ಜೊಯಿಡಾ: 2 ಲಕ್ಷ ಮೌಲ್ಯದ ಕಟ್ಟಿಗೆ ತುಂಡುಗಳ ಜಪ್ತಿ; ಇಬ್ಬರ ಬಂಧನ

Source: S O News Service | By SahilOnline Staff | Published on 3rd April 2020, 11:27 PM | Coastal News |

ಜೊಯಿಡಾ: ದಾಂಡೇಲಿ ಅರಣ್ಯ ವ್ಯಾಪ್ತಿಯ ಗಾಂಧಿನಗರ ಬಳಿ ಸಾಗವಾನಿ, ಸೀಸಂ ಹಾಗೂ ನಂದಿ ಕಟ್ಟಿಗೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ.
         ಗಾಂಧಿನಗರದ ಕಾಪೆರ್ಂಟರ್ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಅಂದಾಜು 2 ಲಕ್ಷ ಮೌಲ್ಯದ ಕಟ್ಟಿಗೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳಾದ ಮಾರುತಿ ನಾಗಪ್ಪ ಕಲಕುಂದ್ರಿ, ಜಾಫರ್ ಅಲಿ ಹನೀಫ್ ಸಾಗರ ಎಂಬ ಇಬ್ಬರು ಆರೋಪಿಗಳನ್ನು ವಾಹನ ಹಾಗೂ ಕಟ್ಟಿಗೆ ಕೊಯ್ಯುವ ಉಪಕ್ರಣಗಳ ಸಮೇತ ಬಂಧಿಸಿದ್ದಾರೆ.
    ಹಳಿಯಾಳ ವಿಭಾಗದ ಉಪವಲಯ ಅರಣ್ಯಾಧಿಕಾರಿ ಅಜ್ಜಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ವಿರೇಶ ಮಾರ್ಗದರ್ಶನದಲ್ಲಿ ವಿಶೇಷ ಶ್ರಮ ವಹಿಸಿ ದಾಂಡೇಲಿ ವಲಯ ಅರಣ್ಯಾಧಿಕಾರಿ ವಿನಯ ಭಟ್ಟ ನೇತೃತ್ವದಲ್ಲಿ ಸಿಬ್ಬಂದಿ ಸಂತೋಷ ಜಿ., ಅನಿಲ ಆಚಾರಟ್ಟಿ, ಜ್ಯೋತಿ ನಂದಿಕೋಲ, ಯೋಗಿಶ್ ಜಿ.ನಾಯ್ಕ, ಸಂದೀಪ್ ಗೌಡ, ನಾರಾಯಣ ಜಿ.ದೀಪಕ, ಹನುಮಂತ ಎನ್. ಈ ಕಾರ್ಯಾಚರಣೆಯಲ್ಲಿ ಇದ್ದರು.
 

Read These Next

ಮಾಜಿ ಶಾಸಕ ಮಾಂಕಾಳರ ನೆರವಿನಿಂದ ಭಟ್ಕಳದಿಂದ ಓಡಿಸ್ಸಾ ಕ್ಕೆ ಪ್ರಯಾಣ ಬೆಳೆಸಿದ 70 ಮೀನುಗಾರರು

ಭಟ್ಕಳ: ಸೇವಾ ಸಿಂಧು ಆ್ಯಫ್‍ನಲ್ಲಿ ಹೆಸರು ನೊಂದಾಯಿಸಿ ತಮ್ಮ ರಾಜ್ಯಕ್ಕೆ ಮರಳು  ಕಾಯುತ್ತಿದ್ದ ಒಡಿಸ್ಸಾದ 70 ಮೀನುಗಾರರು ಸೋಮವಾರದಂದು ...