Legal Corner https://www.sahilonline.net/ka/legal-corner SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Legal Corner ಕಾರವಾರದ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನಲ್ಲಿ ಅಕ್ರಮ ಪ್ರಾರ್ಥನಾಗೃಹ?? ತೆರವಿಗೆ ಆಗ್ರಹ https://www.sahilonline.net/ka/bjp-demands-probe-into-illegal-prayer-hall-at-police-headquarters ಕಾರವಾರದ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನಲ್ಲಿ ಅನುಮತಿ ಇಲ್ಲದೇ ಅಕ್ರಮವಾಗಿ ನಿರ್ಮಿಸಲಾದ ಪ್ರಾರ್ಥನಾಗೃಹವನ್ನು ಉದ್ಘಾಟಿಸುವ ಸಿದ್ಧತೆ ನಡೆದಿದ್ದು ಅದನ್ನು ತಕ್ಷಣ ನಿಲ್ಲಿಸುವಂತೆ ಉತ್ತರ ಕನ್ನಡ ಬಿಜೆಪಿ ಆಗ್ರಹಿಸಿದೆ. ಸಿಕ್ಕ ಬಂಗಾರ ಹಿಂತಿರುಗಿಸಿ  ಪ್ರಾಮಾಣಿಕತೆ ಮೆರೆದ  ಮಹಮದ್ ಅಲಿ https://www.sahilonline.net/ka/mr-mahmoud-ali-who-returned-to-the-gold-and-returned-to-honesty ಧರ್ಮಸ್ಥಳ:  ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದಿದ್ದ ಬ್ಯಾಗ್ ಒಂದನ್ನು ಚಾರ್ಮಾಡಿ ಗ್ರಾಮಸ್ಥರಾದ  ಬಿ. ಮಹಮ್ಮದ್ ಆಲಿ ಪ್ರಾಯ 38 ವರ್ಷ, ತಂದೆ ಪಿ. ಪಿ ಅಬ್ದುಲ್ ರೆಹಮಾನ್ ರವರು ಠಾಣೆಗೆ ತಂದು ಹಾಜರು ಪಡಿಸಿದ್ದು, ಕಾಣೆಯಾಗಿರುವ ಬಾಲಕಿಯ ಪತ್ತೆಗಾಗಿ ಮನವಿ  https://www.sahilonline.net/ka/appeal-to-trace-missing-girl ಕೋಲಾರ: ಪಳನಿರಾವ್ ಕೆ. ಬೋವಿ ಕಾಲೋನಿ, ಕೋಲಾರ ಇವರ ಮಗಳಾದ 17 ವರ್ಷ ವಯಸ್ಸಿನ ಪಿ. ಸೌಂದರ್ಯ ಅವರು ಪಿಯುಸಿ ವ್ಯಾಸಂಗ ಮಾಡಿ ಅನುತ್ತೀರ್ಣಳಾಗಿ ಮನೆಯಲ್ಲೇ ಇದ್ದು, ದಿನಾಂಕ: 12-09-2018 ರಂದು ಮಧ್ಯಾಹ್ನ ಸುಮಾರು 02.45 ಗಂಟೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ. ಆಕೆಯ ಮೊಬೈಲ್ ನಂಬರ್ ಸ್ವಿಚ್ ಆಪ್ ಆಗಿದ್ದು, ಸಂಜೆಯಾದರು ಮನೆಗೆ ಬಾರದೆ ಇದ್ದು, ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ವಿಚಾರಿಸಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.  ಪಂಜಾಬಿನ ಪಾವಿತ್ರ್ಯಭಂಗ ಮಸೂದೆ- ಒಂದು ದೊಂಬಿಕೋರ ಶಾಸನ https://www.sahilonline.net/ka/the-sanctuary-bill-of-punjab-a-mob-legislation ಪಂಜಾಬಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಪ್ರಸ್ತಾಪಿಸಿದ ಬಾರತೀಯ ದಂಡ ಸಂಹಿತೆ (ಪಂಜಾಬ್ ತಿದ್ದುಪಡಿ)-೨೦೧೮ ಮಸೂದೆಯನ್ನು ಪಂಜಾಬಿನ ಶಾಸನಸಭೆಯು ಅನುಮೋದಿಸಿದೆ. ಈ ಕಾಯಿದೆಯು ಗುರು ಗ್ರಂಥ ಸಾಹಿಬ್, ಕುರಾನ್, ಬೈಬಲ್ ಮತ್ತು ಭಗವದ್ಗೀತೆಗಳನ್ನು ಅಪವಿತ್ರಗೊಳಿಸುವ ಅಪರಾಧಕ್ಕೆ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅನುವಗುವಂತೆ ಭಾರತೀಯ ದಂಡ ಸಂಹಿತೆಯೆ ೨೯೫-ಎ ಕಲಮಿಗೆ ತಿದ್ದುಪಡಿ ತಂದಿದೆ. ಈ ಮಸೂದೆಯ ಪ್ರಸ್ತಾಪಕ್ಕಿದ್ದ ತತ್‌ಕ್ಷಣದ ರಾಜಕೀಯ ಸಂದರ್ಭವೆಂದರೆ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದ ನಡುವೆ ನಡೆಯುತ್ತಿದ್ದ ಸಂಘರ್ಷಗಳು. ಕುತೂಹಲಕಾರಿ ಸಂಗತಿಯೆಂದರೆ ಈ ಹಿಂದೆ ಅಕಾಲಿ ದಳದ ಸರ್ಕಾರವಿದ್ದಾಗ ರಾಜ್ಯ ಸರ್ಕಾರವು ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸುವುದನ್ನು ಶಿಕ್ಷಾರ್ಹ ಅಪರಾಧ ಮಾಡುವ ಶಾಸನವನ್ನು ಜಾರಿಗೆ ತಂದಿತ್ತು. ಆದರೆ ಆ ಶಾಸನದ ಹಲವು ಅಂಶಗಳು ಭಾರತದ ಸಂವಿಧಾನದಲ್ಲಿರುವ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆಂದು ೨೦೧೭ರಲ್ಲಿ ಕೇಂದ್ರ ಸರ್ಕಾರವು ಆ ಶಾಸನವನ್ನು ಹಿಂದಕ್ಕೆ ಕಳಿಸಿತ್ತು. ಪ್ರಸ್ತುತ ಸರ್ಕಾರವು ತಮ್ಮ ಮಸೂದೆಯು ಎಲ್ಲಾ ಧರ್ಮಗಳ ಧರ್ಮಗ್ರಂಥಗಳನ್ನು ಒಳಗೊಂಡಿರುವುದರಿಂದ ಹೆಚ್ಚು ಸಮರ್ಥನೀಯವೆಂದು ಪ್ರತಿಪಾದಿಸುತ್ತಿದೆ. ಸರ್ವ ಧರ್ಮ ಸಮ ಭಾವ ಎಂಬ ತತ್ವವನ್ನು ಹೇಗೆ ಈ ಸರ್ಕಾರಗಳು ಧರ್ಮ ನಿರಪೇಕ್ಷ ತತ್ವಕ್ಕೆ ತದ್ವಿರುದ್ಧವಾಗಿ ಬಳಸಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ವಾಸ್ತವವಾಗಿ ಧರ್ಮ ನಿರಪೇಕ್ಷ ತತ್ವದ ನೈಜ ಅನುಷ್ಠಾನವು  ದೇವಪವಿತ್ರವೆಂದು ಮಾನ್ಯವಾದದ್ದು ಹೆಚ್ಚೆಚ್ಚು ಸಾರ್ವಜನಿಕತೆಯ ಅಧೀನಕ್ಕೊಳಪಡುತ್ತಾ ಹೋಗುವುದನ್ನು ಮತ್ತು ಪ್ರಶ್ನಾತೀತ ಪವಿತ್ರವೆಂದು ಭಾವಿಸಿಕೊಂಡಿರುವ ಸಂಗತಿಗಳು ದಿನಗಳೆದಂತೆ ಹೆಚ್ಚೆಚ್ಚು ತರ್ಕದ ಮತ್ತು ವೈಚಾರಿಕತೆಯ ನಿಕಷಕ್ಕೆ ಒಳಪಡುತ್ತಾ ಹೋಗುವುದನ್ನು ಒಳಗೊಂಡಿರುತ್ತದೆ. ಮಹಿಳೆಯರ ಬ್ಯಾಗ್ ಸುಲಿಗೆ ಹಾಗೂ ಎ.ಟಿ.ಎಂ. ಕಳ್ಳತನ ಯತ್ನ ಪ್ರಕರಣದ ಆರೋಪಿಯ ಬಂಧನ  https://www.sahilonline.net/ka/mangalore-womens-bags-and-atm-looter-accussed-arrestted-by-police ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ನಿಡ್ಡೇಲ್ ಮೈದಾ ಫಾಕ್ಟರಿ ಎಂಬಲ್ಲಿ ದಿನಾಂಕ: 24-08-2018 ರಂದು ಸಂಜೆ ವೇಳೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್ ನ್ನು ಸುಲಿಗೆ ಮಾಡಿದ್ದ ಪ್ರಕರಣದ ಆರೋಪಿ  ಗೋವುಗಳ ರಕ್ಷಣೆ ನೆಪದಲ್ಲಿ ಅಮಾಯಕರ ಹತ್ಯೆ ನಡೆಯುತ್ತಿರುವುದು ಘೋರ ಅಪರಾಧ; ಸುಪ್ರೀಂ ಕೋರ್ಟ್ https://www.sahilonline.net/ka/the-protection-of-cows-in-the-name-of-the-murder-is-horrible ಹೊಸದಿಲ್ಲಿ: ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣವನ್ನು ತಡೆಯಲು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ಶಿಕ್ಷಿಸಲು ಹೊಸ ಕಾನೂನನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಸಂಸತ್ತಿಗೆ ಸೂಚಿಸಿದೆ. ಯಾರು ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಭಯ ಮತ್ತು ಅರಾಜಕತೆಯ ಪರಿಸ್ಥಿತಿ ನೆಲೆಸಿದ ಸಂದರ್ಭದಲ್ಲಿ ರಾಜ್ಯಗಳು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಹಿಂಸಾಚಾರಕ್ಕೆ ಆಸ್ಪದ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರಿದ್ದ ಸುಪ್ರೀಂಕೋರ್ಟ್‌ನ ನ್ಯಾಯಪೀಠ ತಿಳಿಸಿದೆ.