ಹೊಲಿಗೆ ಸೇವೆಗಾಗಿ ವಿದೇಶದ ಕೆಲಸದ ಅವಕಾಶ ಮುಂದೂಡಿದ ಯುವಕ.!

Source: SO News | By Laxmi Tanaya | Published on 15th January 2021, 10:08 PM | National News | Don't Miss |

ಪಂಜಾಬ್ : ಐತಿಹಾಸಿಕ ರೈತ ಹೋರಾಟದಲ್ಲಿ ಸಾವಿರಾರು ಸಂಘ ಸಂಸ್ಥೆಗಳು ಅನ್ನದಾತರ ನೆರವಿಗೆ ನಿಂತಿವೆ. ಅವರಿಗೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಕಂಕಣ ತೊಟ್ಟು ಈ ಸಂಸ್ಥೆಗಳು ಕಳೆದ 50 ದಿನಗಳಿಂದಲೂ ಇಲ್ಲೇ ಠಿಕಾಣಿ ಹೂಡಿವೆ. ಇವುಗಳ ಮಧ್ಯೆ ಸಣ್ಣ-ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸಾಮಾನ್ಯ ಜನ ಕೂಡ ರೈತರ ಸೇವೆಗೆ ಆಗಮಿಸಿದ್ದಾರೆ. ಅವರಲ್ಲಿ ಪಂಜಾಬ್‌ನ ದಲವೀರ್‌ ಸಿಂಗ್‌ ಕೂಡ ಒಬ್ಬರು.

ಪಂಜಾಬ್‌ನ ಬರ್ನಾಲ್‌ ಎಂಬಲ್ಲಿ ಬಟ್ಟೆ ಹೊಲಿಗೆ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದ ದಲವೀರ್‌ ಸಿಂಗ್‌, ದುಬೈನಲ್ಲಿ ಕೆಲಸ ಮಾಡಲು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬಿನಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಇವರಿಗೆ ವೀಸಾ ದೊರೆತಿತ್ತು. ವೀಸಾ ಪಡೆದು ಇನ್ನೆನ್ನು ದುಬೈಗೆ ಹಾರಲು ಹೊರಟಿದ್ದ ಇವರಿಗೆ ರೈತರು ದೆಹಲಿ ಚಲೋಗೆ ಕರೆ ಕೊಟ್ಟಿದ್ದು, ದೆಹಲಿಗೆ ಬಂದು ಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ಆರಂಭಿಸಿದ್ದು ತಿಳಿಯಿತು. ನಂತರ ಸಿಂಘ ಗಡಿಯಲ್ಲಿ ರೈತರ ಹೋರಾಟದಲ್ಲಿ ಭಾಗಿಯಾಗಿದ್ದ ಇವರು, ಮತ್ತೆ ತಮ್ಮ ಹಳೆ ಕೆಲಸವನ್ನು ಸೇವೆ ರೀತಿಯಲ್ಲಿ ಮುಂದುವರೆಸಿದ್ದಾರೆ.

`ವೀಸಾ ದೊರೆತಿದೆ. ಯುಎಇಗೆ ಹೊರಡಬೇಕು. ಅಲ್ಲಿ ಒಳ್ಳೆಯ ಕೆಲಸ ಸಿಕ್ಕಿದೆ. ಆದರೆ ನಮ್ಮ ದೇಶ ರೈತರು ಸಂಕಷ್ಟದಲ್ಲಿ ಇರುವಾಗ ನಾನು ವಿದೇಶಕ್ಕೆ ಹೋಗುವುದು ಸರಿ ಬರಲಿಲ್ಲ. ಮೊದಲು ನಮ್ಮವರ ಸಂಕಷ್ಟಕ್ಕೆ ನಾವಾಗಬೇಕು. ಅದಕ್ಕೆ  ನಾನು ಇಲ್ಲಿ ಬಂದು ನನ್ನ ಹಳೆ ಕೆಲಸವನ್ನು ಸೇವೆ ರೀತಿಯಾಗಿ ಮಾಡುತ್ತಿದೇನೆʼ ಎಂದಿದ್ದಾರೆ.

ʼಜನವರಿ 26 ರಂದು ಬೃಹತ್‌ ಟ್ರ್ಯಾಕ್ಟರ್‌ ರ್ಯಾಲಿ ಆಯೋಜಿಸಿದ್ದೇವೆ. ಅಂದು ರೈತರ ಪರವಾಗಿ ನಿರ್ಣಯ ಆಗಲಿದೆ. ನಾವು ಅಂದು ಈ ಹೋರಾಟದಲ್ಲಿ ವಿಜಯಹೊಂದಿ ಪಂಜಾಬ್‌ಗೆ ವಾಪಸ್‌ ತೆರಳುತ್ತೇವೆ. ಅಲ್ಲಿಂದ ನಾನು ದುಬೈಗೆ ಹೋಗಿ ಹೊಸ ಕೆಲಸಕ್ಕೆ ಸೇರುತ್ತೇನೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇವರಂತೆಯೇ ಮತ್ತೊಂದು ದಂಪತಿ ಕೂಡ ಸಿಂಘು ಗಡಿಯಲ್ಲಿ ಉಚಿತ ಹೊಲಿಗೆ ಸೇವೆ ನೀಡುತ್ತಿದ್ದಾರೆ. ಪ್ರತಿಭಟನೆಯಲ್ಲಿ ರೈತರು ಹರಿದ ಬಟ್ಟೆಗಳು ಹಾಕಿಕೊಂಡು ಓಡಾಡುವುದನ್ನು ನೋಡಲು ನಮಗೆ ಸಾಧ್ಯವಾಗಲಿಲ್ಲ. ನಮ್ಮ ಕೆಲಸ ಸಣ್ಣದಿರಬಹುದು ಆದರೆ ಅದು ನಮ್ಮಿಂದ ಆಗುವ ಸೇವೆ ಹಾಗಾಗಿ ನಾವು ಇಲ್ಲಿ ಇದ್ದೇವೆ ಎಂದು ಈ ದಂಪತಿ ತಿಳಿಸುತ್ತಾರೆ.

 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...