Special Report https://www.sahilonline.net/ka/special-report SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Special Report ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ https://www.sahilonline.net/ka/shakti-scheme-turns-one-year-over-6-crore-women-in-uttara-kannada-benefit-from-free-travel ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ, ಒಂದು ವರ್ಷ ಪೂರ್ಣಗೊಂಡಿದ್ದು, ಈ ಯೋಜನೆಯಡಿ 2024 ರ ಜೂನ್ ಅಂತ್ಯದ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದಿದ್ದು, 178.12 ಕೋಟಿ ರೂ ಮೊತ್ತದ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ವಿತರಿಸಲಾಗಿದೆ. ಕಾರವಾರ: ಮಂಗನ ಕಾಯಿಲೆ ಭಯ ಬೇಡ, ಮುಂಜಾಗ್ರತೆಯಿರಲಿ https://www.sahilonline.net/ka/dont-be-afraid-of-monkey-disease-be-careful-karwar-uttara-kannada  ಮಂಗನ ಕಾಯಿಲೆ, ಹೆಸರೇ ಹೇಳುವಂತೆ ಇದು ಮಂಗ ಗಳಿAದ  ಹರಡುವ  ಕಾಯಿಲೆ. ಈ ಕಾಯಿಲೆಯು ಪ್ರಪ್ರಥಮವಾಗಿ 1956ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಪತ್ತೆಯಾದ್ದರಿಂದ ಈ ರೋಗಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ (ಕೆ.ಎಫ್.ಡಿ)/ ಮಂಗನ ಕಾಯಿಲೆ ಎಂದು ಕರೆಯಲಾಗಿದೆ. ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ https://www.sahilonline.net/ka/may-31-is-world-no-tobacco-day-various-programs-to-control-the-ill-effects-of-tobacco-in-the-district ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೋಟ್ಪಾ-2003ರ ಕಾಯ್ದೆಯಡಿ ಈವರೆಗೂ ಒಟ್ಟೂ 57 ತಂಬಾಕು ದಾಳಿಗಳನ್ನು ನಡೆಸಿದ್ದು, ಸೆಕ್ಷನ್ 4ರ ಅಡಿ 544 ಪ್ರಕರಣ ಹಾಗೂ ರೂ.88,990/- ದಂಡ , ಸೆಕ್ಷನ್ 6(ಎ) ಅಡಿ 351 ಪ್ರಕರಣಗಳು ಹಾಗೂ ರೂ.49,000/- ದಂಡ , ಸೆಕ್ಷನ್ 6(ಬಿ) ಅಡಿಯಲ್ಲಿ 59 ಪ್ರಕರಣಗಳು ಹಾಗೂ ರೂ.10,300/- ದಂಡ ವಿಧಿಸಿದ್ದು, ಒಟ್ಟೂ 954 ಪ್ರಕರಣಗಳಲ್ಲಿ ರೂ.1,48,290/- ದಂಡ ವಸೂಲಿ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಯಂತ್ರಣಕ್ಕೆ ಆಪ್.. https://www.sahilonline.net/ka/app-to-control-smoking-in-public-places ಸಾರ್ವಜನಿಕರು ತಮ್ಮ ಮೊಬೈಲ್‌ನ ಪ್ಲೇ ಸ್ಟೋರ್ ನಲ್ಲಿ Stoptobacco ಎಂದು ಟೈಪ್ ಮಾಡಿ, ಆಪ್ ನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಆಪ್ ನಲ್ಲಿ ಕಾಣಿಸುವ ರಿಜಿಸ್ಟರ್ ಕಂಪ್ಲೆöÊAಟ್ ಎಂಬುದನ್ನು ಒತ್ತಿ, ಧೂಮಪಾನ ಮಾಡುತ್ತಿರುವ ವ್ಯಕ್ತಿಗಳು ಇರುವ ಸ್ಥಳದ ಫೋಟೋ ತೆಗೆದು, ತಮ್ಮ ಹೆಸರು, ಜಿಲ್ಲೆ ಮತ್ತು ಡ್ರಾಪ್ ಬಾಕ್ಸ್ ನಲ್ಲಿರುವ ಯಾವ ರೀತಿಯ ದೂರು ಎಂಬುದನ್ನು ಆಯ್ಕೆ ಮಾಡಿಕೊಂಡು, ಧೂಮಪಾನ ಮಾಡುತ್ತಿರುವ ಸ್ಥಳದ ವಿಳಾಸ, ತಮ್ಮ ಮೊಬೈಲ್ ಸಂಖ್ಯೆ ಮತ್ತು ಸ್ಥಳದ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಭಟ್ಕಳ: ಮುರುಡೇಶ್ವರಕ್ಕೆ ಅಪ್ಪಳಿಸಿದ ಜನಮಾರುತ; ಸರಕಾರದ ಮಹಾ ಶಕ್ತಿ ಸಂಗಮಕ್ಕೆ ಪ್ರವಾಸಿ ತಾಣ ತತ್ತರ https://www.sahilonline.net/ka/tourist-surge-at-murdeshwar-ahead-of-monsoon-government-efforts-boost-popularity-of-iconic-spot ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಾರದ ರಜೆ ರವಿವಾರ ಪ್ರವಾಸಿಗರ ಸಮೂಹ ಮುರುಡೇಶ್ವರಕ್ಕೆ ಮಾರುತವಾಗಿ ಅಪ್ಪಳಿಸಿದ್ದು, ಪ್ರವಾಸಿ ತಾಣ ತತ್ತರಿಸಿ ಹೋಗಿದೆ. ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು https://www.sahilonline.net/ka/how-are-the-funds-for-drinking-water-being-used-in-bhatkal-and-why-is-the-water-not-rising-in-the-constructed-tank ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಅಲ್ಲದೆ ಹಲವು ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಬದಲು ಆರೋಗ್ಯಕ್ಕೆ ಹಾನಿಯುಂಟು ಮಾಡುವ ಅಶುದ್ಧ ನೀರು ಸೇವಿಸುವ ಆಪಾಯವನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ https://www.sahilonline.net/ka/hindutva-leader-chakraborty-sulibele-congratulated-congress-for-its-unprecedented-work “ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ಅದ್ಭುತವಾಗಿ ಕೆಲಸ ಮಾಡಿದ್ದೀರಿ. 2014 ಮತ್ತು 2019ನಲ್ಲಿ ನೀವು ಮಾಡದ ಕಾರ್ಯಗಳನ್ನು ಈಗ ತುಂಬಾ ಚೆನ್ನಾಗಿ ಮಾಡಿದ್ದೀರಿ. ಈ ನಿಟ್ಟಿನಲ್ಲಿ ನಾನು ನಿಮಗೆ ಶುಭಾಶಯ ತಿಳಿಸುತ್ತೇನೆ” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಪೌರಕಾರ್ಮಿಕರ ಮೊಗದಲ್ಲಿ ಸಂತೃಪ್ತಿಯ ಭಾವ ಮೂಡಿಸಿದ ಖಾಯಂ ನೇಮಕಾತಿ ಆದೇಶ https://www.sahilonline.net/ka/permanent-appointment-orders-foster-satisfaction-among-civil-servants-notes-dc-gangubai-manakar ಅಲ್ಲಿ ನೆರದಿದ್ದವರು ಎಂದಿನಂತಿನ ಸಾಮಾನ್ಯ ದಿನಗಳಂತೆ ಬೇಸರದ ಮನಸ್ಥಿತಿಯಲ್ಲಿರಲಿಲ್ಲ, ಶುಭ್ರ ವಸ್ತçದಾರಿಗಳಾಗಿದ್ದ ಅವರ ಮೊಗದಲ್ಲಿ ವರ್ಣಸಲಾಗದ ಆನಂದ, ಪದಗಳಿಗೆ ನಿಲುಕದ ಭಾವನೆಗಳು ತುಂಬಿದ್ದವು, ದಶಕಗಳ ಕಾಲದ ಅವರ ಕನಸು ನನಸಾಗುವ ಕ್ಷಣಗಳಿಗೆ ಹಾತೊರೆಯುತ್ತಿದ್ದರು.. ಸಂಭ್ರಮ, ಸಂತಸ ಸಡಗರಗಳು ಅವರ ಮತ್ತು ಅವರ ಕುಟುಂಬದವರ ಪ್ರತಿ ನಡೆ ನುಡಿಗಳಲ್ಲಿ ಎದ್ದು ಕಾಣುತ್ತಿದ್ದವು. ಪಂಚಾಯತ್ ಸೇವೆಗಳನ್ನು ಪಡೆಯಲು ಬಂದಿದೆ ಪಂಚಮಿತ್ರ ವಾಟ್ಸಾಪ್ https://www.sahilonline.net/ka/panchamitra-whatsapp-has-come-to-get-panchayat-services ಸರ್ಕಾರದ ಹಲವು ಇಲಾಖೆಗಳು ಆನ್‌ಲೈನ್ ಮೂಲಕ ಸಾರ್ವಜನಿಕರಿಗೆ ತಮ್ಮ ಕೈ ಬೆರಳಿನಲ್ಲಿಯೇ ತಮಗೆ ಅಗತ್ಯವಿರುವ ಸೇವೆಗಳನ್ನು ಪಡೆಯಲು ಅವಕಾಶಗಳನ್ನು ನೀಡಿದ್ದು, ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿರುವ ಗ್ರಾಮೀಣ ಪ್ರದೇಶದ ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ಮತ್ತು ಗ್ರಾಮ ಪಂಚಾಯತಿಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವಾರು ವೆಬ್‌ಸೈಟ್ ಮತ್ತು ಪೋರ್ಟಲ್‌ಗಳಲ್ಲಿ ಭೇಟಿ ನೀಡಬೇಕಾಗಿತ್ತು. ಅಲ್ಲದೇ, ಗ್ರಾಮ ಪಂಚಾಯತಿಗಳಿಗೆ ಸಂಬAಧಿಸಿದ ಎಲ್ಲಾ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ ಸೈಟ್ ಅಥವಾ ಪೋರ್ಟಲ್‌ಗಳು ಇಲ್ಲವಾಗಿತ್ತು. ಇಡಿ ಭಯದಿಂದ ಬಿಜೆಪಿಗೆ  ₹335 ಕೋಟಿ ದೇಣಿಗೆ ನೀಡಿದ  30ಕ್ಕೂ ಅಧಿಕ ಕಂಪನಿಗಳು https://www.sahilonline.net/ka/more-than-30-companies-donated-335-crore-to-bjp-due-to-fear-of-ed ಈ ಮಹತ್ವದ ಸಂಗತಿಯನ್ನು ‘ದಿ ನ್ಯೂಸ್‌ ಮಿನಿಟ್’ ಹಾಗೂ ‘ನ್ಯೂಸ್‌ ಲಾಂಡ್ರಿ‘ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ತಮ್ಮ ತನಿಖಾ ವರದಿಯಲ್ಲಿ ಬಹಿರಂಗಪಡಿಸಿವೆ. ಸರಣಿಯ ಮೊದಲ ಭಾಗದ ಮಹತ್ವದ ಸಂಕ್ಷಿಪ್ತ ವರದಿಯ ಸಾರಾಂಶವಿದು. ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ? https://www.sahilonline.net/ka/anant-kumar-hegde-known-for-incendiary-remarks-stays-silent-in-parliament ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ಮೌನ ಮತ್ತು ನಿಷ್ಕ್ರಿಯರಾಗಿದ್ದರು ಎಂದು ವರದಿ ಹೇಳುತ್ತಿದೆ. ಇದು ಸಂಸದರ ಉತ್ತರದಾಯಿತ್ವ, ಪ್ರಾತಿನಿಧ್ಯ ಮತ್ತು ಪ್ರಜಾಸತ್ತಾತ್ಮಕ ಆಡಳಿತದ ಮೂಲತತ್ವದ ಬಗ್ಗೆ ಸೂಕ್ತ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ https://www.sahilonline.net/ka/efforts-to-improve-gender-ratio-in-uttara-kannada-district-show-promise-says-uttara-kannada-deputy-commissioner ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ಉಂಟಾಗುವ ಸಾಮಾಜಿಕ ದುಷ್ಪರಿಣಾಮಗಳು ಎಲ್ಲೆಡೆ ಕಂಡುಬರುತ್ತಿವೆ. ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ https://www.sahilonline.net/ka/karwar-issuance-of-udid-card-to-special-persons-uttara-kannada-district-is-second-in-the-state ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ವಿತರಿಸಲಾಗುವ ಯುಡಿಐಡಿ ಕಾರ್ಡ್ಗಳ ವಿತರಣೆಯಲ್ಲಿ ಶೇ.97.23 ಪ್ರಗತಿ ಸಾಧಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ. ಕಾರವಾರ:.ಯುವನಿಧಿ ಯೋಜನೆಗೆ ನೊಂದಾಯಿಸಿ: ಪ್ರತೀ ತಿಂಗಳು ಭತ್ಯೆ ಪಡೆಯರಿ https://www.sahilonline.net/ka/yuva-nidhi-scheme-karnatakaget-an-allowance-every-month-karwar-uttara-kannada ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ , ರಾಜ್ಯದ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ನೊಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಜನವರಿ 12 ರಂದು ಯೋಜನೆಗೆ ಚಾಲನೆ ನೀಡಲಿದ್ದು, ನೊಂದಣಿಯಾಗಿರುವ ಎಲ್ಲಾ ಅಭ್ಯರ್ಥಿಗಳ ಖಾತೆಗೆ ಅಂದು ಹಣ ಜಮೆ ಆಗಲಿದೆ. ಈ ಯೋಜನೆಯ ಕುರಿತು ಸಂಪೂರ್ಣ ವಿವರವಾದ ಮಾಹಿತಿ ಇಲ್ಲಿದೆ.. ಭಾರತದ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿಯ ಕೋಮುವಾದವನ್ನು ಎದುರಿಸಲು ಕಾಂಗ್ರೆಸ್‌ನ "ಮೊಹಬ್ಬತ್ ಕಿ ದುಕಾನ್" ವಿಫಲವಾಯಿತೆ? https://www.sahilonline.net/ka/congresss-mohabbat-ki-dukan-fails-to-counter-bjps-communalism-in-key-indian-states ರಾಹುಲ್ ಗಾಂಧೀಯವರ "ಮೊಹಬ್ಬತ್ ಕಿ ದುಕಾನ್" (ಪ್ರೀತಿಯ ಅಂಗಡಿ) ಹಾಗೂ ಭಾರತೀಯರ ಹೃದಯಗಳನ್ನು ಜೋಡಿಸುವ “ಭಾರತ್ ಜೋಡು ಯಾತ್ರಾ” ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ತಂತ್ರವು ಇತ್ತೀಚಿನ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೋಮುವಾದಿ, ಹಿಂದುತ್ವ ಮತ್ತು ಹಿಂದೂ ರಾಷ್ಟ್ರದ ಎಜೆಂಡಾದ ಮುಂದೆ ಹಿಡಿತ ಸಾಧಿಸಲು ವಿಫಲವಾಗಿದೆ ಎಂದು ಪಂಚರಾಜ್ಯ ಚುನಾವಣಾ ಫಲಿತಾಂಶದ ಕುರಿತು  ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದಾರೆ. “ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ https://www.sahilonline.net/ka/enlightening-teachers-nurturing-talents-transforming-society ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ಉತ್ತಮ ಶಿಕ್ಷಣಕ್ಕೆ ಅಗತ್ಯವಾದ ಅಡಿಪಾಯವಾಗಿದೆ. ಉತ್ತಮ ಶಿಕ್ಷಣವು ಪ್ರತಿಭೆಯನ್ನು ಪೋಷಿಸುತ್ತದೆ. ಪ್ರತಿಭೆಯು ಸಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ. ಕಡಲತಡಿಯಲ್ಲಿ ಕಣ್ಮನ ಸೆಳೆಯುತ್ತಿರುವ ಸೀ ವಾಕ್ ಶೃಂಗಾರ; ಭಟ್ಕಳದಲ್ಲಿ ಮಂತ್ರಿಗಳೇ, ಓಡುವುದು ಬೇಡ ನಡೆದಾಡಿ ಬನ್ನಿ https://www.sahilonline.net/ka/bhatkal-the-beautiful-view-of-the-sea-walk-on-the-beach-can-be-more-attractive-if-our-minister-walks-to-see-it-himself ಕರ್ನಾಟಕಕ್ಕೆ ಕರಾವಳಿ ತೀರ ಎನ್ನುವುದು ಶೃಂಗಾರ ಕಾವ್ಯದಂತಿದೆ. ಕಡಲ ತಡಿಯುದ್ಧಕ್ಕೂ ಸದಾ ಬಣ್ಣ ಬಣ್ಣದ ಕನಸುಗಳು ಚಿಗುರೊಡೆದು ಕುಳಿತುಕೊಂಡಿರುತ್ತದೆ. ಕಡಲ ತೀರಕ್ಕೆ ಇನ್ನಷ್ಟು ರಂಗು ನೀಡುವ ನಿಟ್ಟಿನಲ್ಲಿ ಕರಾವಳಿ ಕಡಲ ತೀರವನ್ನು ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸುವ ಪ್ರಯತ್ನ ಮುಂದುವರೆದುಕೊಂಡೇ ಇದೆ. ಕಾಂಗ್ರೇಸ್ ನಲ್ಲಿ ಬದಿಗೆ ತಳ್ಳಲ್ಪಟ್ಟ ಬಿ.ಕೆ.ಹರಿಪ್ರಸಾದ್-ಮುಂದಿನ ರಾಜಕೀಯ ಭವಿಷ್ಯವೇನು? https://www.sahilonline.net/ka/bk-hariprasad-sidelined-in-congress-what-is-the-next-political-future ಕಾಂಗ್ರೇಸ್ ಪಕ್ಷದಲ್ಲಿ ಸಿದ್ಧರಾಮಯ್ಯನವರಷ್ಟೆ ಅತ್ಯಂತ ಖಡಕ್ ಆಗಿ ಮತ್ತು ತೀಕ್ಷ್ಣವಾಗಿ ಬಿಜೆಪಿ ಮತ್ತು ಸಂಘಪರಿವಾರದ ಸಿದ್ದಾಂತಗಳನ್ನು ವಿರೋಧಿಸುವ ವ್ಯಕ್ತಿ ಎಂದರೆ ಅದು ಬಿ.ಕೆ. ಹರಿಪ್ರಸಾದ್. ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಬಹುಮತ ಪಡೆಯಲು ಸಿದ್ಧರಾಮಯ್ಯ, ಡಿಕೆಶಿ, ಪ್ರಿಯಾಂಕ್ ಕರ್ಗೆ ಯವರಷ್ಟೇ ಬಿ.ಕೆ. ಹರಿಪ್ರಸಾದ್ ರು ಕಾರಣರು. ಇವರ ಪ್ರಖರ ಜಾತ್ಯಾತೀತ ಚಿಂತನೆಗಳು, ಮಾತಿನ ವೈಖರಿ, ಸೈದ್ಧಾಂತಿಕ ನಿಲುವು. ಈ ಎಲ್ಲ ಗುಣಗಳಿಂದ ಅವರೊಬ್ಬ ಪ್ರಭಾವಿ ನಾಯಕನಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದರು. ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ ... By: ಆರ್.ಎನ್.ಕೆ. https://www.sahilonline.net/ka/siddaramaiah-once-again-at-the-helm-of-karnataka-state-by-rnk ಮತ್ತೆ ಮತ್ತೆ ಹೇಳುತ್ತೇನೆ, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ. ಸವಾಲುಗಳನ್ನೇ ಅವಕಾಶವಾಗಿಸಿದ ನಾಯಕ ಡಿಕೆಶಿ https://www.sahilonline.net/ka/karnataka-deputy-cm-dk-shivkumar-is-a-leader-who-turned-challenges-into-opportunities ಡಿ.ಕೆ.ಶಿವಕುಮಾರ್ ರಾಜಕೀಯ ಬದುಕಿನಲ್ಲಿ ಮೊದಲು ಗಮನ ಸೆಳೆಯುವುದೇ ಅವರ ಕಾಂಗ್ರೆಸ್ ನಿಷ್ಠೆ, ಕಾಂಗ್ರೆಸ್ ಜೊತೆಗಿನ ಅವರ ನಂಟು ಶುರುವಾದದ್ದು 18ನೇ ವಯಸ್ಸಿನಿಂದಲೇ, 1994 ರಲ್ಲೊಮ್ಮೆ ರಾಜಕೀಯ ಕಾರಣಗಳಿಂದಾಗಿ ಪಕ್ಷೇತರರಾಗಿ ಸ್ಪರ್ಧಿಸಬೇಕಾಯಿತು ಭಟ್ಕಳ ವಿಧಾನಸಭಾ ಕ್ಷೇತ್ರ; ಜಾತಿ, ಪಕ್ಷಸಿದ್ಧಾಂತ ಬದಿಗಿಟ್ಟು “ಅಭ್ಯರ್ಥಿ” ಗಳ ಬಗ್ಗೆ ಆಸಕ್ತಿ ತೋರುತ್ತಿರುವ ಮತದಾರ https://www.sahilonline.net/ka/bhatkal-assembly-constituency-a-voter-who-shows-interest-in-candidates-regardless-of-caste-and-party-ideology ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ೨೦೧೮ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆ ವಿಭಿನ್ನವಾಗಿ ಗೋಚರಿಸುತ್ತಿದೆ. ಇಲ್ಲಿನ ಮತದಾರ ಈ ಬಾರಿ ಪ್ರಜ್ಞಾವಂತನಾಗಿದ್ದಾನೆ. ಜಾತಿ, ಪಕ್ಷ ಸಿದ್ಧಾಂತ ಗೊಡವೆಗೆ ಹೋಗದೆ ಭಟ್ಕಳವನ್ನು ಯಾರು ಅಭಿವೃದ್ಧಿಪಡಿಸುತ್ತಾರೆ ಎಂಬುದನ್ನು ಅವಲೋಕಿಸುತ್ತಿದ್ದು ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಅವರ ಕಣ್ಣೀರು ಒರೆಸುವ ಅಭ್ಯರ್ಥಿಯ ಕಡೆಗೆ ವಾಲುತ್ತಿರುವುದು ಕಂಡು ಬರುತ್ತಿದೆ. ಆನ್‌ಲೈನ್ ಹಣ ವಂಚನೆ, ಅಶ್ಲೀಲ ಜಾಲತಾಣಗಳ ವಿರುದ್ಧ 3 ವರ್ಷಗಳಲ್ಲಿ 32,746 ಪ್ರಕರಣ ದಾಖಲು https://www.sahilonline.net/ka/32746-cases-filed-in-3-years-against-online-fraud-porn-websites ಹಣ, ಅಶ್ಲೀಲ ಮತ್ತಿತರ ವಿಷಯಗಳ ಜಾಲತಾಣಗಳ ಕುರಿತಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 32,746 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇದೇ ಅವಧಿಯಲ್ಲಿ 11,125 ಪ್ರಕರಣಗಳು ಸೈಬರ್ ಅಪರಾಧದಡಿಯಲ್ಲಿ ದಾಖಲಾಗಿವೆ ಎಂಬ ಅಂಕಿ ಅಂಶಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಹಿರಂಗಪಡಿಸಿದ್ದಾರೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಾಸಿಯಾಗದ ಕೊರೊನಾ! ಭಟ್ಕಳದಲ್ಲಿ ಸಿಬ್ಬಂದಿಗಳ ಕೊರತೆ; ಬಸ್ ಓಡಾಟದಲ್ಲಿ ವ್ಯತ್ಯಯ https://www.sahilonline.net/ka/in-nwksrtc-corona-still-not-cured-shortage-of-staff-in-bhatkal ಅದ್ಯಾವಾಗ ಕೊರೊನಾ ಎಂಬ ಮಹಾಮಾರಿ ಊರುಕೇರಿಗಳಿಗೆ ಒಕ್ಕರಿಸಿತೋ ಏನೋ, ಮೊದಲೇ ತೆವಳಿಕೊಂಡು ದಿನದೂಡುತ್ತಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಇನ್ನಷ್ಟು ರೋಗಗ್ರಸ್ಥವಾಗಿ ಹೋಯಿತು. ಇದೀಗ ಕೊರೊನಾ ಇಲ್ಲಿಂದ ದೂರ ಓಡಿ ಹೋಗಿದ್ದರೂ, ಸರಕಾರಿ ಬಸ್ಸುಗಳು ಮಾತ್ರ ನಿಲ್ಲಲಾಗದೇ, ಓಡಲಾಗದೇ ಪರಿತಪಿಸುತ್ತಿರುವುದು ಕಂಡು ಬಂದಿದೆ. ಕನ್ನಡ ಭಾಷಾಭಿಮಾನ ಓಕೆ; ಉರ್ದುವಿನ ಮೇಲೆ ದುರಾಭಿಮಾನ ಏಕೆ?; ಭಟ್ಕಳ ಪುರಸಭಾ ಕಟ್ಟಡ ನಾಮಫಲಕದಲ್ಲಿ ಕನ್ನಡ ಇಂಗೀಷ್ ನೊಂದಿಗೆ ಉರ್ದು ಅಕ್ಷರ ಅಳವಡಿಕೆ ವಿವಾದವೇಕೆ? https://www.sahilonline.net/ka/urdu-board-on-bhatkal-municipal-building-issue-kannada-is-ok-greed-on-urdu-why-with-kannada-english-why-not-urdu ಭಟ್ಕಳದ ಹಳೆ ಪುರಸಭಾ ಕಟ್ಟಡದ ನಾಮಫಲಕವನ್ನೊಮ್ಮೆ ನೀವು ನೋಡಿದರೆ ಅದರಲ್ಲಿ ಭಟ್ಕಳ ಪುರಸಭೆ ಎಂದು ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದ್ದು ಕೆಳಗೆ ಅತಿ ಸಣ್ಣ ಅಕ್ಷರದಲ್ಲಿ ಉರ್ದು ಭಾಷೆಯಲ್ಲೋ ಬರೆಯಿಸಲಾಗಿದೆ. ಇದು ಇಲ್ಲಿನ ಬಹುಸಂಖ್ಯಾತ ಉರ್ದು ಭಾಷಿಗರ ಅನುಕೂಲಕ್ಕೆ ಅಳವಡಿಸಲಾಗಿದ್ದು ಕಳೆದ ನೂರು ವರ್ಷಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ. ಭಟ್ಕಳದಲ್ಲಿ ಹಾಳುಮೂಳು ಹೆದ್ದಾರಿ ಕಾಮಗಾರಿ; ಸಂಪರ್ಕ ರಸ್ತೆಯೂ ಇಲ್ಲ, ಸರ್ವೀಸ್ ರಸ್ತೆಯೂ ಇಲ್ಲ ! ಇದು ಐಆರ್‍ಬಿ ಆಘಾತ ; ನಿಲ್ಲುವ ಹಾಗಿಲ್ಲ ಅಪಘಾತ https://www.sahilonline.net/ka/national-highway-works-in-bhatkal-no-connecting-road-no-service-road ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭವಾಗಿ 8 ವರ್ಷಗಳೇ ಕಳೆದಿವೆ. ಹೆದ್ದಾರಿ ಕಾಮಗಾರಿ ಮುಗಿಯುವ ಮುನ್ನವೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಹೆದ್ದಾರಿಯನ್ನು ಉದ್ಘಾಟಿಸಿ ವರ್ಷವೇ ಕಳೆದು ಹೋಗಿದೆ. ಆದರೆ ಭಟ್ಕಳದಲ್ಲಿ ಚತುಷ್ಪಥ ಹೆದ್ದಾರಿ ಎನ್ನುವುದು ಹಾಳುಮೂಳು ಕೆಲಸವಾಗಿಯೇ ಉಳಿದುಕೊಂಡಿದ್ದು, ನಿತ್ಯವೂ ನಾಗರಿಕರನ್ನು ಗೋಳು ಹೊಯ್ದುಕೊಳ್ಳುತ್ತಿದೆ. ಪ್ರತಿಭಟನೆಗಳು, ವಿಫಲ ಮಾತುಕತೆಗಳು, ಹಿಂಸಾಚಾರ, ಸಾವುಗಳ ನಡುವೆ ಕೃಷಿ ಕಾಯ್ದೆಗಳು ಮತ್ತು ರೈತರ ಆಂದೋಲನ ಸಾಗಿ ಬಂದ ದಾರಿ..... https://www.sahilonline.net/ka/amidst-protests-failed-negotiations-violence-deaths-leading-to-agrarian-laws-and-peasant-agitation-farm-laws-repeal 2020, ಜೂ.5: ಮೋದಿ ಸರಕಾರದಿಂದ ಬೆಲೆ ಭರವಸೆ ಕುರಿತು ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ;ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ 2020 ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ, 2020 ಹೀಗೆ ಮೂರು ನೂತನ ಕೃಷಿ ಮಸೂದೆಗಳ ಪ್ರಕಟನೆ ರೈತರ ಆಂದೋಲನವು ಮೋದಿ ಸರಕಾರವನ್ನು ಮಂಡಿಯೂರುವಂತೆ ಮಾಡಿದುಹೇಗೆ ? https://www.sahilonline.net/ka/how-the-farmers-movement-brought-the-modi-government-to-its-knees ಪ್ರಧಾನಿ ನರೇಂದ್ರ ಮೋದಿಯವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತನ್ನ ಸರಕಾರದ ನಿರ್ಧಾರವನ್ನು ಶುಕ್ರವಾರ ಬೆಳಗ್ಗೆ ಪ್ರಕಟಿಸಿದ್ದು ಇದು ಮುಂಬರುವ ದಿನಗಳಲ್ಲಿ ರೈತರ ಸುದೀರ್ಘ ಆಂದೋಲನಕ್ಕೆ ದೊರೆತ ಮಹಾನ್ ವಿಜಯ ಎಂದು ನೆನಪಿಲ್ಲಿರಲಿದೆ. ಕರ್ನಾಟಕದ ಐವರು ಪರಿಶಿಷ್ಟ ಯುವತಿಯರ ಸಾಹಸದ ಚಾರಣ.. https://www.sahilonline.net/ka/adventure-of-five-karnataka-young-women ಕಾರವಾರ : ರಾಜ್ಯದ ಐವರು ಯುವತಿಯರು ಹಿಮಾಲಯದ ಪರ್ವತ ಏರಿ, ಸಾವಿರಾರು ಕಿ.ಮೀ ಸೈಕ್ಲಿಂಗ್ ಮಾಡಿ ಬಳಿಕ ಅರಬ್ಬಿ ಸಮುದ್ರದಲ್ಲಿ ಕಯಾಕಿಂಗ್ ನಡೆಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ದಸರಾ ರಜೆಗೆ ಮುರುಡೇಶ್ವರವನ್ನು ತುಂಬಿಕೊಂಡ ಪ್ರವಾಸಿಗರು; ಕಡಲತಡಿಯಲ್ಲಿ ಜನವೋ ಜನ; ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಸಾಹಸ https://www.sahilonline.net/ka/bhatkal-dussehra-tourists-filled-with-murdeshwar-beach-police-adventure-to-cope-with-traffic-congestion ಸರಣಿ ರಜೆಯಿಂದಾಗಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಪ್ರವಾಸಿಗರಿಂದ ತುಂಬಿ ಹೋಗಿದೆ. ಕಡಲ ತಡಿಯಲ್ಲಿ ಕಣ್ಣು ಹಾಯಿಸಿದಷ್ಟೂ ಇರುವೆ ತುಂಬಿಕೊಂಡಂತೆ ಜನರೇ ಕಾಣಿಸುತ್ತಿದ್ದು, ಮುರುಡೇಶ್ವರ ಇನ್ನಷ್ಟು ಕಿರಿದಾದಂತೆ ಭಾಸವಾಗುತ್ತಿದೆ. ಭಟ್ಕಳ: 100 ಬೆಡ್ಡಿನ ಸರಕಾರಿ ಆಸ್ಪತ್ರೆಯಲ್ಲಿ ಬೆಡ್ಡು ಇದೆ ಕೋಣೆ ಇಲ್ಲ! ಮೀಟಿಂಗ್ ಹಾಲ್‍ನಲ್ಲಿ ರೋಗಿಗಳು ; ಕಟ್ಟಡಕ್ಕಾಗಿ ದಾನಿಗಳತ್ತ ಮುಖ https://www.sahilonline.net/ka/there-is-no-room-in-the-100-bed-bhatkal-government-hospita-patients-in-the-meeting-hall ತಾಲೂಕಿನ ಸರಕಾರಿ ಆಸ್ಪತ್ರೆ ಸುಧಾರಣೆ ಕಾಣುತ್ತಿದ್ದಂತೆಯೇ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಕ್ಕಪಕ್ಕದ ತಾಲೂಕುಗಳಿಂದಲೂ ರೋಗಿಗಳು ಭಟ್ಕಳ ಸರಕಾರಿ ಆಸ್ಪತ್ರೆಯತ್ತ ಮುಖ ಮಾಡಿದ್ದು, ಆಸ್ಪತ್ರೆ ಹೌಸ್‍ಫುಲ್ ಆಗಿದೆ.  ಭಟ್ಕಳ: ತೆವಳುತ್ತಲೇ ಸಾಗಿದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಉದ್ಘಾಟನೆ ಮುಗಿದರೂ ಕೆಲಸ ಮುಗಿಯಲೇ ಇಲ್ಲ https://www.sahilonline.net/ka/bhatkal-karwar-national-highway-works-inauguration-over-but-the-work-is-not-over ಯಾವುದೇ ದೇಶ, ರಾಜ್ಯ ಆಗಿರಲಿ, ಸುಸಜ್ಜಿತ ರಸ್ತೆ ಎನ್ನುವುದು ಅಭಿವೃದ್ಧಿಯ ಸಂಕೇತವಾಗಿದೆ. ಅದರಲ್ಲಿಯೂ ಹೆದ್ದಾರಿಗಳು ಆಧುನಿಕತೆಯ ಪ್ರತಿಬಿಂಬವಾಗಿವೆ. ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥ, ಷಟ್ಪಥಗಳಾಗಿ ದೇಶಕ್ಕೆ ಮೆರುಗನ್ನು ನೀಡಿವೆ. ಆದರೆ ಅದೇ ಹೆದ್ದಾರಿ ಕಾಮಗಾರಿ ಎನ್ನುವುದು ನಮ್ಮ ಕರಾವಳಿ ತೀರದಲ್ಲಿ ಆಯ ಕಟ್ಟಿನಲ್ಲಿ ಕುಳಿತಿರುವ ವ್ಯಕ್ತಿ, ಕಂಪೆನಿಗಳಿಗೆ ದುಡ್ಡು ಹೊಡೆಯೊಕೆ ಇರುವ ರಹದಾರಿಗಳಾಗಿ ಬದಲಾಗಿವೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ https://www.sahilonline.net/ka/bhatkal-mini-vidhan-saudha-people-forced-to-stand-on-stones-outside-windows-rooms-locked ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ವಿಧಾನಸೌಧದ ಸದ್ಯದ ಸ್ಥಿತಿಗತಿ! ಜನರ ಕನಸಿನ ಸೌಧ ಉದ್ಘಾಟನೆಗೊಂಡು ಒಂದು ವರ್ಷವೂ ಕಳೆದಿಲ್ಲ. ಆಗಲೇ ಇಡೀ ಕಟ್ಟಡದಲ್ಲಿ ಶಿಸ್ತು, ಸ್ವಚ್ಛತೆ ಎಲ್ಲವೂ ಕಣ್ಮರೆಯಾಗಿದೆ. ಸಾರ್ವಜನಿಕರಿಗೆ ನೀಡಲಾಗುವ ಸೇವೆಯ ರೀತಿನೀತಿಗಳು ಹಳಿ ತಪ್ಪಿದ್ದು, ಜನರು ಸೇವೆಯನ್ನು ಪಡೆಯಲು ಕಲ್ಲು ಏರಿ ನಿಲ್ಲಬೇಕಾಗಿದೆ.  ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು https://www.sahilonline.net/ka/bhatkal-goat-business-in-full-swing-government-ban-on-sacrifice-of-large-animals ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಹೆಚ್ಚಿನ ಜನರು ಕುರಿಗಳ ಬಲಿದಾನಕ್ಕೆ ಮುಂದಾಗಿದ್ದಾರೆ.  ಕೊರೊನಾ ಆತಂಕದ ಕಾಲದಲ್ಲಿ ಭಟ್ಕಳದ ಜನರಿಗೆ ಧೈರ್ಯ ತುಂಬುತ್ತಿರುವ ಮೊಬೈಲ್ ಕ್ಲಿನಿಕ್ https://www.sahilonline.net/ka/to-give-early-treatment-to-control-corona-tanzeem-mobile-clinic-providing-superb-door-to-door-service ಈ ಕೊರೊನಾ ಸೋಂಕು ಎಲ್ಲಿಂದ ಬಂತೋ ಗೊತ್ತಿಲ್ಲ. ಕೊರೊನಾ ಸೋಂಕು ಅಂಟಿಸಿಕೊಂಡ ಹಲವರು ಕೋವಿಡ್ ಸೆಂಟರ್ ಸೇರಿದರು. ಮತ್ತೆ ಕೆಲವರು ಮನೆಯಲ್ಲಿಯೇ ಕ್ವಾರೆಂಟೈನ್‍ಗೆ ಒಳಗಾದರು. ಇನ್ನೂ ಕೆಲವರು ಆಸ್ಪತ್ರೆ ಸೇರಿಕೊಂಡು ಜೀವ ಉಳಿಸಿಕೊಳ್ಳಲು ಹೆಣಗಾಡಿದರು. ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ https://www.sahilonline.net/ka/dialysis-patients-were-worried-on-govt-inaction-after-br-shetty-foundations-withdrawing-services-bhatkal-karnataka ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ಒದ್ದಾಡುತ್ತಿರುವ ಸರಕಾರದ ಮತ್ತೊಂದು ನಿರ್ಲಕ್ಷ್ಯತನ, ರಾಜ್ಯದ ಸಾವಿರಾರು ಡಯಾಲಿಸೀಸ್ ರೋಗಿಗಳನ್ನು ಆತಂಕಕ್ಕೆ ನೂಕಿದೆ. ಭಟ್ಕಳ: ಕೊರೊನಾ 2ನೇ ಅಲೆಯ ಟಫ್ ರೂಲ್ಸ್‍ಗೆ ಭಟ್ಕಳದಲ್ಲಿ ಬಸವಳಿದ ಆಟೋ ಚಾಲಕರ ಬದುಕು https://www.sahilonline.net/ka/tough-rules-for-corona-2nd-wave-bhatkal-auto-drivers-life-collapse ಕಳೆದ ವರ್ಷದ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಕೊರೊನಾ 2ನೇ ಅಲೆ ಬಡ ಆಟೋ ರಿಕ್ಷಾ ಚಾಲಕರ ಬೆನ್ನು ಹತ್ತಿದೆ. ಹೊತ್ತು ಮೂಡುವ ಮುನ್ನವೇ ಮನೆಯಿಂದ ಹೊರಗೆ ಬಂದು ದಿನವಿಡೀ ಊರೆಲ್ಲ ಸುತ್ತಾಡಿ, ಹೊತ್ತು ಮುಳುಗಿದ ಮೇಲೆ ಗೂಡು ಸೇರಿ ಮನೆಮಂದಿಯೊಂದಿಗೆ ಕುಳಿತು ಎದುರಿಗೆ ಅನ್ನದ ತಟ್ಟೆಯನ್ನು ಇಟ್ಟುಕೊಂಡು, ಅದರಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಿದ್ದ ಆಟೋ ಚಾಲಕರು, ಟಫ್ ರೂಲ್ಸ್ ಹೆಸರಿನಲ್ಲಿ ಸರಕಾರ 14 ದಿನಗಳ ಕಾಲ ಆಟೋ ಸೇವೆಗೆ ನಿಬರ್ಂಧ ವಿಧಿಸುತ್ತಿದ್ದಂತೆಯೇ ಅಕ್ಷರಶಃ ಮಾತು ಕಳೆದುಕೊಂಡಿದ್ದಾರೆ.  ಆಸ್ಪತ್ರೆಗಳಿಗೆ ಧಾವಂತ, ಬೃಹತ್ ಸಮಾವೇಶಗಳಿಂದ ಭಾರತದ ಕೋವಿಡ್ ಸ್ಥಿತಿ ಇನ್ನಷ್ಟು ಉಲ್ಬಣ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ https://www.sahilonline.net/ka/world-health-organization-warns-of-indias-covid-status-due-to-massive-gatherings ಭಾರತದಲ್ಲಿ ಜನರು ಅನಗತ್ಯವಾಗಿ ಆಸ್ಪತ್ರೆಗಳಿಗೆ ಧಾವಿಸುವ ಮೂಲಕ ಬೃಹತ್ ಸಮಾವೇಶಗಳು, ಹೆಚ್ಚು ಸಾಂಕ್ರಾಮಿಕವಾಗಿರುವ ರೂಪಾಂತರಿತ ತಳಿಗಳು ಮತ್ತು ಕಡಿಮೆ ಲಸಿಕೆ ನೀಡಿಕೆ ದರ ಇವುಗಳಿಂದಾಗಿ ಹೆಚ್ಚುತ್ತಿರುವ ಕೋವಿಡ್-19 ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಮಂಗಳವಾರ ಹೇಳಿದೆ. ಬ್ರಾಹ್ಮಣ ಯುವತಿಯರನ್ನು ಬ್ರಾಹ್ಮಣೇತರರು ಮದುವೆಯಾಗದಂತೆ ಸೂಚನೆ https://www.sahilonline.net/ka/instructions-against-non-brahmin-girls-marrying-non-brahmin ಬ್ರಾಹ್ಮಣ ಹೆಣ್ಣು ಮಕ್ಕಳು ಇತರೇ ಜಾತಿ ಧರ್ಮದ ಯುವಕರನ್ನು ವರಿಸುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಳಿ ರಚಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಶಿವಮೊಗ್ಗದಲ್ಲಿ ಕಳೆದ ಮಂಗಳವಾರ ಸಲಹೆ ನೀಡಿದ್ದಾರೆ. ಕಳಚಿ ಬಿದ್ದ ಭಟ್ಕಳ ಹೈಟೆಕ್ ಬಸ್ ನಿಲ್ದಾಣದ ಕಲ್ಪನೆ; ಉದ್ಘಾಟನೆ, ನಿರ್ವಹಣೆಗೂ ಉದಾಸೀನ ! https://www.sahilonline.net/ka/bhatkal-poor-condition-of-high-tech-bus-stand-even-before-inauguration ಮಣ್ಣುಗೂಡಿನಂತೆ ಇದ್ದ ಭಟ್ಕಳ ಬಸ್ ನಿಲ್ದಾಣದ ಕಟ್ಟಡ ಕುಸಿದು ಬೀಳುತ್ತಿದ್ದಂತೆಯೇ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಮಾತು ಕೇಳಿ ಬಂದಿತ್ತು. ಹೊಸ ಕಟ್ಟಡ ಮಾತ್ರವಲ್ಲ, ಮಹಾನಗರಗಳಲ್ಲಿರುವಂತೆ ಬಸ್ ನಿಲ್ದಾಣದಲ್ಲಿ ಸೌಕರ್ಯವನ್ನು ಒದಗಿಸುವ ಬಗ್ಗೆಯೂ ಚರ್ಚೆ ಚಾಲ್ತಿಗೆ ಬಂದಿತು. ನವಾಯತಿ ಭಾಷಾಶಾಸ್ತ್ರೀಯ ಸಂಶೋಧನಾ ಗ್ರಂಥ ಬಿಡುಗಡೆ https://www.sahilonline.net/ka/navayati-linguistic-research-book-release ಭಟ್ಕಳ : ಭಾಷಾಶಾಸ್ತ್ರ ಸಂಶೋಧಕಿ ಹರ್ಷ ಶಂಕರ್ ಭಟ್ ರಚಿಸಿದ "ನವಾಯತಿ ಆಫ್ ಭಟ್ಕಳ್ - ಎ ಶಾರ್ಟ್ ಡಿಸ್ಕ್ರಿಪ್ಟಿವ್ ಸ್ಟಡಿ" ಭಾಷಾಶಾಸ್ತ್ರೀಯ ಗ್ರಂಥವನ್ನು ನವಾಯತ ಸಮುದಾಯದ ಹಿರಿಯ ಅಬ್ದುಲ್ ರಹಮಾನ್ ಮೊಹ್ತೆಶಾಮ್ ಬಿಡುಗಡೆ ಮಾಡಿದರು. 69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್‌ ಪರೇಡ್‌ ನಡೆದಿತ್ತು. https://www.sahilonline.net/ka/tractor-parade-was-held-69-years-ago ನವದೆಹಲಿ, ಜ. 21: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿರುವ ರೈತರು ಜ. 26ರಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುತ್ತಿರುವುದು ತಿಳಿದೇ ಇದೆ. ಆದರೆ 69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವಂದು ನಡೆದ ಪರೇಡ್‌ನಲ್ಲಿ ಟ್ಯಾಕ್ಟರ್‌ಗಳು ಸಂಚರಿಸಿದ್ದವು! ಕರ್ನಾಟಕದಲ್ಲಿ ಕೊರೊನಾ ತಡೆಗೆ ಸರಕಾರದ ರಾತ್ರಿ ಕಫ್ರ್ಯೂ; ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು https://www.sahilonline.net/ka/corona-night-curfew-in-karnataka-shadow-on-marriage-programs-in-bhatkal ದೂರದ ಸೌದಿಅರೇಬಿಯಾ ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿರುವುದರ ನಡುವೆಯೇ, ಕರ್ನಾಟಕ ಸರಕಾರ ಹೊಸ ವರ್ಷ ಆಚರಣೆಗೆ ಒಂದು ವಾರ ಇರುವಂತೆಯೇ ರಾತ್ರಿ ಕಫ್ರ್ಯೂವನ್ನು ವಿಧಿಸಿದೆ. ಈ ಎರಡೂ ಬೆಳವಣಿಗೆ ಭಟ್ಕಳದಲ್ಲಿ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿದೆ. ಆರ್.ಎನ್.ಎಸ್. ನಿಧನ; ಅನಾಥವಾಗಿರುವ ಮುರುಡೇಶ್ವರ https://www.sahilonline.net/ka/murudeshwar-is-the-orphan-of-the-death-of-rn-shetty ಭಟ್ಕಳ: ನವ ಮುರ್ಡೇಶ್ವರದ ನಿರ್ಮಾತೃ ತಮ್ಮ ವಿಶಿಷ್ಟ ಸಾಧನೆಯಿಂದಾಗಿ ವಿಶ್ವದಲ್ಲಿಯೇ ಗುರುತಿಸಿಕೊಂಡಿರುವ ರಾಮನಾಗಪ್ಪ ಶೆಟ್ಟಿ (ಡಾ. ಆರ್. ಎನ್. ಶೆಟ್ಟಿ) ಗುರುವಾರ ನಸುಕಿನ ವೇಳೆ ಹೃದಯಾಘಾತದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿದನರಾಗಿದ್ದಾರೆ.   ಭಟ್ಕಳ: ಜಿಲ್ಲೆಯ ದೊಡ್ಡ ಪಂಚಾಯತ ಹಿರಿಮೆಯ ಶಿರಾಲಿಯಲ್ಲಿ 2 ಕುಟುಂಬದ ನಡುವಿನ ರಾಜಕೀಯ ಕಾಳಗಕ್ಕೆ ಕೊನೆ ಇಲ್ಲ ! https://www.sahilonline.net/ka/bhatkal-shirali-biggest-panchayat-of-uttara-kannada-end-of-political-war-between-two-families ಉತ್ತರಕನ್ನಡ ಜಿಲ್ಲೆಯಲ್ಲಿ 35 ಸದಸ್ಯರು ಇರುವ ಶಿರಾಲಿ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ ಎಂಬ ಹಿರಿಮೆಗೆ ಪಾತ್ರವಾಗಿದೆ. ಇಲ್ಲಿ ಗ್ರಾಮ ಪಂಚಾಯತ ಚುನಾವಣೆ ಎಂದರೆ ಅಕ್ಷರಶಃ ಎರಡು ಕುಟುಂಬದವರ ನಡುವಿನ ರಾಜಕೀಯ ಕಾದಾಟ!  ಭಟ್ಕಳ: ಉತ್ತರಕನ್ನಡಕ್ಕೆ ದಂಡೆತ್ತಿ ಬಂದವರು ಇನ್ನೂ ದಡ ಸೇರಲೇ ಇಲ್ಲ; ದುಡಿದುಡಿದು ದಣಿವಾದರೂ ದುಂಡಗಾಗಲೇ ಇಲ್ಲ ! https://www.sahilonline.net/ka/those-who-came-to-uttarakkanna-have-not-yet-reached-the-shore-tired-and-tired-but-never-round ಇದು ಕಾಡಿನ ನಡುವಿನ ಮನುಷ್ಯರ ರೋಧನ ! ರಾಜರ ದಂಡಿನೊಂದಿಗೆ ದಂಡೆತ್ತಿ ಬಂದ ಮರಾಠಿಗರು ಕಾಡಿನಲ್ಲಿಯೇ ತಲೆ ಮರೆಸಿಕೊಂಡು ಶತಮಾನಗಳೇ ಉರುಳಿ ಹೋಗಿವೆ. ಬ್ರಿಟೀಷರ ಸರ್ವೇ ಕಾರ್ಯಕ್ಕೆ ಹೆಗಲುಕೊಟ್ಟು ಕಾಡು ಪ್ರದೇಶವನ್ನು ಬಳುವಳಿಯಾಗಿ ಪಡೆದು, ಕಾಡಿನಲ್ಲಿಯೇ ಬೇಸಾಯ ಮಾಡಿ ಕುಮ್ರಿ ಮರಾಠಿಗಳಾದ ಮರಾಠಿಗರು ದುಡಿದುಡಿದು ದಣಿವಾಗಿದ್ದಾರೆ. ಕಾಡಿನಿಂದ ನಾಡಿಗೆ ಅಳುಕುತ್ತಲೇ ಹೆಜ್ಜೆ ಹಾಕುತ್ತಿರುವ ಮರಾಠಿಗಳ ಪಾದ ಸವೆದು ಹೋಗಿದೆ. ಇಂತಹ ಮರಾಠಿಗಳ ಪಾಲಿಗೆ ಸಾಮಾಜಿಕ, ರಾಜಕೀಯ ಆಸರೆ ಎಂದರೆ ಊರ ನಡುವಿನ ಪಂಚಾಯತಗಳು. ಆದರೆ ಅಲ್ಲಿ ಕುಮ್ರಿ ಮರಾಠಿಗರು ಅನುಭವಿಸುತ್ತಿರುವ ಸಂಕಟ ಬೇರೆ ತೆರನಾದದ್ದು. ಉತ್ತರಕನ್ನಡ ಕಾಂಗ್ರೆಸ್‍ನಲ್ಲಿ ಧೂಳೆಬ್ಬಿಸಿದ ಡಿಕೆಶಿ ನಡೆ; ಕುಮಟಾ, ಶಿರಸಿಗೆ ಹೊಸ ಅಭ್ಯರ್ಥಿ ಸಾಧ್ಯತೆ ; ದೇಶಪಾಂಡೆ ನಿಗೂಢ ಹೆಜ್ಜೆ https://www.sahilonline.net/ka/d-k-shivkumar-move-on-uttara-kannada-congress-new-candidates-likely-for-kumta-sirsi ನಿವಾರ್, ಬುರೆವಿಯಂತಹ ಚಂಡಮಾರುತಗಳು ದೇಶದ ವಿವಿಧ ರಾಜ್ಯಗಳಲ್ಲಿ ಸದ್ದು ಮಾಡುತ್ತಿದ್ದರೂ ಉತ್ತರಕನ್ನಡ ಜಿಲ್ಲೆಗೆ ಅಂತಹ ಹಾನಿಯೇನೂ ಆಗಿಲ್ಲ. ಆದರೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಜಿಲ್ಲೆಗೆ ಬಂದು ಕಾಂಗ್ರೆಸ್‍ನಲ್ಲಿ ಧೂಳೆಬ್ಬಿಸಿ ಹೋಗಿದ್ದಾರೆ. ಗ್ರಾಮ ಪಂಚಾಯತ ಚುನಾವಣೆಯ ಹೊತ್ತಿಗೇ ಮುಂದಿನ ವಿಧಾನಸಭಾ ಚುನಾವಣೆಗೂ ಕಾಂಗ್ರೆಸ್ ಅಡಿಗಲ್ಲನ್ನು ಇರಿಸಿದ್ದು, ಪ್ರಸಕ್ತವಾಗಿ ಜಿಲ್ಲಾ ಕಾಂಗ್ರೆಸ್‍ನಲ್ಲಿ ನಡೆದಿರುವ ಬೆಳವಣಿಗೆಗಳು ರಾಜಕೀಯ ಆಸಕ್ತರಲ್ಲಿ ತೀವೃ ಕುತೂಹಲ ಕೆರಳಿಸಿದೆ.  ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ ! https://www.sahilonline.net/ka/the-heble-area-of-bhatkal-turned-into-a-pile-of-rubbish-and-dirt ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ಅಲ್ಲಿಂದ ಬೇರೆ ಕಡೆ ಸಾಗಿಸುವ ಕಾರ್ಯಕ್ಕೆ ಇದ್ದಕ್ಕಿದ್ದಂತೆ ತಡೆ ಬಿದ್ದಿದ್ದು, ಹೆಬಳೆ ಈಗ ಕಸ, ತ್ಯಾಜ್ಯಗಳ ತೊಟ್ಟಿಯಾಗುವ ಹಂತ ತಲುಪಿದೆ. ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್ ಭಟ್ಕಳದಲ್ಲಿ ಆನ್‍ಲೈನ್ ಮಾರಾಟವೇ ಜೋರು ! https://www.sahilonline.net/ka/online-shopping-has-intensified-in-bhatkal-on-the-occasion-of-diwali ದೀಪದ ಹಬ್ಬ ದೀಪಾವಳಿಯ ಸಡಗರ ಮನೆಯ ಅಂಗಳದಲ್ಲಿ ಹಾಗೆಯೇ ಉಳಿದುಕೊಂಡಿದೆ. ಮನೆಯ ಮುಂದೆ ಹೊತ್ತು ಮುಳುಗುತ್ತಿದ್ದಂತೆಯೇ ಆಕಾಶ ಬುಟ್ಟಿ ಬೆಳದಿಂಗಳನ್ನು ಚೆಲ್ಲುತ್ತಿದ್ದರೆ, ಪುಟ್ಟ ಮಕ್ಕಳು ಪಟಾಕಿ ಸಿಡಿಸುತ್ತ ಹಬ್ಬದ ಆಚರಣೆಯ ಕಾಲಾವಧಿಯನ್ನು ವಿಸ್ತರಿಸುತ್ತಲೇ ಇದ್ದಾರೆ. ಇತ್ತ ನಾವು ಖರೀದಿಯ ವಿಷಯಕ್ಕೆ ಬಂದರೆ ಪಟ್ಟಣದ ಅಂಗಡಿಗಳಿಗಿಂತ ಆನ್‍ಲೈನ್ ವ್ಯಾಪಾರ, ವಹಿವಾಟುಗಳು ಜೋರಾಗಿ ನಡೆದಿರುವುದು ಬೆಳಕಿಗೆ ಬಂದಿದೆ. ದೀಪಾವಳಿ ಆಚರಣೆಗಾಗಿ ಮುರುಡೇಶ್ವರದತ್ತ ಪ್ರವಾಸಿಗರು; ಸೆಖೆ ಮರೆಯಲು ಸ್ಥಳೀಯರೂ ತೀರಕ್ಕೆ ; ಸೌಕರ್ಯ ಸಿಗದೇ ನಿರಾಸೆ https://www.sahilonline.net/ka/tourists-visiting-murdeshwar-for-the-diwali-celebration-natives-ashore-to-forget-the-seque-let-down-without-comfort ದೀಪದ ಹಬ್ಬ ದೀಪಾವಳಿ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಹೊಸ ಕಳೆಯನ್ನು ತಂದು ಕೊಟ್ಟಿದೆ. ಸರಣಿ ರಜೆಯನ್ನು ಸವಿಯಲು ಸಹಸ್ರಾರು ಪ್ರವಾಸಿಗರು ಮುರುಡೇಶ್ವರದತ್ತ ಮುಖ ಮಾಡಿದ್ದು, ಮುರುಡೇಶ್ವರ ಇದ್ದಕ್ಕಿದ್ದಂತೆಯೇ ಉಬ್ಬಿ ಹೋಗಿದೆ. ಆದರೆ ಸೌಕರ್ಯದ ಕೊರತೆಯಿಂದಾಗಿ ಮುರುಡೇಶ್ವರ ತೀರದುದ್ಧಕ್ಕೂ ನಿರಾಸೆ ಮಡುಗಟ್ಟಿದೆ.  ಭಟ್ಕಳದ ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಕೊನೆಗೂ ಸಿಕ್ಕಿದೆ ಪರಿಹಾರ ! https://www.sahilonline.net/ka/bhatkal-muncipality-find-superb-solution-to-the-problem-of-meat-waste-disposal ವರ್ತಮಾನದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಜಗತ್ತನ್ನು ಕಾಡುತ್ತಲೇ ಇದ್ದು, ವಿಲೇವಾರಿ ಕಾರ್ಯಕ್ಕೆ ಆಧುನಿಕತೆಯ ಲೇಪ ಹಚ್ಚುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ಜೊತೆಯಾಗಿಯೇ ಸಾಗಿದೆ. ಸಮರ್ಪಕ ಘನ ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯದ ಗಮನ ಸೆಳೆದಿರುವ ಭಟ್ಕಳ ಪುರಸಭೆ ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಸಾಗಿದ್ದು, ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಭಟ್ಕಳದಿಂದಲೇ ತೊಲಗಿಸುವ ಸಾಹಸಕ್ಕೆ ಕೈ ಹಾಕಿದೆ.  ಉಡುಪಿಯಲ್ಲಿ ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧಗೊಂಡಿದೆ ಕೊಠಡಿ https://www.sahilonline.net/ka/room-ready-for-collection-of-kovid-vaccine-in-garments ಉಡುಪಿ : ಇಡೀ ವಿಶ್ವವನ್ನೇ ಭೀಕರವಾಗಿ ಕಾಡುತ್ತಿರುವ, ಇದುವರೆಗೆ ಕೋಟ್ಯಾಂತರ ಮಂದಿಯನ್ನು ಆವರಿಸಿ, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ, ಕೋವಿಡ್-19 ಮಹಾಮಾರಿಗೆ ಕಡಿವಾಣ ಹಾಕಲು ಕೊರೊನಾ ಆರಂಭವಾದ ಕಾಲದಿಂದಲೂ, ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಪ್ರಯೋಗಗಳು ನಡೆಯುತ್ತಲೇ ಇವೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಕೊರೋನಾ ಲಸಿಕೆ ಪ್ರಯೋಗದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದೆ. ಪ್ರಸ್ತುತ ಲಸಿಕೆಯ ಅಂತಿಮ ಸಿದ್ದತೆಯಲ್ಲಿದ್ದು, ಶೀಘ್ರದಲ್ಲಿ ವಿಶ್ವದಾದ್ಯಂತ ಆರಂಭಿಕ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹ ಮಾಡಲು ಅಗತ್ಯವಿರುವ ಲಸಿಕಾ ಕೊಠಡಿ (ವಾಕ್ ಇನ್ ಕೂಲರ್)ಯನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ. ಪುರಸಭೆಯ ಆಡಳಿತದಲ್ಲಿ ಪಾರದರ್ಶಕತೆಯೇ ನನ್ನ ಪ್ರಥಮ ಆಧ್ಯತೆ https://www.sahilonline.net/ka/transparency-is-my-number-one-priority-in-municipal-governance ತಾವು ಹಿಂದೆ ಅಧಿಕಾರದಲ್ಲಿದ್ದಾಗ ಭಟ್ಕಳವನ್ನು ಸಿಂಗಾಪುರ ಮಾಡುತ್ತೇನೆ ಎಂದು ಹೇಳಿದ್ದೀರಿ ಆ ಕಾರ್ಯ ಈ ಅವಧಿಯಲ್ಲಿ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ಜನರ ಸಹಕಾರ ಮತ್ತು ದೇವರ ಆಶೀರ್ವಾದ ಇದ್ದರೆ ಭಟ್ಕಳವನ್ನು ಸಿಂಗಾಪುರದ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಎಂದರು.  ಭಟ್ಕಳದಲ್ಲಿ ಭತ್ತದ ಕೊಯ್ಲಿಗೆ ಮಳೆಯ ಕಾಟ; ನೀರಿನಲ್ಲಿ ತೇಲಿದ ತೆನೆ; ಬಿಸಿಲಿಗಾಗಿ ರೈತನ ಮೊರೆ https://www.sahilonline.net/ka/rainfall-for-paddy-harvest-in-bhatkal-floated-in-the-water-farmers-cries-for-sunburn ನವೆಂಬರ್ ತಿಂಗಳು ಕಾಲಿಟ್ಟರೂ ಮಳೆಯ ಕೀಟಲೆ ಕಡಿಮೆಯಾಗಿಲ್ಲ. ದೀಪಾವಳಿ ಬರುವುದರ ಒಳಗಾಗಿ ಕೊಯ್ಲು ಕಾರ್ಯವನ್ನು ಮುಗಿಸಲು ಗದ್ದೆಗೆ ಇಳಿದಿರುವ ರೈತನಿಗೆ ಮತ್ತದೇ ಮಳೆಯ ಚಿಂತೆ ಕಾಡಲಾರಂಭಿಸಿದೆ.  “ಭಾರತ ದೇಶ, ವಿದೇಶಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.” https://www.sahilonline.net/ka/india-is-calling-out-to-foreign-and-foreign-tourists ಪ್ರವಾಸ ಇದು ಮಾನವನಲ್ಲಿಷ್ಟೇ ಅಲ್ಲ ಪಕ್ಷಿಗಳು, ಮೀನುಗಳು, ಪ್ರತಿಯೊಂದು ಜೀವಿಯಲ್ಲಿಯೂ ಕಂಡು ಬರುವ ವಿಶೇಷ ಗುಣ. ಬಹುಶಃ ಆದಿಜೀವಿಯ ಅಲೇಮಾರಿ ಲಕ್ಷಣವೇ ಇದಕ್ಕೆ ನಾಂದಿಯಾಗಿರಬೇಕು. ತಬ್ಲಿಗಿ ವೈರಸ್, ಪಾಕಿಸ್ತಾನಿ ಪಿಶಾಚಿಗಳು: ಕನ್ನಡ ಮಾಧ್ಯಮಗಳ 'ದ್ವೇಷ ಪ್ರೇಮ'ದ ಹಲವು ಮುಖಗಳು https://www.sahilonline.net/ka/tabligi-virus-pakistani-ghouls-many-faces-of-kannada-hate-love ವಕೀಲರು, ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನೊಳಗೊಂಡ ಸಂಘಟನೆ ‘ದಿ ಕ್ಯಾಂಪೇನ್ ಅಗೇನ್‌ಸ್ಟ್ ಹೇಟ್ ಸ್ಪೀಚ್’ (ಸಿಎಎಚ್‌ಎಸ್) ಕನ್ನಡದ ಮಾಧ್ಯಮಗಳು ಇತ್ತೀಚಿನ ಬೆಂಗಳೂರು ಹಿಂಸಾಚಾರಗಳನ್ನು ವರದಿ ಮಾಡುವಾಗ ದ್ವೇಷದ ಮಾತುಗಳನ್ನಾಡಿದ್ದ ಸಂದರ್ಭಗಳನ್ನು ದಾಖಲೀಕರಿಸಿರುವ ವ್ಯಾಪಕ ವರದಿಯೊಂದನ್ನು ಸಿದ್ಧಪಡಿಸಿದೆ. ಮಂಗಳೂರಿನಲ್ಲಿ‌ ಎರಡು ಕೈಯಲ್ಲಿ ಬರೆದು ವಿಶ್ವ ದಾಖಲೆ ಬರೆದ ಸಾಧಕಿ. https://www.sahilonline.net/ka/she-is-a-world-record-holder-writing-in-two-hands-in-mangalore ಮಂಗಳೂರು : ಇವತ್ತಿನ‌ ಡಿಜಿಟಲ್ ಯುಗದಲ್ಲಿ ಎಲ್ಲರಿಗೂ ಬರೆಯುವುದು ಮರತೇ ಹೋಗಿದೆ. ಕೈಯಲ್ಲಿ ನಾಲ್ಕಕ್ಷರ ಬರೆಯಲು ಹೋದರೂ ಸರಿಯಾಗಿ ಬರೆಯಲು ಆಗೋದಿಲ್ಲ. ಆದರೆ ಮಂಗಳೂರಿನ ಹುಡುಗಿ ಎರಡೂ ಕೈಗಳಲ್ಲಿ ಬರೆದು ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಪ್ರಜಾಸತ್ತೆಯ ಬಂಧನ! https://www.sahilonline.net/ka/arrest-of-the-democracy ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ಕತ್ತರಿಸಿದವರು, ಶಂಭೂಕನ ತಲೆ ಕತ್ತರಿಸಿದ ಮನಸ್ಥಿತಿ ಮತ್ತು ಭಗತ್ ಸಿಂಗ್‌ನಂತಹ ಯುವ ವಿದ್ಯಾರ್ಥಿಗಳನ್ನು ನೇಣಿಗೇರಿಸಿದ ಮನಸ್ಥಿತಿ ಜಂಟಿಯಾಗಿ ದೇಶವನ್ನು ಆಳತೊಡಗಿವೆ. ಪರಿಣಾಮವಾಗಿ, ದೇಶದ ಭವಿಷ್ಯದ ಸೊತ್ತಾಗಿರುವ ವಿದ್ಯಾರ್ಥಿಗಳು ಹೆಬ್ಬೆರನ್ನು ಮಾತ್ರವಲ್ಲ, ಕೊರಳನ್ನೇ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಜಾಸತ್ತಾತ್ಮಕವಾಗಿ ಬೀದಿಗಿಳಿದು ಪ್ರತಿಭಟಿಸಿದ, ಈ ದೇಶದ ಜಾತ್ಯತೀತ ವೌಲ್ಯಗಳ ಪರವಾಗಿ ಧ್ವನಿಯೆತ್ತಿದ ಯುವಕರು ‘ದೇಶದ್ರೋಹಿ’ಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದ ಮೇಲೆ, ಈ ದೇಶವನ್ನು ಪ್ರಜಾಸತ್ತಾತ್ಮಕವಾದ ವ್ಯವಸ್ಥೆ ಆಳುತ್ತಿದೆ ಎಂದು ನಂಬುವುದಾದರೂ ಹೇಗೆ? ‘ಖಾಸಗಿ ಸಾಕು; ಸರ್ಕಾರಿ ಶಾಲೆ ಬೇಕು’: ಬದಲಾಯ್ತು ಉಡುಪಿ ಪೋಷಕರ ಮನಸ್ಥಿತಿ https://www.sahilonline.net/ka/its-a-private-pet-government-school-should-be-changed ‘ಖಾಸಗಿ ಸಾಕು; ಸರ್ಕಾರಿ ಶಾಲೆ ಬೇಕು’: ಬದಲಾಯ್ತು ಉಡುಪಿ ಪೋಷಕರ ಮನಸ್ಥಿತಿ ಬ್ಯಾರಿ ಭಾಷೆಗೆ ಸ್ವಂತ “ಬ್ಯಾರಿ ಲಿಪಿ” ಬಿಡುಗಡೆ https://www.sahilonline.net/ka/barry-released-its-own-barry-script-for-the-language ಮಂಗಳೂರು :  ದ್ರಾವಿಡ ಭಾಷೆಯಾದ ಬ್ಯಾರಿ ಕಳೆದ ಹಲವು ಶತಮಾನಗಳಿಂದ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ಕರಾವಳಿ ಪ್ರದೇಶಗಳಲ್ಲಿ ಸುಮಾರು ಇಪ್ಪತ್ತು ಲಕ್ಷದಷ್ಟು ಜನರ ಮಾತೃ ಭಾಷೆಯಾಗಿ ಹಾಗೂ ವ್ಯಾವಹಾರಿಕ ಭಾಷೆಯಾಗಿ ತನ್ನ ಅನನ್ಯತೆ, ವಿಶಿಷ್ಟತೆ ಮತ್ತು ಸರಳ ಪದವಿನ್ಯಾಸಗಳಿಂದ ಜನರ ನಡುವಿನ ಸಂಪರ್ಕಕೊಂಡಿಯಾಗಿ ಅಚ್ಚಳಿಯದೆ ಉಳಿದಿದೆ. 5 ಲಕ್ಷ ಚಂದಾದಾರ ಸಂಖ್ಯೆಯ ಗಡಿ ದಾಟಿದ ಭಟ್ಕಳದ ಸಾಹಿಲ್ ಆನ್ ಲೈನ್; ಇದು ಗುರಿಯಲ್ಲ ಮೈಲಿಗಲ್ಲು ಎಂದ ಸೈಯ್ಯದ್ ಖಲೀಲ್ https://www.sahilonline.net/ka/bhatkal-uttara-kannada-and-coastal-karnataka-media-sahilonline-youtube-channel-crossed-5-lakh-subscribers ಭಟ್ಕಳ: ಕಳೆದ 5 ವರ್ಷಗಳಿಂದ  ಕರಾವಳಿ ಕರ್ನಾಟಕದ ಸೇರಿದಂತೆ ರಾಜ್ಯ, ರಾಷ್ಟ್ರೀಯ ಮತ್ತು ಜಾಗತಿಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಸಾಹಿಲ್ ಆನ್ ಲೈನ್ ಯೂಟ್ಯೂಬ್ ಚಾನೆಲ್ ನ ಚಂದಾದಾರರ ಸಂಖ್ಯೆ 5ಲಕ್ಷ ದಾಟಿದ್ದು ಸಾಹಿಲ್ ಆನ್ ಲೈನ್ ಯೂಟ್ಯೂಬ್ ಚಾನೆಲ್ ಜನಪ್ರೀಯತೆಯನ್ನು ಎತ್ತಿ ತೋರಿಸುತ್ತಿದೆ ಎಂದು  ಸಾಹಿಲ್ ಮೀಡಿಯಾ ಮತ್ತು ಪಬ್ಲಿಷಿಂಗ್ ಸೊಸೈಟಿಯ ಅಧ್ಯಕ್ಷ  ಎಸ್.ಎಂ. ಸೈಯದ್ ಖಲೀಲ್-ಉರ್-ರೆಹಮಾನ್ ಸಂತೋಷ ವ್ಯಕ್ತಪಡಿಸಿದ್ದಾರೆ.   ಅಂಬೇಡ್ಕರ್ ರನ್ನು ಅರ್ಥ ಮಾಡಿಕೊಂಡರೆ ದಲಿತರು ಆರೆಸ್ಸೆಸ್ಸನ್ನು ತೊರೆಯುತ್ತಾರೆ-ಮಾಜಿ ಕರಸೇವಕ ಭಂವರ ಮೇಘವಂಶಿ https://www.sahilonline.net/ka/if-ambedkar-understands-dalits-will-quit-rss 1980ರ ದಶಕದಲ್ಲಿ ತನ್ನ ಹದಿಹರೆಯದಲ್ಲಿಯೇ ಆರೆಸ್ಸೆಸ್‌ಗೆ ಸೇರ್ಪಡೆಗೊಂಡು ಅದರ ಹಿಂದು ರಾಷ್ಟ್ರ ಸಿದ್ಧಾಂತದ ಪ್ರಬಲ ಬೆಂಬಲಿಗನಾಗಿ ಬೆಳೆದಿದ್ದ ಭಂವರ ಮೇಘವಂಶಿ ಅಂತಿಮವಾಗಿ ಸಂಘಟನೆಯಲ್ಲಿನ ಜಾತಿ ತಾರತಮ್ಯದಿಂದ ಬೇಸತ್ತು ಅದರಿಂದ ಹೊರಗೆ ಬಂದಿದ್ದಾರೆ. ಆರೆಸ್ಸೆಸ್‌ನಲ್ಲಿಯ ತನ್ನ ಅನುಭವಗಳ ಕುರಿತು ಅವರು ಹಿಂದಿಯಲ್ಲಿ ಬರೆದಿರುವ ‘ಮೈ ಏಕ್ ಕರಸೇವಕ್ ಥಾ ’ ಎಂಬ ಪುಸ್ತಕ 2019ರಲ್ಲಿ ಪ್ರಕಟಗೊಂಡಿದ್ದು,ಈ ವರ್ಷ ಇಂಗ್ಲಿಷ್ ಭಾಷೆಗೆ ಅನುವಾದಗೊಂಡು ‘ಐ ಕುಡ್ ನಾಟ್ ಬಿ ಹಿಂದು:ದಿ ಸ್ಟೋರಿ ಆಫ್ ಎ ದಲಿತ್ ಇನ್ ದಿ ಆರೆಸ್ಸೆಸ್ ’ಎಂಬ ಶೀರ್ಷಿಕೆಯಡಿ ಪ್ರಕಟಗೊಂಡಿದೆ. ಈಗ ಎಡರಂಗದೊಂದಿಗೆ ಗುರುತಿಸಿಕೊಂಡಿರುವ ಅವರು ಪಿಯುಸಿಎಲ್‌ನ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದಾರೆ. ಮಾನವ ಹಕ್ಕುಗಳ ಗುಂಪುಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಸಂವಿಧಾನಬದ್ಧ ಹಕ್ಕಿನಿಂದ ವಂಚಿತರಾಗುತ್ತಿರುವ ಗೊಂಡ ಸಮುದಾಯ https://www.sahilonline.net/ka/gonda-community-deprived-of-constitutional-right ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗೊಂಡ ಜಾತಿಯವರಿಗೆ ಪರಿಶಿಷ್ಟ ವರ್ಗದ ಪ್ರಮಾಣ ಪತ್ರ ನೀಡುವುದನ್ನು ಸ್ಥಗಿತಗೊಳಿಸಿರುವುದರಿಂದ, ಸಂವಿಧಾನಬದ್ಧ ಹಕ್ಕಿನಿಂದ ವಂಚಿತರಾಗಿದ್ದಾರೆ. ನೈಜ ಗೊಂಡ ಜಾತಿಯವರಿಗೆ ಅನ್ಯಾಯವನ್ನು ಸರಿದೂಗಿಸುವಲ್ಲಿ ಸರಕಾರ ದಿಟ್ಟ ಕ್ರಮ ಜರುಗಿಸುವುದು ಅವಶ್ಯವಿದೆ ಎಂದು ನ್ಯಾಯಾವಾದಿ ಹಾಗೂ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅಭಿಪ್ರಯಾಪಟ್ಟಿದ್ದಾರೆ.  ಭಟ್ಕಳ: ಆಡಳಿತ ವಿಕೇಂದ್ರೀಕರಣಕ್ಕೆ ಕೊಳ್ಳಿ ಇಟ್ಟ ಸರಕಾರ; ಸ್ಥಳೀಯಾಡಳಿತದಲ್ಲಿ ಅಧಿಕಾರಿಗಳದ್ದೇ ದರ್ಬಾರ್; ಊರು, ಕೇರಿಯನ್ನು ಆವರಿಸಿದ ಕೇಡುಗಾಲ https://www.sahilonline.net/ka/govt-officials-runs-bhatkal-muncipality-elected-representatives-only-for-name-sake ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದು 2 ವರ್ಷಗಳು ಉರುಳಿದರೂ, ಆಡಳಿತ ವ್ಯವಸ್ಥೆ ಹಳಿಗೆ ಬರದೇ ಹದಗೆಟ್ಟು ಹೋಗಿದೆ. ಸರಕಾರವೇ ತನ್ನ ನಿರ್ಲಕ್ಷ್ಯ ಧೋರಣೆಯಿಂದ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಗೆ ಕೊಳ್ಳಿ ಇಟ್ಟಿದ್ದು, ಬರೆಗೆಟ್ಟು ಹೋಗುತ್ತಿರುವ ಊರುಗಳ ಸಾಲಿಗೆ ಭಟ್ಕಳವೂ ಸೇರಿದೆ. “ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೊ ಮಹೆಶ್ವರ” https://www.sahilonline.net/ka/guru-brahma-guru-vishnu-guru-devo-maheswara ಶ್ರೇಷ್ಠ ಶಿಕ್ಷಣ ಚಿಂತಕರು ಡಾ. ರಾಧಾಕೃಷ್ಣನ್ ಇವರ ಪ್ರಕಾರ ಶಿಕ್ಷಣದ ಅರ್ಥ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವುದು. ಶಿಕ್ಷಣ ಇದು ಬೌದ್ಧಿಕ ಶಕ್ತಿಯನ್ನು ತರಬೇತಿ ಪಡಿಸುವುದು ಮಾತ್ರವಲ್ಲದೇ ಮಕ್ಕಳ ಮನಸ್ಸನ್ನು ಶುದ್ಧಗೊಳಿಸಿ, ಆಧ್ಯಾತ್ಮ ಭಾವನೆಯನ್ನು ಪ್ರಚೋದಿಸಬೇಕು. ವ್ಯಕ್ತಿಯ ಪ್ರಗತಿಯೇ ಶಿಕ್ಷಣದ ಪ್ರಮುಖ ಮುತವರ್ಜಿಯಾಗಬೇಕು. ಶಿಕ್ಷಣವು ಆಲೋಚನಾತ್ಮಕವಾದ, ವಿವರಣಾತ್ಮಕವಾದ ಮನಸ್ಸನ್ನು ರೂಪಿಸಬೇಕು. ವಾಟ್ಸಪ್ ನಲ್ಲಿ ಹರಿದಾಡುತ್ತಿದೆ ಈ ಸುದ್ದಿ:  ಮೀನು ಮಾರುಕಟ್ಟೆ ಆರಂಭ ವಿಳಂಬ; ರಸ್ತೆ ಇಕ್ಕೆಲಗಳಲ್ಲೇ ಮೀನು ತ್ಯಾಜ್ಯ, ಕೊರೋನಾಕ್ಕಿಂತ ಭೀಕರ ರೋಗದ ಆತಂಕದಲ್ಲಿ ಭಟ್ಕಳ https://www.sahilonline.net/ka/news-on-whatsapp-news-fish-waste-on-the-roadside-bhatkala-in-the-fear-of-a-disease-worse-than-the-corona ಸಾಮಾಜಿಕ ಜಾಲಾತಾಣಗಳು ಬಂದಾಗಿನಿಂದ ಸಾಮಾನ್ಯ ಜನರು ಸಮಸ್ಯೆಗಳನ್ನು ನೇರವಾಗಿ ವಾಟ್ಸಪ್ ಮೂಲಕ ಅಧಿಕಾರಗಳ ಗಮನಕ್ಕೆ ತರುತ್ತಿದ್ದಾರೆ. ಇಂತಹದ್ದೊಂದು ಸಮಸ್ಯೆಯ ವರದಿಯೊಂದು ವಾಟ್ಸಪ್ ನಲ್ಲಿ ಇಂದು ಹರಿದಾಡುತ್ತಿದೆ. ವಿಷಯದ ಗಂಭೀರತೆಯನ್ನು ಮನಗಂಡು ನಾವು ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.(ಸಂ)   ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಿಭಿನ್ನ ಸ್ವರೂಪದ ಪೂರ್ವ ಘಟ್ಟದ ಕಳಿಂಗ ಕಪ್ಪೆ ಪತ್ತೆ https://www.sahilonline.net/ka/discovery-of-a-different-form-of-eastern-kalinga-frog-in-the-western-ghats ಭಾರತದ ಪೂರ್ವ ಘಟ್ಟದಲ್ಲಿ ಮಾತ್ರ ಕಾಣಸಿಗುತ್ತದೆಂದು ನಂಬಲಾಗಿದ್ದ ಕಳಿಂಗ ಕಪ್ಪೆ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಪತ್ತೆಯಾಗಿದೆ. ಜೀವವೈವಿಧ್ಯ ಸಂಶೋಧಕ ಶಿರಸಿ ತಾಲೂಕಿನ ವರ್ಗಾಸರದ ಅಮಿತ ಹೆಗಡೆ ಹಾಗು ತಂಡ ಈ ಪತ್ತೆ ಕಾರ್ಯ ನಡೆಸಿದ್ದಾರೆ. ವಿದ್ಯಾರ್ಥಿ ಸಮುದಾಯಕ್ಕೆ ವರದಾನವಾಗುತ್ತಿರುವ ‘ವಿದ್ಯಾಗಮ’ ಯೋಜನೆ https://www.sahilonline.net/ka/vidyagama-scheme-for-the-student-community ಭಟ್ಕಳ: ಮೊದಲಾರ್ಧ ಶಾಲಾ ಶೈಕ್ಷಣಿಕ ವರ್ಷ ಹೆಚ್ಚುಕಡಿಮೆ ಮುಚ್ಚಿದ ಶಾಲೆಯ ಬಾಗಿಲನ್ನು ತೆರೆಯದೇ ಮುಗಿದು ಹೋಗುತ್ತಿದೆ. ಮೊಬೈಲ್ ಫೋನ್ ಆನ್‍ಲೈನ್ ಶಿಕ್ಷಣದ ಸಾಧಕ ಬಾಧಕಗಳು ಚರ್ಚೆಯಲ್ಲಿ ಇರುವಾಗಲೇ, ಕರ್ನಾಟಕ ಸರಕಾರ ಜಾರಿಗೆ ತಂದಿರುವ ನೂತನ ವಿದ್ಯಾಗಮ ಯೋಜನೆಗೆ ತಾಲೂಕಿನ ವಿದ್ಯಾರ್ಥಿಗಳು ಹೊಂದಿಕೊಳ್ಳಲು ಆರಂಭಿಸಿದ್ದಾರೆ. ಭಟ್ಕಳದಲ್ಲಿ ಬಕ್ರೀದ್‍ಗಾಗಿ ಸಾವಿರಾರು ಕುರಿಗಳ ಮಾರಾಟ https://www.sahilonline.net/ka/the-sale-of-thousands-of-sheep-for-eidul-azha-festival-in-bhatkal ಕೊರೊನಾ ತಡೆ ಲಾಕ್‍ಡೌನ್ ತೆರವು ಬೆನ್ನಿಗೇ ಭಟ್ಕಳದಲ್ಲಿ ಸಡಗರ ಸಂಭ್ರಮದೊಂದಿಗೆ ಈದ್ ಉಲ್ ಆಝ್ಹಾ (ಬಕ್ರೀದ್) ಹಬ್ಬವನ್ನು ಆಚರಿಸಲು ಇಲ್ಲಿನ ಮುಸ್ಲೀಮ್ ಧರ್ಮೀಯರು ತುದಿಗಾಲ ಮೇಲೆ ನಿಂತಿದ್ದಾರೆ. ಸಂಕಷ್ಟ ಕಳಚಿಕೊಂಡು ಸಂತಸ ಹಂಚಿಕೊಳ್ಳುವ ನಿಟ್ಟಿನಲ್ಲಿ ಭಟ್ಕಳ ಪೇಟೆಯ ತುಂಬ ಚಟುವಟಿಕೆ ಜೋರಾಗಿದೆ. ಪರೀಕ್ಷೆ ಮತ್ತು  ಬಲಿದಾನಗಳ  ಪ್ರತೀಕ : ಹಜ್ಜ್  ಮತ್ತು ಬಕ್ರೀದ್ https://www.sahilonline.net/ka/persecution-and-sacrifice-hajj-and-bakreed ಹಜ್ಜ್  ಮತ್ತು  ಬಕ್ರೀದ್  ಇವೆರಡರಲ್ಲೂ  ಪ್ರವಾದಿ ಅಬ್ರಹಾಮರ ಜೀವನ ಮತ್ತು ಸಂದೇಶವಿದೆ.  ಕುರಾನ್ ನಲ್ಲಿ ಹಲವೆಡೆ  ಇವರ   ವೃತ್ತಾಂತವಿದೆ.   ಆದಿಮಾನವ  ಮತ್ತು  ಪ್ರವಾದಿಯೂ  ಆಗಿದ್ದ ಆದಮರ  ನಂತರ ನೋಹ(ಮನು)  ಮತ್ತು  ಅಬ್ರಹಾಮರಂತಹ  ಲಕ್ಷಾಂತರ  ದೇವ ಸಂದೇಶವಾಹಕರು  ಅಖಂಡ  ಬೃಹ್ಮಾಂಡ  ಹಾಗೂ  ನಮ್ಮೆಲ್ಲರ ಸೃಷ್ಟಿಕರ್ತನಿಂದಲೇ  ನೀಡಲ್ಪಟ್ಟ ಯಶಸ್ವೀ    ಜೀವನ ಪದ್ಧತಿಯನ್ನು ಅನುಸರಿಸುವಂತೆ  ಕರೆನೀಡುತ್ತಿದ್ದರು.  ಆ  ಮಾರ್ಗದಲ್ಲಿ ಅನಿವಾರ್ಯವಾಗಿ  ಬರುವ  ಸಂಕಷ್ಟಗಳನ್ನು ಸಹಿಸುತ್ತಲೇ   ಮತ್ತು ಪರೀಕ್ಷೆಗಳನ್ನು  ಎದುರಿಸುತ್ತಲೇ  ತ್ಯಾಗಗಳನ್ನು  ನೀಡಿ  ಕರ್ತವ್ಯ ನಿರತರಾಗಿ  ನಿರ್ಗಮಿಸಿದ ಮಹಾ  ನಾಯಕರಲ್ಲಿ ಒಬ್ಬರು  ಅಬ್ರಾಹಂ. ಭಟ್ಕಳದ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ತಾಪಮಾನ ತಪಾಸಣೆ ಮತ್ತು  ಆಮ್ಲಜನಕ ಸ್ಯಾಚುರೇಶನ್ ಕ್ಯಾಂಪ್ https://www.sahilonline.net/ka/free-temperature-check-and-oxygen-saturation-camp-at-welfare-hospital-bhatkal ಭಟ್ಕಳ: ವೆಲ್ಫೇರ್ ಆಸ್ಪತ್ರೆಯು  ಇಂಡಿಯನ್ ನವಾತ್ ಫೋರಂ ನ ಸಹಯೋಗದೊಂದಿಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ತಾಪಮಾನ ತಪಾಸಣೆ ಮತ್ತು ಆಮ್ಲಜನ (ಆಕ್ಸಿಜನ್) ಸ್ಯಾಚುರೇಶನ್ ಕ್ಯಾಂಪ್ ಆಯೋಜಿಸಿದೆ. ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರವರೆಗೆ ಸಾರ್ವಜನಿಕರಿಗೆ ಈ ಸೇವೆ ಲಭ್ಯವಿದೆ ಎಂದು ವೆಲ್ಫೇರ್ ಆಸ್ಪತ್ರೆಯ ಸಿಇಒ ಗುಫ್ರಾನ್ ಲಂಕಾ ಮಾಹಿತಿ ನೀಡಿದ್ದಾರೆ. ಇಹಲೋಕಕ್ಕೆ ವಿದಾಯ ಹೇಳಿದ ಭಟ್ಕಳದ ಚೀಫ್ ಖಾಝಿ ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ https://www.sahilonline.net/ka/bhatkal-chief-qazi-maulana-iqbal-mulla-nadvi-passes-away ಭಟ್ಕಳ: ಶಾಫಿ ಕರ್ಮಶಾಸ್ತ್ರದಲ್ಲಿ ಪಾಂಡಿತ್ಯ ಸಾಧಿಸಿದ್ದ ದಕ್ಷಿಣ ಭಾರತದ ಪ್ರಮುಖ ವಿದ್ವಾಂಸರಲ್ಲೋರ್ವರಾಗಿರುವ ಭಟ್ಕಳ ಜಮಾಅತುಲ್ ಮುಸ್ಲಿಮೀನ್ ನ ಪ್ರಧಾನ ಖಾಝಿ ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ(75) ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗುವುದರ ಮೂಲಕ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಭಟ್ಕಳ: ವುಮೆನ್ಸ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿತ ಆರೈಕೆ; ೬೪ ಮಂದಿ ಸೋಂಕಿತರ ಸ್ಥಳಾಂತರ https://www.sahilonline.net/ka/shifted-64-patient-to-bhatkal-womens-center ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೋನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು ಹೆಬಳೆ ಪಂಚಯತ್ ವ್ಯಾಪ್ತಿಯ ಸುಸಜ್ಜಿತ ವುಮೆನ್ಸ್ ಸೆಂಟರ್ ಕಟ್ಟಡವನ್ನು ಕೊರೋನಾ ಸೋಂಕಿತರ ಆರೈಕೆ ಕೇಂದ್ರವನ್ನಾಗಿ ಮಾರ್ಪಡಿಸಿದ್ದು ಭಾನುವಾರ ೬೪ ಸೊಂಕಿತರನ್ನು ಆರೈಕೆ ಕೇಂದ್ರದಲ್ಲಿ ಸ್ಥಳಾಂತರಿಸಿದ್ದಾರೆ. ಗರ್ಭಿಣಿ ಮಹಿಳೆ ಸೇರಿದಂತೆ ೭ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲೇ ಇಡಲಾಗಿದ್ದು ಹಾಸಿಗೆ ಹಿಡಿದ ಮಹಿಳೆ ಸೇರಿದಂತೆ ಮೂವರನ್ನು ಮನೆಯಲ್ಲೇ ಇರಿಸಲಾಗಿದೆ ಎಂಬ ಮಾಹಿತಿ ದೊರಕಿದೆ. ಮೊದಲ ಯಶಸ್ವಿ ಚಾರ್ಟೆಡ್ ವಿಮಾನ ಹಾರಾಟದ ನಂತರ ಜೂ.23ಕ್ಕೆ  ದುಬೈಯಿಂದ ಮಂಗಳೂರಿಗೆ ಮೊತ್ತೊಂದು ವಿಮಾನ ಹಾರಾಟಕ್ಕೆ ಸಿದ್ಧ https://www.sahilonline.net/ka/second-chartered-flight-for-stranded-in-dubai-from-bhatkal-and-surrounding-areas-to-be-fly-from-rak-airport-to-mangalore-on-23-jun ಭಟ್ಕಳ: ಭಟ್ಕಳದ ಉದ್ಯಮಿ ಹಾಗೂ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿಯವರು ದುಬೈಯಲ್ಲಿ ಸಿಲುಕಿಕೊಂಡಿದ್ದ 184 ಮಂದಿಯನ್ನು ಚಾರ್ಟೆಡ್ ವಿಮಾನದ ಮೂಲಕ ಸುರಕ್ಷಿತವಾಗಿ ಭಟ್ಕಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಜೂನ್23 ರಂದು ರಾಸ್-ಅಲ್-ಖೈಮಾ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹಾರಾಲು ಮತ್ತೊಂದು ಚಾರ್ಟೆಡೆ ವಿಮಾನ ಸಿದ್ಧಗೊಂಡಿದೆ. ದಿಲ್ಲಿ ಹಿಂಸಾಚಾರ: ಅಮಿತ್ ಶಾಗೆ ಸಲ್ಲಿಸಲಾದ ‘ಸತ್ಯಶೋಧನಾ ವರದಿ’ಯಲ್ಲಿ ಹಲವು ಸುಳ್ಳುಗಳು! https://www.sahilonline.net/ka/delhi-violence-facts-filed-in-amit-shahs-many-lies ಗೃಹಸಚಿವ ಅಮಿತ್ ಶಾ ಮೇ 29ರಂದು ದೆಹಲಿಯ ಎನ್ ಜಿಒ ‘ಕಾಲ್ ಫಾರ್ ಜಸ್ಟೀಸ್‍’ನ ‘ಸತ್ಯಶೋಧನಾ ವರದಿ’ಯನ್ನು ಸ್ವೀಕರಿಸಿದ್ದಾರೆ. ಹಲವು ಮಾಧ್ಯಮಗಳು ಇದನ್ನು ವರದಿ ಮಾಡಿವೆ. ನ್ಯಾಯಮೂರ್ತಿ ಅಂಬಾದಾಸ್ ಜೋಶಿ (ಮುಂಬೈ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ) ಅಧ್ಯಕ್ಷತೆಯ ಸತ್ಯಶೋಧನಾ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಎಲ್.ಮೀನಾ, ನಿವೃತ್ತ ಐಪಿಎಸ್ ಅಧಿಕಾರಿ ವಿವೇಕ್ ದುಬೆ, ಎಐಐಎಂಎಸ್ ಮಾಜಿ ನಿರ್ದೇಶಕ ಡಾ.ಟಿ.ಡಿ.ಡೋಗ್ರಾ, ಸಾಮಾಜಿಕ ಉದ್ಯಮಿ ನೀರಾ ಮಿಶ್ರಾ ಮತ್ತು ವಕೀಲ ನೀರಜ್ ಅರೋರಾ ಇದ್ದಾರೆ. ಲಾಕ್ಡೌನ್ ಎಫೆಕ್ಟ್‍ನಿಂದ ದುಸ್ತರವಾದ ಬದುಕು; ಕಾರು, ಆಟೋ ರಿಕ್ಷಾ ಓಡಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರು https://www.sahilonline.net/ka/impact-of-lockdown-life-indigestion-private-school-teachers-forced-to-change-jobs-in-bhatkal ಭಟ್ಕಳ; ಲಾಕ್‍ಡೌನ್ ಪರಿಣಾಮ ದೇಶದ ಎಲ್ಲ ವರ್ಗಗಳ ಮೇಲೊ ಪರಿಣಾಮ ಬೀರುದ್ದು ಹಲವು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡು ಹೊಟ್ಟೆಪಾಡಿಗಾಗಿ ತಮಗೆ ಒಗ್ಗದ ಕೆಲಸವನ್ನು ಅನಿವಾರ್ಯವಾಗಿ ಮಾಡುತ್ತಿದ್ದಾರೆ.  ಭಟ್ಕಳದ ಗರ್ಭಿಣಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಹೊತ್ತು ಜೂ.12ಕ್ಕೆ ದುಬೈಯಿಂದ ಮಂಗಳೂರಿಗೆ ಹಾರಲಿದೆ ಬಾಡಿಗೆ ವಿಮಾನ https://www.sahilonline.net/ka/dubai-rak-chartered-flight-to-mangalore-will-depart-on-12-june-got-approval-from-indian-embassy ಭಟ್ಕಳ : ಲಾಕ್ಡೌನ್ ನಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿರುವ ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಚಾರ್ಟರ್ಡ್ ವಿಮಾನದಲ್ಲಿ ಮಂಗಳೂರಿಗೆ ಕಳುಹಿಸಲು ಜೂ.12 ರಂದು ಭಾರತೀಯ ರಾಯಭಾರ ಕಚೇರಿ  ಅನುಮತಿ ನೀಡಿದೆ ಎಂದು ಅನಿವಾಸಿ ಉದ್ಯಮಿ ನೂಹಾ ಜರ್ನರಲ್ ಟ್ರೆಡಿಂಗ್ ದುಬೈನ ಚೇರ್ಮನ್ ಹಾಗೂ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಂ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನೀರಿ ತಿಳಿಸಿದ್ದಾರೆ. ಕೊರೋನಾ ಲಾಕ್‍ಡೌನ್ ನಿಂದಾಗಿ ದುಬೈಯಲ್ಲಿ ಸಿಲುಕಿರುವ ಭಟ್ಕಳಿಗರಿಗೆ ಶುಭ ಸುದ್ದಿ https://www.sahilonline.net/ka/good-news-for-bhatkal-people-residing-in-dubai-united-arab-emirates-uae ಭಟ್ಕಳ: ಕೊರೋನಾ ಸಂಕಷ್ಟದಿಂದಾಗಿ ದುಬೈ ಮತ್ತು ಯುಎಇ ಗಳಲ್ಲಿ ಸಿಲುಕಿರುವ ಭಟ್ಕಳ ಮತ್ತು ಆಸುಪಾಸಿನ ನಿವಾಸಿಗಳಿಗೊಂದು ಶುಭ ಸುದ್ದಿಯೊಂದು ಬಂದಿದ್ದು ಭಟ್ಕಳದ ಖ್ಯಾತ ಉದ್ಯಮಿ ನೂಹಾ ಜನರಲ್ ಟ್ರೇಡಿಂಗ್ ಕಂಪನಿಯ ಮಾಲಿಕ ಅತಿಕುರ್ರಹ್ಮಾನ್ ಮುನೀರಿ ಜನರ ಸಂಕಷ್ಟಕ್ಕೆ ಸ್ಪಂಧಿಸಿ ದುಬೈಯಲ್ಲಿ ಸಿಲುಕಿಕೊಂಡಿರುವ ಭಟ್ಕಳಿಗರಿಗೆ ಅವರ ತಾಯ್ನಾಡಿಗೆ ಮರಳಿ ಕಳುಹಿಸುವ ವ್ಯವಸ್ಥೆನ್ನು ಮಾಡಿದ್ದಾಗಿ ತಿಳಿದುಬಂದಿದೆ. ರಮಝಾನ್ ವಿಶೇಷ ಲೇಖನ; ಮಾನವ ಕಳಕಳಿಯ  ಹಬ್ಬ “ಈದುಲ್ ಫಿತ್ರ್” https://www.sahilonline.net/ka/eid_ul_fitr_speceal-article-by_raza-manvi ಇಸ್ಲಾಮಿನಲ್ಲಿ ಕೇವಲ ಎರಡು ಹಬ್ಬಗಳು ಮಾತ್ರ ಇರುವುದು. ಒಂದನೆಯದು 30ದಿನಗಳ ಉಪವಾಸದ ನಂತರ ಆಚರಿಸುವ ಈದುಲ್ ಫಿತ್ರ್ ಮತ್ತು ಎರಡನೆಯದು ಈದುಲ್ ಅಝ್ಹಾ ಅಥವಾ ಬಕ್ರೀದ್ ಎಂಬುದಾಗಿದೆ.  ಕೋವಿಡ್-19; ಸಾಮಾಜಿಕ ಜಾಲಾತಾಣದಲ್ಲಿ ವಿಕೃತಿ ಮೆರೆದ ಸಮಾಜಘಾತಕರು https://www.sahilonline.net/ka/kumta_social-media_corona_virus ಭಟ್ಕಳ: ಲಾಕ್ ಡೌನ್ ಸಡಿಲಿಕೆಯ ಸಮಯದಲ್ಲಿ ಶವಸಂಸ್ಕಾರದಲ್ಲಿ ಪಾಲ್ಗೊಂಡು ಮೃತನ ಅಂತಿಮ ದರ್ಶನ ಪಡೆಯಲು ಕುಮಟಾದಿಂದ ಭಟ್ಕಳಕ್ಕೆ ಬಂದ ವ್ಯಕ್ತಿಯೊಬ್ಬರಿಗೆ ಮೃತರ ಅಂತಿಮ ದರ್ಶನ ದುಬಾರಿಯಾಗಿ ಪರಿಣಮಿಸಿದ್ದು  ಘಟನೆಗೆ ಸಂಬಂಧಿಸಿದಂತೆ ಕುಮಟಾ ಹೊನ್ನಾವರ ಭಾಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಟ್ಕಳದ ಕೊರೋನಾ ಸೋಂಕಿತರು ಮತ್ತು ಒಂದು ವಿಶೇಷ ಸಮುದಾಯದ ವಿರುದ್ಧ ಅವಹೇಳನಕಾರಿ ನಿಂದನಾತ್ಮಕ ಪೋಸ್ಟ್ ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿಗೆ ಕರಣವಾಗುತ್ತಿದ್ದಾರೆ.  ಮಂಗಳೂರು ಆಸ್ಪತ್ರೆಯಿಂದ ಭಟ್ಕಳಕ್ಕೆ ಶಿಫ್ಟಾದ ಕೊರೋನಾ;12 ಹೊಸ ಕೊರೋನಾ ಪ್ರಕರಣ ಪತ್ತೆ https://www.sahilonline.net/ka/12-new-covid-19-cases-found-in-bhatkal-uttara-kannada-dc-says-no-need-to-panic ಭಟ್ಕಳ: ಇಂದು ಶುಕ್ರವಾರ ಎಲ್ಲರಿಗೂ ಶುಭವನ್ನು ತರುವ ವಾರ. ಆದರೆ ಭಟ್ಕಳಕ್ಕದು ಶುಭವಾಗದೆ 12 ಹೊಸ ಕೊರೋನಾ ಪ್ರಕರಣ ಪತ್ತೆಯಾದ ದಿನವಾಗಿ ಮಾರ್ಪಟ್ಟು ಇಡೀ ಉತ್ತರಕನ್ನಡ ಜಿಲ್ಲೆಗೆ ಅಶುಭವಾಗಿ ಪರಿಣಮಿಸಿದೆ ಎಂದೇ ಹೇಳಲಾಗುತ್ತಿದೆ. ಮಂಗಳೂರು ಫಸ್ಟ್ ನ್ಯುರೋ ಆಸ್ಪತ್ರೆಯಿಂದ 18ರ ಯುವತಿಯೊಂದಿಗೆ ಶಿಫ್ಟಾದ ಕೊರೋನಾ ಈಗ 12 ಮಂದಿಯನ್ನು ಅಕ್ರಮಿಸಿಕೊಂಡಿದೆ. ಇನ್ನು ಅದೆಷ್ಟು ಮಂದಿಗೆ ಕೊರೋನಾ ತಾಗಿದಿಯೋ ದೇವರೇ ಬಲ್ಲ. ಭಟ್ಕಳಕ್ಕೆ ಸಧ್ಯಕ್ಕಿಲ್ಲ ಲಾಕ್‍ಡೌನ್ ಸಡಿಲಿಕೆಯ ಭಾಗ್ಯ; ಅಗತ್ಯ ಸೇವೆ ಹೊರತುಪಡಿಸಿ ಯಥಾಸ್ಥಿತಿ ಮುಂದುವರಿಕೆ https://www.sahilonline.net/ka/bhatkal-is-unable-to-lockdown-continuation-of-status-quo-except-essential-service ಕರಾವಳಿ ಜಿಲ್ಲೆಗಳಲ್ಲಿ ಮೊದಲ ಕೊರೋನಾ ಪ್ರಕರಣ ದಾಖಲು ಮಾಡಿದ ಅಪಕೀರ್ತಿಗೆ ಪಾತ್ರವಾಗಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮಾತ್ರ ಇನ್ನೂ ಲಾಕ್‍ಡೌನ್  ಸಡಿಲಿಕೆಯ ಸೌಭಾಗ್ಯದಿಂದ ವಂಚಿತಗೊಂಡಿದೆ. ಸಧ್ಯಕ್ಕೆ ಇದರಿಂದ ಹೊರಬರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.  ಕೋವಿಡ್-19; ಹಸಿರು ವಲಯದತ್ತ ಹೆಜ್ಜೆ ಹಾಕುತ್ತಿದೆ ಭಟ್ಕಳ ಕೇವಲ ಒಂದು ಸಕ್ರಿಯ ಪ್ರಕರಣ ಬಾಕಿ https://www.sahilonline.net/ka/the-key-of-lockdown-in-uttara-kannada-district-is-in-hebbar-hand ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನ ಕೊರೋನಾ ಸೋಂಕಿನ ಪ್ರಥಮ ಪ್ರಕರಣ ದಾಖಲಾಗಿದ್ದು ಮಾ.19 ಹಾಗೂ ಕೊನೆಯ ಪ್ರಕರಣ ದಾಖಲಾಗಿದ್ದು ಎ.14 ಈ 27 ದಿನಗಳ ಅವಧಿಯಲ್ಲಿ ಒಟ್ಟು 11 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು 300ಕ್ಕೂ ಅಧಿಕ ಮಂದಿಯನ್ನು ಈ ಸಂಬಂಧ ಕ್ವಾರೆನ್‍ಟೈನ್ ಮಾಡಲಾಗಿದ್ದು ಅವರು ತಮ್ಮ 14 ದಿನಗಳ ಅವಧಿಯನ್ನು ಪೂರ್ತಿಗೊಳಿಸಿ ತಮ್ಮ ತಮ್ಮ ಮನೆಗೆ ಹಿಂತಿರುಗಿದ್ದಾರೆ. ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಕೇವಲ ಒಂದು ಪ್ರಕರಣ ಮಾತ್ರ ಸಕ್ರಿಯವಾಗಿದ್ದು ಇನ್ನೆರಡು ದಿನಗಳಲ್ಲಿ ಅದು ಸಹ ನೆಗೆಟಿವ್ ವರದಿಯಾಗಿ ಕೊರೋನಾ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡುವ ನಿರೀಕ್ಷೆಯಿದೆ ಹಾಗಾಗಿ ಇನ್ನೆರಡದು ದಿನಗಳಲ್ಲಿ ಉ.ಕ ಜಿಲ್ಲೆಯನ್ನು ಹಸಿರು ವಲಯಕ್ಕೆ ಸೇರಿಸುವುದರ ಮೂಲಕ ಇಲ್ಲಿನ ಜನರು ಮೊದಲಿನಂತೆ ಬದುಕಲು ಅವಕಾಶ ದೊರೆಯುವುದೆಂಬ ಭರವಸೆಯಲ್ಲಿದ್ದಾರೆ. ದ್ವೇಷ ಮುಕ್ತ ಭಾರತಕ್ಕಾಗಿ ನನ್ನ ಪ್ರಾರ್ಥನೆ https://www.sahilonline.net/ka/my-prayers-for-hate-free-india ಭಗವಾನ್ ವಿಷ್ಣುವಿನ ಕಿಬ್ಬೊಟ್ಟೆಯಿಂದ ಹೊರಟ ಆ ಕಮಲದ ಹೂವಿನಲ್ಲಿ ಬ್ರಹ್ಮ ಕುಳಿತಿದ್ದ. ಬ್ರಹ್ಮ ಆ ಹೂವನ್ನು ಮೂರು ಭಾಗಗಳಾಗಿ ವಿಂಗಡಿಸಿದ: ಸ್ವರ್ಗ, ಭೂಮಿ ಮತ್ತು ಆಕಾಶ ಈ ಮೂರು ಭಾಗಗಳು. ಕೊನೆಗೆ ಏಕಾಂಗಿತನ ಕಾಡಿದಾಗ ತನ್ನನ್ನೇ ತಾನು ವಿಭಜಿಸಿಕೊಂಡು ಒಬ್ಬ ಪುರುಷ ಹಾಗು ಒಬ್ಬ ಮಹಿಳೆಯನ್ನು ಸೃಷ್ಟಿಸುತ್ತಾನೆ. ಅವುಗಳಿಂದ ಎಲ್ಲ ಜೀವಿಗಳ ಸೃಷ್ಟಿಯಾಗುತ್ತದೆ. ಭಟ್ಕಳ ಕೊರೊನಾ ವಿರುದ್ಧ ಹೋರಾಟಕ್ಕೆ ಸಾರಥಿಯಾದ ಶರದ್ https://www.sahilonline.net/ka/dr-sharad-naik-played-an-unparalleled-role-to-campaign-control-in-coronavirus-outbreak-in-bhatkal ರಾಜ್ಯದ ಕೊರೊನಾ ಹಾಟ್ ಸ್ಪಾಟ್‍ಗಳ ಪಟ್ಟಿಯಲ್ಲಿ ಉತ್ತರಕನ್ನಡ ಜಿಲ್ಲೆಗೆ ಅದರಲ್ಲಿಯೂ ವಿಶೇಷವಾಗಿ ಭಟ್ಕಳಕ್ಕೂ ಸ್ಥಾನ ಸಿಕ್ಕಿದೆ. ಹಾಗೆಂದ ಮಾತ್ರ ರಾಜ್ಯದ ಉಳಿದ ಕೊರೊನಾ ಪ್ರದೇಶಗಳಿಗೆ ಹೋಲಿಸಿದರೆ ಭಟ್ಕಳದಲ್ಲಿ ಹಂತಹಂತವಾಗಿ ಕೊರೊನಾ ನಿಯಂತ್ರಣವನ್ನು ಕಾಣಬಹುದಾಗಿದೆ. ಭಟ್ಕಳದಲ್ಲಿ ಕೊರೊನಾ ಕ್ವಾರೆಂಟೈನ್ ಪರಿಣಾಮ; ಸತತ 4ನೇ ಶುಕ್ರವಾರ ಬಿಕೋ ಎಂದ ಜುಮ್ಮಾ ಮಸೀದಿಗಳು https://www.sahilonline.net/ka/corona-quarantine-effect-on-bhatkal-jumma-mosques-closed-on-4th-consecutive-friday ಉತ್ತರಕನ್ನಡ ಜಿಲ್ಲೆ ಕೊರೊನಾ ಹಾಟ್‍ಸ್ಪಾಟ್‍ನಿಂದ ಜಾರಿ ಹಾಟ್‍ಸ್ಪಾಟೇತರ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ, ಭಟ್ಕಳ ಶಹರದಲ್ಲಿ ಬಿಸಿ ಇನ್ನೂ ತಣ್ಣಗಾಗಿಲ್ಲ. ತಾಲೂಕಿನಾದ್ಯಂತ ವಿಶೇಷವಾಗಿ ಭಟ್ಕಳ ಶಹರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸತತ 4ನೇ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಇಲ್ಲದಂತಾಗಿದೆ.  ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟ ಜಿಲ್ಲಾಡಳಿತ; ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ https://www.sahilonline.net/ka/3-officers-managed-team-in-uttara-kannada-district-corona-virus-outbreak ವಿದೇಶದಿಂದ ಅತಿ ಹೆಚ್ಚು ಜನ ಜಿಲ್ಲೆಗೆ ವಾಪಸ್ಸಾಗಿದ್ದರೂ, ಭಟ್ಕಳದ 10 ಮಂದಿಯಲ್ಲಿ ಮಾತ್ರ ಕೋವಿಡ್- 19 ಸೋಂಕು ಇರುವುದು ದೃಢಪಟ್ಟಿದೆ. ಇದೊಂದೇ ಪಟ್ಟಣದಲ್ಲಿ ಸೋಂಕಿತರಿದ್ದು, ಜಿಲ್ಲೆಯ ಬೇರೆ ಯಾವ ತಾಲ್ಲೂಕಿಗೂ ಸೋಂಕು ಹರಡದಂತೆ ಕಣ್ಗಾವಲಿಟ್ಟು ಕಾಯುವಲ್ಲಿ ಜಿಲ್ಲಾಡಳಿತ ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ. ಇದಕ್ಕೆ ಜಿಲ್ಲಾ ಮಟ್ಟದ ‘ತ್ರಿಮೂರ್ತಿ’ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಾಡು, ಗಡಿ ಹಾಗೂ ಭಾಷೆ ಮೀರಿದ ರಾಜ್ಯ ಸರ್ಕಾರದ ಅನ್ನ ದಾಸೋಹ https://www.sahilonline.net/ka/anna-dashoha-is-a-state-government-that-transcends-land-borders-and-languages ಬೆಂಗಳೂರು:ತುತ್ತು ಅನ್ನಕ್ಕಾಗಿ ಸಾವಿರಾರು ಕಿ.ಮೀ. ದೂರದ ಊರುಗಳಿಂದ ಬಂದು ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ರಾಜ್ಯದ ರಾಜಧಾನಿಯಲ್ಲಿ ನೆಲೆಸಿರುವ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು, ಕೋವಿಡ್-19ಹಿನ್ನೆಲೆಯಲ್ಲಿ ಘೋಷಿಸಿರುವ ಲಾಕ್‍ಡೌನ್‍ ನಿಂದ ಕಂಗಾಲಾಗಿದ್ದಾರೆ.   ಲಾಕ್ ಡೌನ್ ಎಫೆಕ್ಟ್ ಕಂಪು ಕಳೆದುಕೊಳ್ಳುತ್ತಿರುವ ಭಟ್ಕಳ ಮಲ್ಲಿಗೆ; ಕಂಗಲಾದ ರೈತ ಕುಟುಂಬ https://www.sahilonline.net/ka/bhatkal-jasmine-farmer-family-who-are-losing-the-lock-down-effect ಭಟ್ಕಳ ಮಲ್ಲಿಗೆ ದೇಶ ದಲ್ಲಷ್ಟೆ ಅಲ್ಲದೇ ವಿದೇಶಗಳಲ್ಲೂ ಭಾರಿ ಬೇಡಿಕೆ. ಇಲ್ಲಿನ ನವಾಯತ್ ಮುಸ್ಲಿಮರು ಭಟ್ಕಳ ಮಲ್ಲಿಗೆಯ ಕಂಪನ್ನು ಗಲ್ಫ್ ರಾಷ್ಟ್ರಗಳಲ್ಲೂ ಹರಡುವಂತೆ ಮಾಡಿದ್ದಾರೆ. ಭಟ್ಕಳದ ಪ್ರಮುಖ ತೋಟಗಾರಿಕಾ ಬೆಳೆಯಾಗಿರುವ ಮಲ್ಲಿಗೆ ಲಾಕ್ ಡೌನ್ ನಿಂದಾಗಿ ಗಿಡದಲ್ಲೇ ಮೊಗ್ಗು ಅರಳುವ ಮುನ್ನವೇ ಬಾಡಿ ಹೋಗಲಾರಂಭಿಸಿವೆ. ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಾಗಿದ್ದ ಈ ಮಲ್ಲಿಗೆ ಮೇಲೆ ಕೊರೋನಾ ಕರಿನೆರಳು ಬಿದ್ದು  ತನ್ನ ಕಂಪನ್ನು ಸೂಸದೆ ಅಲ್ಲಿಯೆ ಮುದುಡಿಕೊಳ್ಳುತ್ತಿದೆ. ನಿಝಾಮುದ್ದೀನ್ ಮರ್ಕಝ್ ಖಾಲಿ ಮಾಡಿಸುವಾಗ ತಬ್ಲೀಗಿಗಳು ಒಮ್ಮೆಯೂ ಕೆಟ್ಟದಾಗಿ ವರ್ತಿಸಿಲ್ಲ: ಡಾ. ಊರ್ವಿ ಶರ್ಮ https://www.sahilonline.net/ka/tabligians-have-never-behaved-badly-when-nizamuddin-markaz-was-emptied-dr-urvi-sharma ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ದೇಶದ ವಿವಿಧೆಡೆಗೆ ಕೊರೊನ ಹರಡಿತು ಎಂಬ ಮಾಧ್ಯಮ ವರದಿಗಳ ಬೆನ್ನಿಗೇ ಟಿವಿ ಚಾನಲ್ ಗಳು ಹಾಗು ಸಾಮಾಜಿಕ ಜಾಲತಾಣಗಳಲ್ಲಿ ತಬ್ಲೀಗಿ ಜಮಾಅತ್ ನ ಸದಸ್ಯರ ವಿರುದ್ಧ ಭಾರೀ ಅಪಪ್ರಚಾರದ ಅಭಿಯಾನವೇ ನಡೆಯುತ್ತಿದೆ. ಕೊರೋನ ನಡುವೆ ಕೋಮುದ್ವೇಷ ಸೋಂಕಿತರು ಹರಡಿದ 7 ಸುಳ್ಳುಸುದ್ದಿಗಳು https://www.sahilonline.net/ka/7-slanders-spread-by-communal-haters-among-corona ದೇಶದಲ್ಲಿ ವ್ಯಾಪಿಸಿರುವ ಕೊರೋನಾ ಸೋಂಕಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದ್ದು  ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲವು ಮಾಧ್ಯಗಳಲ್ಲಿ ಸುಳ್ಳುಗಳು ವ್ಯಾಪಕವಾಗಿ ಪ್ರಸಾರವಾಗಿರುವುದು ಬೆಳಕಿಗೆ ಬಂದಿದೆ. ವೈದ್ಯಕೀಯ ಸಿಬ್ಬಂಧಿಗಳ ರಕ್ಷಣೆಗೆ  ಫೇಸ್ ಶೀಲ್ಡ್  ಭಟ್ಕಳದ “ಮೇಕರ್ಸ್ ಹಬ್’ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ https://www.sahilonline.net/ka/widespread-praise-for-face-shield-bhatkal-makers-hub-function-for-the-protection-of-medical-personnel ಭಟ್ಕಳ: ಕೊರೋನಾ ಸೋಂಕು ಜಗತ್ತಿನ ಎಲ್ಲರಿಗೂ ಜೀವಭಯದಲ್ಲಿ ಬದುಕುವಂತೆ ಮಾಡಿದೆ. ಕೊರೋನಾ ಸೋಂಕಿತರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಸಾವಿರಾರು ಮಂದಿ ವೈದ್ಯರು ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಜನರ ಪ್ರಾಣವನ್ನು ರಕ್ಷಿಸುವ ವೈದ್ಯರ ಪ್ರಾಣ ಇಂದು ಆಪಾಯದಲ್ಲಿದೆ. ಎಷ್ಟೋ ಮಂದಿ ವೈದ್ಯರು ಕೂಡ ಈ ಸೋಂಕಿಗೆ ಬಲಿಯಾಗಿದ್ದಾರೆ. ‘ಕೊರೋನಾ ವಾರಿಯರ್ಸ್’ ಗಳ ಸಹಾಯಕ್ಕೆ ಭಟ್ಕಳದ ಧೃತಿ ಸರ್ಜಿಕಲ್ ಫ್ಯಾಕ್ಟರಿ; ಮುಖಗವಚ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರು https://www.sahilonline.net/ka/protective-safety-medical-kits-being-prepared-in-bhatkal-to-handle-suspected-coronavirus-patients ಭಟ್ಕಳ: ದೇಶದಲ್ಲಿ ಕೊರೋನಾ ಸೋಂಕು ಪ್ರವೇಶಿಸಿದ ನಂತರದಲ್ಲಿ ದೇಶದ ರಾಜಧಾನಿಯಿಂದ ಹಿಡಿದು ಸಣ್ಣಪುಟ್ಟ ಗ್ರಾಮಗಳಲ್ಲಿಯೂ ಕೂಡ ಮಾಸ್ಕ್ (ಮುಖಗವಚ) ಗೆ ಎಲ್ಲಿಲ್ಲದ ಬೇಡಿಕೆಯುಂಟಾಗುತ್ತಿದೆ. ಈಗ ಎಲ್ಲಿಯೂ ಮತ್ತು ಯಾವುದೇ ಮೆಡಿಕಲ್ಸ್ ಗಳಲ್ಲಿ ಮಾಸ್ಕ್ ಲಭ್ಯವಿಲ್ಲ. ಜನರು ಮಾಸ್ಕ್ ತಂದುಕೊಡಿ ಎನ್ನುವ ಬೇಡಿಕೆಯಂತೂ ದಿನವು ಇಡುತ್ತಿದ್ದಾರೆ. ಸದ್ಯ ದೇಶವ್ಯಾಪಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಘೋಷಣೆಯಾಗಿದ್ದು, ಬಹುತೇಕ ಎಲ್ಲಾ ಕಂಪೆನಿಗಳು, ವ್ಯವಹಾರ ಕೇಂದ್ರಗಳು, ಕಾರ್ಮಿಕರನ್ನು ಅವಲಂಬಿಸಿರುವ ಫ್ಯಾಕ್ಟರಿಗಳು ಬಂದ್ ಆಗಿವೆ. ಆದರೆ, ಭಟ್ಕಳ ತಾಲೂಕಿನ ಬೆಳಕೆಯ ಧ್ರುತಿ ಸರ್ಜಿಕಲ್ ಸೊಲ್ಯುಶನ್ ಪ್ರೈವೇಟ್ ಲಿಮಿಟೆಡ್‍ನ ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಕೊರೋನಾ ಕರ್ತವ್ಯನಿರತ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಗಳಿಗೆ ಅವಶ್ಯಕವಾಗಿರುವ ಕಿಟ್ ತಯಾರಿಕೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದು ಮುಖಗವಚ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.  ‘‘ಸತ್ತವರೆಲ್ಲ ಒಂದೇ ಸಮುದಾಯದವರು’’, ಆದುದರಿಂದ ಒಂದು ಸಮುದಾಯದವರೆಲ್ಲ ಸಾಯಬೇಕೆ!? https://www.sahilonline.net/ka/why-are-all-the-dead-the-same-community ಬೆಂಗಳೂರು: ಇಂದು (ಶನಿವಾರ) ನಮ್ಮ ನಾಡಿನ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ‘ಕೊರೋನ ಸೋಂಕಿನಿಂದ ಸತ್ತವರೆಲ್ಲ ಒಂದೇ ಸಮುದಾಯದವರು’ ಎಂಬ ತಲೆಬರಹದ ವರದಿಯ ಕುರಿತಂತೆ ನಾಡಿನ ವಿವಿಧ ಸಂಘಟನೆಗಳು, ಪ್ರಜ್ಞಾವಂತರು ತೀವ್ರ ಆಘಾತ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಸಂಘಟನೆಗಳು ಈ ವರದಿಯ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿವೆ. ಪೌರತ್ವ ನೊಂದಣಿ ಹಾಗು ಎನ್ ಪಿ ಆರ್  ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಹೇಳೀದ ಸುಳ್ಳುಗಳ ಕುರಿತು... https://www.sahilonline.net/ka/home-minister-amit-shahs-lies-at-the-rajya-sabha-on-the-citizenship-register-and-npr NPR-NRC- CAA ಗಳ ವಿರುದ್ಧ ದೇಶಾದ್ಯಂತ ಜನರು ರಾಜಿಯಿಲ್ಲದ ಹೋರಾಟ ನಡೆಸುತ್ತಿರುವುದರಿದ ಕಂಗೆಟ್ಟಿರುವ ಮೊ-ಷಾ ಸರ್ಕಾರ ಸುಳ್ಳುಗಳನ್ನು ಹೇಳುವ ಮೂಲಕ ಹೋರಾಟವನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಿದೆ . ನಿನ್ನೆ ರಾಜ್ಯಸಭೆಯಲ್ಲಿ  ಗೃಹಮಂತ್ರಿ ಅಮಿತ್ ಶಾ ನೀಡಿರುವ ಹೇಳಿಕೆಗಳು ಅದಕ್ಕೆ ತಾಜಾ ಉದಾಹರಣೆ . ಆದ್ದರಿಂದ ದೇಶದ ಜನತೆ ಗೃಹಮಂತ್ರಿಯವರ ಹೇಳಿಕೆಯಲ್ಲಿರುವ ಈ ಕೆಳಗಿನ ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವುದು  ಅತ್ಯಗತ್ಯವಾಗಿದೆ.  ರಂಜನ್ ಗೊಗೋಯ್, NRC, ಹಾಗು ಮೋದಿ ಕಾಲದಲ್ಲಿ ನ್ಯಾಯಾಂಗದ ಕುರಿತು ಇನ್ನಷ್ಟು  https://www.sahilonline.net/ka/judiciary-of-ranjan-gogoi-nrc-and-modi ನಿವೃತ್ತ ಮುಖ್ಯ "ನ್ಯಾಯಮೂರ್ತಿ" ರಂಜನ್ ಗೊಗೋಯ್ ಅವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನೇಮಕ ಮಾಡಿದ ನಂತರ ರಂಜನ್ ಗೊಗೋಯ್ ಮತ್ತು ನಮ್ಮ ನ್ಯಾಯಾಂಗದ "ನ್ಯಾಯ ನಿಷ್ಠತೆ" ಯ ಬಗ್ಗೆ ಸಾಕಷ್ಟು ಸಕಾರಣ ಅನುಮಾನಗಳು ಹುಟ್ಟಿಕೊಂಡಿವೆ  ಈ ಚರ್ಚೆಗೆ ಪೂರಕವಾಗಿ ಮತ್ತಷ್ಟು ವಿಷಯಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. .  ಜಾತಿ ದೌರ್ಜನ್ಯಗಳು ಮತ್ತು ಸಾಮಾಜಿಕ ಮಾಧ್ಯಮಗಳು- ಗೋಪಾಲ್ ಗುರು https://www.sahilonline.net/ka/caste-atrocities-and-social-media ಹಲವಾರು ದಶಕಗಳ ಹಿಂದೆ ಬಿ.ಆರ್ ಅಂಬೇಡ್ಕರ್ ಅವರು ಗುರುತು ಮಾಡಿ ತೋರಿಸಿದ ಒಂದು ನಿಗೂಢ ವಿದ್ಯಮಾನವನ್ನೇ ದೌರ್ಜನ್ಯಗಳು, ಅದರಲ್ಲೂ ದಲಿತರ ಮೇಲೆ ಹೆಚ್ಚುತ್ತಲೇ ಇರುವ ದೌರ್ಜನ್ಯಗಳು ಎv ತೋರಿಸುತ್ತದೆ. ಅಸ್ಪೃಷ್ಯರ ಮೇಲೆಯೇ ಏಕೆ ದೌರ್ಜನ್ಯಗಳು ಸಂಭವಿಸುತ್ತದೆಂದು ಅವರು ಪ್ರಸಿದ್ದರು. ದೆಹಲಿಯ ಕೋಮು ಹಿಂಸಾಚಾರದ ರಾಜಕೀಯ https://www.sahilonline.net/ka/the-politics-of-communal-violence-in-delhi ದೆಹಲಿಯ ಹಲವಾರು ಭಾಗಗಳನ್ನು ಆವರಿಸಿಕೊಂಡು ಆಹುತಿ ತೆಗೆದುಕೊಂಡ ಹಿಂಸಾಚಾರಗಳು ಒಂದು ಗಂಭೀರವಾದ ಮಾನವೀಯ ದುರಂತವಾಗಿದ್ದು ನಮ್ಮ ಗಣರಾಜ್ಯವು ಎದುರಿಸುತ್ತಿರುವ ಗಹನವಾದ ನೈತಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ತೋರಿಸುತ್ತದೆ. ಈವರೆಗೆ ಬಂದಿರುವ ವರದಿಗಳ ಪ್ರಕಾರ ದೆಹಲಿಯ ಈಶಾನ್ಯ ಭಾಗಗಳಲ್ಲಿ ೩೮ ಜನರು ಪ್ರಾಣಗಳನ್ನು ಕಳೆದುಕೊಂಡು ನೂರಾರು ಜನರು ಪ್ರಾಣಾಂತಿಕವಾಗಿ ಗಾಯಗೊಂಡಿದ್ದಾರೆ. ಒಂದು  ಸಮುದಾಯವು ಅನುಭವಿಸುತ್ತಿರುವ ಪ್ರಾಣ ಹಾಗೂ ಆಸ್ತಿ ನಷ್ಟಗಳ ಪ್ರಮಾಣವು ಯಾವುದೇ ಲೆಕ್ಕಾಚಾರಗಳಿಗೆ ಮೀರಿದ್ದಾಗಿದ್ದರೆ ಮತ್ತೊಂದು ಸಮುದಾಯದ ನೋವುಗಳನ್ನು ಆಡಳಿತ ಪಕ್ಷವು ತನ್ನ ವಿಭಜಕ ರಾಜಕೀಯವನ್ನು ಮತ್ತಷು ನಂಜುಪೂರಿತವಾಗಿ ಜಾರಿ ಮಾಡಲು ಬಳಸಿಕೊಳ್ಳುತ್ತಿದೆ. ಜಾಗತಿಕ ಬಲಪಂಥೀಯರ ವ್ಯೂಹಾತ್ಮಕ ಆಲಿಂಗನ https://www.sahilonline.net/ka/the-tactical-embrace-of-the-global-right ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ನೀಡಿದ ಹಾರುಭೇಟಿಯನ್ನು ಅದ್ಭುತವಾದ ಯಶಸ್ಸೆಂದು ಬಣ್ಣಿಸಲಾಗುತ್ತಿದೆ. ಪ್ರಧಾನಿ ಮೋದಿಯವರು ಅಮೆರಿಕದ ಅಧ್ಯಕ್ಷರಿಗೆ ಒಂದು ಸಾಮ್ರಾಟನಿಗೆ ಕೊಡುವಂಥ ಸ್ವಾಗತವನ್ನೇ ನೀಡಿದರು. ಅದಕ್ಕೆ ಪ್ರತಿಯಾಗಿ ಟ್ರಂಪ್ ಸಹ ತಮ್ಮ ಭಾರತ ಭೇಟಿಯು ಅತ್ಯದ್ಭುತವಾಗಿತ್ತು ಎಂದು ಬಣ್ಣಿಸಿದರು. ದಿಲ್ಲಿಯಲ್ಲಿ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು: 85 ವರ್ಷದ ವೃದ್ಧೆ ಜೀವಂತದಹನ https://www.sahilonline.net/ka/home-fire-victims-in-delhi-an-85-year-old-survivor ಫೆಬ್ರವರಿ 25ರಂದು ಮುಹಮ್ಮದ್ ಸಯೀದ್ ಸಲ್ಮಾನಿ ಮನೆಗೆ ಹಾಲು ತರಲೆಂದು ಹೊರಹೋಗಿದ್ದರು. ಈ ಸಂದರ್ಭ ಅವರಿಗೆ ಪುತ್ರನಿಂದ ಕರೆ ಬಂದಿತ್ತು. ಸುಮಾರು 100 ಜನರಿದ್ದ ದುಷ್ಕರ್ಮಿಗಳ ತಮ್ಮ ಬೀದಿಗೆ ನುಗ್ಗಿದ್ದ ಅವರೆಲ್ಲರೂ ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಪುತ್ರ ತಿಳಿಸಿದ್ದ. ಬೀದಿಗೆ ನುಗ್ಗಿದ್ದ ದುಷ್ಕರ್ಮಿಗಳು ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದೇ ಸಂದರ್ಭ ಸಲ್ಮಾನಿಯವರ ಮನೆಗೂ ಬೆಂಕಿ ಹಚ್ಚಲಾಗಿತ್ತು. ಚುನಾವಣಾ ಪ್ರಜಾತಂತ್ರ ಮತ್ತು ಸಾಮಾಜಿಕತೆಯ ಹಿರಿಮೆ https://www.sahilonline.net/ka/electoral-democracy-and-the-greatness-of-socialism ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಒಂದು ಸಧೃಢವಾದ ಹಾಗೂ ಅಬಿವೃದ್ಧಿಯ ಕಾರ್ಯಸೂಚಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಲ್ಲ ಚುನಾವಣಾ ಪ್ರಜಾತಂತ್ರದ ಅಭಿವ್ಯಕ್ತಿಯೂ ಆಗಿದೆ. ಮತದಾರರ ಅಭಿವೃದ್ಧಿ ಆಶಯಗಳನ್ನು ಪಕ್ಕಕ್ಕೆ ಸರಿಸಿ ವಿಭಜಕ ಚುನಾವಣಾ ರಾಜಕೀಯದ ಮೂಲಕ ಗೆಲ್ಲಲು ಹವಣಿಸಿದ್ದ ರಾಜಕೀಯ ಶಕ್ತಿಗಳನ್ನು ದೆಹಲಿ ಚುನಾವಣೆ ಸಂಪೂರ್ಣವಾಗಿ ಬಯಲುಗೊಳಿಸಿದೆ.