ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ

Source: so news | By Manju Naik | Published on 10th March 2019, 12:07 AM | Coastal News | Don't Miss |

ಭಟ್ಕಳ: ದೇವರೆ ಮಹಿಳೆಯರನ್ನು ವಿಶೇಷವಾಗಿ ಸೃಷ್ಟಿಸಿ ಭೂಮಿಗೆ ಕಳುಹಿಸಿರುವಾಗ ನಾವು ಪುರುಷರೊಂದಿಗೆ ಸಮಾನತೆಗಾಗಿ ಯಾಕೆ ಹೋರಾಡಬೇಕು? ನಮ್ಮ ಹಕ್ಕನ್ನು ಪಡೆಯಲು ಹೋರಾಟ ನಡೆಸಬೇಕಿದೆ ಎಂದು ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಸವಿತಾ ಭಟ್ ಹೇಳಿದರು. 
ಅವರು ಶುಕ್ರವಾರದಂದು ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಪುರುಷರಿಗೆ ಕಿಡ್ನಿಯಲ್ಲಿ ಬೆಳೆದಿರುವ 3 ಮಿ.ಮಿ. ಕಲ್ಲು ಹೊರಹಾಕಲು ಸಾದ್ಯವಿಲ್ಲದೆ ನೋವಿನಿಂದ ನರಳುತ್ತಾರೆ. ಆದರೆ ಮಹಿಳೆಯರು 3ಕೆ.ಜಿ ಮಗುವಿಗೆ ಜನ್ಮ ನೀಡುತ್ತಾಳೆ. ಇಂತಹ ಅಪಾರವಾದ ಶಕ್ತಿಯನ್ನು ಭಗವಂತನೆ ಮಹಿಳೆರಿಗೆ ಕರುಣಿಸಿರುವಾಗ ನಾವೇಕೆ ಪುರುಷರೊಂದಿಗೆ ಸಮಾನತೆಗಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.
ಡಿ ದರ್ಜೆಯ ಸಿಬ್ಬಂದಿ ಗಾಯತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಆಸ್ಪತ್ರೆ ಮಹಿಳಾ ಸಿಬ್ಬಂದಿಗಳಿಗೆ ವಿಶೇಷ ಮನರಂಜನೆ ಕಾರ್ಯಕ್ರಮ ನಡೆಯಿತು.  
ಸಭೆಯಲ್ಲಿ ವೈದ್ಯರುಗಳಾದ ಡಾ. ಕಮಲಾ, ಡಾ. ಶ್ರುತಿ, ಡಾ. ವಾಣಿ, ಡಾ. ಜನಾರ್ದನ, ಡಾ. ಸತೀಶ, ಡಾ. ಲಕ್ಷ್ಮೀಶ, ಡಾ. ದಿನಕರ್ ಇತರರು ಉಪಸ್ಥಿತರಿದ್ದರು.

Read These Next

ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಪ್ರತಿಭಟನೆ

ಭಟ್ಕಳ: ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭಾಗವನ್ನು ಸೇರಿಸುವುದನ್ನು ಕೈಬಿಡುವ ಕುರಿತು ಉತ್ತರ ಕನ್ನಡ ...