ಮಹಿಳೆ ಅತ್ಯಾಚಾರ ನಡೆಸಿ ಮಕ್ಕಳಿಬ್ಬರಿಗೂ ಕಿರುಕುಳ ನೀಡಿದ ಆರೋಪ. ಸಂಘಟನೆ ಮುಖಂಡ ಆರೆಸ್ಟ್

Source: SO News | By Laxmi Tanaya | Published on 23rd January 2021, 10:43 PM | Coastal News |

ಮಂಗಳೂರು : ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ಮಹಿಳೆಯ ಅತ್ಯಾಚಾರ ಮಾಡಿ ಆಕೆಯ ಇಬ್ಬರು ಹೆಣ್ಣು ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಿ ತಪ್ಪಿಸಿಕೊಂಡಿದ್ದ ಉಲ್ಲಾಳದ ಸಂಘಟನೆಯೊಂದರ ಮುಖಂಡನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ .

ಎಸ್ ಡಿಪಿಐ ಸಂಘಟನೆ ಮುಖಂಡ ಸಿಂದಿ ಕುಲಾಲ್ ಬಂಧಿತ . ಮಹಿಳೆ ತನ್ನನ್ನು ಮತಾಂತರಗೊಳಿಸಿ ವಿವಾಹವಾದ ಗಂಡನಿಂದ ದೂರವಾಗಿ ಉಳ್ಳಾಲದ 9 ಕೆರೆ ಯಲ್ಲಿ ತನ್ನ ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳೊಂದಿಗೆ ಇದ್ದಳು.   ಆಕೆಯ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾದ ಸಿದ್ಧಿಕ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಹೆಣ್ಣುಮಕ್ಕಳಿಗೂ ಲೈಂಗಿಕವಾಗಿ ಕಿರುಕುಳ ನೀಡಿದ್ದ . ಇದರ ಬಗ್ಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದ ಜನವರಿ ಹದಿನಾರರಂದು ಮಹಿಳೆ ಉಳ್ಳಾಲ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದಳು.

ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿ ತಲೆಮರೆಸಿಕೊಂಡಿದ್ದ ಶನಿವಾರ ಆರೋಪಿಯನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...