ಐಟಿಐ ಯಿಂದ ಡಿಪ್ಲೊಮಾ 2ನೇ ವರ್ಷದ ನೇರ ಪ್ರವೇಶಕ್ಕೆ ಅರ್ಜಿ ಆಹ್ವಾನ

Source: S.O. News Service | By Mohammed Ismail | Published on 14th June 2018, 2:25 PM | Coastal News |

ಕಾರವಾರ: ಎರಡು ವರ್ಷಗಳ ಐಟಿಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ 2018-19ನೇ ಸಾಲಿಗೆ ನೇರವಾಗಿ 2ನೇ ವರ್ಷದ/3ನೇ ಸೆಮಿಸ್ಟರ್ ಡಿಪ್ಲೊಮಾ ತರಗತಿಗಳಿಗೆ ನೇರ ಪ್ರವೇಶಕ್ಕೆ ಆರ್ಜಿ ಆಹ್ವಾನಿಸಲಾಗಿದೆ.

 ಕರ್ನಾಟಕದಲ್ಲಿ 2 ವರ್ಷಗಳ ಐಟಿಐ ವ್ಯಾಸಂಗ ಮಾಡಿರಬೇಕು ಹಾಗೂ 1ನೇ ತರಗತಿಯಿಂದ ಐಟಿಐ, 10ನೇ ತರಗತಿ ಒಳಗೊಂಡಂತೆ ಏಳು ವರ್ಷಗಳ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸುವವರು ದಿನಾಂಕ 11-06-2018ರಿಂದ 23-06-2018ರವರೆಗೆ ತಾಂತ್ರಿಕ ಶಿಕ್ಷಣ ಇಲಾಖೆ ವೆಬ್‍ಸೈಟ್ www.dte.kar.nic.in ನಲ್ಲಿ ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು ಮಾಹಿತಿ ಪುಸ್ತಕದ ಸೂಚನೆಗಳನ್ವಯ ಸಂಪೂರ್ಣವಾಗಿ ಭರ್ತಿ ಮಾಡುವುದು. ಭರ್ತಿ ಮಾಡಿದ ಅರ್ಜಿ ಹಾಗೂ ನೋಂದಣಿ ಶುಲ್ಕವನ್ನು ಸಮೀಪವಿರುವ ಯಾವುದಾದರೂ ಸರ್ಕಾರಿ/ ಅನುದಾನಿತ ಪಾಲಿಟೆಕ್ನಿಕ್ ದಾಖಲೆಗಳ ಪರಿಶೀಲನಾ ಕೇಂದ್ರದಲ್ಲಿ ನಗದು ರೂಪದಲ್ಲಿ ಪಾವತಿಸುವುದು. ನಂತರ ಅಭ್ಯರ್ಥಿಯು ತನ್ನ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಹಾಜರುಪಡಿಸಿ ಭರ್ತಿ ಮಾಡಿದ ಅರ್ಜಿಯನ್ನು ಅನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಿಸಿ ಸ್ವೀಕೃತಿಯನ್ನು ಪಡೆಯುವುದು.

ಲ್ಯಾಟರಲ್ ಎಂಟ್ರಿ ಸ್ಕೀಂ ಮೂಲಕ ಅಭ್ಯರ್ಥಿಗಳನ್ನು ಡಿಪ್ಲೊಮಾ ನೇರ ಪ್ರವೇಶಕ್ಕೆ ಆಯ್ಕೆ ಮಾಡಲಾಗುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...