ಬೀನಾ ವೈದ್ಯ ಪಿಯು ಕಾಲೇಜಿಗೆ ಸತತ ಐದನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ

Source: sonews | By Staff Correspondent | Published on 9th September 2018, 4:00 PM | Coastal News |

ಭಟ್ಕಳ: ಅಂಜುಮಾನ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕಾ ಮಟ್ಟದ ಪದವಿ ಪೂರ್ವ ಕ್ರೀಡಾಕೂಟದಲ್ಲಿ ಬೀನಾ ವೈದ್ಯ ಪದವಿ ಪೂರ್ವ ಕಾಲೇಜು ಸತತ 5ನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 

ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಯುವರಾಜ ಎಲ್.ಮೊಗೇರ 5000ಮೀ, 3000ಮೀ, 1500 ಮೀ ಓಟ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಯಕ್ತಿಕ ವೀರಾಗ್ರಣಿ ಸ್ಥಾನ ಪಡೆದಿದ್ದಾನೆ. ಬಾಲಕಿಯರ ವಿಭಾಗದಲ್ಲಿ ಅಶ್ವಿನಿ ನಾಯ್ಕ 3000ಮೀ. 1500ಮೀ. 800 ಮೀ. ಓಟ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಯಕ್ತಿಕ ವೀರಾಗ್ರಣಿ ಸ್ಥಾನ ಪಡೆದಿದ್ದಾಳೆ. 
ಬಾಲಕರ ವಿಭಾಗದಲ್ಲಿ ಅಜಿತ್ ಮೊಗೇರ್  5000 ಮೀ.ನಡಿಗೆ ಪ್ರಥಮ, ಶೈಜಾದ ಕಟಪಾಡಿ ತ್ರಿವಿಧ ಜಿಗಿತ ದ್ವಿತೀಯ, ಎತ್ತರ ಜಿಗಿತದಲ್ಲಿ ತೃತೀಯ, ಭರತ್ ನಾಯ್ಕ 5000 ಮೀ. ನಡಿಗೆ ದ್ವಿತೀಯ, 800 ಮೀ.  ಓಟದಲ್ಲಿ ತೃತೀಯ, ದೇವೇಂದ್ರ ಖಾರ್ವಿ 3000 ಮೀ. ಓಟದಲ್ಲ್ಲಿ ತೃತೀಯ, ಮಹಮ್ಮದ್ ತನ್ಸಿಫ್ 1500 ಮೀ. ಓಟದಲ್ಲಿ ದ್ವಿತೀಯ, ನಾಗರಾಜ ಎಂ.ವೈದ್ಯ ಪೋಲ್ ವಾಲ್ಟ್‍ನಲ್ಲಿ ಪ್ರಥಮ, ಅಂಕಿತ್ ಪೈ ದ್ವಿತೀಯ,  ಮಹಮ್ಮದ್ ತನ್ಸಿಫ್,  ದೇವೇಂದ್ರ ಖಾರ್ವಿ ಗುಡ್ಡಗಾಡು ಓಟದಲ್ಲಿ ತೃತೀಯ ಮತ್ತು ಚತುರ್ಥ,  ಫರ್ದಿನ್  ಚಕ್ರ ಎಸೆತ, ಗುಂಡು ಎಸೆತ ದ್ವಿತೀಯ, ಹ್ಯಾಮರ್ ಥ್ರೋದಲ್ಲಿ ತೃತಿಯ ಸ್ಥಾನವನ್ನು ಗಳಿಸಿದ್ದಾನೆ. ಬಾಲಕಿಯರ ವಿಭಾಗದ ಹ್ಯಾಮರ್ ಥ್ರೋದಲ್ಲಿ ದಿವ್ಯ ಗೌಡ ಪ್ರಥಮ, ಯಶೋದಾ ಮೊಗೇರ್ ಉದ್ದ ಜಿಗಿತ, 400 ಮೀಟರ್ ಓಟ, ಹ್ಯಾಮರ್ ಥ್ರೋದಲ್ಲಿ ದ್ವಿತೀಯ, ಸಹನಾ ಮೊಗೇರ 3000ಮೀ, 1500ಮೀ. ಓಟದಲ್ಲಿ ದ್ವಿತೀಯ, ಮಹಿಮಾ ನಾಯ್ಕ 500 ಮೀ. ಓಟ, 400 ಮೀ. ಹರ್ಡಲ್ಸ್ ಪ್ರಥಮ, ಪ್ರತೀಕ್ಷಾ ನಾಯ್ಕ 500 ಮೀ. ಓಟದಲ್ಲಿ ತೃತೀಯ, ನಿಖಿತಾ ತ್ರಿವಿಧ ಜಿಗಿತದಲ್ಲಿ ತೃತೀಯ, ನಯನ ಎಂ. ಭರ್ಚಿ ಏಸೆತ ಮತ್ತು 100 ಮೀ. ಓಟದಲ್ಲಿ  ತೃತೀಯ, ನಯನ ಜಿ. 200 ಮೀ. ಓಟದಲ್ಲಿ ತೃತಿಯ, ಸಹನಾ ಮೊಗೇರ ಪೋಲ್ ವಾಲ್ಟ್‍ನಲ್ಲಿ ಪ್ರಥಮ, ಪ್ರತೀಕ್ಷಾ ನಾಯ್ಕ ದ್ವಿತೀಯ ಸ್ಥಾನ ಪಡೆದಿದ್ದಾರೆ. 
ಬಾಲಕಿಯರ 4-400 ಮೀಟರ್ ರಿಲೆಯಲ್ಲಿ ಅಶ್ವಿನಿ ನಾಯ್ಕ ತಂಡ ಪ್ರಥಮ ಸ್ಥಾನವನ್ನು,  4-100 ಮೀಟರ್ ರಿಲೆಯಲ್ಲಿ ರಕ್ಷಿತಾ ಮೊಗೇರ್ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ. 
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ, ನಿರ್ದೇಶಕಿ ಪುಷ್ಪಲತಾ ಎಮ್.ಎಸ್, ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಮಹಾಲೆ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...