ಭಟ್ಕಳ ಯುವಕನ ಹತ್ಯೆ ಪ್ರಕರಣ; ಓರ್ವನ ಬಂಧನ ನಾಲ್ವರು ಪರಾರಿ; ತನಿಖೆ ಚುರುಕು 

Source: sonews | By Staff Correspondent | Published on 20th October 2019, 9:38 PM | Coastal News | Incidents | Don't Miss |

ಭಟ್ಕಳ: ಇಲ್ಲಿನ ಜನನಿಭಿಡ ಪ್ರದೇಶವಾಗಿರುವ ರಾ.ಹೆ.66ರ ಶಾನುಭಾಗ ರೆಸಿಡೆನ್ಸಿ ಲಾಡ್ಜಿಂಗ್ & ಬೋರ್ಡಿಂಗ್ ನ 114 ಸಂಖ್ಯೆಯ ಕೋಣೆಯಲ್ಲಿ ಐವರ ತಂಡವೊಂದು ಯುವಕನನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಶನಿವಾರ ರಾತ್ರಿ 8.45ರ ಆಸುಪಾಸು ಜರಗಿದ್ದು ಈ ಸಂಬಂಧ ಮುಹಮ್ಮದ್ ಇಕ್ಬಾಲ್ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದ್ದು ಮಂಗಳೂರು ಮೂಲದ ನಾಲ್ವರು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಜಾರಿಗೊಳಿಸಿದ್ದು ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.  

ಕೊಲೆಯಾಗಿರುವ ಯುವಕನನ್ನು ಪುರವರ್ಗ ಪಂಚಾಯತ್ ವ್ಯಾಪ್ತಿಯ ಮುಗ್ಲಿಹೊಂಡ ನಿವಾಸಿ ಅಫ್ಫಾನ್ ಜಬಾಲಿ ಬಿನ್ ನವರಂಗ್ ಮುಹಮ್ಮದ್ ಅಲಿ(25) ಎಂದು ಗುರುತಿಸಲಾಗಿದೆ.

ಮೃತ ಯುವಕನ ಸಹೋದರ ನಬೀಲ್ ಮಾಧ್ಯಮ ಪ್ರತಿನಿಧಿಗಳಿಗ ನೀಡಿದ ಮಾಹಿತಿಯಂತೆ ತನ್ನ ಸಹೋದರನ ಸ್ನೇಹಿತ ನೀಡಿದ ಮಾಹಿತಿಯಂತೆ ಲಾಡ್ಜ್ ಗೆ ಹೋದಾಗ ಅಲ್ಲಿ ಇಕ್ಬಾಲ್ ಎಂಬಾತ ನನಗೆ ಸಿಕ್ಕಿದ್ದು ಆತನ ಬಳಿ ವಿಚಾರಿಸಿದಾಗ ನಿನ್ನ ಸಹೋದರ ಓಡಿ ಹೋಗಿದ್ದಾನೆ ಎಂದು ತಿಳಿಸಿದಾನೆ. ಆದರೆ ನಾನು ಲಾಡ್ಜ್ ನೊಳಗೆ ಹೋಗಿ ನೋಡಿದಾಗ ಅಲ್ಲಿನ ಅಪ್ಫಾನ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದು ಆತನನ್ನು ಕತ್ತಿಯಿಂದ ಇರಿದು ಕೊಲ್ಲಲಾಗಿದೆ. ಆತ ಹೋಟೆಲ್ ಗೆ ಏಕೆ ಹೋದ ಎಂದು ನನಗೆ ಗೊತ್ತಿಲ್ಲ. ಶನಿವಾರವೇ ಆತ ಬೆಂಗಳೂರಿನಿಂದ ಭಟ್ಕಳಕ್ಕೆ ಬಂದಿದ್ದು ಇಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾನೆ ಎಂದು ತಿಳಿಸಿದ್ದಾನೆ. 

ಘಟನೆಯ ಸುದ್ದಿ ಕಾಡ್ಗಿಚ್ಚಿನಂತೆ ಊರು ತುಂಬ ಹರಡಿಕೊಂಡಿದ್ದು ರಾತ್ರಿ ಸಾವಿರಾರು ಮಂದಿ ಲಾಡ್ಜ್ ಮುಂದೆ ಸೇರಿದ್ದು ಜನರನ್ನು ಚದುರಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಪಡುವಂತಾಯಿತು. 

ಆಕ್ರೋಶಿತ ಯುವಕರು ಕೆಲಸಮಯ ಘಟನಾ ಸ್ಥಳದಲ್ಲಿ ಕೂಗಾಡುತ್ತಿದ್ದು ತ್ವೇಷಮಯ ವಾತವರಣ ನಿರ್ಮಾಣವಾಗಿತ್ತು. ಸಹಾಯಕ ಪೊಲೀಸ್ ಅಧೀಕ್ಷ ನಿಖಿಲ್, ಪಿ.ಎಸ್.ಐ ಕುಡಗುಂಡಿ ಮತ್ತಿತರ ಪೊಲೀಸ್ ಅಧಿಕಾರಿಗಳು ಹಾಗೂ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಮುಖಂಡರು ಯುವಕರನ್ನು ನಿಯಂತ್ರಿಸಿ ವಾತವರಣ ತಿಳಿಗೊಳಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಭಟ್ಕಳಕ್ಕೆ : ಕೊಲೆ ಪ್ರಕರಣ ನಡೆದ ಶನಿವಾರ ರಾತ್ರಿ ಮೂರು ಗಂಟೆ ಸುಮಾರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಭಟ್ಕಳಕ್ಕೆ ಬಂದಿದ್ದು ಇವರ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಚುರುಕೊಗೊಳಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ ಐದು ಜನರನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು ತನಿಖೆಯು ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ವಿವರಗಳನ್ನು ಮಾಧ್ಯಮದವರ ಮುಂದಿಡಲಾಗುವುದು ಎಂದಿದ್ದಾರೆ. 

ಹಣದ ವ್ಯವಹಾರ ಕೊಲೆಗೆ ಕಾರಣವಾಯಿತೆ?: ಯುಕವನ ಕೊಲೆಗೆ ಹಣದ ವ್ಯವಹಾರವೇ ಕಾರಣ ಎಂಬ ಸುದ್ದಿ ಹರಿದಾಡುತ್ತಿದ್ದು ಇನ್ನಿತರ ಆಯಾಮಗಳಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ ಎನ್ನಲಾಗಿದ್ದು ಕಾರಣವೇನೆ ಇರಲಿ ಯುಕವನ ಕೊಲೆಗೆ ಎಲ್ಲೆಡೆಯಿಂದಲೂ ಖಂಡನೆ ವ್ಯಕ್ತವಾಗಿದ್ದು ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನೆಡೆಸಲಿ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ; ಮಗನ ಸಾವಿಗೆ ನ್ಯಾಯ ಒದಗಿಸಲು ತಂದೆಯ ಕೋರಿಕೆ: ತನ್ನ ಮಗನನ್ನು ಕಳೆದುಕೊಂಡ ಕುಟುಂಬಲ್ಲಿ ಆಕ್ರಂದನ ಮನೆಮಾಡಿಕೊಂಡಿದ್ದು ತನ್ನ ಮಗನ ಸಾವಿಗೆ

ನ್ಯಾಯ ಒದಗಿಸುವಂತೆ ಮುಹಮ್ಮದ್ ಅಲಿ ಜಬಾಲಿ ಪೊಲೀಸರಲ್ಲಿ ಕಣ್ಣೀರು ಹಾಕಿ ಮನವಿ ಮಾಡಿಕೊಂಡಿದ್ದಾರೆ.

ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗಿ: ಶನಿವಾರ ರಾತ್ರಿ ಕೊಲೆಗೀಡಾಗಿರುವ ಅಫ್ಫಾನ್ ನ ಅಂತ್ಯ ಸಂಸ್ಕಾರ ರವಿವಾರ ಮಗ್ರೀಬ್ ನಮಾಝ್ ಬಳಿಕ ನೆರವೇರಿದ್ದು ಸಾವಿರಾರು ಮಂದಿ ಭಾಗವಹಿಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...