ಬೇಂಗ್ರೆಯಲ್ಲಿ ವಿಶ್ವ ಜಲ ದಿನಾಚರಣೆ

Source: sonews | By Staff Correspondent | Published on 22nd March 2019, 5:56 PM | Coastal News | Don't Miss |

ಭಟ್ಕಳ: ಉಸಿರ ಇಂಡಸ್ಟ್ರಿ ಬೆಂಗ್ರೆ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಯಿಂದ ಬೆಂಗ್ರೆಯಲ್ಲಿ ವಿಶ್ವ ಜಲ  ದಿನಾಚರಣೆ ಆಚರಿಸಲಾಯಿತು.

ಗಿಡಗಳಿಗೆ ಜಲ ಸಿಂಚನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಭಟ್ಕಳ ಕ್ಷೇತ್ರ ಸಮನ್ವಯಾಧಿಕಾರಿ ಎಲ್ಲಮ್ಮ ಮರಿಸ್ವಾಮಿ ಮಾತನಾಡುತ್ತಾ ನೀರು ಸಕಲ ಜೀವರಾಶಿಗಳಿಗೆ ಅಮೂಲ್ಯ ವಾದದ್ದು ವಿಶ್ವದ ಎಲ್ಲಾ ಜನರಿಗೂ ಶುದ್ಧ ಕುಡಿಯುವ ನೀರು ಸಿಗುವಂತಾಗಬೇಕು ಎಂಬುದು ವಿಶ್ವ ಜಲ ದಿನದ ಆಶಯ ಎಂದು ತಿಳಿಸಿದರು. 

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಂಚಾಲಕ ಕೆ. ಮರಿಸ್ವಾಮಿ ಮಾತನಾಡುತ್ತಾ ನಮ್ಮ ಬದುಕಿನಲ್ಲಿ ನೀರಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ ಭೂಮಿಯ ಮೇಲೆ ಶೇಕಡ 97 ಉಪ್ಪು ನೀರಿನಿಂದ ಕೂಡಿದೆ ಉಳಿದ ಶೇಕಡಾ ಮೂರರಷ್ಟು ಸಿಹಿಯಾಗಿದ್ದು  ಇದರಲ್ಲಿ ಅತ್ಯಲ್ಪ ಪ್ರಮಾಣದ ನೀರು ಅಂತರ್ಜಲ ಮತ್ತು ವಾತಾವರಣದಲ್ಲಿ ಕಾಣಸಿಗುತ್ತದೆ ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವೆಂದು ತಿಳಿಸಿದರು.

ಬೆಂಗ್ರೆ ಉಸಿರ ಇಂಡಸ್ಟ್ರೀಸ್ ನ ಉದ್ಯಮಿ ಹಾಗೂ ಜಲ ಶೋಧಕ ಎಂ ಡಿ ಮ್ಯಾಥ್ಯೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನೀರಿಲ್ಲದ ಜೀವನ ಬರಡು ನೀರಿಗಾಗಿ ಜನರು ಆಹಾಕಾರ ಪಡುವುದನ್ನು ಹುಡುಗ ಅರಿತು ಕಳೆದ 25 ವರ್ಷಗಳಿಂದ ರಾಜ್ಯಾದ್ಯಂತ 15 ಸಾವಿರಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಉಚಿತವಾಗಿ ಅಂತರ್ಜಲ ಇರುವ ಬಗ್ಗೆ  ತೋರಿಸಿ ಕೊಟ್ಟಿರುವುದಾಗಿ ತಿಳಿಸಿದರು.  

ಕೆಡಿಸಿಸಿ ಸಮಾಜ ಸೇವಾ ಸಂಸ್ಥೆಯ ಪೆಲಿಕ್ಸ್ ಫನಾರ್ಂಡಿಸ್ ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...