ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಮೈಸೂರಿನ ಯುವತಿ ಸಮುದ್ರಪಾಲು, ಮೂವರ ರಕ್ಷಣೆ

Source: VB | By S O News | Published on 2nd August 2021, 5:38 PM | Coastal News |

ಮಲ್ಪೆ: ಮಲ್ಪೆ ಬೀಚ್ ನೀರಿನಲ್ಲಿ ಆಡುತ್ತಿದ್ದ ನಾಲ್ವರ ಪೈಕಿ ಓರ್ವ ಯುವತಿ ಸಮುದ್ರ ಪಾಲಾಗಿದ್ದು, ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ಪೂರ್ವಾಹ್ನ 11:20ರ ಸುಮಾರಿಗೆ ನಡೆದಿದೆ.

ಸಮುದ್ರಪಾಲಾದ ಯುವತಿಯನ್ನು ಕೊಡಗು ಮೂಲದ ಮೈಸೂರು ನಿವಾಸಿ ದೇಚಮ್ಮ ಯು.ಜೆ.(20) ಎಂದು ಗುರುತಿಸಲಾಗಿ ದೆ. ಈಕೆಯ ಜೊತೆ ಇದ್ದ ಸ್ನೇಹಿತರಾದ ಮೈಸೂರು ವಿಜಯ ಪುರದ ಎಂ.ಯು.ಶೈನಿ(20), ನವ್ಯಾ ಮಂದಣ್ಣ(20), ನಿಖಿಲ್ ಗೌಡ(20) ಎಂಬವರನ್ನು ರಕ್ಷಿಸಲಾಗಿದೆ. ಈ ಪೈಕಿ ತೀವ್ರ ಅಸ್ವಸ್ಥಗೊಂಡ ನಿಖಿಲ್ ಗೌಡ ಉಡುಪಿ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ.

ಇವರು ಜು.30ರಂದು ತಮ್ಮ ವಾಹನದಲ್ಲಿ ಪ್ರವಾಸ ಹೊರಟು ಮಂಗಳೂರಿಗೆ ಬಂದಿದ್ದು ಮಂಗಳೂರಿನಿಂದ ಜು.31ರಂದು ಮಧ್ಯಾಹ್ನ ಮಲ್ಪೆ ಬೀಚ್‌ಗೆ ಆಗಮಿಸಿ, ಇಲ್ಲಿನ ಬ್ಲೂಬೆ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಇವರೆಲ್ಲರು ಸೇರಿ ಮಲ್ಪೆ ಬೀಚ್ ಸಮುದ್ರದಲ್ಲಿ ಆಟವಾಡುತ್ತಿದ್ದು, ಈ ವೇಳೆ ಸಮುದ್ರದ ನೀರಿನಲ್ಲಿ ತೆರೆಯ ಅಬ್ಬರಕ್ಕೆ ಈ ನಾಲ್ವರು ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರು ಎನ್ನಲಾಗಿದೆ.

ಆ ಸಮಯ ಸ್ಥಳದಲ್ಲಿದ್ದ ತಮಿಳುನಾಡು ದೋಣಿಯ ಅನಿಲ್ ಹಾಗೂ ಇತರರು ಸೇರಿ ಮೂವರನ್ನು ರಕ್ಷಿಸಿ ದಡಕ್ಕೆ ಕರೆತಂದರು. ಆ ಪೈಕಿ ದೇಚಮ್ಮ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಹುಡುಕಾಟ ನಡೆಸಲಾಗಿದ್ದು, ಈವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...