ಭಟ್ಕಳ: ಜಾಲಿ ಗ್ರಾಮೀಣ ಸಹಕಾರಿ ಸಂಘಕ್ಕೆ 99.07ಲಕ್ಷ ನಿವ್ವಳ ಲಾಭ

Source: raghu bhat | By Arshad Koppa | Published on 25th September 2016, 8:59 PM | Coastal News |

ಇಲ್ಲಿನ ಜಾಲಿಯ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ 40ನೇ ವಾರ್ಷಿಕ ಮಹಾಸಭೆ ಜಾಲಿಯ ವೆಂಕಟೇಶ್ವರ ನಾಮಧಾರಿ ವಿದ್ಯಾವರ್ಧಕ 
ಸಭಾಭವನದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಸಹಕಾರಿ ಸಂಘದ ಅಧ್ಯಕ್ಷ ರವಿ ಎಲ್.ನಾಯ್ಕ,ಸಂಘವು ಪ್ರಸಕ್ತ ಸಾಲಿನಲ್ಲಿ 99.07ಲಕ್ಷ ನಿವ್ವಳ ಲಾಭ ಗಳಿಸಿದ್ದು,ಶೇರು ಸದಸ್ಯರಿಗೆ ಶೇ.10ರಂತೆ ಲಾಭಾಂಶ ನೀಡಲಾಗುವುದು ಎಂದು ಹೇಳಿದರು.ಸಂಘವು 358.86ಲಕ್ಷ ಶೇರು ಬಂಡವಾಳ ಹೊಂದಿದ್ದು
2842.03ಲಕ್ಷ ಠೇವಣಿ,5190.74ಲಕ್ಷ ದುಡಿಯುವ ಬಂಡವಾಳ ಹೊಂದಿದೆ.ವಿವಿಧ ಉದ್ದೇಶಗಳಿಗಾಗಿ ಸದಸ್ಯರಿಗೆ 3998.28ಲಕ್ಷ ಸಾಲ ವಿತರಣೆ ಮಾಡಲಾಗಿದ್ದು,ಪ್ರಸಕ್ತ ಸಾಲಿನಲ್ಲಿ ಶೇ.74.95ರಷ್ಟು ಸಾಲ ವಸೂಲಾತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಶಾಂತಾರಾಮ ನಾಯ್ಕ,ಸಂಘದ ಮುಂಗಡ ಪತ್ರವನ್ನು ಮಂಡಿಸಿ 2016-17ನೇ ಸಾಲಿನಲ್ಲಿ 1.28ಕೋಟಿ ಲಾಭ ಗಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರಲ್ಲದೇ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಸಭೆಯಲ್ಲಿ ತಮ್ಮ ಸಲಹೆ ಸೂಚನೆ ನೀಡಿದ ಶೇರು ಸದಸ್ಯರು,ಪ್ರಸಕ್ತ ಸಾಲಿನಲ್ಲಿ ಲಾಭದ ಪ್ರಮಾಣ ಕಡಿಮೆಯಾಗಿದ್ದು,ಮುಂದಿನ ವರ್ಷ ಹೆಚ್ಚಿನ ಪ್ರಗತಿಯನ್ನು ದಾಖಲಿಸಬೇಕು ಎಂದರು.ನಷ್ಟದಲ್ಲಿರುವ ಹಳದೀಪುರದ ಶಾಖೆಯನ್ನು ಬಂದ್ ಮಾಡುವ ಮೂಲಕ ಸಂಘಕ್ಕೆ ಆಗುತ್ತಿರುವ ಹಾನಿಯನ್ನು ಕಡಿಮೆ ಮಾಡುವಂತೆ ಸದಸ್ಯರು ಸಲಹೆ ನೀಡಿದಾಗ,ಸದ್ಯದಲ್ಲೇ ಬೇರೆಡೆಗೆ ಸ್ಥಳಾಂತರಿಸುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು.
ಸಹಕಾರಿ ಸಂಘಕ್ಕೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಾಗ ಪಾರದರ್ಶಕತೆಯ ಮೂಲಕ ಸಹಕಾರಿ ನಿಯಮದಂತೆ ನೇಮಕ ಮಾಡಿಕೊಳ್ಳಬೇಕು ಎಂದು ಹಲವು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.ಈ ವಿಷಯದ ಕುರಿತು ಬಹಳ ಸಮಯದವರೆಗೆ ಚರ್ಚೆ ನಡೆಯಿತು.ಕೊನೆಗೆ ಸಿಬ್ಬಂದಿ ನೇಮಕದ ಕುರಿತು ಹಿಂದೆ ಮಾಡಿದ್ದ ಠರಾವನ್ನು ರದ್ದು ಪಡಿಸಿ,ಸಹಕಾರಿ ನಿಯಮದಂತೆ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಮಹಾಸಭೆಯಲ್ಲೇ ಹೊಸ ಠರಾವನ್ನು ಮಾಡಲಾಯಿತು.ಇದಕ್ಕೆ ಸಭೆಯು ಅನುಮೋದನೆ ನೀಡಿತು.
ಸಭೆಯಲ್ಲಿ ಪ್ರಮುಖರಾದ ಸಂಘದ ಮಾಜಿ ಅಧ್ಯಕ್ಷ ಡಿ.ಬಿ ನಾಯ್ಕ,ಪ್ರಮುಖರಾದ ರಾಧಾಕೃಷ್ಣ,ಶ್ರೀಧರ ನಾಯ್ಕ,ದೇವಿದಾಸ ಆಚಾರಿ,ಈಶ್ವರ ನಾಯ್ಕ,ರಾಮ ನಾಯ್ಕ,ಎಂ.ಎಂ ನಾಯ್ಕ,ಈಶ್ವರ ಮೊಗೇರ್,ನಾರಾಯಣ ನಾಯ್ಕ,ಲಕ್ಷ್ಮಣ ನಾಯ್ಕ ಸೇರಿದಂತೆ ಹಲವರು ಸಿಬ್ಬಂದಿ ನೇಮಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಲಹೆ,ಸೂಚನೆ ನೀಡಿದರು.
ಸಂಘದ ಉಪಾಧ್ಯಕ್ಷರಾದ ಮಹೇಶ ಕೆ.ಮೊಗೇರ್,ನಿರ್ದೇಶಕರಾದ ರತ್ನಾಕರ ಖಾರ್ವಿ,ಕೃಷ್ಣಕುಮಾರ್ ನಾಯ್ಕ,ರವಿ.ಎನ್ ನಾಯ್ಕ,ಗುರುಪಾದ ಎಂ.ನಾಯ್ಕ,ಬೈರಪ್ಪ ಎನ್.ನಾಯ್ಕ,ಕೃಷ್ಣ ಜೆ.ನಾಯ್ಕ,ಭಾಸ್ಕರ ಎಂ.ಮೊಗೇರ್,ರಾಮ ಎನ್.ಮೊಗೇರ್,ನೇತ್ರಾವತಿ ನಾಯ್ಕ,ಕಲ್ಪನಾ ಎಂ.ನಾಯ್ಕ ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಾಹಕ ಶಾಂತಾರಾಮ ನಾಯ್ಕ ಪ್ರಾರ್ಥನಾಗೀತೆ ಹಾಡಿ,ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...