ಯಲ್ಲಾಪುರದ ಖ್ಯಾತನಾಮ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಹ್ಮಾನ್ ಬ್ಯಾರಿ ಇನ್ನಿಲ್ಲ

Source: sonews | By Staff Correspondent | Published on 23rd June 2019, 10:25 PM | Coastal News | Don't Miss |

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಖ್ಯಾತ ಸಾಮಾಜಿಕ ಕಾರ್ಯಕರ್ತ ಮುಸ್ಲಿಮ್ ಮುಖಂಡ, ವಿವಿಧ ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮುಮ್ತಾಝ್ ಹೊಟೇಲ್ ಮಾಲಿಕ ಅಬ್ದುಲ್ ರಹ್ಮಾನ್ ಹಸನ್ ಬ್ಯಾರಿ(67)ರವಿವಾರ ನಿಧರಾದರು. 

ಇವರು ಉತ್ತರಕನ್ನಡ ಮುಸ್ಲಿಮ್ ಯುನೈಟೆಡ್ ಫೋರಂ ಸ್ಥಾಪಕ ಸದಸ್ಯರಲ್ಲೋರ್ವರಾಗಿದ್ದು ಇವರ ಅಧ್ಯಕ್ಷತೆಯಲ್ಲಿ ಮಿಲ್ಲತ್ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಸಂಘಸಂಸ್ಥೆಗಳನ್ನು ಕಟ್ಟಿ ಬೆಳಿಸಿದ್ದರು. ಇವರ ನಿಧನದಿಂದಾಗಿ ಯಲ್ಲಾಪುರ ಸೇರಿದಂತೆ ಉ.ಕ ಜಿಲ್ಲೆ ಓರ್ವ ಮುಖಂಡನನ್ನು ಕಳೆದುಕೊಂಡಂತಾಗಿದೆ

ಆರೋಗ್ಯವಂತರಾಗಿದ್ದ ಇವರಿಗೆ ಇಂದು ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ಷಣಾರ್ಧದಲ್ಲೆ ಇವರು ವಿಧಿವಶರಾದರು ಎಂದು ಹೇಳಲಾಗುತ್ತಿದೆ. ರಾತ್ರಿ ಇಶಾ ನಮಾಝ್ ನಂತರ ಅವರ ಅಂತ್ಯಸಂಸ್ಕಾರವನ್ನು ಮಾಡಲಾಯಿತು. ಸಾವಿರಾರು ಮಂದಿ  ಇವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿ ಕೋರಿದರು. 

ಇವರ ನಿಧನಕ್ಕೆ ಉತ್ತರಕನ್ನಡ ಮುಸ್ಲಿಮ್ ಯುನೈಟೆಡ್ ಫೋರಂ ಅಧ್ಯಕ್ಷ ಇಮ್ತಿಯಾಝ್ ಶೇಖ್, ಪ್ರ.ಕಾ. ಮೊಹಸಿನ್ ಖಾಝಿ, ಭಟ್ಕಳದ ತಂಝೀಮ್ ಅಧ್ಯಕ್ಷ ಎಸ್.ಎಂ. ಪರ್ವಾಝ್, ರಾಬಿತಾ ಮಿಲ್ಲತ್  ಅಧ್ಯಕ್ಷ ನ್ಯಾಯಾವಾದಿ ಎ.ಪಿ ಮುಜಾವರ್, ಪ್ರ.ಕಾ. ತಲ್ಹಾ ಸಿದ್ದಿಬಾಪಾ, ಭಟ್ಕಳದ ಡಾ.ಮುಹಮ್ಮದ್ ಹನಿಫ್ ಶಬಾಬ್, ಸೈಯ್ಯದ್ ಮುಹಿದ್ದೀನ್ ಬರ್ಮಾವರ್, ಯಾಹ್ಯಾ ದಾಮೂದಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...