ನಾಟಕ ಅಕಾಡೆಮಿ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ

Source: sonews | By Staff Correspondent | Published on 29th October 2018, 10:39 PM | Coastal News |

ಕಾರವಾರ: ರಾಜ್ಯ ನಾಟಕ ಅಕಾಡೆಮಿಯು 10 ಜನ ಅರ್ಹ ಅಭ್ಯರ್ಥಿಗಳಿಗೆ ರಂಗಭೂಮಿ ಸಂಬಂಧಿತ ಸಂಶೋಧನಾ ಪ್ರಬಂಧ ರಚನೆಗೆ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಲಾ ರೂ.1 ಲಕ್ಷ ಸಂಭಾವನೆ ನೀಡಲಾಗುತ್ತದೆ.
 
ಆಸಕ್ತರು ಪ್ರಬಂಧಗಳ ಕುರಿತ ವಿಷಯಗಳು, ನಿಬಂಧನೆಗಳು ಮತ್ತು ವಿವರಗಳಿಗಾಗಿ ಸೂಕ್ತ ಅಂಚೆ ಚೀಟಿ ಹಚ್ಚಿದ ಹೆಚ್ಚುವರಿ ಲಕೋಟೆಯ ಮೇಲೆ ಸ್ವ ವಿಳಾಸ ಬರೆದು ಮತ್ತು ಸ್ವವಿವರಗಳನ್ನು ಜೊತೆಗೆ ಲಗತ್ತಿಸಿ, ಅಂಚೆ ಮೂಲಕ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು-560002, ವಿಳಾಸಕ್ಕೆ ನ.15 ರೊಳಗೆ ಕಳುಹಿಸಬೇಕು. ಮೌಖಿಕ ಪರೀಕ್ಷೆಯ ನಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದೆಂದು ಅಕಾಡೆಮಿಯ ರಿಜಿಸ್ಟ್ರಾರ್ ಡಾ.ಶೈಲಜಾ ಎ.ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಬುಧವಾರ ವಿದ್ಯುತ್ ವ್ಯತ್ಯಯ
ಕಾರವಾರ: 110 ಕೆ.ವಿ. ಉಪಕೇಂದ್ರ ಶೇಜವಾಡದಲ್ಲಿ 10ಎಮ್‍ವಿಎ ಮತ್ತು 20ಎಮ್‍ವಿಎ ಶಕ್ತಿ ಪರಿವರ್ತಕದ ನಿರ್ವಾಹಣಾ  ಕಾಮಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ 31 ಬುಧವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರವಾರ ತಾಲೂಕಿನ್ಯಾದ್ಯಂತ ವಿದ್ಯುತ್ ವ್ಯತ್ಯಯವುಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ
    
ಕಾರವಾರ: ಕೆನರಾ ಬ್ಯಾಂಕ್ ಆರ್‍ಸೆಟ್ ಸಂಸ್ಥೆ(ರಿ) ಹಳಿಯಾಳ ಇವರು ಗೃಹೋಪಯೋಗಿ ವಿದ್ಯುತ್ ಉಪಕರಣಗಳ ಸೇವಾ ಉದ್ಯಮಿ ತರಬೇತಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.
      
ತರಬೇತಿಯು 30 ದಿನಗಳ  ಅವಧಿಯದ್ದಾಗಿದ್ದು ಎಲ್ಲ ತರಹದ ವೈರಿಂಗ್, ಫ್ಯಾನ್, ಮಿಕ್ಸಿ, ಇಸ್ತ್ರಿ ಪೆಟ್ಟಿಗೆ ಹೀಟರ್ ಮುಂತಾದ ಗೃಹಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ಜೋತೆಗೆ ವ್ಯವಹಾರಿಕ ತಂತ್ರಗಳ ಬಗ್ಗೆಯೂ ಸಹ ತರಬೇತಿ ನೀಡಲಾಗುವುದು. ತರಬೇತಿಗಳು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೋಗಿ ಯುವಜನತೆ ತರಬೇತಿಯಲ್ಲಿ ಭಾಗವಹಿಸಬಹುದಾಗಿರುತ್ತದೆ.
  
ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ(ರಿ), ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ, ದೂರವಾಣಿ ಸಂಖ್ಯೆ 08284-220807, ಮೊ.ನಂ 94834885489, 9482188780 ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...