ಕಾರವಾರ: ಜ. 22ರಂದು ಯುವ ಸೌರಭ ಕಾರ್ಯಕ್ರಮ

Source: S O News service | By I.G. Bhatkali | Published on 20th January 2021, 9:03 PM | Coastal News |

ಕಾರವಾರ: ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜ. 22ರಂದು ಬೆಳಿಗ್ಗೆ 11ಕ್ಕೆ ಹೊನ್ನಾವರದ ಮೂಡಕಣಿಯ ಶಂಭುಲಿಂಗೇಶ್ವರ ಸಭಾ ಭವನದಲ್ಲಿ ಯುವ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಕಾರ್ಮಿಕ ಮತ್ತು ಸಕ್ಕರೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಉದ್ಘಾಟಿಸಲಿದ್ದು, ಶಾಸಕ ಸುನಿಲ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂಕೋಲಾದ ಗೀತಾ ಶಿವರಾಮ್ ಭಾಗವತ ಅವರ ತಂಡ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು, ಸಿದ್ದಾಪುರದ ಹೊಸೂರಿನ ಪುಷ್ಪಾ ನಾಯ್ಕ ಅವರ ತಂಡ ತತ್ವಪದ/ದಾಸರ ಪದವನ್ನು, ಕುಮಟಾದ ಗೋಪಾಲಕೃಷ್ನ ನಾಯ್ಕ ಅವರ ತಂಡ ಜಾನಪದ ಗೀತೆಗಳನ್ನು, ಕುಮಟಾದ ರಾಘವ ನಾಯ್ಕ ಅವರ ತಂಡ ಸಮೂಹ ನೃತ್ಯ ರೂಪಕವನ್ನು, ಮೂಡ್ಕಣಿಯ ಮಾರುತಿ ಹಳ್ಳೇರ, ಕಾರವಾರದ ಶ್ರೀನಿವಾಸ ಅಂಬಿಗ ಹಾಗೂ ಹೊಸಗೋಡದ ಈಶ್ವರ ಗೌಡ ಅವರ ತಂಡಗಳು ಜಾನಪದ ಕಲೆಯನ್ನು, ಜಲವಳ್ಳಿಯ ವಿದ್ಯಾಧರ ಮಡಿವಾಳ ಅವರ ತಂಡ ಯಕ್ಷಗಾನವನ್ನು ಹಾಗೂ ಸಿದ್ದಾಪುರದ ನಾಗರಾಜ ಅವರ ತಂಡದ ಕಲಾಆವಿದರು ಕಥಾ ಕೀರ್ತನೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎನ್.ಜಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next