ಸಿಎಸ್ ಕೆ ಕ್ಯಾಂಪ್ ನಲ್ಲಿ ನೀವು ಮತ್ತೆ ನನ್ನನ್ನು ನೋಡಬಹುದು: ಸುರೇಶ್ ರೈನಾ

Source: PTI | Published on 2nd September 2020, 7:52 PM | Sports News | Don't Miss |

 

 
ನವದೆಹಲಿ: ಸುರೇಶ್ ರೈನಾ ಅವರು ಐಪಿಎಲ್‌ನಿಂದ ಅನಿರೀಕ್ಷಿತವಾಗಿ ಹೊರಬಂದ ಬಗ್ಗೆ ಮೌನ ಮುರಿದಿದ್ದು, ತಮ್ಮ ಕುಟುಂಬಕ್ಕಾಗಿ ಭಾರತಕ್ಕೆ ಮರಳಿರುವುದಾಗಿ ಹೇಳಿದ್ದಾರೆ. ಅಲ್ಲದೆ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನಲ್ಲಿ ಆಡಲು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್‌(ಸಿಎಸ್ ಕೆ)ಗೆ ಸೇರಲು ದುಬೈಗೆ ತೆರಳುವುದಾಗಿ ತಿಳಿಸಿದ್ದಾರೆ.
ಆಗಸ್ಟ್ 15 ರಂದು ಎಂ.ಎಸ್. ಧೋನಿ ಅವರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ರೈನಾ ಅವರು ಐಪಿಎಲ್ ಗಾಗಿ ದುಬೈಗೆ ತೆರಳಿದ್ದರು. ಆದರೆ ಹಠಾತ್ ಆಗಿ ಭಾರತಕ್ಕೆ ವಾಪಸ್ ಆಗಿದ್ದರು. ಇದಕ್ಕೆ ಫ್ರ್ಯಾಂಚೈಸ್ ನಡುವಿನ ದೀರ್ಘಕಾಲದ ಬಿರುಕು ಕಾರಣ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸುರೇಶ್ ರೈನಾ ಹಠಾತ್ ನಿರ್ಗಮನದ ಬಗ್ಗೆ ಸಾಕಷ್ಟು ಚರ್ಚೆಗೂ ನಾಂದಿಯಾಗಿತ್ತು.
ಈ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ರೈನಾ, ನೀವು ಮತ್ತೆ ನನ್ನನ್ನು ಸಿಎಸ್ ಕೆ ಕ್ಯಾಂಪ್ ನಲ್ಲಿ ನೋಡಬಹುದು ಎಂದಿದ್ದಾರೆ.
"ನಾನು ವಾಪಸ್ ಬಂದಿದ್ದು ವೈಯಕ್ತಿಕ ನಿರ್ಧಾರ ಮತ್ತು ನನ್ನ ಕುಟುಂಬಕ್ಕಾಗಿ ನಾನು ಹಿಂತಿರುಗಬೇಕಾಗಿತ್ತು. ಮನೆಯ ಮುಂಭಾಗದಲ್ಲಿ ತಕ್ಷಣವೇ ಗಮನಹರಿಸಬೇಕಾದ ಸಂಗತಿಯಿದೆ. ಸಿಎಸ್ ಕೆ ನನ್ನ ಕುಟುಂಬವೂ ಹೌದು ಮತ್ತು ಮಹಿ ಭಾಯ್ (ಎಂಎಸ್ ಧೋನಿ) ನನಗೆ ಬಹಳ ಮುಖ್ಯ ಮತ್ತು ಇದು ಕಠಿಣ ನಿರ್ಧಾರ" ಎಂದು ಸುರೇಶ್ ರೈನಾ 'ಕ್ರಿಕ್‌ ಬಜ್ ಗೆ ತಿಳಿಸಿದ್ದಾರೆ.
ಸಿಎಸ್ ಕೆ ಮತ್ತು ನನ್ನ ನಡುವೆ ಯಾವುದೇ ಸಮಸ್ಯೆ ಇಲ್ಲ. 12.5 ಕೋಟಿ ರೂ. ಪಡೆಯುವುದರಿಂದ ಯಾರೂ ಹಿಂದೆ ಸರಿಯುವುದಿಲ್ಲ ಮತ್ತು ಬಲವಾದ ಕಾರಣವಿಲ್ಲದೆ ಹೊರನಡೆಯುವುದಿಲ್ಲ. ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರಬಹುದು ಆದರೆ ನಾನು ಇನ್ನೂ ಚಿಕ್ಕವನಾಗಿದ್ದೇನೆ ಮತ್ತು ಮುಂದಿನ 4-5 ವರ್ಷಗಳ ಕಾಲ ಐಪಿಎಲ್‌ನಲ್ಲಿ ಸಿಎಸ್ ಕೆ ಪರವಾಗಿ ಆಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ

Read These Next

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಇಲ್ಲ. ನೈಟ್ ಕರ್ಪ್ಯೂ ಮುಂದುವರಿಕೆ. ಎಚ್ಚರ ತಪ್ಪದಂತೆ ಜನತೆಗೆ ಸರ್ಕಾರದ ಮನವಿ

ಬೆಂಗಳೂರು : ಕೋವಿಡ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿಧಿಸಿದ್ದ ವೀಕೆಂಡ್ ಕರ್ಪ್ಯೂವನ್ನ ರಾಜ್ಯ ಸರ್ಕಸರವರದ್ದು ಮಾಡಿದೆ.

ಅಬಕಾರಿ ದಾಳಿ: ಅಕ್ರಮ ಮದ್ಯ ವಶ

ಶಿವಮೊಗ್ಗ : ತೀರ್ಥಹಳ್ಳಿಯ ಇಂದಿರಾನಗರ, ತಾಲೂಕಿನ ಮಾರಿಗುಣಿ, ತಲ್ಲೂರು ಅಂಗಡಿ ಕೈಮರ ಗ್ರಾಮಗಳಲ್ಲಿ ಅಬಕಾರಿ ಇಲಾಖೆಯ ಆಯುಕ್ತರು ಹಾಗೂ ...

ಕೋವಿಡ್ ತಜ್ಞರ ಸಮಿತಿ ಸಭೆ. ಎರಡು ಲಸಿಕೆ ಪಡೆದವರಿಗೆ ಗಂಭೀರ ರೋಗ ಲಕ್ಷಣ ಸಾಧ್ಯತೆ ಅತಿ ಕಡಿಮೆ

ಶಿವಮೊಗ್ಗ : ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ...