ಯೋಗ ಎಂಬುದು ಪ್ರಪಂಚಕ್ಕೆ ಭಾರತದ ಸನಾತನ ಪರಂಪರೆಯ ಕೊಡುಗೆ -ಡಾ. ಪಾಂಡುರಂಗ ನಾಯಕ

Source: so news | By MV Bhatkal | Published on 22nd June 2019, 8:14 PM | Coastal News | Don't Miss |

ಭಟ್ಕಳ:ಯೋಗವೆಂದರೆ ಕೇವಲ ಆಸನ, ಪ್ರಾಣಾಯಾಮವಲ್ಲ. ವರ್ತಮಾನದಲ್ಲಿ, ದೇಹ ಮತ್ತು ಮನಸನ್ನು ಸಂಯೋಗಗೊಳಿಸುವ ವಿಧಾನ. ಯೋಗವು ಜೀವನ ಕ್ರಮದ ಅಂಗವಾದಾಗ ಸ್ವಸ್ಥ ಮನಸ್ಸು ಸ್ವಸ್ಥ ದೇಹ ನಮ್ಮದಾಗುತ್ತದೆಯಲ್ಲದೇ ಸಂತಸದ ಬದುಕು ನಮ್ಮದಾಗುತ್ತದೆ. ಯೋಗಕ್ಕೆ ಬದುಕನ್ನು ಸಂತಸಮಯಗೊಳಿಸುವ ಶಕ್ತಿಯಿದೆ.ಯೋಗ ಎಂಬುದು ಪ್ರಪಂಚಕ್ಕೆ ಭಾರತದ ಸನಾತನ ಪರಂಪರೆಯ ಕೊಡುಗಾ ಎಂದು  ಡಾ. ಪಾಂಡುರಂಗ ನಾಯಕ ನುಡಿದರು. ಅವರು ಜ್ಞಾನೇಶ್ವರಿ ಶಿಕ್ಷಣ ವಹಾವಿದ್ಯಾಲಯದಲ್ಲಿ ವಿಶ್ವ ಯೋಗದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭಟ್ಕಳ ಎಜುಕೇಶನ್ ಟ್ರಸ್ಟನ ಅಧ್ಯಕ್ಷ  ಡಾ.ಸುರೇಶ ನಾಯಕ ಮಾತನಾಡಿ ಯೋಗವನ್ನು ದಿನಚರಿಯ ಭಾಗವಾಗಿ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಪ್ರಶಿಕ್ಷಕರು ಯೋಗಾಚರಣೆ ಮಾಡಿ, ಭಾವಿ ಜೀವನದಲ್ಲಿ ವಿದ್ಯಾರ್ಥಿಗಳಲ್ಲೂ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಲು ಕಾರ್ಯೋನ್ಮುಖರಾಗಬೇಕೆಂದರು. ಕಾಲೇಜಿನ ಪ್ರಾಚಾರ್ಯ ಡಾ.ಆರ್.ನರಸಿಂಹಮೂರ್ತಿ ಪ್ರಾಸ್ಥಾವಿಕ ನುಡಿಗಳನ್ನಾಡಿ ಯೋಗದ ಮಹತ್ವ ಹಾಗೂ ಅಂತರಾಷ್ಟ್ರೀಯ ಮನ್ನಣೆ ಪಡೆದ ಯೋಗ ನಮ್ಮ ಭಾರತದ್ದು ಎಂಬುದೇ ನಮಗೆ ಹೆಮ್ಮೆ ಎಂದರು. ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ಸುಮಂಗಲಾ ಸಂಗಡಿಗರು ಪ್ರಾರ್ಥಿಸಿದರು. ನೂತನ ಮೋಗೇರ ಹಾಗೂ ಪುಷ್ಪಾ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...