ಭಟ್ಕಳ ತಾಪಂ ರು.4350.31 ಲಕ್ಷ ಬಜೆಟ್ ಮಂಡನೆ

Source: S O News Service | By V. D. Bhatkal | Published on 14th June 2018, 2:54 PM | Coastal News |

ಭಟ್ಕಳ: ಭಟ್ಕಳ ತಾಲೂಕು ಪಂಚಾಯತ 2018-19ನೇ ಸಾಲಿನ ರು.4350.31 ವೆಚ್ಚದ ಆಯವ್ಯಯವನ್ನು ಅಧ್ಯಕ್ಷ ಈಶ್ವರ ನಾಯ್ಕ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಕಳೆದ ಸಾಲಿಗೆ ಹೋಲಿಸಿದರೆ ಮುಂಗಡ ಪತ್ರವು ಶೇ.0.65ರಷ್ಟು ಹೆಚ್ಚಿಗೆಯಾಗಿದೆ.

ಪ್ರಾಥಮಿಕ ಶಿಕ್ಷಣಕ್ಕಾಗಿ ಒಟ್ಟೂ ರು.2169.75ಲ. ಅನುದಾನವನ್ನು ಮೀಸಲಾಗಿಡಲಾಗಿದ್ದು, ಇದರಲ್ಲಿ ರು.8.18 ಲಕ್ಷ ಅನುದಾನವನ್ನು ಪ್ರಾಥಮಿಕ ಶಾಲಾ ಕಟ್ಟಡಗಳ ದುರಸ್ಥಿಗಾಗಿ ನಿಗದಿಪಡಿಸಲಾಗಿದೆ. ವೈದ್ಯಕೀಯ ಮತ್ತು ಜನಾರೋಗ್ಯಕ್ಕಾಗಿ ರು.24.05 ಲ. ಹಣವನ್ನು ಮೀಸಲಾಗಿಡಲಾಗಿದೆ. ಈ ವರ್ಷ ಪರಿಶಿಷ್ಟ ಜಾತಿ ಕಾರ್ಯಕ್ರಮಕ್ಕೆ ರು.11.05 ಲ. ಹಾಗೂ ಪ.ಪಂ.ದವರಿಗಾಗಿ ಒಟ್ಟೂ ರು.17.85 ಲ. ಹಣವನ್ನು ತೆಗೆದಿಡಲಾಗಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ರು.26 ಲಕ್ಷ ಅನುದಾನವನ್ನು ಮೀಸಲಾಗಿಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ರು.698.05ಲ., ಕೃಷಿ ಚಟುವಟಿಕೆಗಳಿಗೆ ರು.18.74 ಲಕ್ಷ., ತೋಟಗಾರಿಕಾ ಇಲಾಖೆಗೆ ರು. 0.58 ಲಕ್ಷ ಅನುದಾನವನ್ನು ಮೀಸಲಾಗಿಡಲಾಗಿದೆ. ಪಶು ಸಂಗೋಪನೆಗೆ ರು. 62.06 ಲಕ್ಷ ಬಜೆಟ್‍ನಲ್ಲಿ ಒದಗಿಸಲಾಗಿದೆ. ವಿವಿಧ ಲೆಕ್ಕ ಶೀರ್ಷಿಕೆಯಡಿಯಲ್ಲಿ ತಾಲೂಕು ಪಂಚಾಯತ ಅಭಿವೃದ್ಧಿ ಕಾಮಗಾರಿಗಳಿಗಾಗಿ ರು.10.91 ಲಕ್ಷ ಅನುದಾನವನ್ನು ಒದಗಿಸಲಾಗಿದ್ದು, ಇದರಲ್ಲಿ ಅಭಿವೃದ್ಧಿ ಅನುದಾನ ರು.6.37 ಲಕ್ಷ, ಗ್ರಾಮೀಣ ಪರಿಮಿತಿಯಲ್ಲಿ ರಸ್ತೆಗಳಿಗೆ ಡಾಂಬರೀಕರಣಕ್ಕಾಗಿ ರು.4.54 ಲಕ್ಷ ಅನುದಾನವನ್ನು ನಿಗದಿಪಡಿಸಲಾಗಿದೆ. ತಾಲೂಕು ಪಂಚಾಯತ ಇತರೇ ಕಾರ್ಯಕ್ರಮಗಳಿಗಾಗಿ ಒಟ್ಟೂ ರು.148.39 ಲಕ್ಷ ಅನುದಾನವನ್ನು ಗೊತ್ತುಪಡಿಸಲಾಗಿದ್ದು, ಇದರಲ್ಲಿ ತಾಪಂ ಅಧಿಕಾರಿ, ಪಿಡಿಓ, ಕಾರ್ಯದರ್ಶಿ, ಸಿಬ್ಬಂದಿಗಳಿಗೆ ವೇತನ, ಭತ್ಯೆಗಳಿಗೆ ರು.134.45 ಲಕ್ಷ ಹಾಗೂ ತಾಪಂ ವೇತನೇತರ ವೆಚ್ಚಕ್ಕಾಗಿ ರು.11.35 ಲಕ್ಷ ಮೀಸಲಾಗಿಡಲಾಗಿದ್ದು, ಕೊಳವೆ ಬಾವಿಗಳ ಕೈಪಂಪು ನಿರ್ವಹಣೆಗಾಗಿ, ಯಂತ್ರ ಮತ್ತು ಸಾಧನ ಪೂರೈಕೆಗಾಗಿ ರು.2.28 ಲಕ್ಷ, ಎಸ್.ಜಿ.ಎಸ್,ವೈ. ನಿರ್ವಹಣಾ ಕಾರ್ಯಕ್ರಮದಡಿ ರು.0.31 ಲಕ್ಷ ಅನುದಾನವನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ತಾಪಂ ನಿಧಿಯಿಂದ ವೇತನ ಪಡೆಯುವ ಇಲಾಖೆಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ರು.59.10 ಲಕ್ಷ ಕಾಯ್ದಿರಿಸಲಾಗಿದೆ. ಇನ್ನುಳಿದಂತೆ ಮುದ್ರಾಂಕ ಶುಲ್ಕ ರು.15 ಲಕ್ಷ, ರಾಜೀವ ಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ಸಹಾಯ ಧನಕ್ಕಾಗಿ ರು.10 ಲಕ್ಷ, ತಾಲೂಕು ಪಂಚಾಯತ ಕಟ್ಟಡ ಬಾಡಿಗೆ ಮತ್ತು ಇತರೇ ಆದಾಯದಿಂದ ರು.35 ಲಕ್ಷ ನಿರೀಕ್ಷಿಸಲಾಗಿದ್ದು, ಅದನ್ನು ಮಾರ್ಗ ಸೂಚಿಯಂತೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಬಜೆಟ್ ಅನುಮೋದನೆ ಪಡೆಯಲಾಗಿದೆ. ತಾಪಂ ಉಪಾಧ್ಯಕ್ಷ ರಾಧಾ ಅಶೋಕ ವೈದ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಜಟ್ಟಪ್ಪ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ಸುಧೀರ್ ಗಾಂವಕರ್ ಸ್ವಾಗತಿಸಿ ವಂದಿಸಿದರು. 

Read These Next

ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ...

ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ...

ರಾ.ಹೆ.ಅಗಲೀಕರಣ;೩೦ರ ಬದಲು ೪೫ಮೀಟರ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ...