ 13ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
ಸಂಗನಬಸಯ್ಯ ಗದಿಗಿಮಠ ಪ.ಪಂ.ಮುಖ್ಯಾಧಿಕಾರಿ  
 

Read These Next

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...