ಶ್ರಮಪಟ್ಟು ಸಾಧನೆ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ-ಪ್ರತಾಪಚಂದ್ರ ಶೆಟ್ಟಿ

Source: sonews | By sub editor | Published on 10th January 2019, 11:09 PM | Coastal News |

ಭಟ್ಕಳ: ಜೀವನದಲ್ಲಿ ಸಾಧಿಸಬೇಕಾದ ಗುರಿಯನ್ನು ನಿರ್ಧರಿಸಿ ಸಾಧನೆಗೆ ಶ್ರಮಪಟ್ಟಾಗ ಮಾತ್ರ ಯಶಸ್ಸು ಸಾಧ್ಯ ಎಂದು ಕುಂದಾಪುರದ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ ಎಜುಕೇಶನ್‍ನ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಹೇಳಿದರು. 

ಅವರು ಇಲ್ಲಿನ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಲ್ಲಿ ಸಿ.ಎ. ಮತ್ತು ಸಿ.ಎಸ್. ಕೊರ್ಸಗಳ ಬಗ್ಗೆ ಮಾಹಿತಿ ನೀಡುತ್ತಾ ಸಾಧಿಸುವ ಛಲವಿದ್ದರೆ ವಾಣಿಜ್ಯ ವಿಭಾಗದವರಷ್ಟೆ ಅಲ್ಲದೆ  ಸಾಮಾನ್ಯ ಅಂಕ ಪಡೆದ ಕಲಾ ಮತ್ತು ವಿಜ್ಞಾನ ವಿಭಾಗದವರೂ ಸಹ ಅತ್ಯಂತ ಬೇಡಿಕೆಯುಳ್ಳ     ಸಿ.ಎ. ಮತ್ತು ಸಿ.ಎಸ್. ಕೊರ್ಸಗಳನ್ನು ಮಾಡಬಹುದಾಗಿದೆ ಎಂದು ಹೇಳಿದರು. 
ಕುಂದಾಪುರದ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ ಎಜುಕೇಶನ್‍ನ ಕಾರ್ಯದರ್ಶಿ ಭರತ ಶೆಟ್ಟಿ ಸಿ.ಎ. ಮತ್ತು ಸಿ.ಎಸ್. ಕೊರ್ಸಗಳ ಬೇರೆ ಬೇರೆ ಹಂತಗಳ, ಪರೀಕ್ಷೆಗಳ  ಮತ್ತು ಪರೀಕ್ಷಾ ತಯಾರಿಯ ಬಗ್ಗೆ ಮಾಹಿತಿ ನೀಡಿದರು. 

ಪ್ರಾಂಶುಪಾಲ ವಿರೇಂದ್ರ ಶಾನಬಾಗ ಅಧ್ಯಕ್ಷತೆ ವಹಿಸಿದ್ದರು.   ಉಪನ್ಯಾಸಕಿ ನಾಗಲಕ್ಷ್ಮಿ ನಿರೂಪಿಸಿ ವಂದಿಸಿದರು. (ಫೋಟೊ: 11-ಬಿಕೆಎಲ್-02)


 

Read These Next

ಮುಸ್ಲಿಮರ ಮತಗಳು ಬೇಡವೆನ್ನುವ ಹೆಗಡೆ ಮುಸ್ಲಿಮ್ ರೌಡಿಯ ಸಂಪರ್ಕ; ವೇದಿಕೆ ಹಂಚಿಕೊಂಡ ಫೋಟೊ ವೈರಲ್

ಕಾರವಾರ : ಮುಸ್ಲಿಮರ ಮತಗಳು ತನಗೆ ಬೇಡ ಎನ್ನುವ ಕೇಂದ್ರ ಸಚಿವ ಅನಂತ್ ಕುಮಾರ್ ಹಗಡೆ ಈಗ ಅದೇ ಮುಸ್ಲಿಮ್ ರೌಡಿಶೀಟರ್ ನೊಂದಿಗೆ ...