ಭಟ್ಕಳ: ಬಿ.ಕಾಂ. 5ನೇ ಸೆಮಿಸ್ಟರ ಪರೀಕ್ಷೆ - ಶ್ರೀ ಗುರು ಸುಧೀಂದ್ರ ವಾಣಿಜ್ಯ ಮಹಾವಿದ್ಯಾಲಯದ  ಕುಮಾರಿ ಮಾನಸಾರಿಗೆ ಪ್ರಥಮ ಸ್ಥಾನ

Source: sudhindra college | By Arshad Koppa | Published on 21st February 2017, 8:27 AM | Coastal News |

ನವೆಂಬರ 2016ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ನಡೆಸಿದ ಬಿ.ಕಾಂ. 5ನೇ ಸೆಮಿಸ್ಟರ ಪರೀಕ್ಷಾ ಪರಿಣಾಮದಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕುಮಾರಿ ಮಾನಸಾ 94.14%, ಕುಮಾರಿ ಮಂಜುಶ್ರೀ ಭಟ್ಕಳ 93.57% ಮತ್ತು ಕುಮಾರಿ ಸೌಮ್ಯ ಉಪಾಧ್ಯಾಯ 92.86% ಅಂಕಗಳೊಂದಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಪರೀಕ್ಷೆ ಬರೆದ 152 ವಿದ್ಯಾರ್ಥಿಗಳಲ್ಲಿ 104 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 38 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು 7 ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಪಾಸಾಗುವುದರ ಮೂಲಕ ಮಹಾವಿದ್ಯಾಲಯವು ಪ್ರತಿಶತ 98 ಫಲಿತಾಂಶವನ್ನು ಪಡೆದಿರುತ್ತದೆ. ಅಲ್ಲದೇ ಕೊಸ್ಟ ಎಕೌಂಟಿಂಗ್ ವಿಷಯದಲ್ಲಿ 6 ವಿದ್ಯಾರ್ಥಿಗಳು ಮತ್ತು ಇನ್‍ಕಮ್ ಟ್ಯಾಕ್ಸ ವಿಷಯದಲ್ಲಿ 3  ವಿದ್ಯಾರ್ಥಿಗಳು 100ಕ್ಕೆ 100 ಅಂಕವನ್ನು ಪಡೆದಿರುತ್ತಾರೆ.

 

ಕುಮಾರಿ ಸೌಮ್ಯ ಉಪಾಧ್ಯಾಯ

 

ಕುಮಾರಿ ಮಂಜುಶ್ರೀ ಭಟ್ಕಳ


ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ  ಅಧ್ಯಕ್ಷರಾದಂತ ಡಾ: ಸುರೇಶ ನಾಯಕ, ಟ್ರಸ್ಟೀ ಮೆನೇಜರ ಶ್ರೀ ರಾಜೇಶ ನಾಯಕ ಮತ್ತು ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...