ಅಂದರ-ಬಾಹರ ಅಡುತ್ತಿದ್ದ 7 ಮಂದಿ ಬಂಧನ.

Source: SO News | By Manju Naik | Published on 27th July 2018, 7:38 PM | Coastal News |

 

ಭಟ್ಕಳ:  ಇಲ್ಲಿನ ಸಾಗರ ರಸ್ತೆಯ ಬಸ್ ಸ್ಟಾಪ್ ಸಮೀಪ ಸ್ಥಳದಲ್ಲಿ ಅಂದರ ಬಾಹರ ಇಸ್ಪಿಟ್ ಜುಗಾರು ಆಡುತ್ತಿದ್ದ 7 ಮಂದಿಯನ್ನು ಬುಧವಾರದಂದು ರಾತ್ರಿ ನಗರ ಠಾಣೆ ಪಿಎಸೈ ಬಸವರಾಜ ಎಸ್. ಹೇರೂರ, ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದ್ದಾರೆ. 

ಆರೋಪಿಗಳಾದ ಹನುಮಾನನಗರದ ತಿಮ್ಮಪ್ಪ ಬಲಿಂದ್ರ ನಾಯ್ಕ(30), ಮುರ್ಡೇಶ್ವರ ಚಂದ್ರಹಿತ್ಲುವಿನ ಹನುಮಂತ ವೆಂಕಟೇಶ ನಾಯ್ಕ (30), ಮುರ್ಡೇಶ್ವರ ಮಠದಹಿತ್ಲುವಿನ ಈಶ್ವರ ಮಂಜುನಾಥ ಮೋಗೇರ(30), ಮುರ್ಡೇಶ್ವರದ ಮರದ ಹಿತ್ಲುವಿನ ತಿಮ್ಮಪ್ಪ ಅಣ್ಣಪ್ಪ ಮೋಗೇರ(34), ಶಿರಾಲಿಯ ಗುರುರಾಜ ನಾಗಪ್ಪ ನಯ್ಕ (39), ಶಿರಾಲಿ ಅಳ್ವೇಕೋಡಿಯ ಜೋಸೆಫ್ ಅನ್ಸಥ್ ಲೂಯಿಸ್(36) ಹಾಗೂ ಮುರ್ಡೇಶ್ವರ ಮಠದ ಹಿತ್ಲುವಿನ ರೈಮಂಡ ಅಂಥೋನಿ ಟೆಲಿಸ(40) ಎನ್ನುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 12,200 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...