Coastal News https://www.sahilonline.net/ka/coastal-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Coastal News ಕಾರವಾರ: ಕಡಲ ಕೊರೆತ ಸ್ಥಳಗಳಿಗೆ ಕೆ.ಎಂ.ಬಿ ಜಯರಾಮ್ ರಾಯ್ ಪುರ ಭೇಟಿ https://www.sahilonline.net/ka/kmb-jayaram-raipur-visits-coastal-karnataka-sea-erosion-sites-karwar ಕರಾವಳಿ ಜಿಲ್ಲೆಯಲ್ಲಿ ಕಡಲ ಕೊರತೆ ತೀವ್ರವಾಗಿದ್ದು, ಸಮುದ್ರ ಭಾಗದಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ ಮನೆ ಮಾಡಿದೆ. ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚುವ ಕಾರ್ಯಾಚರಣೆ ;ಪೊಕ್ಲೆನ್ ಯಂತ್ರ ಬಳಸಿ ಕಾರ್ಯಾಚರಣೆ https://www.sahilonline.net/ka/karwar-the-search-operation-for-arjun ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರಿನಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚುವ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಗುಡ್ಡ ಕುಸಿತ ಪ್ರಕರಣ ತಪ್ಪಿತಸ್ಥರ ವಿರುದ್ದ ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ https://www.sahilonline.net/ka/action-against-culprits-in-hill-collapse-case-chief-minister-siddaramaiah ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದ ದಿನದಿಂದಲೂ ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳಿAದ ರಕ್ಷಣಾ ಕಾರ್ಯಚರಣೆಯನ್ನು ಸತತವಾಗಿ ನಡೆಸಲಾಗುತ್ತಿದ್ದು, ಇಂದು ಸೇನೆ ವತಿಯಂದಲೂ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅಂಕೋಲ: ಗುಡ್ಡ ಕುಸಿತ ಪ್ರದೇಶಕ್ಕೆ ಮುಖ್ಯಮಂತ್ರಿ ಭೇಟಿ; ಅಧುನಿಕ ತಂತ್ರಜ್ಞಾನ ಬಳಸಿ ಕಾರ್ಯಚರಣೆಗೆ ಸೂಚನೆ https://www.sahilonline.net/ka/ankola-chief-minister-visits-hill-crash-area-instructions-for-operation-using-modern-technology ಅಂಕೋಲ:ಭೀಕರ ಮಳೆಯಿಂದಾಗಿ ಅಂಕೋಲ ತಾಲೂಕಿನ ಶಿರೂರು ಬಳಿ ನಡೆದ ಗುಡ್ಡ ಕುಸಿತ ಪ್ರದೇಶಕ್ಕೆ ರವಿವಾರ ಭೇಟಿ ನೀಡಿದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಲಭ್ಯ ಇರುವ ಎಲ್ಲ ರೀತಿಯ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಾರ್ಯಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.  ಹೆದ್ದಾರಿ ಬದಿ ತ್ಯಾಜ್ಯ ಎಸೆಯುವವರಿಂದಲೇ ಕಸ ಸ್ವಚ್ಚಗೊಳಿಸಿದ ಆರೋಗ್ಯಾಧಿಕಾರಿ https://www.sahilonline.net/ka/the-health-officer-cleaned-the-garbage-from-dumping-waste-on-the-side-of-the-highway ಭಟ್ಕಳ: ಭಟ್ಕಳದ ರಾಷ್ಟ್ರಿಯ ಹೆದ್ದಾರಿಯಲ್ಲಿ ಕದ್ದು ಮುಚ್ಚಿ ಕಸ ಎಸೆದು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಆತನಿಂದಲೇ ತ್ಯಾಜ್ಯವನ್ನು ವಿಲೇವಾರಿ ಮಾಡಿಸಿದ ಘಟನೆ ಶನಿವಾರ ಜಾಲಿ ಪ.ಪಂ ವ್ಯಾಪ್ತಿಯ ರಾ.ಹೆ.66 ಹೊಟೇಲ್ ಯಮ್ಮೀಸ್ ಬಳಿ ನಡೆದಿದ್ದು ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ನಾರಾಯಣ ರಾಮ ನಾಯ್ಕ ರಿಗೆ ಡಾಕ್ಟರೇಟ್  ಪದವಿ ಪ್ರದಾನ https://www.sahilonline.net/ka/the-approach-for-classification-of-microarray-data ಭಟ್ಕಳ: ತಾಲೂಕಿನ ಮೂಡಭಟ್ಕಳದ ಹೆಬ್ಳೆರ ಮನೆಯ  ನಿವಾಸಿ ನಾರಾಯಣ ರಾಮ ನಾಯ್ಕ, ಮಂಡಿಸಿದ    " ದ ಅಪ್ರೋಚಸ್ ಫಾರ್ ಕ್ಲಾಸಿಫಿಕೇಶನ್ ಆಫ್ ಮೈಕ್ರೋಅರೇ ಡೇಟಾ" (The Approach for Classification of Microarray Data)ಎಂಬ  ಪ್ರಬಂಧ ಕ್ಕೆ, ಕಂಪ್ಯೂಟರ್ ಅಂಡ್ ಇನ್ಫಾರ್ಮಶನ್ ಸೈನ್ಸಸ್ ವಿಭಾಗದಲ್ಲಿ  ದಿನಾಂಕ: ೧೮-೦೭-೨೦೨೪ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ೨೪ನೇ ವಾರ್ಷಿಕ ಘಟಿಕೋತ್ಸವದಲ್ಲಿ (ಭಾಗ-೧)  ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಜು.21 ರಿಂದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಿಂದ ಚಾತುರ್ಮಾಸ್ಯ ವೃತಾಚರಣೆ ಆರಂಭ https://www.sahilonline.net/ka/from-july-21st-chaturmasya-vritwas-started-by-the-prefect-of-jagadguru-peeth-of-sri-rama-kshetra-mahasansthan ಭಟ್ಕಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆ ಕ್ಷೇತ್ರದ ಶಾಖಾ ಮಠ ಭಟ್ಕಳದ ಕರಿಕಲ್ ನಲ್ಲಿ ಜು. ೨೧ರಿಂದ ಆ. ೩೦ರ ವರೆಗೆ ನಡೆಯಲಿದೆ. ಎಲ್ಲಾ ಸಮಾಜ ಮುಖಂಡರು ಹಾಗೂ ಬಂಧುಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಬ್ರಹ್ಮಾನಂದ ಶ್ರೀಗಳು ಕರೆ ನೀಡಿದರು. ವೇಗವಾಗಿ ನಡೆಯುತ್ತಿದೆ ಗುಡ್ಡ ಕುಸಿತ ತೆರವು ಕಾರ್ಯಚರಣೆ;ಪೂರ್ಣಗೊಳ್ಳಲು ಇನ್ನೂ ಎರಡು ದಿನ ಆಗಬಹುದು-ಮಾಂಕಾಳ್ ವೈದ್ಯ https://www.sahilonline.net/ka/hill-collapse-clearance-operation-there-may-be-a-delay-of-two-more-days-mankal-vaidya ಕಾರವಾರ: ಅಂಕೋಲಾದ ಶಿರೂರು ಗುಡ್ಡ ಕುಸಿತವಾದ ಸ್ಥಳದಲ್ಲಿ ಸುರತ್ಕಲ್ ನಿಂದ ರಾಡಾರ್ ತರಿಸಿ ವಾಹನ ಹಾಗೂ ಮೃತದೇಹಗಳ ಪತ್ತೆ ಮಾಡಲಾಗುತ್ತಿದೆ ತೆರವು ಹಾಗೂ ಶೋಧ ಕಾರ್ಯ ವೇಗವಾಗಿ ನಡೆಯುತ್ತಿದೆ. ಇನ್ನು ಎರಡು ದಿನ ಬೇಕಾಗಬಹುದು ಎಂದು  ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.  ಮನೆಯಂಗಳದಲ್ಲಿ 7 ಅಡಿ ಉದ್ದದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ‌ ಕಾಡಿಗೆ ಬಿಟ್ಟ ಉರಗ ಪ್ರೇಮಿಗಳು  https://www.sahilonline.net/ka/7-feet-long-python-found-in-yard-reptile-lovers-safely-released-into-the-wild ಭಟ್ಕಳ ಕರಾವಳಿ ಭಾಗದಲ್ಲಿ ಮಳೆಯು  ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿದ್ದು ತಾಲೂಕಿನ ಮುಟ್ಟಳಿ ಪಂಚಾಯತ್ ವ್ಯಾಪ್ತಿಯ ಕೃಷ್ಣಮೂರ್ತಿ ಶೆಟ್ಟಿ ಎನ್ನುವವರ ಮನೆಯಂಗಳದಲ್ಲಿ ಸುಮಾರು 7 ಅಡಿ ಉದ್ದದ  10ರಿಂದ 20 ಕೆಜಿಗೂ ಅಧಿಕ ತೂಕವಿರುವ ಹೆಬ್ಬಾವೊಂದು ಪತ್ತೆಯಾಗಿದ್ದು,ಉರಗ ಪ್ರೇಮಿಗಳು ಸುರಕ್ಷಿತವಾಗಿ ಹೆಬ್ಬಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ನಡೆದಿದೆ. ನೌಕಾ ನಲೆ ಸುತ್ತಮುತ್ತಲಿನ ಕೃತಕ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ : ಸತೀಶ್ ಸೈಲ್ https://www.sahilonline.net/ka/mankal-satish-sail-navy-karwar-meeting-rain-water ಕಾರವಾರದ ನೌಕಾ ನೆಲೆ ಸಮೀಪದ ಪ್ರದೇಶಗಳಲ್ಲಿನ ಸಾರ್ವಜನಿಕರು ಪ್ರತೀ ಮಳೆಗಾಲದಲ್ಲಿ ಎದುರಿಸುವ ಕೃತಕ ನೆರೆಯ ಸಮಸ್ಯೆ ಶೀಘ್ರದಲ್ಲಿ ಶಾಶ್ವತ ಪರಿಹಾರ ದೊರೆಯಲಿದ್ದು, ಈ ಕುರಿತಂತೆ ಎಲ್ಲಾ ಕಾರ್ಯಗಳು ಭರದಿಂದ ನಡೆಯುತ್ತಿವೆ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು. ಜಿಲ್ಲೆಯ ಪ್ರತಿಯೊಂದು ಅಪಾಯಕಾರಿ ಸ್ಥಳವನ್ನು ಗುರುತಿಸಿ ಮುನ್ನೆಚ್ಚರಿಕೆ ಕೈಗೊಳ್ಳಿ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ https://www.sahilonline.net/ka/dc-lakshmi-priya-meeting-karwar-uttara-kannada ಜಿಲ್ಲೆಯಲ್ಲಿ ಅಪಾಯಕಾರಿಯಾಗಿರುವ ಶಾಲೆಗಳು ಅಂಗನವಾಡಿಗಳು, ಜನವಸತಿ ಪ್ರದೇಶಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ, ಅಲ್ಲಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡು ಎರಡು ದಿನದಲ್ಲಿ ವರದಿ ನೀಡುವಂತೆ ಕಂದಾಯ ಇಲಾಖೆಯ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷಿö್ಮÃಪ್ರಿಯ ಸೂಚನೆ ನೀಡಿದರು. ಉತ್ತರಕನ್ನಡ ಜಿಲ್ಲೆಯ ಸಮಸ್ಯೆಗಳಿಗೆ ಶಾಶ್ವಾತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಈಶ್ವರ್ ನಾಯ್ಕಆಗ್ರಹ https://www.sahilonline.net/ka/the-government-to-provide-a-permanent-solution-to-the-problems-of-uttara-kannada-district-eshwar-naik ಭಟ್ಕಳ: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದಾಗಿ ಒಂದೇ ಕುಟುಂಬದ ಆರು ಜನರು ಸಾವಿಗೀಡಾಗಿದ್ದು ಇದು ಅತ್ಯಂತ ಅಘಾತಕಾರಿಯಾಗಿದ್ದು ಜಿಲ್ಲೆಯ ಸಮಸ್ಯೆಗಳಿಗೆ ಆದಷ್ಟು ಬೇಗನೆ ಶಾಶ್ವತ ಪರಿಹಾರ ಕಲ್ಪಿಸುಂತೆ ಉ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ  ಈಶ್ವರ ನಾಯ್ಕ ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ  ನಾಪತ್ತೆಯಾದ ಹತ್ತು ಮಂದಿಯಲ್ಲಿ 6 ಮೃತದೇಹಗಳು ಪತ್ತೆ https://www.sahilonline.net/ka/6-dead-bodies-of-10-people-who-went-missing-in-shiruru-hill-collapse-disaster-have-been-found ಕಾರವಾರ: ಅಂಕೋಲಾ ಶಿರೂರು ಮಣ್ಣು ಕುಸಿತ ಪ್ರಕರಣದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿರುವ ಬಗ್ಗೆ ದೂರುಗಳು ಬಂದಿದ್ದು ಈ ಪೈಕಿ 6 ಮೃತದೇಹಗಳು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಸ್ಪಷ್ಟಪಡಿಸಿದ್ದಾರೆ.  ಜುಲೈ ೧೮ ರಂದು ಉ.ಕ.ಜಿಲ್ಲಾ ಶಾಲಾ ಕಾಲೆಜುಗಳಿಗೆ ರಜೆ https://www.sahilonline.net/ka/18th-july-is-a-holiday-for-uk-district-schools-and-colleges ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ,ಸಿದ್ದಾಪುರ , ದಾಂಡೇಲಿ, ಯಲ್ಲಾಪುರ ಹಾಗೂ ಜೋಯಿಡಾ  ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 18 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ. ಗುಡ್ಡ ಕುಸಿತದಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ತಲಾ ೫ಲಕ್ಷ ರೂ ಪರಿಹಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ https://www.sahilonline.net/ka/the-district-in-charge-minister-has-given-compensation-of-rs-5-lakh-each-to-the-family-of-those-who-died-due-to-the-landslide ಅಂಕೋಲಾ : ಇತ್ತಿಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಉ.ಕ. ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ  ಗುಡ್ಡ ಕುಸಿದು ಮೃತ ಪಟ್ಟವರ ಕುಟುಂಬಸ್ಥರಿಗೆ ಸರ್ಕಾರದ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಪರಿಹಾರ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ವಿತರಿಸಿದರು. ಕಾರವಾರ: ಐ ಆರ್ ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ; ,ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚನೆ https://www.sahilonline.net/ka/ankola-national-highway-landslide-authorities-ordered-to-file-case-against-irb-and-national-highway-officials ಅಂಕೋಲಾ ತಾಲೂಕಿನ ಶಿರೂರು ಸಮೇತ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಕುರಿತಂತೆ ಐ ಆರ್ ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಭಟ್ಕಳದ ಪ್ರತಿಷ್ಟಿತ ರಾಬಿತಾ ಎಕ್ಸಲೆನ್ಸ್ ಅವಾರ್ಡ್ ನ್ಯೂ ಶಮ್ಸ್ ಸ್ಕೂಲ್ ಮಡಿಲಿಗೆ https://www.sahilonline.net/ka/bhatkals-prestigious-rabita-excellence-award-to-new-shams-school ಇಲ್ಲಿನ ಅನಿವಾಸಿ ಭಾರತಿಯರ ಸಂಘಟನೆ ರಾಬಿತಾ ಸೂಸೈಟಿ ವತಿಯಿಂದ ಪ್ರತಿ ವರ್ಷ ನೀಡಲ್ಪಡುವ ರಾಬಿತಾ ಬೆಸ್ಟ್ ಸ್ಕೂಲ್ ಅವಾರ್ಡ್ ಪುರಸ್ಕಾರವನ್ನು ನಗರದ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಪಡೆದುಕೊಂಡಿದೆ. ಅಲಿ ಪಬ್ಲಿಕ್ ಸ್ಕೂಲ್ ನ ವಿಜ್ಞಾನ ಶಿಕ್ಷಕಿ ರಿಫತ್ ಕೋಬಟ್ಟೆಗೆ ರಾಬಿತಾ ಬೆಸ್ಟ್ ಟೀಚರ್ ಅವಾಡ್ ಲಭಿಸಿದೆ.  ಅಂಕೋಲಾ ಗುಡ್ಡ ಕುಸಿದು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ; ಸರ್ಕಾರದಿಂದ ಘೋಷಣೆ https://www.sahilonline.net/ka/compensation-of-rs-5-lakh-each-to-the-family-of-those-who-died-in-ankola-hill-collapse-announcement-by-govt ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5ಲಕ್ಷ ರೂ.ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.  ಶಿಕ್ಷಣ ಮತ್ತು ತರಬೇತಿಯು ಅಜ್ಞಾನಜನ್ಯ ಸಮಾಜವನ್ನು ಇಡೀ ಜಗತ್ತಿಗೆ ಒಂದು ಮಾದರಿ ಸಮಾಜವನ್ನಾಗಿ ಮಾಡಿತು-ಮೌಲಾನ ಸಜ್ಜಾದ್ ನೊಮಾನಿ https://www.sahilonline.net/ka/rabita-educational-awards-fete-academic-excellence-in-1st-session-2023-24 ಭಟ್ಕಳ: ಅಜ್ಞಾನ ಅಂಧಕಾರಗಳಿಂದ ಕೂಡಿದ್ದ ಒಂದು ಸಮಾಜವನ್ನು ತಮ್ಮ ಉತ್ತಮ ಶಿಕ್ಷಣ ಮತ್ತು ತರಬೇತಿಯಿಂದಾಗಿ ಪ್ರವಾದಿ ಮುಹಮ್ಮದ್ (ಸ)ರು ಜಗತ್ತಿಗೆ ಒಂದು ಮಾದರಿ ಸಮಾಜವನ್ನಾಗಿ ರೂಪಿಸಿ ತೋರಿಸಿದ್ದಾರೆ ಎಂದು ಖ್ಯಾತ ಇಸ್ಲಾಮಿ ವಿದ್ವಾಂಸ ಅಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇದರ ಮಾಜಿ ವಕ್ತಾರ ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನೋಮಾನಿ ಹೇಳಿದರು. ಕಾರವಾರ: ಸ್ಥಳೀಯ ಯುವ ಜನತೆಗೆ ಉದ್ಯೋಗವಕಾಶ ಸೃಷ್ಠಿಸಿ: ಡಾ. ರಮಣರೆಡ್ಡಿ https://www.sahilonline.net/ka/karwar-create-employment-opportunities-for-local-youth-urge-drramanreddy-in-uttara-kannada ಉತ್ತರ ಕನ್ನಡ ಜಿಲ್ಲೆಯ  ಯುವಜನತೆಗೆ ಕಾರವಾರದ ನೌಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಮತ್ತು ನೌಕಾ ನಲೆಯಲ್ಲಿ ಉದ್ಯೋಗವಕಾಶಗಳನ್ನು ಸೃಷ್ಠಿಸುವಂತೆ ಹಾಗೂ ಈ ಕುರಿತು ಅಗತ್ಯವಿರುವ ಕೌಶಲ್ಯ ತರಬೇತಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಕರ್ನಾಟಕ ಕೌಶಲ್ಯ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ.ಇ.ವಿ.ರಮಣರೆಡ್ಡಿ ತಿಳಿಸಿದರು. ಗ್ಯಾಸ್ ಟ್ಯಾಂಕರ್ ಸೋರಿಕೆ ಸಾಧ್ಯತೆ :ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ https://www.sahilonline.net/ka/gas-tanker-spill-possible-notice-to-evacuate-to-safe-places ಕಾರವಾರ : ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಮಳೆಯಿಂದ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯತ ಶಿರೂರು ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು ಗ್ಯಾಸ್ ಟ್ಯಾಂಕರ್ ಸೋರಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ  ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ ತಡೆಗೆ ಶಾಶ್ವತ ಪರಿಹಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ https://www.sahilonline.net/ka/permanent-solution-to-artificial-barriers-on-national-highways-mp-vishweshwar-hegde-kageri ಕಾರವಾರ :ಕಾರವಾರ ಸೀ ಬರ್ಡ್ ನೌಕಾನೆಲೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬರುವ ಕೃತಕ ನೆರೆಯನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು  ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಭಟ್ಕಳ: ಆತ್ಮಹತ್ಯೆ ಶರಣಾದ ತಾಯಿ ಮಗಳು: ಭಟ್ಕಳದಲ್ಲಿ ನಡೆದ ದಾರುಣ ಘಟನೆ https://www.sahilonline.net/ka/mother-commits-suicide-following-her-daughters-suicide-in-bhatkal-sarpankatta ಮನೆಯಲ್ಲಿ ಯಾರು ಇರದ ಸಮಯದಲ್ಲಿ ಮಹಿಳೆಯೊರ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಇದನ್ನು ನೋಡಿದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯಲ್ವಡಿಕವೂರ ಪಂಚಾಯಿತಿ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಸೋಮವಾರ ನಡೆದಿದೆ. ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು 7ಮಂದಿ  ಸಾವು https://www.sahilonline.net/ka/heavy-rain-in-uttara-kannada-causes-rock-slides-on-highway-7-suspected-dead-in-ankola ಅಂಕೋಲಾ : ಉ.ಕ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದ್ದು ಅಂಕೋಲಾ ತಾಲೂಕಿನ ಶಿರೂರು ಬಳಿ ರಾ.ಹೆ.66 ರಲ್ಲಿ ಭಾರಿ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬ ಐವರು ಸೇರಿದಂತೆ 7 ಮಂದಿ ಮಣ್ಣಿನ ಅಡಿ ಸಿಲುಕಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಸಾರ್ವಜನಿಕರ ನೆರವಿಗೆ ತುರ್ತು ಕಾರ್ಯಚರಣೆ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ https://www.sahilonline.net/ka/establishment-of-emergency-operation-center-for-public-assistance-district-collector-lakshmeepriya ಕಾರವಾರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 18 ರ ವರಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24*7 ಕಾರ್ಯ ನಿರ್ವಹಿಸುವ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು. ಡಾ. ಸಚಿನ್ ಭಟ್ಟ ಹಾಗೂ ಪ್ರೊ. ಅಲಕಾ ಅನಂತ್  ರಿಗೆ ಗ್ರಾಸ್‌ರೂಟ್ ಇನ್ನೋವೆಶನ್ ಅವಾರ್ಡ್ https://www.sahilonline.net/ka/dr-sachin-bhatta-and-prof-grassroots-innovation-award-to-alaka-anant ಭಟ್ಕಳ: ಡಾ. ಸಚಿನ್ ಭಟ್ಟ ಹಾಗೂ ಪ್ರೊ. ಅಲಕಾ ಅನಂತ್ ಅವರಿಗೆ ಕರ್ನಾಟಕ ಸರ್ಕಾರ ಚೊಚ್ಚಲ 'ತಳಹಂತದ ನಾವೀನ್ಯತಾ ಪುರಸ್ಕಾರ' (ಗ್ರಾಸ್‌ರೂಟ್ ಇನ್ನೋವೆಶನ್ ಅವಾರ್ಡ್) ೨೦೨೪ನ್ನು ಘೋಷಣೆ ಮಾಡಿದೆ. ಭಟ್ಕಳ: ಜು.16 ರಂದು ಪ್ರತಿಷ್ಠಿತ “ರಾಬಿತಾ ಎಜ್ಯುಕೇಶನಲ್ ಎಕ್ಸಲೆನ್ಸ್ ಅವಾರ್ಡ” ಸಮಾರಂಭ https://www.sahilonline.net/ka/bhatkal-prestigious-rabita-educational-excellence-award-ceremony-on-july-16 ಭಟ್ಕಳ: ಅನಿವಾಸಿ ಭಾರತೀಯರ “ರಾಬಿತಾ ಸೂಸೈಟಿಯಿಂದ ವರ್ಷಂಪ್ರತಿ ನಡೆಯುವ ರಾಬಿತಾ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜು.16 ರಂದು ಬೆಳಿಗ್ಗೆ 10ಗಂಟೆಗೆ ಅಂಜುಮನ್ ಆಬಾದ್ ಮೈದಾನದಲ್ಲಿ ಜರುಗಲಿದೆ ಎಂದು ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಡಾ.ಅತಿಕುರ‍್ರಹ್ಮಾನ್ ಮುನಿರಿ ಹೇಳಿದರು. ಕಾರವಾರ: ಭಾರೀ ಮಳೆಯ ಅಬ್ಬರ; ಜನವಸತಿ ಪ್ರದೇಶ ಮುಳುಗಡೆ, ಮುಂದಿನ 48 ಗಂಟೆ ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್ https://www.sahilonline.net/ka/heavy-rain-in-karwar-inundation-of-residential-areas-damage-in-many-places ತಾಲೂಕಿನಲ್ಲಿ ಅಬ್ಬರದ ಮಳೆಯಾಗಿದ್ದು ಅನೇಕ ಜನವಸತಿ ಪ್ರದೇಶಗಳು ಮುಳುಗಡೆಯಾಗಿವೆ. ಉ.ಕ.ಜಿಲ್ಲೆಯಲ್ಲಿ ಜು.15 ರಂದು ಶಾಲಾಕಾಲೇಜುಗಳಿಗೆ ರಜೆ https://www.sahilonline.net/ka/holiday-for-uk-district-schools-and-colleges-on-july-15 ಕಾರವಾರ: ಉ.ಕ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ,ಶಿರಸಿ ,ಸಿದ್ದಾಪೂರ,ಯಲ್ಲಾಪೂರ ,ದಾಂಡೇಲಿ, ಹಾಗೂ ಜೋಯಿಡ ತಾಲೂಕಿನಲ್ಲಿ ಮಳೆಯ ಕಾರಣ ಜು.15 ರಂದು ಪ್ರಾಥಮಿಕ, ಪ್ರೌಢಶಾಲೆ ಸೇರಿದಂತೆ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆಯನ್ನು ಘೋಷಿಸಿದ್ದಾರೆ.  ಭಟ್ಕಳದ ಲೈಫ್ ಕೇರ್ ಆಸ್ಪತ್ರೆಯಲ್ಲಿ  ಸಿಟಿ ಸ್ಕ್ಯಾನ್, ಐಸಿಯು ಮತ್ತು ಮಾಡ್ಯುಲರ್ ಓಟಿ ಉದ್ಘಾಟನೆ https://www.sahilonline.net/ka/inauguration-of-ct-scan-icu-and-modular-ot-at-life-care-hospital-bhatkal ಲೈಪ್ ಕೇರ್ ಆಸ್ಪತ್ರೆ ಆರಂಭವಾಗಿ 4 ವರ್ಷದ ಬಳಿಕ ಅತ್ಯಾಧುನಿಕ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ಇದೀಗ ಆಸ್ಪತ್ರೆಯಲ್ಲಿ 50 ಬೆಡ್ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಇದು 200 ಬೆಡ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಆಸ್ಪತ್ರೆಯ ಅಭಿವೃದ್ಧಿಗೆ ಸರಕಾರದಿಂದಲೂ ಸಹ ಸಹಾಯ ಸಹಕಾರ ಮಾಡಲಾಗುವುದು ಎಂದರು. ನಮ್ಮ ದೇಶದಲ್ಲಿನ ವೈವಿಧ್ಯತೆ ನಮ್ಮ ದೌರ್ಬಲ್ಯವಲ್ಲ ನಮ್ಮ ಶಕ್ತಿ ಆಗಿದೆ-ಡಾ.ಸಲೀಮ್ ಇಂಜಿನೀಯರ್ https://www.sahilonline.net/ka/diversity-in-our-country-is-not-our-weakness-but-our-strength-dr-saleem-eng ಭಟ್ಕಳ: ನಮ್ಮ ದೇಶದಲ್ಲಿ ವೈವಿದ್ಯತೆ ಇದೆ. ಇಲ್ಲಿನ ಅಹಾರ ಪದ್ದತಿ, ಉಡುಗೆ ತೊಡುಗೆ, ಭಾಷೆ, ಸಂಸ್ಕೃತಿ, ಧರ್ಮ, ಆಚಾರ-ವಿಚಾರ ಎಲ್ಲವೂ ವಿಭಿನ್ನವಾಗಿವೆ. ಈ ವೈವಿಧ್ಯತೆ ನಮ್ಮ ದೌರ್ಬಲ್ಯವಾಗದೆ ಅದು ನಮ್ಮ ಶಕ್ತಿಯಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸದ್ಭಾವನಾ ಮಂಚ್ ಇದರ ರಾಷ್ಟ್ರೀಯ ಸಂಚಾಲಕ ಫ್ರೊ. ಡಾ.ಮುಹಮ್ಮದ್ ಸಲೀಮ್ ಇಂಜಿನೀಯರ್ ಹೇಳಿದರು. ಭಟ್ಕಳ: ವಿಜೃಂಭಣೆಯಿಂದ ನಡೆದ ಅಕ್ಷರಾಭ್ಯಾಸ https://www.sahilonline.net/ka/literacy-with-enthusiasm-vidyanjali-school-bhatkal ಇಲ್ಲಿನ ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾದ ಮಕ್ಕಳಿಗೆ ಪ್ರಾರಂಭಿಕ ವಿದ್ಯಾಭ್ಯಾಸದ ಮೊದಲ ಹಂತವಾದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಟ್ಕಳ: ರಾಜ್ಯ ಮಟ್ಟದ 'ಮೀಡಿಯಾ ಫೆಸ್ಟ್' ಶ್ರೀ ಗುರು ಸುಧೀಂದ್ರ ವಿದ್ಯಾರ್ಥಿಗಳ ಸಾಧನೆ https://www.sahilonline.net/ka/students-of-sri-guru-sudhindra-college-bhatkal-achieve-success-in-state-level-media-fest ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 40ನೇ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಕಾನ್ಫರೆನ್ಸ್ ಹಾಗೂ ರಾಜ್ಯಮಟ್ಟದ ಮೀಡಿಯಾ ಫೆಸ್ಟ್ ನಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ ಬಿಏ ಪತ್ರಿಕೋದ್ಯಮ ಗೃಹಲಕ್ಷ್ಮಿ : ಲಿಂಗತ್ವ ಅಲ್ಪಸಂಖ್ಯಾತರ ನೋಂದಣಿಗೆ ಅವಕಾಶ https://www.sahilonline.net/ka/karwar-grilahakshmi-allowance-for-registration-of-gender-minorities ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಅಥವಾ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಗೃಹಲಕ್ಷ್ಮಿ ಯೋಜನೆಯಡಿ ಪ್ರಯೋಜನ ಪಡೆಯಲು ಅನುವಾಗುವಂತೆ ಗೃಹಲಕ್ಷ್ಮಿ ಯೋಜನೆಯ ತಂತ್ರಾAಶದಲ್ಲಿ ಅರ್ಜಿಸಲ್ಲಿಸುವ ಸಂದರ್ ಭದಲ್ಲಿ National Portal For Transgender Person ವತಿಯಿಂದ ಪಡೆದಿರುವ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿಯನ್ನು ಪರಿಗಣಿಸಲು ಸರ್ಕಾರವು ಅನುಮೋದನೆ ನೀಡಿ ತಂತ್ರಾAಶದಲ್ಲಿ ಮಾರ್ಪಾಡು ಮಾಡಲಾಗಿದೆ. ಕಾರವಾರ: ಮನೆಯ ಸುತ್ತಮುತ್ತ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ https://www.sahilonline.net/ka/uttara-kannada-dc-lakshmi-priya-urges-residents-to-take-dengue-control-measures-around-their-homes ಡೆಂಗ್ಯೂ ರೋಗ ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುವ ಎಲ್ಲಾ ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರು ತಮ್ಮ ಮನೆಯ ಒಳಗೆ ಮತ್ತು ಮನೆಯ ಸುತಮುತ್ತಲಿನ ಅವರಣದಲ್ಲಿ ತಪ್ಪದೇ ಅಳವಡಿಸಿಕೊಳ್ಳ್ಳುವ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ ಉಲ್ಬಣಗೊಳ್ಳದಂತೆ ತಡೆಯುವ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿನ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಅಂತ್ಯ ಹಾಡಲಿವೆ ಎಂ.ಆರ್.ಎಫ್. ಕೇಂದ್ರಗಳು https://www.sahilonline.net/ka/mrf-is-going-to-put-an-end-to-the-problem-of-solid-waste-disposal-in-uttara-kannada-district ಉತ್ತರ ಕನ್ನಡ ಜಿಲ್ಲೆಯ 12 ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿದಿನ ಸಂಗ್ರಹವಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ನಗರಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಸಾರ್ವಜನಿರ ಆರೋಗ್ಯ ಕಾಪಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1368.81 ಲಕ್ಷ ರೂ ಗಳ ವೆಚ್ಚದಲ್ಲಿ 12 ಎಂ.ಆರ್.ಎಫ್. (Materials Recovery Facility ) ಕೇಂದ್ರಗಳನ್ನು ಆರಂಭಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ನ ನೂತನ ಪದಾಧಿಕಾರಿಗಳು ಆಯ್ಕೆ https://www.sahilonline.net/ka/new-office-bearers-of-bhatkala-muslim-youth-federation-elected ಭಟ್ಕಳ: ಭಟ್ಕಳದ 24 ಕ್ರೀಡಾ ಸಂಘಟನೆಗಳ ಒಕ್ಕೂಟವಾಗಿರುವ ಭಟ್ಕಳ ಮುಸ್ಲಿಂ ಯುತ್ ಫೆಡರೇಷನ್ (BMFY)   ನ ನೂತನ ಪದಾಧಿಕಾರಿಗಳ ಆಯ್ಕೆ ತಂಝೀಮ್ ಸಭಾಂಗಣದಲ್ಲಿ ಗುರುವಾರ ನಡೆಯಿತು.   ಡಾ.ಸಾದಾತ್ ಹುಸೇನ್’ಗೆ ಎಕಾನಾಮಿಕ್ಸ್ ಆಫ್ ಎಜುಕೇಶನ್ ನಲ್ಲಿ ಜೆ.ಎನ್.ಯು ವಿ.ವಿ ದಿಂದ ಡಾಕ್ಟರೇಟ್ ಪದವಿ https://www.sahilonline.net/ka/dr-sadat-hussains-doctorate-degree-in-economics-of-education-from-jnu ಉಡುಪಿ: ಉಡುಪಿ ಜಿಲ್ಲೆಯ ಕಿರಿಮಂಜೇಶ್ವರ ಗ್ರಾಮದ ವಿದ್ಯಾರ್ಥಿ ದೆಹಲಿಯ ಪ್ರತಿಷ್ಠಿತ ಕೇಂದ್ರೀಯ ವಿಶ್ವವಿದ್ಯಾಲಯ ಜೆ.ಎನ್.ಯು ನಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ‌. ಕಾರವಾರ: ಜಿಲ್ಲೆಯಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ https://www.sahilonline.net/ka/take-measures-to-control-dengue-in-uttara-kannada-district-dc-lakshmi-priya-says ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಉಲ್ಬಣಗೊಳ್ಳದಂತೆ, ಅದರ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರÀಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದರು. ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ https://www.sahilonline.net/ka/shakti-scheme-turns-one-year-over-6-crore-women-in-uttara-kannada-benefit-from-free-travel ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ, ಒಂದು ವರ್ಷ ಪೂರ್ಣಗೊಂಡಿದ್ದು, ಈ ಯೋಜನೆಯಡಿ 2024 ರ ಜೂನ್ ಅಂತ್ಯದ ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದಿದ್ದು, 178.12 ಕೋಟಿ ರೂ ಮೊತ್ತದ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ವಿತರಿಸಲಾಗಿದೆ. ಚಿತ್ರಾಪುರ ಮಠದ ಹಿರಿಯ ಪುರೋಹಿತ ಹಾಗೂ ಅರ್ಚಕ ರಾಮೇಶ್ವರ ಗಂಗಾಧರ್ ಹರಿದಾಸ ನಿಧನ https://www.sahilonline.net/ka/rameshwar-gangadhar-haridas-senior-priest-and-priest-of-chitrapur-mutt-passed-away ಭಟ್ಕಳ: ಹಿರಿಯ ಪುರೋಹಿತರೂ ಚಿತ್ರಾಪುರ ಮಠದ ಅರ್ಚಕರು ಆದ ರಾಮೇಶ್ವರ ಗಂಗಾಧರ ಹರಿದಾಸ (೬೮) ಇವರು ತೀವ್ರ ಹೃದಯಾಘಾತದಿಂದ ನಿದನರಾದರು. ಮುರುಢೇಶ್ವರದ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ನಿಂದ ಸೌಹಾರ್ದ ಕಾರ್ಯಕ್ರಮ https://www.sahilonline.net/ka/friendly-program-by-human-welfare-trust-murudeshwar ನಮ್ಮಲ್ಲಿನ ಪ್ರತಿಯೊಬ್ಬರಲ್ಲಿ ಹರಿಯುತ್ತಿರುವ ರಕ್ತ ಒಂದೇ ಆಗಿದ್ದು, ಸೇವಿಸುವ ಗಾಳಿ, ನೀರು ಎಲ್ಲವೂ ಒಂದೇ ಆಗಿರುವಾಗ ನಮ್ಮಲ್ಲಿನ ಈ ಬೇಧ-ಭಾವ ಯಾಕೆ ಎಂದು ನನಗೆ ಗೊತ್ತಾಗುತ್ತಿಲ್ಲ. ನಮಗೆ ಸಿಕ್ಕಿರುವ ಈ ಅಲ್ಪ ಜೀವನದಲ್ಲಿ ದ್ವೇಷ, ಜಗಳವನ್ನು ಬದಿಗಿಟ್ಟು ಬದುಕುವುದನ್ನು ಕಲಿಯೋಣ ಎಂದು ಕರೆ ನೀಡಿದರು. ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿ  ನಾಟ್ಯಶ್ರೀ ಬೆಳ್ಳಿಸಂಭ್ರಮ ಸರಣಿ ತಾಳ ಮದ್ದಳೆ ಕಾರ್ಯಕ್ರಮ https://www.sahilonline.net/ka/natyashree-silver-celebration-series-tala-maddale-program-at-bastimakki-murdeshwar ಭಟ್ಕಳ: ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಟಾನ ಕವಲಕ್ಕಿ ಹೊನ್ನಾವರ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ನಾಟ್ಯಶ್ರೀ ಬೆಳ್ಳಿಸಂಭ್ರಮ ಸರಣಿ ತಾಳ ಮದ್ದಳೆ ಕಾರ್ಯಕ್ರಮ ಅಂಗವಾಗಿ ಇಲ್ಲಿನ ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನದಲ್ಲಿ ಕಿಷ್ಕಿಂಧಾ ಆಖ್ಯಾನವನ್ನು ಪ್ರದರ್ಶಿಸಲಾಯಿತು. ಭಾರೀ ಮಳೆಯಿಂದ ಹದಗೆಟ್ಟಿರುವ ಭಟ್ಕಳದ ರಸ್ತೆ ; ವಾಹನ ಸಂಚಾರಕ್ಕೆ ತೊಂದರೆ https://www.sahilonline.net/ka/bhatkala-which-has-deteriorated-due-to-heavy-rains-difficulty-in-vehicular-traffic ಭಟ್ಕಳ:  ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಭಟ್ಕಳದ ಒಳ ರಸ್ತೆಗಳು ಶೋಚನೀಯ ಸ್ಥಿತಿಯಲ್ಲಿದ್ದು, ಸವಾರರು ಸಂಚರಿಸಲು ಪರದಾಡುವಂತಾಗಿದೆ. ಈಗಾಗಲೇ ಹಾಳಾಗಿರುವ ಮುಖ್ಯರಸ್ತೆಯಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದು, ಪ್ರಯಾಣಕ್ಕೆ ಮತ್ತಷ್ಟು ತೊಡಕುಂಟಾಗಿದೆ. ಮೀನು ಸಂತತಿ ರಕ್ಷಣೆಗಾಗಿ ಕಾಯ್ದೆ ರೂಪಿಸಬೇಕು-ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ https://www.sahilonline.net/ka/an-act-should-be-framed-for-the-protection-of-fish-species-fisheries-minister-mankal-vaidya ಈ ಹಿಂದೆ ರಾಜ್ಯ ಬಜೆಟ್ ನಲ್ಲಿ ಮೀನುಗಾರಿಕಾ ಅಭಿವೃದ್ಧಿಗೆ ಕೇವಲ 300 ಕೋಟಿ ಅನುದಾನ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಬಜೆಟ್ ನಲ್ಲಿ ಮೀನುಗಾರರಿಗೆ 3ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ.ರಾಜ್ಯ ಸರಕಾರ ಮೀನುಗಾರರಿಗೆ ಡಿಸೇಲ್ , ಸೀಮೆ ಎಣ್ಣೆಗೆ ಸಬ್ಸಿಡಿ ನೀಡಿ ಮೀನುಗಾರರಿಗೆ ನೆರವಾಗುತ್ತಿದ್ದರೂ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಮೀನುಗಾರರಿಗೆ ಯಾವುದೇ ಸಬ್ಸಿಡಿ ನೀಡಲಿಲ್ಲ. ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಮೃತಪಟ್ಟ ಮೀನುಗಾರರಿಗೆ ನೀಡುವ ಪರಿಹಾರವನ್ನು 6 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, 24 ಗಂಟೆಗಳಲ್ಲಿ ಕುಟುಂಬಕ್ಕೆ ಪರಿಹಾರ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ. ಮುಸ್ಲೀಮರು ಕಾಂಗ್ರೇಸ್ ಓಟ್ ಬ್ಯಾಂಕ್ ರಾಜಕಾರಣಕ್ಕೆ ದಾಳವಾಗುತ್ತಿದ್ದಾರೆ https://www.sahilonline.net/ka/muslims-are-falling-prey-to-congress-ot-bank-politics ಮುಸ್ಲಿಮರು  ಒಂದು ಪಕ್ಷವನ್ನು ನೆಚ್ಚಿಕೊಂಡು ಕಡೆ ಮತ ಚಲಾಯಿಸುವ ಮನಸ್ಥಿತಿ ಹೊಂದಿದ್ದು ಇದು ಸರಿಯಲ್ಲ. ಅಲ್ಪಸಂಖ್ಯಾತರು ಸರಿ ತಪ್ಪಿನ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿನ ಷಡ್ಯಂತ್ರಕ್ಕೆ ಒಳಗಾಗಬಾರದು ಎಂದು ಕರೆ ನೀಡಿದ ಅವರು ಒಂದೇ ಕಡೆ ಮತ ಚಲಾಯಿಸುವ ನಿಮ್ಮ ಮನಸ್ಥಿತಿಯಿಂದ ಮುಂದೆ ಅಪಾಯ ಆಗುವ ಸಾಧ್ಯತೆ ಇದ್ದು, ಈಗಿಂದಲೇ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.   ಕುಮಟಾ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ https://www.sahilonline.net/ka/gas-tanker-that-hit-the-bridge-and-fell-into-the-river-near-honmanv-cross ಕುಮಟಾ: ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ಸೇತುವೆಗೆ ಢಿಕ್ಕಿ ಹೊಡೆದು ನದಿಗೆ ಬಿದ್ದ ಘಟನೆ ಹೊನ್ಮಂವ್ ಕ್ರಾಸ್ ಬಳಿ ಬುಧವಾರ ನಡೆಸಿದೆ.   ರೈಲು ಬಡಿದು ವ್ಯಕ್ತಿಯ ದೇಹದಿಂದ ಬೇರ್ಪಟ್ಟ ಕೈ; ಭಟ್ಕಳ ರೈಲುನಿಲ್ದಾಣದಲ್ಲಿ ನಡೆದ ಘಟನೆ https://www.sahilonline.net/ka/man-falls-onto-tracks-after-being-hit-by-train-while-walking-on-bhatkal-railway-platform-arm-severed ಭಟ್ಕಳ:  ರೈಲ್ವೇ ಪ್ಲಾಟ್‌ಫಾರ್ಮ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅಪರಿಚಿತ ಶವ ಪತ್ತೆ ಬಗ್ಗೆ ಪೊಲೀಸ್ ನೋಟಿಸ್ https://www.sahilonline.net/ka/about-the-discovery-of-an-unknown-body ಅಪರಿಚಿತ ಶವದ ವಿವರ: ವಯಸ್ಸು ಸುಮಾರು 16 ರಿಂದ 18 ವರ್ಷ ಎತ್ತರ 5.2 ಅಡಿ, ದುಂಡು ಮುಖ, ಗೋಧಿ ಮೈಕಟ್ಟು, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ತಿಳಿಗುಲಾಬಿ ಬಣ್ಣದ ಟಾಪ್, ಕೊರಳಲ್ಲಿ ಕಪ್ಪು ಬಣ್ಣದ ಬೂದು ವೇಲ್ ಧರಿಸಿದ್ದಾಳೆ. ಲಂಚ ಪಡೆದ ತೆರಿಗೆ ವಸೂಲಿ ಸಹಾಯಕನಿಗೆ ಶಿಕ್ಷೆ ಪ್ರಕಟ https://www.sahilonline.net/ka/punishment-announced-for-tax-collector-who-accepted-bribe ಕಾರವಾರ: ಮನೆಯ ಉತಾರು ಪತ್ರ ವಿತರಿಸಲು ಲಂಚ ಪಡೆದಿದ್ದ ತೆರಿಗೆ ವಸೂಲಿ ಸಹಾಯಕನಿಗೆ ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7, ರಡಿ 6 ತಿಂಗಳ ಸಾಧಾರಣ ಕಾರಾವಾಸ ಶಿಕ್ಷೆ ಹಾಗೂ ರೂ. 1000 ದಂಡ ಮತ್ತು ಕಲಂ 13(2) ರಡಿಯಲ್ಲಿ 1 ವರ್ಷ ಸಾಧಾರಣ ಕಾರಾವಾಸ ಶಿಕ್ಷೆ ಹಾಗೂ ರೂ 1000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 1 ತಿಂಗಳು ಸಾಧಾರಣ ಕಾರಾವಾಸ ಶಿಕ್ಷೆ ವಿಧಿಸಿ, ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಫ್ಯಾಶನ್ ಡಿಸೈನಿಂಗ್/ ಟೈಲರಿಂಗ್ ತರಬೇತಿ https://www.sahilonline.net/ka/free-fashion-designingtailoring-training-for-women ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಫ್ಯಾಶನ್ ಡಿಸೈನಿಂಗ್/ ಟೈಲರಿಂಗ್ ಕುರಿತ 30 ದಿನಗಳ ಉಚಿತ ತರಬೇತಿಯು ಆಗಸ್ಟ್ 1 ರಿಂದ ಆರಂಭವಾಗಲಿದೆ. ಗ್ರಾಮೀಣ ಆಸಕ್ತ ನಿರುದ್ಯೋಗಿ ಮಹಿಳೆಯರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ನೋಂದಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು https://www.sahilonline.net/ka/registered-candidates-must-have-an-aadhaar-seeded-bank-account ಕಾರವಾರ: ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ವೆಬ್ ಸೈಟ್ https://sevasindhugs.karnataka.gov.in ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು, ರಹವಾಸಿ ಪರಿಶೀಲನೆಗೆ ಬಾಕಿ ಉಳಿದಿರುವ ಅಭ್ಯರ್ಥಿಗಳು ಮಾತ್ರ ಸೂಚಿಸಲ್ಪಟ್ಟ ಇಲಾಖೆಯ ಕಛೇರಿಗಳಿಗೆ ತಮ್ಮ ಎಲ್ಲಾ ಮೂಲ ಅಂಕಪಟ್ಟಿ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಿ ಶೀಘ್ರವಾಗಿ ದೃಢೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಜು.10 ರಂದು ಭಟ್ಕಳದಲ್ಲಿ ಮೀನು ಕೃಷಿಕರ ದಿನಾಚರಣೆ https://www.sahilonline.net/ka/fish-farmers-day-celebration-at-bhatkal-on-july-10 ಕಾರವಾರ: ಜಿಲ್ಲಾ ಪಂಚಾಯತ್ ಮತ್ತು ಮೀನುಗಾರಿಕೆ ಇಲಾಖೆ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಮೀನು ಕೃಷಿಕರ ದಿನಚಾರಣೆಯನ್ನು ಜು.10 ರಂದು ಬೆಳಗ್ಗೆ 10.30 ಕ್ಕೆ ಎಂ.ಎಂ. ರೆಸಾರ್ಟ್ಸ್, ಗೊರಟೆ ಕ್ರಾಸ್ ಬಳಿ, ಭಟ್ಕಳದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮಳೆ ಇಳಿಮುಖ, 5 ಕಾಳಜಿ ಕೇಂದ್ರಗಳಲ್ಲಿ 150 ಜನರಿಗೆ ಆಶ್ರಯ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ https://www.sahilonline.net/ka/rainfall-in-the-district-150-people-sheltered-in-5-care-centers-district-collector-lakshmeepriya ಕಾರವಾರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕವಾಗಿದ್ದ ಮಳೆಯ ಪ್ರಮಾಣ, ಮಂಗಳವಾರ ಇಳಿಮುಖವಾಗಿದ್ದು, ಹೊನ್ನಾವರ ತಾಲ್ಲೂಕಿನ 3 ಮತ್ತು ಕುಮಟಾದ 2 ಕಾಳಜಿ ಕೇಂದ್ರ ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳಲ್ಲಿ 150 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಜುಲೈ 9 ರಂದು ಭಟ್ಕಳದ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ https://www.sahilonline.net/ka/holiday-announced-for-bhatkal-schools-tomorrow-on-july-9 ಭಟ್ಕಳ:  ಮಾನ್ಯ ಸಹಾಯಕ ಆಯುಕ್ತರು, ಭಟ್ಕಳ ಇವರ ನಿರ್ದೇಶನದಂತೆ ಭಟ್ಕಳದಲ್ಲಿ ಸೋಮವಾರ ಸಾಯಂಕಾಲದ ನಂತರ ಮಳೆಯ ಪ್ರಭಾವವು ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಯ ಸಲುವಾಗಿ ನಾಳೆ ಜುಲೈ 9 ರಂದು ಎಲ್ಲಾ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ್ ಪ್ರಕಣೆಯಲ್ಲಿ ತಿಳಿಸಿದ್ದಾರೆ.  ಹನೀಫಾಬಾದ್ ನಲ್ಲಿ ಜಲಾವೃತಗೊಂಡ ಮನೆ; ಸ್ಥಳ ಪರಿಶೀಲನೆ ಮಾಡಿದ ಪಂಚಾಯತ್ ಅಧಿಕಾರಿ https://www.sahilonline.net/ka/flooded-house-in-hanifabad-panchayat-officer-who-inspected-the-spot ಭಟ್ಕಳ: ಇಲ್ಲಿನ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಹನೀಫಾಬಾದ್ ಪ್ರದೇಶದಲ್ಲಿ ಇಬ್ರಾಹೀಮ್ ಖಲೀಲ್ ಎಂಬುವವರಿಗೆ ಸೇರಿದ ಮನೆಯು ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಈ ಕುರಿತು ತನಗಾದ ನಷ್ಟವನ್ನು ತುಂಬಿಕೊಡುವಂತೆ ಕೋರಿ ಪಂಚಾಯತ್ ಅಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಹೊನ್ನಾವರ, ಕುಮಟಾ ತಾಲೂಕಿನ ಶಾಲಾ ಕಾಲೇಜುಗಳಿಗೆ ಜು.9 ರಂದು ರಜೆ-ಜಿಲ್ಲಾಧಿಕಾರಿ https://www.sahilonline.net/ka/holiday-for-schools-and-colleges-of-honnavar-kumata-taluk-on-july-9 ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವಿಪರೀತವಾಗಿ ಮಳೆ ಮುಂದುವರೆದ ಹಿನ್ನಲೆಯಲ್ಲಿ  ಕುಮಟಾ ತಾಲೂಕಿನ ಶಾಲಾ ಕಾಲೇಜುಗಳಿಗೆ ಜು.9 ರಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯ ರಜೆಯನ್ನು ಘೋಷಿಸಿದ್ದಾರೆ. ಭಟ್ಕಳದಲ್ಲಿ  ಡೆಂಗ್ಯೂ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಶೌಚಾಲಯ https://www.sahilonline.net/ka/the-ksrtc-bus-stand-toilet-has-become-a-dengue-breeding-ground-in-bhatkal-public-demand-for-immediate-action ಶೌಚಾಲಯದಿಂದ ಹೊರಬರುವ ಮಲಮೂತ್ರ ಮತ್ತು ಹೊಲಸು ಮಳೆ ನೀರಿನೊಂದಿಗೆ ವಿಲೀನಗೊಂಡು ಬಸ್ ನಿಲ್ದಾಣ ಮತ್ತು ಅದರ ಹಿಂದೆ ಇರುವ ಜನವಸತಿ ಪ್ರದೇಶಗಳಿಗೆ ಸೇರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಲು ಕಾರಣವಾಗಿದೆ. ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್) ನಿಧನ https://www.sahilonline.net/ka/death-of-assayed-fazal-koyamma-tangal-al-bukhari ಮಂಗಳೂರು : ಉಳ್ಳಾಲ ಖಾಝಿ, ಮರ್ಹೂಂ ಶೈಖುನಾ ತಾಜುಲ್ ಉಲಮಾ ಅಸ್ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್) ಜು.8ರಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು.  ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ, 2 ಕಾಳಜಿ ಕೇಂದ್ರಗಳಲ್ಲಿ 59 ಜನರಿಗೆ ಆಶ್ರಯ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. https://www.sahilonline.net/ka/widespread-rain-in-coastal-parts-of-uttara-kannada-59-people-sheltered-in-2-care-centers-says-dc-lakshmi-priya ಜಿಲ್ಲೆಯಲ್ಲಿ ಭಾನುವಾರ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು,  ಹೊನ್ನಾವರ ತಾಲ್ಲೂಕಿನಲ್ಲಿ 2 ಕಾಳಜಿ ಕೇಂದ್ರಗಳಲ್ಲಿ 59 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಬಾಲ್ಯದಲ್ಲಿ ಪ್ರೀತಿ ಸಿಗದ ಮಕ್ಕಳು, ಸಮಾಜದಲ್ಲಿ ದುಷ್ಟರಾಗಿ ಬೆಳೆಯುತ್ತಾರೆ. ಸಯೀದ್ ಇಸ್ಮಾಯಿಲ್ https://www.sahilonline.net/ka/children-who-do-not-get-love-in-childhood-grow-up-to-be-evil-in-society-saeed-ismail ಕಾಪು : ಮಕ್ಕಳಿಗೆ ತಮ್ಮ ಮನೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿಯರಿಂದ ಪ್ರೀತಿ ಸಿಗಬೇಕು. ಅದು ಸಿಗದಿದ್ದಲ್ಲಿ ಅವರಲ್ಲಿ ಕ್ರೂರತನ ಮೂಡಿ , ಮುಂದೆ ಅವರು ಸಮಾಜದಲ್ಲಿ ದುಷ್ಟರಾಗಿ ಬೆಳೆಯಲು ಕಾರಣವಾಗುತ್ತದೆ, ತಮ್ಮ ಮಕ್ಕಳು ಒಳ್ಳೆಯವರಾಗಬೇಕಿದ್ದಲ್ಲಿ , ಹೆತ್ತವರು ಕೂಡಾ ಒಳ್ಳೆಯವರಾಗಬೇಕಾಗುತ್ತದೆ. ಮಕ್ಕಳ ಮುಂದೆ ತಂದೆ, ತಾಯಿ, ಸಹೋದರ, ಸಹೋದರಿಯರು ಜಗಳವಾಡುತಿದ್ದರೆ ಮಕ್ಕಳ ಮೇಲೆ ಅದರ ದುಷ್ಪರಿಣಾಮಬೀರುತ್ತದೆ ಎಂದು ಜಮಾಆತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್ ಹೇಳಿದರು. ಭಾರೀ ಮಳೆಯಿಂದ ಭಟ್ಕಳ ತಾಲೂಕಿನಲ್ಲಿ ತೀವ್ರ ಜಲಾವೃತ, ವಾಹನ ಸಂಚಾರ ಸ್ಥಗಿತ; ಶಾಲಾ ಕಾಲೇಜುಗಳಿಗೆ ರಜೆ https://www.sahilonline.net/ka/heavy-rain-in-bhatkal-causes-major-traffic-jams ಭಟ್ಕಳ: ಭಾನುವಾರ ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಭಟ್ಕಳ ತಾಲೂಕಿನಾದ್ಯಂತ ಹಾನಿಯನ್ನುಂಟುಮಾಡಿದೆ, ಪ್ರಮುಖ ರಾಷ್ಟ್ರೀಯ ಹೆದ್ದಾರಿ 66 ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತೀವ್ರ ಜಲಾವೃತವಾಗಿದೆ. ವಿಶೇಷವಾಗಿ ರಂಗಿನಕಟ್ಟೆಯಂತಹ ಪ್ರದೇಶಗಳಲ್ಲಿ ಮಳೆನೀರು ವ್ಯಾಪಕವಾಗಿ ಸಂಗ್ರಹಗೊಂಡಿದ್ದು, ಗಮನಾರ್ಹ ಅಡಚಣೆಯನ್ನು ಉಂಟುಮಾಡಿದೆ. ಇದು ವಾಹನ ಸಂಚಾರಕ್ಕೆ ಮತ್ತು ಪ್ರಯಾಣಿಕರಿಗೆ ಗಂಭೀರ ಸವಾಲಾಗಿದೆ. ಭಟ್ಕಳದಲ್ಲಿ ಮುಂದುವರೆದ ಮಳೆ; ದೇವಸ್ಥಾನದ ಗೋಡೆ ಹಾಗೂ ಮನೆ ಕುಸಿತ https://www.sahilonline.net/ka/continued-rain-in-bhatkal-temple-wall-and-house-collapse ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಶನಿವಾರವೂ ಮಳೆ ಮುಂದುವರೆದಿದ್ದು ಶುಕ್ರವಾರ ಬಿದ್ದ ಭಾರೀ ಮಳೆಗೆ ಭಟ್ಕಳದ ಖಲೀಫ ಬೀದಿಯಲ್ಲಿರುವ ಮನೆ ಸಂಪೂರ್ಣ ಕುಸಿದಿದ್ದು, ಪಕ್ಕದ ಮನೆಯ ಮೇಲ್ಛಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ. ಅಲ್ಲದೆ ಕೊರಗರಕೇರಿ ಕೋಟ ಜಟಗೇಶ್ವರ ದೇವಸ್ಥಾನದ ಗೋಡೆ ಕುಸಿದು ಬಿದ್ದಿದ್ದು ಪಕ್ಕದಲ್ಲಿ ಸರ್ಕರಿ ಪ್ರಾಥಮಿಕ ಶಾಲೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಹಳೆಯ ನಿಶ್ಚಿತ ಪಿಂಚಣಿ  ನೀಡುವಂತೆ ಆಗ್ರಹ https://www.sahilonline.net/ka/demand-for-grant-of-old-fixed-pension-from-pension-deprived-employees-association-of-aided-schools-and-colleges ಭಟ್ಕಳ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಭಟ್ಕಳ ತಾಲೂಕು ಘಟಕದ ಪದಾಧಿಕಾರಿಗಳು  ಹಳೆಯ ಓಪಿಎಸ್ (ನಿಶ್ವಿತ ಪಿಂಚಣಿ) ಜಾರಿಗೊಳಿಸಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕಾರವಾರದಲ್ಲಿ ನೂತನ ಎಸ್ಪಿಯಾಗಿ ಎಂ. ನಾರಾಯಣ್ ಅಧಿಕಾರ ಸ್ವೀಕಾರ; ಕೋಮು ಸೌಹಾರ್ದತೆ ಕಾಪಾಡಲು ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆದ್ಯತೆ https://www.sahilonline.net/ka/m-narayan-takes-charge-as-new-sp-in-karwar-prioritizes-maintaining-communal-harmony-and-cracking-down-on-illegal-activities ಉತ್ತರ ಕನ್ನಡ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದು, ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮಾಡುವುದಾಗಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹೇಳಿದರು. ಭಟ್ಕಳದ ಹೆದ್ದಾರಿಯಲ್ಲಿ ಮತ್ತೆ ಮಳೆ ನೀರಿನ ಕಾಟ. https://www.sahilonline.net/ka/rain-and-water-again-on-bhatkal-highway ಭಟ್ಕಳ : ರಾಷ್ಟ್ರೀಯ ಹೆದ್ದಾರಿ 66ರ ರಂಗಿನಕಟ್ಟೆ ಬಳಿ ಮತ್ತೆ ಮಳೆ ನೀರು ತುಂಬಿ ನಾಗರಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ನಾಳೆ ಭಟ್ಕಳ, ಹೊನ್ನಾವರ ಮತ್ತು ಕುಮಟಾ ಶಾಲಾ ಕಾಲೇಜುಗಳಿಗೆ ರಜೆ. https://www.sahilonline.net/ka/tomorrow-is-a-holiday-for-bhatkala-honnavara-and-kumta-school-colleges ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಜಾಸ್ತಿಯಾಗಿದ್ದರಿಂದ ಮುನ್ನೆಚ್ಚರಿಕೆಯಾಗಿ ಭಟ್ಕಳ, ಕುಮಟಾ ಮತ್ತು ಹೊನ್ನಾವರ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶುಕ್ರವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕುಮಟಾ-ಶಿರಸಿ ಹೆದ್ದಾರಿಯಲ್ಲಿ ನೆರೆ. ಸಂಚಾರ ಬಂದ್. ಹೊನ್ನಾವರದಲ್ಲೂ ಅಬ್ಬರಿಸುತ್ತಿದೆ ವರುಣ https://www.sahilonline.net/ka/adjacent-to-kumata-shirasi-highway-traffic-stop-varuna-is-making-noise-even-in-honnavar ಕುಮಟಾ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಕುಮಟಾ - ಶಿರಸಿ ಹೆದ್ದಾರಿಯಲ್ಲಿ ನೀರು ನುಗ್ಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಹೊನ್ನಾವರ ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ. https://www.sahilonline.net/ka/lokayukta-raid-in-town-panchayat-honnavar ಹೊನ್ನಾವರ : ಪಟ್ಟಣ ಪಂಚಾಯತ್ ನಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿ ಮತ್ತು ಕೌನ್ಸಿಲರ್ ನನ್ನ ಲೋಕಾಯುಕ್ತರು ಬಂಧಿಸಿದ್ದಾರೆ. ವರ್ಷಕ್ಕೆ ಒಂದು ಮರವನ್ನಾದರೂ ನೆಟ್ಟು ಬೆಳೆಸುವಂತೆ ಎಸಿಎಫ್ ಗಿರೀಶ್ ಕರೆ https://www.sahilonline.net/ka/acf-girish-calls-to-plant-at-least-one-tree-a-year ಭಟ್ಕಳ: ಸಾರ್ವಜನಿಕರು ತಮಗೆ ಸೂಕ್ತ ಅನಿಸಿದ್ದಲ್ಲಿ ವರ್ಷಕ್ಕೆ ಒಂದು ಮರವನ್ನಾದರೂ ನೆಟ್ಟು ಅದನ್ನು ಬೆಳಸುವಂತೆ ಭಟ್ಕಳ ಹೊನ್ನಾವರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಪಿ.ಬಿ ಕರೆ ನೀಡಿದರು. ಖಾಸಗಿ ಬಸ್ಸಿನಲ್ಲಿ ಸಹ ಪ್ರಯಾಣಿಕರು ಹಾಗೂ ಚಾಲಕನಿಂದ ಭಟ್ಕಳದ ಯುವಕನಿಗೆ ಥಳಿತ; ಭಟ್ಕಳದಲ್ಲಿ ಬಸ್ ತಡೆದು ಪ್ರತಿಭಟನೆಗೆ ಯತ್ನ https://www.sahilonline.net/ka/one-person-from-bhatkal-allegedly-beaten-while-traveling-from-hyderabad-police-prevent-mob-from-stopping-bus-in-bhatkal-face-backlas ಹೈದರಾಬಾದಿನಿಂದ ಮಂಗಳೂರಿಗೆ  ಬರುತ್ತಿರುವ ಖಾಸಗಿ ಓಲ್ವೋ  ಸ್ಲೀಪರ್ ಬಸ್ಸಿನಲ್ಲಿ ಗಂಗಾವತಿ ಬಳಿ ಭಟ್ಕಳದ ಯುವಕನ ಮೇಲೆ ಸೋಮವಾರದಂದು ರಾತ್ರಿ ೧೧ಗಂಟೆ ಸುಮಾರು ಗುಂಪು ಹಲ್ಲೆ ನಡೆದಿದೆ ಎನ್ನಲಾಗಿದ್ದು ಹಲ್ಲೆಗೊಳಗಾದ ಯುವಕ ಮಂಗಳವಾರ ಸಂಜೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಭಟ್ಕಳದಲ್ಲಿ ತೀವ್ರ ಬಿರುಗಾಳಿ; ಹಾರಿ ಹೋದ ಹೊಟೇಲ್ ನ ಮೇಲ್ಛಾವಣಿ; ಅಪಾರ ನಷ್ಟ https://www.sahilonline.net/ka/roof-of-hotel-and-shop-blown-off-by-stormy-winds-at-bhatkal-gorte-border-crores-in-damages ಭಟ್ಕಳ: ಬಿರುಗಾಳಿ ಬೀಸಿದ ಪರಿಣಾಮ ಭಟ್ಕಳ ಮತ್ತು ಉತ್ತರಕನ್ನಡ ಗಡಿಭಾಗದ ಗೊರ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊಟೇಲ್‌ನ ಮೇಲ್ಛಾವಣಿ ಸಹಿತ ಸಮೀಪದ ಸೋಫಾ ತಯಾರಿಕೆ ಅಂಗಡಿಯ ಮೇಲ್ಛಾವಣಿ ಹಾರಿಹೋಗಿದೆ. ಇದರ ಪರಿಣಾಮ ಅಪಾರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿರುವ ಘಟನೆ  ಮಂಗಳವಾರ ಬೆಳಗ್ಗೆ ವರದಿಯಾಗಿದೆ. ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಕಾಗೇರಿ ಮನವಿ. https://www.sahilonline.net/ka/uttara-kannada-mp-kageri-discusses-national-highway-issues-with-union-minister-gadkari ನವದೆಹಲಿ : ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಾಷ್ಟ್ರೀಯ ಹೆದ್ದಾರಿ‌ ಕಾಮಗಾರಿಗಳನ್ನ ತ್ವರಿತಗತಿಯಲ್ಲಿ ಮುಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಭಟ್ಕಳದಲ್ಲಿ ಕರಾಟೆ ರೆಫ್ರಿ ತರಬೇತಿ; ತಪ್ಪು ನಿರ್ಣಯಗಳಿಂದ ಸ್ಪರ್ಧಾಳುವಿನ ಭವಿಷ್ಯ ಮಣ್ಣುಪಾಲಾಗುತ್ತದೆ-ಜೋಸ್ https://www.sahilonline.net/ka/sports-karate-referee-training-was-conducted-by-uttara-kannada-district-sports-karate-association ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಇಲ್ಲಿನ ಬಂದರ್ ರಸ್ತೆಯ ಕಮಲಾವತಿ ರಾಮನಾಥ ಶಾನಭಾಗ ಸಭಾಭವನದಲ್ಲಿ ಸ್ಪೋರ್ಟ್ಸ್ ಕರಾಟೆ ರೆಫ್ರಿ ತರಬೇತಿ ಇತ್ತಿಚೆಗೆ ನಡೆಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಸಮಾಜ ಸೇವಕ ಎಸ್.ಎಸ್. ಕಾಮತ್ ರಿಗೆ ಗೌರವ ಸನ್ಮಾನ https://www.sahilonline.net/ka/as-part-of-press-day-senior-social-worker-ss-kudos-to-kamat ಭಟ್ಕಳ: ಪತ್ರಿಕಾ ದಿನಾಚರಣೆಯ ಅಂಗವಾಗಿ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿವೃತ್ತ ಬ್ಯಾಂಕ್ ನೌಕರ ಹಾಗೂ ಹಿರಿಯ ಸಮಾಜ ಸೇವಕ ಎಸ್. ಎಸ್. ಕಾಮತ್ ಅವರನ್ನು ಅವರ ಮನೆಯಲ್ಲಿಯೇ ಗೌರವಿಸಲಾಯಿತು. ಬಾವಿಗೆ ಬಿದ್ದು ಇಬ್ಬರು ಮಕ್ಕಳ ದಾರುಣ ಸಾವು; ಇಬ್ಬರು ಗಂಭೀರ https://www.sahilonline.net/ka/kundapur-two-children-die-after-falling-into-lake-parents-in-critical-condition ಕುಂದಾಪುರ: ಕುಂದಾಪುರ ತಾಲೂಕಿನ ಬೆಳಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದ್ರೋಳಿ ಎಂಬಲ್ಲಿ ಆಕಸ್ಮಿಕವಾಗಿ ಮನೆಯ ಸಮೀಪದ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮಕ್ಕಳ ತಾಯಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಸಚಿವ ವೈದ್ಯರ ಗೃಹ ಕಚೇರಿಯಲ್ಲಿ ಜನತಾ ದರ್ಶನ; ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ರಾಜಿಯಿಲ್ಲ ಎಂದ ಸಚಿವ https://www.sahilonline.net/ka/janata-darshan-at-ministers-doctors-home-office-the-minister-said-that-there-is-no-compromise-in-the-development-of-the-sector ಭಟ್ಕಳ: ಜನರ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮುರುಢೇಶ್ವರದ ತಮ್ಮ ಸ್ವಗೃಹದಲ್ಲಿ ಭಾನುವಾರ ಜನತಾ ದರ್ಶನ ನಡೆಸುವುದರ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದರು. ಬೆಳಕೆ ನ್ಯಾಯಬೆಲೆ ಅಂಗಡಿಯಲ್ಲಿ ಯುವಕನಿಗೆ ಹಾವು ಕಡಿತ; ಪ್ರಾಣಾಪಾಯದಿಂದ ಪಾರು https://www.sahilonline.net/ka/snake-bites-young-man-at-fair-price-shop-escape-from-danger ಭಟ್ಕಳ: ಭಟ್ಕಳ ತಾಲೂಕಿನ ಬೆಳಕೆ ಗ್ರಾಮಪಂಚಾಯತ್ ವ್ಯಾಪ್ತಿಯ ಪಡಿತರ ಅಂಗಡಿಯಲ್ಲಿ ಕೆಸಲ ನಿರ್ವಹಿಸುತ್ತಿದ್ದ ಯುವಕನಿಗೆ ನಾಗರ ಹಾವೊಂದು ಕಚ್ಚಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರವಿವಾರ ವರದಿಯಾಗಿದೆ. ಹೊನ್ನಾವರ ಹೆದ್ದಾರಿಯಲ್ಲಿ ಅಂಬುಲೆನ್ಸ್ ಪಲ್ಟಿ ರೋಗಿಗೆ ಗಾಯ https://www.sahilonline.net/ka/ambulance-overturns-on-honnavar-highway-and-injures-a-patient ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ರೋಗಿಯೊಬ್ಬರನ್ನ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ವಾಹನ ಪಲ್ಟಿಯಾದ ಘಟನೆ ಸಂಭವಿಸಿದೆ. ಇಲ್ಲಿನ ಹೊಸಪಟ್ಟಣ ಕ್ರಾಸ್ ಹತ್ತಿರ ಈ ಅವಘಡ ನಡೆದಿದೆ. ಕುಮಟಾ ಕೆನರಾ ಹೆಲ್ತ್‌ಕೇರ್‌ನಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ಪಾರ್ಶ್ವವಾಯು ತುತ್ತಾದ ರೋಗಿಯೊಬ್ಬರನ್ನ ಕರೆದುಕೊಂಡು ಹೋಗಲಾಗುತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿ ಹೊಡೆದಿದೆ. ಅಪಘಾತದ ಪರಿಣಾಮವಾಗಿ ಪಾರ್ಶ್ವವಾಯುವಿಗೆ ತುತ್ತಾದ ಕಮಲಾ ಪಟಗಾರ ಹಾಗೂ ಅಂಬುಲೆನ್ಸ್ ಚಾಲಕ ಸೋಮನಾಥ ನಾಯ್ಕ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ವಾಹನದಲ್ಲಿ ಒಟ್ಟೂ ನಾಲ್ವರಿದ್ದರು. ಘಟನೆ ಬಳಿಕ ರೋಗಿ ಹಾಗೂ ರೋಗಿಯ ಸಂಬಂಧಿಕರನ್ನು ಬೇರೆ ಅಂಬುಲೆನ್ಸ್ ವಾಹನದಲ್ಲಿ  ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಶೇಷ ಚೇತನರ ಫಿಡೆ ರೇಟೆಡ್ ಚಾಂಪಿಯನ್‌ಶಿಪ್ ನಲ್ಲಿ ಸಮರ್ಥ ರಾವ್ ಚಾಂಪಿಯನ್. https://www.sahilonline.net/ka/samrtha-rao-is-the-champion-in-the-fide-rated-championship-of-special-spirits ಹೊನ್ನಾವರ : 2024 ರ ಅಖಿಲ ಭಾರತ ವಿಶೇಷ ಚೇತನರ ಫಿಡೆ ರೇಟೆಡ್ ಚಾಂಪಿಯನ್‌ಶಿಪ್ ನಲ್ಲಿ ಹೊನ್ನಾವರದ ಸಮರ್ಥ ಜೆ.ರಾವ್ ಚಾಂಪಿಯನ್ ಆಗುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಾರವಾರ : ಮನೆ ಗೋಡೆ ಕುಸಿದು ವೃದ್ಧೆ ಸಾವು. https://www.sahilonline.net/ka/karwar-old-woman-dies-after-house-wall-collapses ಕಾರವಾರ: ಮಣ್ಣಿನ ಗೋಡೆ ಕುಸಿದು ವೃದ್ಧೆಯೋರ್ವಳು ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಅರವ ಗ್ರಾಮದಲ್ಲಿ ನಡೆದಿದೆ. ಹೊನ್ನಾವರದ ಗೇರುಸೊಪ್ಪ ಹೆದ್ದಾರಿಯಲ್ಲಿ ಒಮ್ನಿ ವ್ಯಾನ್ ಮತ್ತು ಬಸ್ ನಡುವೆ ಡಿಕ್ಕಿ: ಭಟ್ಕಳದ ವ್ಯಕ್ತಿ ಸಾವು, ಪತ್ನಿಗೆ ಗಾಯ https://www.sahilonline.net/ka/man-dies-wife-injured-in-collision-between-omni-and-bus-on-gersuppa-highway-in-honavar ಮೃತರನ್ನು ಭಟ್ಕಳ ಮಖ್ದೂಮ್ ಕಾಲೋನಿ ನಿವಾಸಿ ಸೈಯದ್ ಅಬ್ದುಲ್ ವಾಜಿದ್ (40) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಅವರ ಪತ್ನಿ ಗುಲ್ಶನ್ ಅರಾ ಗಾಯಗೊಂಡಿದ್ದು, ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಿ: ಯಶಸ್ವಿಯ ಅರಣ್ಯವಾಸಿಗಳ ಸಮಸ್ಯೆಗಳ “ಅದಾಲತ್”; ಪ್ರಶ್ನೆಗಳ ಸುರಿಮಳೆ https://www.sahilonline.net/ka/successful-adalat-for-forest-land-dwellers-held-in-sirsi ಅರಣ್ಯವಾಸಿಗಳ ಸಮಸ್ಯೆಗಳನ್ನ ಇಲಾಖೆಯ ಗಮನಕ್ಕೆ ತರುವ ಹಿನ್ನಲೆಯಲ್ಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಯಶಸ್ವಿಯಾಗಿ ಜರುಗಿ, ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗದೆಂದು ಅದಾಲತ್‌ನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿಗರ ಪ್ರತಿಭಟನೆ. ಪೊಲೀಸರಿಂದ ಪ್ರತಿಭಟನಾಕಾರರು ವಶಕ್ಕೆ https://www.sahilonline.net/ka/bjps-protest-in-front-of-the-district-collectors-office-the-protestors-were-arrested-by-the-police ಕಾರವಾರ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆದ 187 ಕೋಟಿ ರೂ. ಹಗರಣ ಖಂಡಿಸಿ ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೈಕ್ ಸವಾರರ ಮೇಲೆ ಬಿದ್ದ ಬಾರೀ ಗಾತ್ರದ ಮರ. ಸವಾರನಿಗೆ ಗಾಯ. ಆಸ್ಪತ್ರೆಗೆ ದಾಖಲು. https://www.sahilonline.net/ka/big-tree-fell-on-bikers-rider-injured-get-admitted-to-hospital ಹೊನ್ನಾವರ :  ನಗರಬಸ್ತಿಕೇರಿ ಹೊನ್ನಾವರ ಮಾರ್ಗದಲ್ಲಿ ಬೃಹತ್ ಮರವೊಂದು ಬೈಕ್ ಸವಾರರ ಮೇಲೆ ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಇಂಡಿಯನ್ ನವಾಯತ್ ಫೋರಂ ವತಿಯಿಂದ ಜನಾಝಾ ವ್ಯಾನ್ (ಶವಸಾಗಾಟ ವಾಹನ) ದೇಣಿಗೆ https://www.sahilonline.net/ka/indian-nawayat-forum-donates-janaza-van-to-bhatkal-tanzeem ಭಟ್ಕಳ: ಭಾರತದ ವಿವಿಧ ನಗರಗಳಲ್ಲಿ ಸ್ಥಾಪಿಸಲಾದ ಎಂಟು ಭಟ್ಕಳ ಜಮಾಅತ್‌ಗಳ ಒಕ್ಕೂಟವಾಗಿರುವ ಇಂಡಿಯನ್ ನವಾಯತ್ ಫೋರಮ್ (ಐಎನ್‌ಎಫ್) ವತಿಯಿಂದ ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸ್-ಇ-ಇಸ್ಲಾಹ್-ವ ತಂಝೀಮ್ ಸಂಸ್ಥೆಗೆ ಗೆ ಜನಾಝ ವ್ಯಾನ್ (ಅಂತ್ಯಕ್ರಿಯೆ ವ್ಯಾನ್) ಅನ್ನು ಕೊಡುಗೆಯಾಗಿ ನೀಡಿದೆ. ಭಟ್ಕಳ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ, ಕೆರೆಗಳಾಗಿ ಮಾರ್ಪಟ್ಟ ರಸ್ತೆಗಳು https://www.sahilonline.net/ka/heavy-rains-in-coastal-karnataka-including-bhatkal-life-paralyzed-many-roads-turned-into-ponds ಭಟ್ಕಳ:  ಭಟ್ಕಳ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಬುಧವಾರ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳೂರು, ಉಡುಪಿ, ಕಂದಾಪುರ, ಬೈಂದೂರು, ಭಟ್ಕಳ, ಹೊನಾವರ, ಕುಮಟಾ, ಅಂಕೋಲಾದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಮುರುಡೇಶ್ವರ ಖಾಸಗಿ ಕ್ಲಿನಿಕ್‌ನಲ್ಲಿ ಕಾಲು ನೋವಿಗೆ ಚಿಕಿತ್ಸೆ; ಅನುಮಾನಾಸ್ಪದವಾಗಿ‌ ಮಹಿಳೆ ಸಾವು https://www.sahilonline.net/ka/woman-dies-due-to-suspicious-treatment-for-leg-pain-in-murudeshwar-private-clinic-fir-registered-against-the-clinic ಮುರುಡೇಶ್ವರ ಖಾಸಗಿ ಕ್ಲಿನಿಕ್‌ನಲ್ಲಿ ಕಾಲು ನೋವಿಗೆ ಚಿಕಿತ್ಸೆ ಅನುಮಾನಾಸ್ಪದವಾಗಿ‌ ಮಹಿಳೆ ಸಾವು;ಕ್ಲಿನಿಕ್‌ ಮೇಲೆ ಎಫ್.ಐ.ಆರ್ ದಾಖಲು ಭಟ್ಕಳದಲ್ಲಿ ಏಳು ತಿಂಗಳ ಮಗು ಅಪಹರಣ:ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು https://www.sahilonline.net/ka/abduction-of-seven-month-old-baby-in-bhatkal-case-registered-in-police-station ಭಟ್ಕಳದಲ್ಲಿ ಏಳು ತಿಂಗಳ ಮಗು ಅಪಹರಣ:ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮುರ್ಡೇಶ್ವರದ ಸ್ಫೂರ್ತಿ ಎಸ್ ಅಡಿಗಳ್ ಅವರಿಗೆ ಮಣಿಪಾಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪ್ರಧಾನ. https://www.sahilonline.net/ka/murdeshwars-spoorti-s-adigal-has-a-phd-from-manipal-university ಭಟ್ಕಳ: ಪ್ರತಿಷ್ಟಿತ ಮಣಿಪಾಲ್ ಯುನಿವರ್ಸಿಟಿ ಆಫ್ ಹೈಯರ್ ಎಜ್ಯುಕೇಶನ್ ನಿಂದ ತಾಲೂಕಿನ ಮುರ್ಡೇಶ್ವರದ ನಿವಾಸಿ ಸ್ಪೂರ್ತಿ ಎಸ್. ಅಡಿಗಳ್ ಅವರ "ಬಯೋಫಟೋನಿಕ್ಸ" (Biophotonics ) ಪ್ರಬಂಧಕ್ಕೆ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಉಡುಪಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋದಿಸಿ ಎಸ್.ಐ.ಓ ವತಿಯಿಂದ ಪ್ರತಿಭಟನೆ https://www.sahilonline.net/ka/udupi-protest-by-sio-against-leak-of-neet-question-paper ಉಡುಪಿ: ನೀಟ್ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವಾಗ ಶಿಕ್ಷಣ ಸಚಿವರು ಹಗರಣವಾಗಿಲ್ಲ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ಅವರು ಮೊದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಸಾಮಾಜಿಕ ಕಾರ್ಯಕರ್ತ ತಾಹೀರ್ ಹುಸೇನ್ ಆಗ್ರಹಿಸಿದರು. ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಸಿಎ, ಬಿಬಿಎಗೆ 'ದೆಹಲಿಯ ಎ.ಐ.ಸಿ.ಟಿ.ಇ ಮಾನ್ಯತೆ' https://www.sahilonline.net/ka/delhi-aicte-accreditation-for-bca-bba-of-sri-guru-sudhindra-college ಭಟ್ಕಳ: ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಸಿಎ, ಬಿಬಿಎ ಕೋರ್ಸುಗಳಿಗೆ ದೆಹಲಿಯ ಎ.ಐ.ಸಿ.ಟಿ.ಇ ಮಾನ್ಯತೆ ನೀಡಿದೆ.  ಭಟ್ಕಳ ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಗೆ ಬೇಕಿದೆ ಹೊಸ ರಸ್ತೆ ಭಾಗ್ಯ:ಹೊಂಡದಲ್ಲಿ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕರು https://www.sahilonline.net/ka/the-road-leading-to-bhatkal-government-hospital-needs-a-new-road-bhagya-auto-drivers-expressed-their-outrage-by-planting-saplings-in-the-pit ಭಟ್ಕಳ ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಗೆ ಬೇಕಿದೆ ಹೊಸ ರಸ್ತೆ ಭಾಗ್ಯ:ಹೊಂಡದಲ್ಲಿ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕರು ಭಟ್ಕಳ: ಶ್ರೀರಾಮ್ ಪೈನಾನ್ಸ್ ನಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಪ್ರಮುಖ ಆರೋಪಿ ಬಂಧಿಸಿದ ಪೊಲೀಸರು https://www.sahilonline.net/ka/the-police-have-arrested-the-main-accused-in-the-case-of-misappropriation-of-money-in-shriram-finance ಶ್ರೀರಾಮ್ ಪೈನಾನ್ಸ್ ನಲ್ಲಿ ಹಣ ದುರುಪಯೋಗ ಪ್ರಕರಣಕ್ಕೆ ಪ್ರಮುಖ ಆರೋಪಿ ಬಂಧಿಸಿದ ಪೊಲೀಸರು ಭಟ್ಕಳ: ಮೈ ಮೇಲೆ ಸಿಮೆಂಟ್ ಕಂಬ ಬಿದ್ದು ಕೂಲಿ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಸಾವು https://www.sahilonline.net/ka/a-cement-pillar-fell-on-me-and-the-laborer-died-as-the-treatment-was-ineffective ಮೈ ಮೇಲೆ ಸಿಮೆಂಟ್ ಕಂಬ ಬಿದ್ದು ಕೂಲಿ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಸಾವು ಮುಠ್ಠಳ್ಳಿ ಶಾಲೆಯಲ್ಲಿ ನಡೆದ ದಂತ ತಪಾಸಣೆ,ಮಾಹಿತಿ ಶಿಬಿರ https://www.sahilonline.net/ka/dental-check-up-information-camp-held-at-muthalli-school ಮುಠ್ಠಳ್ಳಿ ಶಾಲೆಯಲ್ಲಿ ನಡೆದ ದಂತ ತಪಾಸಣೆ,ಮಾಹಿತಿ ಶಿಬಿರ ಪೊಲೀಸರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹಾಯಿಸಿದ್ದ ಚಾಲಕ https://www.sahilonline.net/ka/bhatkal-govt-bus-hits-police-personnel-two-injured ಪೊಲೀಸರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹಾಯಿಸಿದ್ದ ಚಾಲಕ ಶಾಸಕ ದಿನಕರ ಶೆಟ್ಟಿ ಅವರ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಫೋಟ https://www.sahilonline.net/ka/cylinder-explosion-occurred-at-the-house-of-kumata-mla ಕಾರವಾರ: ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಕುಮಟಾದಲ್ಲಿ ವಿದ್ಯುತ್ ಸ್ಪರ್ಶಿಸಿ ಕೂಲಿಗೆ ಹೋಗಿದ್ದ ಮಹಿಳೆ ಸಾವು. https://www.sahilonline.net/ka/woman-dies-after-being-hit-by-electric-wire-in-kumta ಕುಮಟಾ : ಕೂಲಿ ಕೆಲಸ ಮುಗಿಸಿ ಮನೆಗೆ ವಾಪಾಸ್ ಬರುತ್ತಿದ್ದ ಮಹಿಳೆಯೋರ್ವಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಭಟ್ಕಳದಲ್ಲಿ ವಿನೂತನ ಪ್ರತಿಭಟನೆ https://www.sahilonline.net/ka/bhatkal-bjp-protest-against-petrol-price-hike ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಭಟ್ಕಳದಲ್ಲಿ ವಿನೂತನ ಪ್ರತಿಭಟನೆ