ಹೆದ್ದಾರಿಗಾಗಿ ಸ್ವಾಧೀನವಾದ ಪ್ರದೇಶದಲ್ಲಿ ಮರಗಳ ಕಡಿಯಲು ಆಕ್ಷೇಪಣೆಗಳಿಗೆಆಹ್ವಾನ

Source: S.O. News Service | By Mohammed Ismail | Published on 14th June 2018, 2:26 PM | Coastal News |

ಕಾರವಾರ: ಹೊನ್ನಾವರ ವಲಯ ವ್ಯಾಪ್ತಿರಾಷ್ಟ್ರೀಯ ಹೆದ್ದಾರಿರಸ್ತೆಅಗಲೀಕರಣಕ್ಕೆ ಭೂಸ್ವಾಧೀನ ಮಾಡಲಾಗಿರುವ ಮಾಲ್ಕಿ ಪ್ರದೇಶದಲ್ಲಿರುವ ಮರಗಳನ್ನು ಕಡಿಯಲುಆಕ್ಷೇಪಣೆಇದ್ದಲ್ಲಿ ಹದಿನೈದು ದಿನಗಳೊಳಗೆ ಸಲ್ಲಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹೊನ್ನಾವರ ವಿಭಾಗಇವರು ಆಕ್ಷೇಪಣೆಗಳನ್ನು ಆಹ್ವಾನಿಸಿದ್ದಾರೆ.

    ಜೂನ್ 8ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಅವರು, ರಾಷ್ಟ್ರೀಯ ಹೆದ್ದಾರಿ ಎನ್‍ಎಚ್66 ಗೋವಾ ಕರ್ನಾಟಕಗಡಿಯಿಂದಕುಂದಾಪುರಗಡಿಯವರೆಗೆ 93.7ನೇ ಕಿ.ಮೀರಿಂದ 283.300 ಕಿ.ಮೀ.ರವರೆಗೆರಸ್ತೆಅಗಲೀಕರಣಕ್ಕೆರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಇವರು ಭೂಸ್ವಾಧೀನ ಮಾಡಲಾಗಿದ್ದುಅದರಲ್ಲಿ ಬರುವ ಮರಗಳಿಗೆ ಈಗಾಗಲೇ ಪರಿಹಾರಗಳನ್ನು ವಿತರಿಸಲಾಗಿದೆ.

ಹೆದ್ದಾರಿಅಗಲೀಕರಣಕ್ಕೆಅಡೆತಡೆಉಂಟು ಮಾಡುವಇಡುಗುಂಜಿಕ್ರಾಸ್‍ನಿಂದ ಬಡಗಣಿ ಬ್ರಿಡ್ಜ್ ವರೆಗಿನರಸ್ತೆಯಎಡ ಭಾಗದಲ್ಲಿ 431 ಮರಗಳು ಹಾಗೂ ಬಲ ಭಾಗದಲ್ಲಿ 619 ಮರಗಳು ಒಟ್ಟು 1050 ಮರಗಳಿದ್ದು ಈ ಮಾಲ್ಕಿ ಪ್ರದೇಶದ ಮರಗಳನ್ನು ಕಡಿಯಲುಅನುಮತಿನೀಡಬೇಕಿರುವುದರಿಂದ ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆ ದಿನಾಂಕದಿಂದ 15 ದಿನಗಳೊಳಗೆ ಸಲ್ಲಿಸುವಂತೆಹೊನ್ನಾವರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ...

ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ...

ರಾ.ಹೆ.ಅಗಲೀಕರಣ;೩೦ರ ಬದಲು ೪೫ಮೀಟರ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ...