ಯಲ್ಲಾಪುರ: ತಂಬಾಕು ದುಷ್ಪರಿಣಾಮ; ಗುಲಾಬಿ ಹೂ ನೀಡಿ ಜಾಗೃತಿ

Source: S O News Service | By Office Staff | Published on 19th February 2020, 9:16 PM | Coastal News |

ಯಲ್ಲಾಪುರ: ಪಟ್ಟಣದ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ವೈಟಿಎಸ್‍ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಗುಲಾಬಿ ಹೂಗಳನ್ನು ನೀಡಿ, ತಂಬಾಕಿನಿಂದ ಆಗುವ ಹಾನಿಗಳ ಕುರಿತು ವಿವರಿಸಲಾದ ಕರಪತ್ರಗಳನ್ನು ವಿತರಿಸಿ ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸಿದರು. 
ತಹಶೀಲ್ದಾರ್ ಡಿ.ಜಿ.ಹೆಗಡೆ, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸೂರ್ಯನಾರಾಯಣ ಟಿ.ಭಟ್ಟ, ಆರೋಗ್ಯ ಮೇಲ್ವಿಚಾರಕರಾದ ಲತಾ ಕಾಣಕೋಣಕರ, ಪ್ರವೀಣ ಇನಾಮದಾರ, ಬಿಪಿಎಮ್ ಎಸ್.ಎಸ್.ಪಾಟೀಲ, ವೈಟಿಎಸ್‍ಎಸ್ ಪ್ರೌಢಶಾಲೆಯ ಶಿಕ್ಷಕರಾದ ಗಂಗಾ ನಾಯ್ಕ, ಎಸ್.ಎಸ್.ಹಳ್ಳಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...