ಮಾ.1ರಂದು ಸ್ತ್ರೀಯರ ಆರೋಗ್ಯ ತಪಾಸಣಾ ಶಿಬಿರ

Source: sonews | By Staff Correspondent | Published on 28th February 2020, 6:24 PM | Coastal News |

ಭಟ್ಕಳ: ನಾಯಕ್ ಹೆಲ್ತ್ ಕೇರ್ ಭಟ್ಕಳ ಹಾಗೂ ಸೀಲಾ ಲ್ಯಾಬೊರೆಟರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.1ರಂದು ಬೆಳಿಗ್ಗೆ 9.30 ರಿಂದ 1.30ರ ತನಕ  ಸ್ತ್ರೀಯರ ಆರೋಗ್ಯ ತಪಾಸಣಾ ಶಿಬಿರವನ್ನು ಉಚಿತವಾಗಿ ಎರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಅಂದು ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ವಿನಿತಾ ನಾಯಕ ಅವರು ಮುಕ್ತ ಸಮಾಲೋಚನೆ ಮಾಡುವರಲ್ಲದೇ ಉಚಿತವಾಗಿ ರಕ್ತ ಪರೀಕ್ಷೆ, ಚಿಕಿತ್ಸೆ, ಅಗತ್ಯವುಳ್ಳವರಿಗೆ ಉಚಿತ ಅಲ್ಟ್ರಾಸೌಂಡ್ ವ್ಯವಸ್ಥೆಯನ್ನು ಕೂಡಾ ಮಾಡಲಾಗುವುದು ಎಂದೂ ತಿಳಿಸಲಾಗಿದೆ. 10 ವರ್ಷಕ್ಕೆ ಮೇಲ್ಪಟ್ಟ ಹೆಣ್ಣುಮಕ್ಕಳು, 18 ರಿಂದ 80 ವರ್ಷದ ಒಳಗಿನವರು, ಗರ್ಭಿಣಿಯರು, ಬಾಣಂತಿಯರು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದೂ ಡಾ. ವಿನಿತಾ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಕಾಯ್ದಿರಿಸುವಿಕೆಗಾಗಿ 7846996333, 08385-222063ಗೆ ಸಂಪರ್ಕಿಸಬಹುದು ಎಂದೂ ತಿಳಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...