ಕಾರವಾರ: ಮನಸೂರೆಗೊಂಡೆ ಮಹಿಳಾ ಸಾಂಸ್ಕ್ರತಿಕ ಉತ್ಸವ

Source: S O News service | By I.G. Bhatkali | Published on 19th January 2021, 9:32 PM | Coastal News | Don't Miss |

ಕಾರವಾರ: ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾದ ಮಹಿಳಾ ಉತ್ಸವ ಕಾರ್ಯಕ್ರಮವು ಅತ್ಯಂತ ಉತ್ಸಾಹದಿಂದ ಮಹಿಳೆಯರನ್ನು ರಂಗಮಂದಿರದಲ್ಲಿ ಕೂಡುವಂತೆ ಮಾಡಿತು.

ಸಾಂಸ್ಕ್ರತಿಕ ಉತ್ಸವ  ಶುಭಾರಾಂಭವನ್ನು  ತುಂಗಾ ಹಾಗೂ ಶ್ರೆಯಾ ಅಂಕೋಲಾ ತಂಡದವರು ಭರತ್ಯ ನಾಟ್ಯದ ಮೂಲಕ ಗಮನಸೆಳೆದರು. ನಂತರ ವಿನುತಾ ನಾಗರಾಜ ಮತ್ತು ಅವರ ತಂಡದಿಂದ ಸುಗಮ ಸಂಗೀತವನ್ನು ಪ್ರದರ್ಶಸಿಲಾಯಿತು ಈ ಸುಗಮ ಸಂಗೀತವು ವಿಕ್ಷಕರನ್ನು ಮಂತ್ರಮುಗ್ದರನ್ನಾಗಿ ಮಾಡಿತು. ಪಾಶ್ಚಿಮಾತ್ಯ ನೃತ್ಯಗಳಲ್ಲಲೊಂದಾ ಪುಗಡಿ ನೃತ್ಯವನ್ನು ಗೀತಾ ಸುವರ್ಣಾ ಬಿಗಣಾ ತಂಡದವರಿಂದ ನೃತ್ಯ ಪ್ರದರ್ಶಸಿಲಾಯಿತು.

ಸಾಂಸ್ಕ್ರತಿಕ ಕಲೆಗಳಲ್ಲಿ ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿದ್ದೆದಂದರೆ ಶ್ರೀ ಕೃಷ್ಣ ರಾಸಲೀಲಾ  ಶಿರವಾಡದ ಅಪೇಕ್ಷಾ ಹಾಗೂ ತಂಡದವರಿಂದ ಪ್ರದರ್ಶಿಸಲಾದ ಈ ನೃತ್ಯವು ಪ್ರೇಕ್ಷಕರನ್ನು ತಮ್ಮ ಗಮನ ಮತ್ತೊಂದೆಡೆಗೆ ಸಾಗದಂತೆ ಮಾಡಿತು, ಜಾನಪದ ಸಂಗೀತ, ಲಾವಣಿ ನೃತ್ಯ, ಗಾರುಡಿ ಗೊಂಬೆ ಕುಣಿತವು  ವಿಕ್ಷಕರನ್ನು ಅತ್ಯಂತ ಮನೋಂಜನೆ ಗೊಳಿಸಿದವು, ಸೂತ್ರದ ಗೊಂಬೆಯಾಟ ನೊಡುಗರನ್ನು ಶಾಂತಚಿತ್ತರಾಗುವಂತೆ ಮಾಡಿದ್ದು, ಕೋಲಾಟ, ಗೀ ಗೀಪದಗಳು, ಹಾಗೂ ಸಿದ್ದಿಜನಾಂಗದ ಪ್ರಚಲಿತ ನೃತ್ಯಗಳಾದ ಡೊಳ್ಳು ಕುಣಿತ, ಸಿದ್ದಿ ಕಟ್ಟಿ ನೃತ್ಯ, ಡಯಾಮಿ ನೃತ್ಯಗಳು ಜನರನ್ನು ಕುತಲ್ಲೆ ಕುಣಿಯುವಂತೆ ಮಾಡಿದ್ದು ಸುಳ್ಳಲ್ಲಾ. ಅದೇ ರೀತಿ  ಅತ್ಯಂತ ವೈಭಪೂರಿತವಾದ ಪ್ರದರ್ಶನವೆಂದರೆ ಯಕ್ಷಗಾನವಾಗಿತ್ತು. 

ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಮೆಹಂದಿ, ರಂಗೋಲಿ ಹಾಗೂ ಚಿತ್ರಕಲಾ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರು ಯಾವುದರಲ್ಲೂ ಕಡಿಮೆ ಅಲ್ಲವೇ ಅಲ್ಲ ಎಂಮ ನಿಟ್ಟಿನಲ್ಲಿ ಈ ಕಳೆಗಳಲ್ಲಿ ತಾ ಮುಂದು ನಾ ಮುಂದು ಎನ್ನವು ಸ್ಪರ್ಧೆ ಎರ್ಪಪಟ್ಟಿತ್ತು. ರಂಗು ರಂಗಿನ ರಂಗೋಲಿಗಳು, ಇಂಡಿಯನ್-ಅರೇಬಿಕ್ ಎಂಬ ಮೆಹಂದಿ ಚಿತ್ತಾರಗಳು, 
ಬಣ್ಣ ಬಣ್ಣದ ಚಿತ್ರಕಲೆಗಳು ನೋಡುಗರನ್ನು ಎಕಾಗೃತೆಯನ್ನು ಅವರತ್ತ ಸೆಳೆಯುವಂತೆ ಮಾಡಿದ್ದು. 

ಚತ್ರಕಲೆ ಸ್ಫರ್ಧೆಯಲ್ಲಿ ಪ್ರಥಮ ಸೊನಿಯಾ ಕಾಂಬಳೆ, ದ್ವೀತಿಯ ಪೂಜಾ ರೆವಣ್ಕರ್, ತೃತೀಯ ಪ್ರೇರಣಾ ಕುಡ್ತೆರ್. ಮೆಹಂದಿ ಸ್ಫರ್ಧೆಯಲ್ಲಿ ಪ್ರಥಮ ಜೂನಾಗಾ ರಬ್ಬೀನಾಲ್, ದ್ವೀತಿಯ ಸೋನಾಲಿ ಎಸ್. ಬಾಂದೆಕರ್, ತೃತೀಯ ಅಶು ಗೌಡಾ. ಕಾರ್ಯಕ್ರಮದಲ್ಲಿ ಬಹುಮಾನ ಪಡೆದರು.  

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...