ಝೇಂಕಾರ ಮೆಲೋಡಿಸ್ ನ  ಕಲಾ ಸಂಗಮ ಸಂಪನ್ನ

Source: sonews | By Staff Correspondent | Published on 22nd February 2020, 10:51 PM | Coastal News | Don't Miss |

ಭಟ್ಕಳ: ಝೇಂಕಾರ ಮೆಲೋಡಿಸ್ ಆಟ್ರ್ಸ್ ಅಸೋಸಿಯೇಶನ್ (ರಿ.) ಇದರ ಆಶ್ರಯದಲ್ಲಿ ಸಂಗೀತ ಮತ್ತು ನೃತ್ಯವನ್ನೊಳಗೊಂಡ ಝೇಂಕಾರ ಕಲಾ ಸಂಗಮ ಕಾರ್ಯಕ್ರಮ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ ಯುವ ಪ್ರತಿಭೆಗಳಿಗೆ ಅನೇಕ ವೇದಿಕೆಯನ್ನು ಕಲ್ಪಿಸಿಕೊಟ್ಟು ಕಲೆಯನ್ನು ಮೇಲಕ್ಕೆತ್ತುವ ಝೇಂಕಾರ ಸಂಸ್ಥೆಯ ಕಾರ್ಯ ಶ್ಲಾಘನಾರ್ಹ ಎನ್ನುತ್ತಾ ಶಾಲಾ ಶಿಕ್ಷಣದ ಜೊತೆಗೆ ಲಲಿತ ಕಲೆಗಳನ್ನು ಮೈಗೂಡಿಸಿಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿದರು. 

ಮುಖ್ಯ ಅತಿಥಿ ಪ್ರಾಂಶುಪಾಲ ಎ. ಬಿ. ರಾಮರಥ ಮಾತನಾಡಿ, ಝೇಂಕಾರ ಸಂಸ್ಥೆಯಲ್ಲಿ ದ್ರೋಣಾಚಾರ್ಯರಂತಹ ಶಿಕ್ಷಕರಿದ್ದಾರೆ, ಏಕಲವ್ಯನಂತಹ ಶಿಷ್ಯರು ಸಿಕ್ಕಿದಲ್ಲಿ ಪೂರ್ವ ಪರಂಪರೆಯನ್ನು ಕಾಣಲು ಸಾಧ್ಯ ಎಂದರು. ಭಟ್ಕಳ ಕ.ಸಾ.ಪ. ಅಧ್ಯಕ್ಷ ಶಂಕರ ನಾಯ್ಕ ಮಾತನಾಡುತ್ತಾ ಇಂದಿನ ಪೀಳಿಗೆಗೆ ನೈತಿಕ ಶಿಕ್ಷಣ ದೊರಕಲು ಲಲಿತ ಕಲೆಗಳು ಸಹಕಾರಿಯಾಗಿದೆ ಎಂದರು. ಗಣ್ಯರಾದ ವಿಷ್ಣು ಶ್ಯಾನಭಾಗ ಹಾಗೂ ವೈದ್ಯರಾದ ಆರ್. ವಿ. ಸರಾಫ ಲಲಿತ ಕಲೆಗಳನ್ನು ಪೋಷಿಸುತ್ತಿರುವ ಝೇಂಕಾರ ಸಂಸ್ಥೆಗೆ ಸಹಕರಿಸುವಂತೆ ಕರೆ ನೀಡಿದರು. ಉದ್ಯಮಿ ಡಿ. ಜೆ. ಕಾಮತ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಮುರ್ಡೇಶ್ವರ ರೂರಲ್ ಎಜ್ಯೂಕೇಶನ್ ಟ್ರಸ್ಟ್‍ನ ಮೇನೆಜಿಂಗ ಟ್ರಸ್ಟಿ ಶರಶ್ಚಂದ್ರ ಎಸ್. ಕಾಮತರವರ ಸಾಧನೆಗಾಗಿ ಝೇಂಕಾರ ಕಲಾಶ್ರೀ 2020 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಚಿತ್ರಕಲೆಯಲ್ಲಿ ರಾಜ್ಯಕ್ಕೆ ರ್ಯಾಂಕ ಗಳಿಸಿದ ವಿದ್ಯಾರ್ಥಿ ದರ್ಶನ ನಾಯ್ಕ ಇವನಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ನೃತ್ಯ ವಿದೂಷಿ ನಯನಾ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ವಾಚಿಸಿದರು. ಸಂಸ್ಥೆಯ ಅಧ್ಯಕ್ಷರಾದ ಪ್ರಸನ್ನ ಪ್ರಭು ಸಭಾಧ್ಯಕ್ಷೀಯ ಭಾಷಣ ಮಾಡಿದರು. ಪ್ರಾರಂಭದಲ್ಲಿ ಕಲಾ ಶಿಕ್ಷಕ ಸಂಜಯ ಗುಡಿಗಾರ ಸ್ವಾಗತಿಸಿ ಕೊನೆಯಲ್ಲಿ ವಂದನಾರ್ಪಣೆ ಗೈದರು. ಸಭೆಯ ನಂತರ ಭರತ ನಾಟ್ಯ, ಕರ್ನಾಟಕ ಸಂಗೀತ ಹಾಗೂ ಚಿಣ್ಣರ ರಸಮಂಜರಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಝೇಂಕಾರ ಸಂಸ್ಥೆಯ ನಿರ್ದೆಶಕ ಮಂಡಳಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...