ಭಟ್ಕಳ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿ ಸುನಿಲ್ ನಾಯ್ಕ ಉಪಾಧ್ಯಕ್ಷರಾಗಿ ಗಾಯತ್ರಿ ವಿಜಯಕುಮಾರ ಆಯ್ಕೆ

Source: S O News service | By V. D. Bhatkal | Published on 1st September 2018, 8:05 PM | Coastal News |

ಭಟ್ಕಳ: ಜಿಲ್ಲೆಯ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿರುವ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನಿಯಮಿತ ಇದರ ನೂತನ ಅಧ್ಯಕ್ಷರಾಗಿ ಶಾಸಕ ಸುನಿಲ್ ಬಿ. ನಾಯ್ಕ, ಉಪಾಧ್ಯಕ್ಷರಾಗಿ ಮಾವಳ್ಳಿಯ ಗಾಯತ್ರಿ ವಿಜಯಕುಮಾರ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ಸಂಘದ ಪ್ರಧಾನ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರವಾರ ಸಹಕಾರಿ ಇಲಾಖೆಯ ಉಪನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕ ಭಾಸ್ಕರ ನಾಯ್ಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಮಂಜುನಾಥ ದುರ್ಗಪ್ಪ ನಾಯ್ಕ ಜಾಲಿ, ಸುರೇಶ ಜಟ್ಟಯ್ಯ ನಾಯ್ಕ ಪುರವರ್ಗ, ಮೋಹನ ಕೊರ್ಗಪ್ಪ ನಾಯ್ಕ, ಮಂಜಪ್ಪ ಮಾದೇವ ನಾಯ್ಕ ಮಾವಳ್ಳಿ, ಸಂತೋಷ ಮಾದೇವ ನಾಯ್ಕ ಮಾವಳ್ಳಿ, ನವನೀತ ಗಣೇಶ ನಾಯ್ಕ, ಹರೀಶ ವೆಂಕಟೇಶ ನಾಯ್ಕ, ಈಶ್ವರ ಮಂಜುನಾಥ ನಾಯ್ಕ, ಕಮಲಾ ರಾಮಚಂದ್ರ ನಾಯ್ಕ, ಮಂಜು ಮಂಜು ಮೊಗೇರ, ನಾಗಯ್ಯ ಮಾಸ್ತಿ ಗೊಂಡ, ಪ್ರಧಾನ ವ್ಯವಸ್ಥಾಪಕ ವಾಸು ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಸುನೀಲ್ ನಾಯ್ಕ 2ನೇ ಬಾರಿ ಅಧ್ಯಕ್ಷ ಹುದ್ದೆಗೆ ಏರುತ್ತಿದ್ದರೆ, ಗಾಯತ್ರಿ ನಾಯ್ಕರಿಗೆ ಉಪಾಧ್ಯಕ್ಷ ಹುದ್ದೆಯು ಮೊದಲ ಅವಕಾಶವಾಗಿದೆ. ನೂತನ ಪದಾಧಿಕಾರಿಗಳ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಶಾಸಕರ ಬೆಂಬಲಿಗರು ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿದರು. 
 

Read These Next