Islam https://www.sahilonline.net/ka/islam SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Islam ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ https://www.sahilonline.net/ka/values-that-eid-ul-fitr-represents-man-is-love-mercy-compassion-and-compassion ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ, ಇದು ಭರವಸೆಯ ದಾರಿದೀಪವಾಗಿ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಕರೆಯಾಗಿ ಕಾರ್ಯನಿರ್ವಹಿಸುತ್ತದೆ. ಲೈಲತುಲ್ ಕದ್ರ್ ; ದೈವಿಕ ಪ್ರತಿಫಲಕ್ಕೆ ಸಾಟಿಯಿಲ್ಲದ ರಮಝಾನ್‌ ಮಾಸದ ಕೊನೆಯ ದಿನಗಳು https://www.sahilonline.net/ka/lailatul-qadr-the-last-days-of-the-month-of-ramadan-are-unparalleled-in-divine-reward ಮೂವತ್ತು ದಿನಗಳ ಕಠಿಣ ಉಪವಾಸ ವೃತಗಳ ಆಚರಣೆಯ ಮಾಸ ರಮಝಾನ್ ಇನ್ನೇನು ಕೊನೆಯ ಹಂತದಲ್ಲಿದೆ. ಈ ಮಾಸದ ಕೊನೆಯ ಹತ್ತು ದಿನಗಳು ದೈವಿಕ ಪ್ರತಿಫಲಕ್ಕೆ ಸಾಟಿಯಿಲ್ಲದೆ ದಿನಗಳಾಗಿವೆ. ಸಾಮಾನ್ಯವಾಗಿ ರಮಝಾನ್ ತಿಂಗಳ ೨೭ನೇ ದಿನದಂದು ಬರುವ ಲೈಲತುಲ್ ಕದ್ರ್ ರಾತ್ರಿಯು ಅತ್ಯಂತ ಶ್ರೇಷ್ಟ ಮತ್ತು ಹೆಚ್ಚೆಚ್ಚು ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ಮತ್ತು ಅದಕ್ಕೆ ಸಾವಿರಾರು ಪಟ್ಟು ಹೆಚ್ಚು ಪ್ರತಿಫಲ ದೊರೆಯುವ ರಾತ್ರಿಯಾಗಿದೆ. ಪರೀಕ್ಷೆ ಮತ್ತು  ಬಲಿದಾನಗಳ  ಪ್ರತೀಕ : ಹಜ್ಜ್  ಮತ್ತು ಬಕ್ರೀದ್ https://www.sahilonline.net/ka/persecution-and-sacrifice-hajj-and-bakreed ಹಜ್ಜ್  ಮತ್ತು  ಬಕ್ರೀದ್  ಇವೆರಡರಲ್ಲೂ  ಪ್ರವಾದಿ ಅಬ್ರಹಾಮರ ಜೀವನ ಮತ್ತು ಸಂದೇಶವಿದೆ.  ಕುರಾನ್ ನಲ್ಲಿ ಹಲವೆಡೆ  ಇವರ   ವೃತ್ತಾಂತವಿದೆ.   ಆದಿಮಾನವ  ಮತ್ತು  ಪ್ರವಾದಿಯೂ  ಆಗಿದ್ದ ಆದಮರ  ನಂತರ ನೋಹ(ಮನು)  ಮತ್ತು  ಅಬ್ರಹಾಮರಂತಹ  ಲಕ್ಷಾಂತರ  ದೇವ ಸಂದೇಶವಾಹಕರು  ಅಖಂಡ  ಬೃಹ್ಮಾಂಡ  ಹಾಗೂ  ನಮ್ಮೆಲ್ಲರ ಸೃಷ್ಟಿಕರ್ತನಿಂದಲೇ  ನೀಡಲ್ಪಟ್ಟ ಯಶಸ್ವೀ    ಜೀವನ ಪದ್ಧತಿಯನ್ನು ಅನುಸರಿಸುವಂತೆ  ಕರೆನೀಡುತ್ತಿದ್ದರು.  ಆ  ಮಾರ್ಗದಲ್ಲಿ ಅನಿವಾರ್ಯವಾಗಿ  ಬರುವ  ಸಂಕಷ್ಟಗಳನ್ನು ಸಹಿಸುತ್ತಲೇ   ಮತ್ತು ಪರೀಕ್ಷೆಗಳನ್ನು  ಎದುರಿಸುತ್ತಲೇ  ತ್ಯಾಗಗಳನ್ನು  ನೀಡಿ  ಕರ್ತವ್ಯ ನಿರತರಾಗಿ  ನಿರ್ಗಮಿಸಿದ ಮಹಾ  ನಾಯಕರಲ್ಲಿ ಒಬ್ಬರು  ಅಬ್ರಾಹಂ. ರಮಝಾನ್ ವಿಶೇಷ ಲೇಖನ; ಮಾನವ ಕಳಕಳಿಯ  ಹಬ್ಬ “ಈದುಲ್ ಫಿತ್ರ್” https://www.sahilonline.net/ka/eid_ul_fitr_speceal-article-by_raza-manvi ಇಸ್ಲಾಮಿನಲ್ಲಿ ಕೇವಲ ಎರಡು ಹಬ್ಬಗಳು ಮಾತ್ರ ಇರುವುದು. ಒಂದನೆಯದು 30ದಿನಗಳ ಉಪವಾಸದ ನಂತರ ಆಚರಿಸುವ ಈದುಲ್ ಫಿತ್ರ್ ಮತ್ತು ಎರಡನೆಯದು ಈದುಲ್ ಅಝ್ಹಾ ಅಥವಾ ಬಕ್ರೀದ್ ಎಂಬುದಾಗಿದೆ.  ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ https://www.sahilonline.net/ka/bhatkal-quran-memorized-markazi-khalifa-jamaatul-muslim-chief-qazi ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ಕ್ವಾಜಾ ಮುಈನುದ್ದಿನ್ ಅಕ್ರಮಿ ಮದನಿ, ನದ್ವಿ ತಮ್ಮ 53ನೆ ವಯಸ್ಸಿನಲ್ಲಿಯೂ ಸಂಪೂರ್ಣ ಕುರ್‍ಆನ್ ಗ್ರಂಥವನ್ನು ಕಂಠಪಾಠ ಮಾಡಿದ್ದು ಖಲಿಫಾ ಜಾಮಿಯಾ ಮಸೀದಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ವಿದ್ಯಾವಂತರಿಂದಲೆ ದೇಶಕ್ಕೆ ಅಪಾಯ-ಮುಹಮ್ಮದ್ ಕುಂಞ https://www.sahilonline.net/ka/the-country-is-in-danger-of-being-educated ಭಟ್ಕಳ: ವಿದ್ಯಾವಂತರಿಂದಲೇ ದೇಶದಲ್ಲಿ ಸಮಸ್ಯೆಗಳು ಉದ್ಭವಿಸುತ್ತಿದ್ದು ವಿದ್ಯಾವಂತರಿಂದ ದೇಶಕ್ಕೆ ಆಪಾಯ ಬಂದೊದಗುತ್ತಿದೆ ದೇಶದಲ್ಲಿ ಇಂದು ನಡೆಯುತ್ತಿರುವ ಭ್ರಷ್ಟಚಾರ, ಉಗ್ರವಾದ, ಅತ್ಯಾಚಾರ, ಅನೈತಿಕತೆಗಳಿಗೆ ವಿದ್ಯಾವಂತರೆ ಕಾರಣವಾಗುತ್ತಿರುವುದು ಈ ದೇಶದ ದುರಂತವಾಗಿದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಂಞÂ ಹೇಳಿದರು.  ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ; ಹೊನ್ನಾವರದ ಜಿ.ಎಸ್.ಹೆಗಡೆ ಪ್ರಥಮ https://www.sahilonline.net/ka/district-seerath-essay-competition-result-gs-hegde-of-honnavar-first ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ನಡೆದ ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದ್ದು ಹೊನ್ನಾವರ ಗುಂಡಿಬೈಲ್ ಸ.ಹಿ.ಪ್ರಾಥಮಿಕ ಶಾಲೆಯ ಶಿಕ್ಷಕ ಗಣಪತಿ ಎಸ್. ಹೆಗಡೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಭಟ್ಕಳ ತಾಲೂಕಿನ ಹೊನ್ನೆಮಡಿ ಸ.ಹಿ.ಪ್ರಾಥಮಿಕ ಶಾಲೆಯ ಶಿಕ್ಷಕ ರಾಘವೇಂದ್ರ ಮಡಿವಾಳ ದ್ವಿತೀಯಾ ಸ್ಥಾನ ಹಾಗೂ ನ್ಯೂ ಶಮ್ಸ್ ಶಾಲೆಯ ಸಾವಿತ್ರಿ ಹೆಗಡೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ -ರಾಘವೇಂದ್ರ ಎಸ್. ಮಡಿವಾಳ https://www.sahilonline.net/ka/prophet-muhammad-pbuh-and-equality ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಗೆ ಅರಬ್ಬರು ‘ಸೀರತ್’ ಎಂದು ಕರೆಯುತ್ತಾರೆ. ಆದರೆ ಮುಸ್ಲಿಂ ವಿದ್ವಾಂಸರು ಹೆಚ್ಚಾಗಿ ಪ್ರವಾದಿ(ಸ)ಯವರ ಜೀವನ ಚರಿತ್ರೆಗೆ ಮಾತ್ರ ‘ಸೀರತ್’ ಪದವನ್ನು ಬಳಸುತ್ತಾರೆ. ‘ಸೀರತ್’ ಪದದ ಅರ್ಥ ‘ಪಯಣ’ ಎಂದಾಗಿದೆ. ಅಂದರೆ ನಾವು ಅವರ ಜೀವನ ಚರಿತ್ರೆಯ ಅಧ್ಯಯನ ನಡೆಸುವಾಗ ಪ್ರವಾದಿ(ಸ)ಯವರ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾ ಅವರು ನಡೆಸಿದಂತಹ ಪಯಣವನ್ನೇ ಆದರ್ಶವಾಗಿಟ್ಟುಕೊಂಡು ನಮ್ಮ ಜೀವನದ ಪಯಣ ಸಾಗಿಸಲು ಪ್ರಯತ್ನಿಸಬೇಕು. ಅಂದಾಗ ಮಾತ್ರ ನಮ್ಮ ಜೀವನದ ಪಯಣ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ. ಆಚಾರ್ಯ ಪುರುಷ ಪ್ರವಾದಿ ಮುಹಮ್ಮದ್(ಸ) - ಗಣಪತಿ.ಎಸ್.ಹೆಗಡೆ https://www.sahilonline.net/ka/prophet-muhammad-pbuh_-ganpati-hegde ಪ್ರವಾದಿ ಮುಹಮ್ಮದರು ಒಬ್ಬ ತಂದೆಯಾಗಿ, ಒಬ್ಬ ಪತಿಯಾಗಿ, ಒಬ್ಬ ವರ್ತಕರಾಗಿ, ಒಬ್ಬ ಯಜಮಾನನಾಗಿ ಹೇಗೆ ಸಮಾಜದಲ್ಲಿ ಆಚಾರ್ಯರಾಗಿ ಕಾಣಿಸಿಕೊಂಡರು, ಸಮಾಜದಲ್ಲಿ ಸಮಾನತೆ ತರಲು ಹೇಗೆ ಶ್ರಮಿಸಿದರು ? ಎನ್ನುವ ಬಹು ಮುಖ್ಯವಾದ ಅಂಶಗಳನ್ನು ನಾವು ಅವಲೋಕಿಸಬೇಕಿದೆ. ಮುಹಮ್ಮದ್: ಮಹಾನ್ ಪ್ರವಾದಿ https://www.sahilonline.net/ka/special_story_prophet_muhammed_nitin-arehalli ಪ್ರವಾದಿ ಮುಹಮ್ಮದ್(ಸ) ರ  ಮಿಲಾದುನ್ನಬಿ ನಿಮಿತ್ತ ಈ ವಿಶೇಷ ಲೇಖನ (ಸಂ.) ದೇವರು, ಧರ್ಮದ ಪರಿಧಿಯ ಹೊರಗೂ ಉಪವಾಸಕ್ಕೆ ತನ್ನದೇ ಆದ ಅರ್ಥ ಮತ್ತು ಮೌಲ್ಯವಿದೆ https://www.sahilonline.net/ka/bhatkal_ramzan-article_prof_srnayak ಪವಿತ್ರ ಕುರಾನ್ ಅವತೀರ್ಣಗೊಂಡ ತಿಂಗಳು ರಮ್ಜಾನ್ ತಿಂಗಳು. ಅದೀಗ ಆರಂಭವಾಗಿದೆ. ಇದನ್ನು ಉಪವಾಸದ ತಿಂಗಳು ಎಂದೂ ಕರೆಯುತ್ತಾರೆ. ಮುಸಲ್ಮಾನ್ ಸಹೋದರ ಸಹೋದರಿಯರು ಈ ತಿಂಗಳ ಪೂರ್ತಿ ಉಪವಾಸವೃತವನ್ನು ಆಚರಿಸುತ್ತಾರೆ. ಉಪವಾಸವೆಂದರೆ ಕೇವಲ ಅನ್ನ ಪಾನೀಯಗಳಿಂದ ದೂರವಿರುವುದಲ್ಲ; ಕೆಡುಕಿನಿಂದಲೂ ದೂರವಿರುವುದು. ಉಳಿದ ಧರ್ಮದವರು ತಿಂಗಳಾನುಗಟ್ಟಲೆ ಅಲ್ಲದಿದ್ದರೂ ವಾರಕ್ಕೊಮ್ಮೆಯೋ ಎರಡು ಸಲವೋ ಅಥವಾ ಶಿವರಾತ್ರಿ, ಸಂಕಷ್ಠಿ ಮೊದಲಾದ ದಿನಗಳಲ್ಲಿ ಉಪವಾಸವೃತ ಆಚರಿಸುವುದಿದೆ. ಮುಸ್ಲಿಮ್ ನಿಷೇಧ ಮತ್ತು ಇಸ್ಲಾಂ ಭೀತಿ https://www.sahilonline.net/ka/muslim_ban_islamophobia_spl_story ಮುಸ್ಲಿಮರ ಅಮೆರಿಕ ಪ್ರವೇಶಕ್ಕೆ ತಡೆಯೊಡ್ಡಿ ಮಾರ್ಚ್ 6 ರಂದು ಡೊನಾಲ್ಡ್ ಟ್ರಂಪ್ ಘೋಷಣೆ ಹೊರಡಿಸಿದ್ದಾರೆ. ಮುಸ್ಲಿಮ್ ನಿಷೇಧದ ಕುರಿತು ಇದು ಟ್ರಂಪ್‍ರ ಎರಡನೆ ಘೋಷಣೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಪಟ್ಟಿಯಿಂದ ಇರಾಕನ್ನು ಕೈಬಿಟ್ಟು ವೀಸಾ ಗ್ರೀನ್ ಕಾರ್ಡ್ ಇರುವವರನ್ನು ನಿಯಂತ್ರಿತ ರಾಷ್ಟ್ರಗಳ ಪಟ್ಟಿಯಿಂದ ದೂರ ನಿಲ್ಲಿಸಲಾಗಿದೆ. ಕಾಮನ್ ಸಿವಿಲ್ ಕೋಡ್: ಸುಪ್ರಿಮ್‌ಕೋರ್ಟ್ ನಿರ್ಣಯಕ್ಕೆ ಬದ್ದ-ವಲಿ ರಹ್ಮಾನಿ https://www.sahilonline.net/ka/muslim_personal-law_press-meet ಭಟ್ಕಳ: ಸಮಾನ ನಾಗರಿಕ ಸಂಹಿತೆ ಜಾರಿ ಕುರಿತಂತೆ ದೇಶದ ಉಚ್ಚನ್ಯಾಯಾಲಯದ ನಿರ್ಣಯಕ್ಕೆ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಬದ್ದವಾಗಿರುತ್ತದೆ ಎಂದು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನ ವಲಿ ರಹ್ಮಾನಿ ಹೇಳಿದರು.  ಶರೀಅತ್ ಸಂರಕ್ಷಣೆಗಾಗಿ ಸಾಂವಿಧಾನಿಕ ಹೋರಾಟಕ್ಕೆ ಸಜ್ಜಾಗಲು ಮೌಲಾನ ರಾಬೆಅ್ ನದ್ವಿ ಕರೆ https://www.sahilonline.net/ka/bhatkal_musflim-personal_law_convention_tanzeem ಭಟ್ಕಳ,: ಇಸ್ಲಾಮ್ ಕುರಿತ ಅಜ್ಞಾನದಿಂದಾಗಿ ಕೆಲ ಅವಿವೇಕಿಗಳು ಮುಸ್ಲಿಮ್ ಪರ್ಸನಲ್ ಲಾ ವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದು ಇದಕ್ಕಾಗಿ ಸರ್ಕಾರ ಏಕರೂಪ ನಾಗರೀಕ ಸಂಹಿತೆ ಹೇರಲು ಮುಂದಾಗಿರುವುದರ ವಿರುದ್ಧ ದೇಶದ ಮುಸ್ಲಿಮರು ಸಾಂವಿಧಾನಿಕ ರೀತಿಯಲ್ಲಿ ಹೋರಾಟಕ್ಕೆ ಸಜ್ಜಾಗುವಂತೆ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಮೌಲಾನ ಸೈಯ್ಯದ್ ಮುಹಮ್ಮದ್ ರಾಬೆಅ ಹಸನಿ ನದ್ವಿ ಹೇಳಿದರು. ಐರೋಪ್ಯ ರಾಷ್ಟ್ರಗಳ ಶಿಕ್ಷಣ ವ್ಯವಸ್ಥೆ ಮನುಷ್ಯರನ್ನು ಧರ್ಮದ ಶತ್ರುಗಳನ್ನಾಗಿ ರೂಪಿಸುತ್ತಿದೆ-ಮೌಲಾನ ರಾಬೆ‌ಅ ನದ್ವಿ https://www.sahilonline.net/ka/bhatkal_ali_public_national_education_seminor ಭಟ್ಕಳ: ಪ್ರಸಕ್ತ ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಕಠು ವಿಮರ್ಶೆ ಮಾಡಿದ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಮೌಲಾನಾ  ಸೈಯ್ಯದ್ ಮುಹಮ್ಮದ್ ರಾಬೆ‌ಅ ಹಸನಿ ನದ್ವಿ, ಐರೋಪ್ಯ ರಾಷ್ಟ್ರಗಳ ಶಿಕ್ಷಣ ವ್ಯವಸ್ಥೆ ಮನುಷ್ಯರನ್ನು ಧರ್ಮದ ಶತ್ರುಗಳನ್ನಾಗಿ ರೂಪಿಸುತ್ತಿದೆ ಎಂದು ಹೇಳಿದರು. ಪ್ರವಾದಿ ಶೃಂಖಲೆಯ ಅಂತಿಮ ಕೊಂಡಿ ಮುಹಮ್ಮದ್ ಪೈಗಂಬರ್ https://www.sahilonline.net/ka/article_muhammedpbhu_mrmanvi “ವಲಿಕುಲ್ಲಿ ಕೌಮಿನ್ ಹಾದ್ (“ನಾವು ಪ್ರತಿಯೊಂದು ಸಮುದಾಯದಲ್ಲೂ ಅವರ ಮಾರ್ಗದರ್ಶಕರನ್ನು ಕಳುಹಿಸಿದ್ದೇವೆ’’) ಎಂದೂ ಪವಿತ್ರ ಕುರಾನ್ ಉಲ್ಲೇಖಿಸಿದೆ.  ಹುಲಿಯ ಜಾಡು ಹಿಡಿದು.... https://www.sahilonline.net/ka/tippu ಜಮೀನ್ದಾರಿ ಮತ್ತು ಜಾಗೀರ್ದಾರಿ ಪದ್ಧತಿಗಳನ್ನು ನಾಶಪಡಿಸುವುದಕ್ಕೆ ಟಿಪ್ಪು ಸುಲ್ತಾನ್ ಬಹಳ ಉತ್ಸುಕನಾಗಿದ್ದ. ಯಾರು ಭೂಮಿಯನ್ನು ಊಳುತ್ತಾರೋ, ಜಾತಿ, ಮತ, ಧರ್ಮ ಯಾವುದೇ ಆಗಿದ್ದರೂ, ಅವರು ಮಾತ್ರವೇ ಭೂಮಿಯ ಒಡೆತನ ಹೊಂದಿರಬೇಕು ಎಂದು ಟಿಪ್ಪು ಘೋಷಿಸಿದ್ದ ಎಂದು ಕಬೀರ್ ಕೌಸರ್ ದಾಖಲಿಸಿದ್ದಾರೆ. ಮಕ್ಕಾ: ಅರಫಾತ್ ಬೆಟ್ಟವೇರಿದ ಇಪ್ಪತ್ತು ಲಕ್ಷ ಹಜ್ ಯಾತ್ರಿಕರು https://www.sahilonline.net/ka/makkah-20-million-reach-arafat ಒಟ್ಟು 164 ರಾಷ್ಟ್ರಗಳಿಂದ 13,25,372. ಯಾತ್ರಿಕರು ಆಗಮಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು ಐದು ಶೇಖಡಾ ಅಂದರೆ 64,889 ಯಾತ್ರಿಕರು ಕಡಿಮೆ ಆಗಮಿಸಿದ್ದಾರೆ. ರಮಝಾನ್ ದಾನಧರ್ಮ, ಸತ್ ಚಿಂತನೆ ತಿಂಗಳಾಗಿದೆ ಭಿಕ್ಷಾಟನೆಯ ಮಾಸವಲ್ಲ https://www.sahilonline.net/ka/zakat_mrmanvi ರಮಝಾನ್ ತಿಂಗಳು ದಾನಧರ್ಮ ಹಾಗೂ ಸತ್ ಚಿಂತನೆಯ ತಿಂಗಳಾಗಿದ್ದು ವ್ಯಕ್ತಿಯೊಬ್ಬ ಮಾಡಿದ ಒಂದು ಉತ್ತಮ ಕಾರ್ಯಕ್ಕೆ ೭೦ಪಟ್ಟು ಪುಣ್ಯ ಲಭಿಸುವುದು ಎಂದು ಪವಿತ್ರಕುರಾನ್ ಹೇಳುತ್ತದೆ.  ರಮಝಾನ್ ಮಾಸದಲ್ಲಿ ಮುಸ್ಲಿಮ್ ಓಲೈಕೆಯ ಇಫ್ತಾರ್ (ಅ)ರಾಜಕೀಯ https://www.sahilonline.net/ka/political-iftar-party ಮೋಸ, ವಂಚನೆ, ಕಪಟ, ದಗಲಬಾಜಿ, ಅರಾಜಕತೆ ಗೆ ಮತ್ತೊಂದು ಅರ್ಥವೇ ರಾಜಕೀಯ. ಇದು ಎಲ್ಲಿ ಬೇಕಾದರೂ ಸುಲಭವಾಗಿ ನುಸುಳುವಂತಹದ್ದು. ಮನೆ, ಕಚೇರಿ, ಠಾಣೆ, ಮಂದಿರ, ಮಸೀದಿ, ಚರ್ಚು, ಗುರುದ್ವಾರ ಇದಕ್ಕೆ ಇಂತಹದ್ದೇ ಎನ್ನುವ ಒಂದು ನಿದಿರ್ಷ್ಠ ಸ್ಥಳವಿಲ್ಲ. ಎಲ್ಲಿಬೇಕಲ್ಲಿ ಲೀಲಾಜಾಲವಾಗಿ ತನ್ನ ವರ್ಚಸ್ಸನ್ನು ಕುದುರಿಸಿಕೊಳ್ಳುವ ಶಕ್ತಿ ಈ ರಾಜಕೀಯಕ್ಕೆ ಇದೆ. ಇದು ತನ್ನ ಬೇಳೆ ಬೇಯಿಸಿಕೊಳ್ಳಲು ಏನುಬೇಕಾದರೂ ಮಾಡಬಲ್ಲದು. ಕತ್ತೆಯ ಕಾಲು ಹಿಡಿದರೂ ಪರವಾಗಿಲ್ಲ. ಸಮಯ ಬಂದಾಗ ಅದು ತನ್ನೆಲ್ಲ ಮೇರೆಗಳನ್ನು ಮೀರಿ ಬದುಕಿಕೊಳ್ಳುವ ಕರಾಮತ್ತು ಹೊಂದಿದೆ.