ಭಟ್ಕಳ: ಜಾವೆಲಿನ್ ಎಸೆತದಲ್ಲಿ ಜಿಲ್ಲ ಮಟ್ಟಕ್ಕೆ ಆಯ್ಕೆಯಾದ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಫರ್ಜಾದ್ ಅಹ್ಮದ್
ಭಟ್ಕಳ: ಇಲ್ಲಿನ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಫರ್ಜಾದ್ ಅಹ್ಮದ್ ಈತನು ಭಲ್ಲೆ ಎಸೆತ (ಜಾವೆಲಿನ್ ಥ್ರೋ)ದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ಹಾಗೂ ತರಬೇತುದಾರ ಮಹೇಶ ನಾಯ್ಕ ಇವರಿಗೆ ಶಾಲಾ ಮುಖ್ಯ ಶಿಕ್ಷಕ ಎಂ. ಆರ್. ಮಾನ್ವಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಪ್ರಾಂಶುಪಾಲೆ ಫಹಮಿದಾ ಮುಲ್ಲಾ ಅಭಿನಂದಿಸಿದ್ದಾರೆ.