ಭಟ್ಕಳ: ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್-ಭಟ್ಕಳದ ಶ್ರೀಧರ ವೆಂಕಟೇಶ ನಾಯಕ ಮತ್ತು ಯೋಗಿರಾಜ ಪಾಂಡುರಂಗ ಶ್ಯಾನಭಾಗರಿಗೆ ಪ್ರಥಮ ಸ್ಥಾನ

Source: so english | By Arshad Koppa | Published on 31st August 2017, 7:54 AM | Coastal News | Sports News |

ಜಿಎಸ್‍ಬಿ ಸಮಾಜ ಕಾರ್ಕಳ ಇವರ  ವತಿಯಿಂದ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಶಟಲ್ ಟೂರ್ನಾಮೆಂಟ್(ಡಬಲ್ಸ್)ನಲ್ಲಿ ಭಟ್ಕಳದ ಶ್ರೀಧರ ವೆಂಕಟೇಶ ನಾಯಕ ಮತ್ತು ಯೋಗಿರಾಜ ಪಾಂಡುರಂಗ ಶ್ಯಾನಭಾಗ ಉತ್ತಮ ಸಾದನೆ ತೋರಿ ಪ್ರಥಮ ಸ್ಥಾನ ಪಡೆದಿದ್ದಾರೆ. 
   ಕಾರ್ಕಳದ ಜೋನ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಶಟಲ್ ಟೂರ್ನಾಮೆಂಟ್‍ನಲ್ಲಿ ರಾಜ್ಯದ ಬೆಂಗಳೂರು, ಮಂಗಳೂರು, ಮಣಿಪಾಲ, ಉಡುಪಿ,  ಕುಂದಾಪುರ, ಭಟ್ಕಳ ಸೇರಿದಂತೆ ವಿವಿದಡೆಯಿಂದ ಸುಮಾರು 50 ತಂಡಗಳು ಭಾಗವಹಸಿದ್ದವು. ಸೇಮಿಪೈನಲ್ ಹಂತದಲ್ಲಿ ಮಣಿಪಾಲ ಮತ್ತು ಕಾರ್ಕಳ ತಂಡ, ಮಂಗಳೂರು ಮತ್ತು ಭಟ್ಕಳ ತಂಡದ ನಡುವೆ ಸೆಣಸಾಟ ನಡೆದಿತ್ತು. ಪೈನಲ್ ಪ್ರವೇಶಿಸಿದ ಕಾರ್ಕಳ ಮತ್ತು ಭಟ್ಕಳ ತಂಡದ ನಡುವೆ ನಡೆದ ಹಣಾಹಣಿಯಲ್ಲಿ ಭಟ್ಕಳ ತಂಡ ವಿಜಯಿಯಾಗಿ ನಗದು ಮತ್ತು ರಾಜ್ಯಮಟ್ಟದ ಜಿಎಸ್‍ಬಿ ಪ್ರಶಸ್ತಿಯನ್ನು ತನ್ನ ಮುಡೀಗೆರಿಸಿಕೊಂಡಿದೆ. ಭಟ್ಕಳದ ತಂಡದ ಪರವಾಗಿ ಶ್ರೀಧರ ವೆಂಕಟೇಶ ನಾಯಕ ಮತ್ತು ಯೋಗಿರಾಜ ಪಾಂಡುರಂಗ ಶ್ಯಾನಭಾಗ ಪಂದ್ಯಾಟದಲ್ಲಿ ಭಾಗವಹಿಸಿದ್ದರು. 

Read These Next

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...

ಫಿಫಾ ವಿಶ್ವಕಪ್ 2018: ಸೌತ್ ಕೊರಿಯಾ vs ಸ್ವೀಡನ್: 60 ವಷರ್ಗಳ ಬಳಿಕ ಮೊದಲ ಪಂದ್ಯ ಗೆದ್ದ ಸ್ವೀಡನ್

ಮಾಸ್ಕೋ: ಫಿಫಾ ವಿಶ್ವಕಪ್ 2018ರ 'ಎಫ್' ಗುಂಪಿನ ಸೌತ್ ಕೊರಿಯಾ ಹಾಗೂ ಸ್ವೀಡನ್ ತಂಡಗಳ ನಡುವಣ ಪಂದ್ಯದಲ್ಲಿ ಸ್ವೀಡನ್ 1-0 ಅಂತರದ ಜಯಗಳಿಸಿ ...