ಯುವ ಸಂಸತ್ ಅಣಕು ಸ್ಪರ್ಧೆ

Source: sonews | By Staff Correspondent | Published on 3rd November 2018, 8:09 PM | State News |

ಕೋಲಾರ : ವಿದ್ಯಾರ್ಥಿಗಳು ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಜ್ಞೆಯನ್ನು ಹೊಂದಲು ಯುವ ಸಂಸತ್ ಅಣಕು ಸ್ಪರ್ಧೆ ಸಹಕಾರಿ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ|| ಪಿ.ಕೃಷ್ಣಪ್ಪ ತಿಳಿಸಿದರು
    
ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಲಾರದಲ್ಲಿ ನವೆಂಬರ್ 3 ರಂದು ನಡೆದ ಜಿಲ್ಲೆಯ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲಾ ಯುವ ಅಣಕು ಸಂಸತ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
    
ವಿಶ್ವದಲ್ಲಿ ಭಾರತ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಸಂಸತ್ ಪ್ರಮುಖವಾಗಿದ್ದು, ಯುವ ಜನತೆ ರಾಜಕೀಯ ಪ್ರಜ್ಞೆಯಿಂದ ಉತ್ತಮ ಪ್ರಜಾ ಪ್ರತಿನಿಧಿಗಳನ್ನು ಚುನಾಯಿಸಿ ದೇಶವನ್ನು ಬಲಿಷ್ಠಗೊಳಿಸಬೇಕು ಎಂದರು.
    
ಜಿಲ್ಲಾ ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ. ನಟರಾಜ್ ಪ್ರಾಯೋಗಿಕ ತರಗತಿಯನ್ನು ಮಾಡಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದರು.  ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಿರಿಷಾ ಪ್ರಥಮ ಸ್ಥಾನವನ್ನು, ನೂತನ ಪದವಿ ಪೂರ್ವ ಕಾಲೇಜು ಕೋಲಾರದ ಗಂಗಾಧರ್ ದ್ವಿತೀಯ ಸ್ಥಾನವನ್ನು, ಸರ್ಕಾರಿ ಪದವಿಪೂರ್ವ ಕಾಲೇಜು ಮೂಲೂರಿನ ಸಹನ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
    
ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಜಿಲ್ಲಾ ನೋಡಲ್ ಅಧಿಕಾರಿ ರಾಮಣ್ಣ, ಸಹ ನೋಡಲ್ ಅಧಿಕಾರಿಗಳಾದ ಕೃಷ್ಣಪ್ಪ.ಪಿ, ಗಂಗಪ್ಪ, ನಾಗರಾಜ್, ವೆಂಕಟೇಶ್, ಜಿ.ಕೆ. ನಾರಾಯಣಸ್ವಾಮಿ ಮುಂತಾದವರು ಉಪಸ್ಥತರಿದ್ದರು.
    
ಸಹನಾ ಪ್ರಾರ್ಥಿಸಿ, ಉಪನ್ಯಾಸಕರಾದ ಕೃಷ್ಣಪ್ಪ.ಪಿ. ಸ್ವಾಗತಿಸಿ, ಜಿ.ಕೆ. ನಾರಾಯಣಸ್ವಾಮಿ ನಿರೂಪಿಸಿ, ಗಂಗಪ್ಪನವರು ವಂದಿಸಿದರು.
                                    

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...