ವಿಶ್ವ ತಂಬಾಕು ರಹಿತ ದಿನ; ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ                

Source: sonews | By Staff Correspondent | Published on 27th May 2020, 5:17 PM | Coastal News | Don't Miss |

ಕಾರವಾರ: ವಿಶ್ವ ತಂಬಾಕು ರಹಿತ ದಿನವನ್ನಾಗಿ ಮೇ 31 ನ್ನು ಆಚರಿಸಲಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು “ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್‍ನ ಬಳಕೆಯಿಂದ ರಕ್ಷಣೆ ಮಾಡುವುದು (Protecting youth from industry manipulation and preventing them from tobacco and nicotine use)” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿರುತ್ತದೆ. 

ಪ್ರಬಂಧ ಬರೆದು ಕಳುಹಿಸಲು ಜೂನ 5 ಕೊನೆಯ ದಿನವಾಗಿರುತ್ತದೆ. ಆಸಕ್ತರು  ಪ್ರಬಂಧ  ಜೊತೆಗೆ ತಮ್ಮ ಹೆಸರು, ವಿಳಾಸ, ವಯಸ್ಸು, ಮೊಬೈಲ್ ಸಂಖ್ಯೆ, ಇತರೆ ಮಾಹಿತಿಯನ್ನು ನಮೂದಿಸುವುದು. ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ 3 ಸಾವಿರ, 2  ಮತ್ತು 1 ಸಾವಿರದಂತೆ  ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುವುದು. ಜಿಲ್ಲಾ ಆರೋಗ್ಯ ಮತ್ತು ಕು.ಕ. ಇಲಾಖೆಯ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿದೆ.

ಪ್ರಬಂಧವು ಮೌಲ್ಯಯುತವಾದ ವಿಷಯ ಮಂಡನೆ, ಉತ್ತಮವಾದ ಭಾಷಾ ಕೌಶಲ್ಯ, ಶುದ್ಧಬರವಣಿಗೆ, ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡಿರಬೇಕು. ಪ್ರಬಂಧವನ್ನು 1500 ಶಬ್ಧಗಳಿಗೆ ಮೀರದಂತೆ ಕನ್ನಡ ಭಾಷೆಯಲ್ಲಿ ಮನೆಯಿಂದಲೇ ಬರೆದು ಮಿಂಚಂಚೆ (ಇ-ಮೇಲ್) ಅಥವಾ ಪೋಸ್ಟ್ ಮುಖಾಂತರ ಕಳುಹಿಸಬಹುದಾಗಿದೆ. 21 ವರ್ಷದೊಳಗಿನ ಉತ್ತರ ಕನ್ನಡ ಜಿಲ್ಲೆಯವರು  ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. 

ಪೋಸ್ಟ್ ಮುಖಾಂತರ ಕಳುಹಿಸುವರು,  ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕು.ಕ. ಕಛೇರಿ ಆವರಣ, ಕಾರವಾರ (ಉ.ಕ.) – 501301 ವಿಳಾಸಕ್ಕೆ ಹಾಗೂ ಮಿಂಚಂಚೆ ಮಾಡುವರು  
ಇ-ಮೇಲ್ ವಿಳಾಸ:- [email protected]  ಗೆ ಕಳುಹಿಸಬೇಕು 

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9008090407 ಅಥವಾ 9482130521 ಸಂಪರ್ಕಿಸಲು ಕೋರಲಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...