ಎಂ.ಎಸ್.ಸಿ ಮನಶಾಸ್ತ್ರ ಪರೀಕ್ಷೆಯಲ್ಲಿ ಭಟ್ಕಳದ ಹರೀಶ ಪೈ ದ್ವಿತೀಯ ರ‍್ಯಾಂಕ

Source: sonews | By Manju Naik | Published on 5th August 2018, 1:03 PM | Coastal News |

ಭಟ್ಕಳ : ಕಲಬುರ್ಗಿಯಲ್ಲಿರುವ ಕೇಂದ್ರಿಯ ವಿಶ್ವವಿದ್ಯಾನಿಲಯದ ಎಂ.ಎಸ್‍ಸಿ 
ಮನಶಾಸ್ತ್ರದ ಅಂತಿಮ ವರ್ಷದ ಪರೀಕ್ಷೆಯಲ್ಲಿ  ಭಟ್ಕಳದ ಕುವರ ಹರೀಶ ಮಾರುತಿ ಪೈ ಇವರು ದ್ವಿತೀಯ  ರ‍್ಯಾಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಭಟ್ಕಳ ನಿವಾಸಿ ಮಾರುತಿ ಎಸ್ ಪೈ ಇವರ ಸುಪುತ್ರರಾಗಿರುವ ಇವರು 2017ನೇ ಸಾಲಿನ ಎಂ.ಎಸ್‍ಸಿ ಮನಶಾಸ್ತ್ರದ ಅಂತಿಮ ವರ್ಷದ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ ಪಡೆದಿದ್ದಾರೆ. ಇತ್ತಿಚಿಗೆ ಕಲುಬುರ್ಗಿಯ ವಿಶ್ವವಿದ್ಯಾನಿಲಯದಲ್ಲಿ ನಡೆದ 3 ನೇ ಸಮಾವೇಶದಲ್ಲಿ ಪದವಿ ಪ್ರಧಾನ ಮಾಡಲಾಗಿದೆ. ಪ್ರಸ್ತುತ ಇವರು ಐ.ಐ.ಟಿ ಗುವಾಹಟಿಯಲ್ಲಿ ಮನಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ

Read These Next