ಬಿ.ಕಾಂ. ತೃತೀಯ ಸೆಮೆಸ್ಟರ್ ಪರೀಕ್ಷೆ; ಗುರು ಸುಧೀಂದ್ರ ಕಾಲೇಜು ಶೇ.94.19 ಫಲಿತಾಂಶ

Source: sonews | By Staff Correspondent | Published on 28th January 2019, 6:17 PM | Coastal News |

ಭಟ್ಕಳ: ಕಳೆದ ನವೆಂಬರ್ ತಿಂಗಳಲ್ಲಿ ಜರುಗಿದ ಬಿ.ಕಾಂ. ತೃತೀಯ ಸೆಮೆಸ್ಟರ್ ಪರೀಕ್ಷೆಯಲ್ಲಿ ನಗರದ ಗುರು ಸುಧೀಂದ್ರ ಪದವಿ ಕಾಲೇಜಿಗೆ ಶೇಕಡ 94.19 ಫಲಿತಾಂಶ ಲಭಿಸಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. 

ನಾಗರಾಜ ನಾಯ್ಕ್ ಶೇ. 95.13 ಅಂಕದೊಂದಿಗೆ ಪ್ರಥಮ ಸ್ಥಾನವನ್ನು, ಭಾಗ್ಯಶ್ರೀ ಬಂಡಿ, ಶೇ 94.13 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು, ಆಸ್ಮಾ ಖಾಲಿದ್ ಶೇ 93.25 ಅಂಕದೊಂದಿಗೆ ತ್ರತೀಯ ಸ್ಥಾನವನ್ನು ಪಡೆದಿರುತ್ತಾರೆ. ಇದರೊಂದಿಗೆ ಕಾರ್ಪೋರೇಟ್ ಅಕೌಂಟಿಂಗ್, ಹೆಚ್. ಆರ್. ಎಮ್, ಕಂಪ್ಯೂಟರ್ ಅಪ್ಲಿಕೇಶನ್, ಬ್ಯುಸಿನೆಸ್ ಸ್ಟ್ಯಾಟಿಸ್ಟಿಕ್ಸ, ಪ್ರಿನ್ಸಪಲ್ಸ ಆಫ್ ಮಾರ್ಕೆಟಿಂಗ್, ವಿಷಯಗಳಲ್ಲಿ 27 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿರುತ್ತಾರೆ ಮತ್ತು  ಕಾರ್ಪೋರೇಟ್ ಅಕೌಂಟಿಂಗ್, ಮೊನಿಟರಿ ಎಕಾನೋಮಿಕ್ಸ್, ಹೆಚ್. ಆರ್. ಎಮ್, ಪ್ರಿನ್ಸಪಲ್ಸ ಆಫ್ ಮಾರ್ಕೆಟಿಂಗ್ ವಿಷಯಗಳಲ್ಲಿ ನೂರು ಶೇಕಡಾ ಫಲಿತಾಂಶ ಲಭಿಸಿರುತ್ತದೆ. 

ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟೃಸ್ಟ್‍ನ ಅಧ್ಯಕ್ಷ ಡಾ|| ಸುರೇಶ್ ವಿ. ನಾಯಕ್, ಆಡಳಿತಾಧಿಕಾರಿ ನಾಗೇಶ್ ಎಮ್. ಭಟ್, ಪ್ರಾಂಶುಪಾಲ ಪ್ರೊ. ಶ್ರೀನಾಥ್ ಪೈ, ಶೈಕ್ಷಣಿಕ ಸಂಯೋಜಕ ಫಣಿಯಪ್ಪಯ್ಯ ಹೆಬ್ಬಾರ್, ಭೋಧಕ-ಭೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...